ಕೋಲಾರ: ಹಸಾಳ ಗ್ರಾಮದಲ್ಲಿ ಪತ್ನಿಗೆ ಕುಕ್ಕರ್ನಿಂದ ಹೊಡೆದು ಪತಿ ಹತ್ಯೆ ಮಾಡಿದ್ದಾನೆ. ಸಹನಾ (24) ಕೊಲೆಯಾದವರು. ಪತಿ ಮಂಜುನಾಥ್ ಹತ್ಯೆಗೈದವ. ದಂಪತಿಗೆ ಮದುವೆಯಾಗಿ 5 ವರ್ಷವಾಗಿದ್ದು, ಇಬ್ಬರು ಗಂಡು ಮಕ್ಕಳಿದ್ದಾರೆ. ಮದುವೆಯಾದಾಗಿನಿಂದ ಪತಿ ಪದೇಪದೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.ಈ ಹಿಂದೆ ಮದುವೆಗೆ ಲಕ್ಷಾಂತರ ರೂಪಾಯಿ ರ್ಖಚಾಗಿದೆ ಎಂದು 2 ಲಕ್ಷ ರೂ. ಪಡೆದಿದ್ದನಂತೆ. ಅಲ್ಲದೇ ಮನೆ ಕಟ್ಟಲೆಂದು 10 ಲಕ್ಷ ರೂ. ಹಣ ಬೇಕು ಎಂದು ಬೇಡಿಕೆ ಇಟ್ಟಿದ್ದ. ಹಣಕ್ಕಾಗಿ ಪದೇಪದೆ ಗಲಾಟೆ ಮಾಡುತ್ತಿದ್ದ. ಈ ಹಿಂದೆಯೂ ಹಲವು ಬಾರಿ ನ್ಯಾಯ ಪಂಚಾಯಿತಿ ಮಾಡಲಾಗಿತ್ತು. ಜೂ.17 ರಂದು ಸಹನಾ ತಾಯಿ ಜಯಮ್ಮಗೆ ವಿಡಿಯೋ ಕಾಲ್ ಮಾಡಿ, “ಅಮ್ಮ ನನ್ನ ಹೊಡೆಯುತ್ತಿದ್ದಾರೆ. ನೋಡು ಮೂಗಲ್ಲಿ ರಕ್ತ ಬರುತ್ತಿದೆ’ ಎಂದು ಹೇಳಿಕೊಂಡಿದ್ದಳು. ಅದೇ ದಿನ ರಾತ್ರಿ ಕುಕ್ಕರ್ ಸೇರಿ ವಿವಿಧ ಪಾತ್ರೆಗಳನ್ನು ಬಳಸಿ ಮಂಜುನಾಥ್ ಆಕೆಯ ತಲೆಯ ಮೇಲೆ ಹೊಡೆದಿದ್ದಾನೆ. ಪ್ರಜ್ಞೆತಪ್ಪಿ ಬೀಳುತ್ತಿದ್ದಂತೆ ನೇಣು ಬಿಗಿದಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

