ಕಲಬುರಗಿ: ಮೇಳಕುಂದಾ(ಕೆ) ಗ್ರಾಮದ ಸಮೀಪದ ಹೊಲದ ಬಾವಿಯಲ್ಲಿ 30 ವರ್ಷದ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮೃತೆಯನ್ನು ಲಕ್ಷ್ಮಿ ಅಂಬ್ರಿಶ್ ಕುಂಬಾರ ಎಂದು ಗುರುತಿಸಲಾಗಿದೆ. ಲಕ್ಷ್ಮಿಗೆ ಪತಿ ಹಾಗೂ ಕುಟುಂಬದವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿ, ಪತಿ ಅಂಬ್ರಿಶ್ ಕುಂಬಾರ, ಮಾವ ನರಸಿಂಗ, ಅತ್ತೆ ದೇವತಾ ಮತ್ತು ಮೈದುನ ಲೋಕೇಶ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ಕುಟುಂಬಸ್ಥರು ಕೊಲೆ ಮಾಡಿ ಶವವನ್ನು ಬಾವಿಗೆ ಎಸೆದಿರುವ ಶಂಕೆ ವ್ಯಕ್ತಪಡಿಸಿದ್ದು, …
Read More »ಹಾಲಿನ ಟ್ಯಾಂಕರ್ ಡಿಕ್ಕಿಗೆ ಜೋಳ ಹೊತ್ತ ಲಾರಿ ಭಸ್ಮ; ಕ್ಷಣಾರ್ಧದಲ್ಲಿ ಹೊತ್ತಿ ಉರಿದ ಎರಡು ವಾಹನಗಳು
ಬೆಳಗಾವಿ ಜಿಲ್ಲೆಯ ಎಂ.ಕೆ. ಹುಬ್ಬಳ್ಳಿ ಸಮೀಪದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಮತ್ತು ಜೋಳದ ಮೂಟೆ ಸಾಗಿಸುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಎರಡೂ ವಾಹನಗಳು ಬೆಂಕಿಗಾಹುತಿಯಾಗಿವೆ. ವೇಗವಾಗಿ ಬಂದ ಟ್ಯಾಂಕರ್, ಮುಂದೆ ಸಾಗುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ಎರಡೂ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಜ್ವಾಲೆಗಳು ವ್ಯಾಪಕವಾಗಿ ಹರಡಿವೆ. ಹೆದ್ದಾರಿ ಮಧ್ಯೆ ವಾಹನಗಳು ಹೊತ್ತಿ ಉರಿಯುತ್ತಿದ್ದ …
Read More »ಫೇಕ್ ಅಟ್ರಾಸಿಟಿ ಕೇಸ್ ಕಿರುಕುಳಕ್ಕೆ ಮನನೊಂದ ವ್ಯಾಪಾರಿ ಆತ್ಮಹತ್ಯೆ – ಸಾವಿಗೂ ಮುನ್ನ ವಿಡಿಯೋ ಮಾಡಿ ಕಣ್ಣೀರು!
ಬೆಂಗಳೂರು ನಗರದ ಕಾಡುಗೋಡಿಯಲ್ಲಿ ಸುಳ್ಳು ಅಟ್ರಾಸಿಟಿ ಪ್ರಕರಣ ದಾಖಲಿಸಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರೆಂದು ಆರೋಪಿಸಿ, 42 ವರ್ಷದ ವ್ಯಾಪಾರಿ ಪಾಪಣ್ಣ ವಿಷ ಸೇವಿಸಿ ಮೃತಪಟ್ಟಿರುವ ಘಟನೆ ನಡೆದಿದೆ. ಸಾವಿಗೂ ಮುನ್ನ ಅವರು ವಿಡಿಯೋ ಸಂದೇಶ ದಾಖಲಿಸಿ, ಕೆಲವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ವಿಡಿಯೋದಲ್ಲಿ ಪಾಪಣ್ಣ ಅವರು, 2021ರಲ್ಲಿಯೂ ತಮ್ಮ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿತ್ತು ಹಾಗೂ ಪ್ರಕರಣ ಹಿಂಪಡೆಯಲು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು ಎಂದು ಆರೋಪಿಸಿದ್ದಾರೆ. ಈಗ …
Read More »ಹಣಕ್ಕಾಗಿ ಪ್ರಿಯಕರ ಜತೆ ಸೇರಿ ಪತಿಯನ್ನೇ ಕೊಂದ ಮಗಳು, ನೊಂದು ತಾಯಿ ಆತ್ಮಹತ್ಯೆಗೆ ಶರಣು
ಬೆಳಗಾವಿ: 2 ಕೋಟಿ ರೂಪಾಯಿ ವಿಮೆ ಹಣಕ್ಕಾಗಿ ಮಾಜಿ ಸೈನಿಕನಾಗಿದ್ದ ಪತಿಯನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಇದೀಗ ಆಘಾತಕಾರಿ ಘಟನೆಯೊಂದು ನಡೆದಿದೆ. ಮಗಳು ಹಣಕ್ಕಾಗಿ ತನ್ನ ಗಂಡನನ್ನೇ ಕೊಂದಿದ್ದಕ್ಕೆ ಜರ್ಜರಿತರಾಗಿದ್ದ ತಾಯಿ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಮಾಜಿ ಸೈನಿಕ ಸಂದೀಪ್ ಮಂಜರಗಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾದ ಸುಮಾ ಮಂಜರಗಿ ತಾಯಿ ಮಹಾದೇವಿ ಬದಾಮಿ (57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳು ಸುಮಾ ಮತ್ತು ಆಕೆಯ ಪ್ರಿಯಕರ ಸೇರಿ ಅಳಿಯನನ್ನು …
Read More »ಅಕ್ರಮ ಕಟ್ಟಡ ನಿರ್ಮಾಣದ ಬಗ್ಗೆ ಪ್ರಶ್ನಿಸಿದ್ದಕ್ಕೆ ಗಲಾಟೆ…. ಮಚ್ಚು ಬೀಸಿದ ಆರೋಪ
ಚಿಕ್ಕಮಗಳೂರು : ಕಾಫಿನಾಡಲ್ಲಿ ಲಾಂಗು-ಮಚ್ಚುಗಳ ಹಾವಳಿ ಮುಂದುವರಿದಿದ್ದು, ಕ್ಷುಲ್ಲಕ ವಿಚಾರಕ್ಕೂ ಮಾರಕಾಸ್ತ್ರಗಳು ಕೈಗೆತ್ತಿಕೊಳ್ಳುವ ಘಟನೆಗಳು ಹೆಚ್ಚಾಗುತ್ತಿವೆ.ಮೂಡಿಗೆರೆ ತಾಲೂಕಿನ ಜೇನುಬೈಲು ಗ್ರಾಮದಲ್ಲಿ ಅಕ್ರಮ ಕಟ್ಟಡದ ಬಗ್ಗೆ ಪ್ರಶ್ನೆ ಮಾಡಿದ ವಿಚಾರಕ್ಕೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಅದು ಬಳಿಕ ಗಲಾಟೆಗೆ ತಿರುಗಿದೆ ಎನ್ನಲಾಗಿದೆ.ಈ ವೇಳೆ ಉದಯ್ ಎಂಬಾತ ತಾರೇಶ್ ಮೇಲೆ ಮಚ್ಚು ಬೀಸಿರುವ ಆರೋಪ ಕೇಳಿಬಂದಿದೆ. ಆರೋಪಿ ಉದಯ್ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಘಟನೆ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿ …
Read More »ಕುಕ್ಕರ್ನಲ್ಲಿ ಹೊಡೆದು ಪತ್ನಿಯನ್ನೇ ಕೊಂದ ಪತಿ
ಕೋಲಾರ: ಹಸಾಳ ಗ್ರಾಮದಲ್ಲಿ ಪತ್ನಿಗೆ ಕುಕ್ಕರ್ನಿಂದ ಹೊಡೆದು ಪತಿ ಹತ್ಯೆ ಮಾಡಿದ್ದಾನೆ. ಸಹನಾ (24) ಕೊಲೆಯಾದವರು. ಪತಿ ಮಂಜುನಾಥ್ ಹತ್ಯೆಗೈದವ. ದಂಪತಿಗೆ ಮದುವೆಯಾಗಿ 5 ವರ್ಷವಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ಪತಿ ಪದೇಪದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ಈ ಹಿಂದೆ ಮದುವೆಗೆ ಲಕ್ಷಾಂತರ ರೂಪಾಯಿ ರ್ಖಚಾಗಿದೆ ಎಂದು 2 ಲಕ್ಷ ರೂ. ಪಡೆದಿದ್ದನಂತೆ. ಅಲ್ಲದೇ ಮನೆ ಕಟ್ಟಲೆಂದು 10 ಲಕ್ಷ ರೂ. ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದ. …
Read More »ಪುನರ್ವಸತಿ ಕೇಂದ್ರದ ಮಾಲಿಕನ ಕೊಲೆ,ಆತನ ವಾಹನದಲ್ಲೇ ಆರೋಪಿಗಳು ಪರಾರಿ!
ಬೆಂಗಳೂರು ಚಂದ್ರಾಲೇಔಟ್ನ ನ್ಯೂ ಲೈಫ್ ರಿಹ್ಯಾಬ್ ಸೆಂಟರ್ನ ಮಾಲಿಕ ಶಿವಲಿಂಗಯ್ಯ (60) ಅವರನ್ನು ಮಾರಕಾಸ್ತ್ರಗಳಿಂದ ಹತ್ಯೆ ಮಾಡಲಾಗಿದೆ. ಈ ಪ್ರಕರಣದಲ್ಲಿ ನಿತಿನ್, ಕಾರ್ತಿಕ್, ಸೋಹೆಲ್ ಪಾಷ ಸೇರಿ ಹಲವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ನಿತಿನ್ ಈ ಹಿಂದೆ ರಿಹ್ಯಾಬ್ ಸೆಂಟರ್ನಲ್ಲಿ ರೋಗಿಯಾಗಿದ್ದು, ಬಳಿಕ ಅದರ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಶುಕ್ರವಾರ ಜಗಳದ ವೇಳೆ ಆರೋಪಿಗಳು ಶಿವಲಿಂಗಯ್ಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ, ಅವರ ಕಾರು ಹಾಗೂ ಬೈಕ್ನಲ್ಲಿ ಪರಾರಿಯಾಗಿದ್ದಾರೆ. …
Read More »ಶಿವಮೊಗ್ಗ: ಯುವಕನ ಭೀಕರ ಹತ್ಯೆ
ಶಿವಮೊಗ್ಗ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಪ್ರವೀಣ್ (29) ಕೊಲೆಯಾದ ಯುವಕನಾಗಿದ್ದು, ಟ್ರಾಕ್ಟರ್ ಬಾಡಿಗೆ ಹಾಗೂ ಇತರೆ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಎಂದು ತಿಳಿದುಬಂದಿದೆ. ಶುಕ್ರವಾರ ಬೆಳಿಗ್ಗೆ ಕೆಲಸಕ್ಕೆ ಬರುವಂತೆ ಸಹೋದ್ಯೋಗಿಗಳಿಗೆ ತಿಳಿಸಿದ್ದ ಪ್ರವೀಣ್, ಬಳಿಕ ಅವರ ಕರೆಗಳನ್ನು ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಯುವಕರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, ಪ್ರವೀಣ್ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಪ್ರವೀಣ್ ಅವರನ್ನು ಮಾರಕಾಸ್ತ್ರದಿಂದ …
Read More »ಅನ್ಯಕೋಮಿನ ಹುಡುಗಿಯೊಂದಿಗೆ ಊಟಕ್ಕೆ ಹೋದಾತನಿಗೆ ಥಳಿಸಿ ನೈತಿಕ ಪೊಲೀಸ್ಗಿರಿ
ಹುಬ್ಬಳ್ಳಿ ಸಮೀಪದ ಅಂಚಟಗೇರಿ ಬಳಿ ಅನ್ಯಕೋಮಿನ ಯುವ ಜೋಡಿಯೊಂದು ಹೋಟೆಲ್ಗೆ ತೆರಳಿದ್ದ ವೇಳೆ 8-10 ಜನರ ಗುಂಪು ಯುವಕನ ಮೇಲೆ ಹಲ್ಲೆ ನಡೆಸಿ ನೈತಿಕ ಪೊಲೀಸ್ಗಿರಿ ನಡೆಸಿದ ಘಟನೆ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಹುಬ್ಬಳ್ಳಿಯ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ ಶರವೀನ ಜೋಗುಳ ಎಂದು ಗುರುತಿಸಲಾಗಿದೆ. ಶರವೀನ ಅವರು ಧಾರವಾಡ ಮೂಲದ ಯುವತಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದು, ಶುಕ್ರವಾರ ಇಬ್ಬರೂ ಅಂಚಟಗೇರಿ ಬಳಿಯ ರಾಸ್ತಾ-63 ಹೋಟೆಲ್ಗೆ ತೆರಳಿದ್ದರು. ಈ …
Read More »ವೇಶ್ಯಾವಾಟಿಕೆ ಆರೋಪ ಮಹಿಳೆಯರ ರಕ್ಷಣೆ
ಹೊಸಪೇಟೆ: ನಗರದ ಲಾಡ್ಜ್ ಒಂದರ ಮೇಲೆ ಇಲ್ಲಿನ ಬಡಾವಣೆ ಠಾಣೆ ಪೊಲೀಸರು ಬುಧವಾರ ರಾತ್ರಿ ದಿಢೀರ್ ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆಯಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಿಸಿ ಏಳು ಜನರ ವಿರುದ್ಧ ಪ್ರಕರ ದಾಖಲಾಗಿದೆ. ಇಲ್ಲಿನ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ‘ಬಾಲಾಜಿ ಲಾಡ್ಜ್’ನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು.ಈ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಬಡಾವಣೆ ಠಾಣೆಯ ಪೊಲೀಸರು ಬುಧವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಳಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





