ಆರೋಪಿಯೊಬ್ಬ ಬಾಲಕಿಗೆ ಬೈಕ್ನಲ್ಲಿ ಡ್ರಾಪ್ ಕೊಡುವುದಾಗಿ ನಂಬಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾನೆ. ಜನಸಂಚಾರವಿಲ್ಲದ ಪ್ರದೇಶಕ್ಕೆ ಕರೆದೊಯ್ದು ಆರೋಪಿಯು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆರೋಪಿ ಬಾಲಕಿಯನ್ನು ವಾಪಸ್ ಕರೆತರುವಾಗ, ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಭಯಭೀತರಾದ ಬಾಲಕಿ, ಜೀವ ರಕ್ಷಣೆಗಾಗಿ ಚಲಿಸುತ್ತಿದ್ದ ಬೈಕ್ನಿಂದ ಕೆಳಗೆ ಜಿಗಿದಿದ್ದಾಳೆ. ಬೈಕ್ನಿಂದ ಜಿಗಿದ ಪರಿಣಾಮ ಬಾಲಕಿಗೆ ಗಂಭೀರ ಗಾಯಗಳಾಗಿದ್ದು, ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿದಂತೆ …
Read More »ಹುಕ್ಕೇರಿ ಗಲಾಟೆ, 21 ಜನರ ವಿರುದ್ಧ ಪ್ರಕರಣ ದಾಖಲು
ಪಟ್ಟಣದ ನಾಕಾ ನಂ.1ರಲ್ಲಿ ಭಾನುವಾರ ರಾತ್ರಿ ಐಪಿಎಲ್ ಪೈನಲ್ ಪಂದ್ಯದ ನೇರ ಪ್ರಸಾರ ವೀಕ್ಷಣೆ ಸಂದರ್ಭದಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಐಪಿಎಲ್ ಪೈನಲ್ ಪಂದ್ಯ ಮುಗಿದ ಬಳಿಕ ಕೆಲವರು ಕ್ಷುಲ್ಲಕ ಕಾರಣಕ್ಕೆ ಸಾರ್ವಜನಿಕ ರಸ್ತೆಯಲ್ಲಿ ಗುಂಪು ಕಟ್ಟಿಕೊಂಡು ಗಲಾಟೆ ಮಾಡಿ, ಶಾಂತಿಭಂಗ ಮಾಡಿದ ಹಿನ್ನೆಲೆಯಲ್ಲಿ ನೇಹಲ್ ಮೋಮಿನ್, ರಮೇಶ ಕಲ್ಲವಡ್ಡರ, ಮನೋಹರ ಕಲ್ಲವಡ್ಡರ, ಅಕ್ಬರ್ ಪೀರಜಾದೆ, ಹಮೀದ್ ಮುಲ್ಲಾ, ಕೈ …
Read More »ಮಹಾಲಿಂಗಪುರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 13.34 ಲಕ್ಷ ರೂ. ಮೌಲ್ಯದ ಚಿನ್ನ-ಮೊಬೈಲ್ ವಶ
ಬಾಗಲಕೋಟೆ: ಜಿಲ್ಲೆಯ ರಬಕವಿಬನಹಟ್ಟಿ ತಾಲೂಕಿನ ಮಹಾಲಿಂಗಪುರ ಠಾಣಾ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 13.34 ಲಕ್ಷ ರೂಪಾಯಿ ಮೌಲ್ಯದ ಕಳುವಾದ ಚಿನ್ನಾಭರಣ ಹಾಗೂ ಮೊಬೈಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಮಾಹಿತಿಯ ಪ್ರಕಾರ, 2025-26ನೇ ಸಾಲಿನಲ್ಲಿ ವಿವಿಧ ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಕಳುವಾಗಿದ್ದ ಒಟ್ಟು 62 ಗ್ರಾಂ ಬಂಗಾರದ ಆಭರಣಗಳನ್ನು ಪತ್ತೆಹಚ್ಚಲಾಗಿದೆ. ಇದರ ಅಂದಾಜು ಮೌಲ್ಯ ಸುಮಾರು 9.15 ಲಕ್ಷ ರೂಪಾಯಿಗಳಷ್ಟಾಗಿದೆ. ಇದರ ಜೊತೆಗೆ 2026ನೇ ಸಾಲಿನಲ್ಲಿ ಕಳೆದುಹೋದ 30 …
Read More »ಟಾಯ್ಲೆಟ್ಟಲ್ಲಿ ಸೊಸೆಯನ್ನು 10 ತಿಂಗಳಿಂದ ಕೂಡಿ ಹಾಕಿ ಅತ್ತೆ ಮಾವ ಹಿಂಸೆ
ಡೆಹ್ರಾಡೂನ್: ಅತ್ತೆ ಹಾಗೂ ಮಾವ ಇಬ್ಬರು ಸೇರಿ ತಮ್ಮ ಸೊಸೆಯನ್ನು ಬರೋಬ್ಬರಿ 10 ತಿಂಗಳು ಕಾಲ ಕೋಣೆ ಹಾಗೂ ಶೌಚಾಲಯದಲ್ಲೇ ಕೂಡಿ ಹಾಕಿ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆಯೊಂದು ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ. ಈ ಬಗ್ಗೆ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಪತಿ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದರಿಂದ ಮಹಿಳೆ ತನ್ನ ಅತ್ತೆ-ಮಾವನ ಜೊತೆ ವಾಸಿಸುತ್ತಿದ್ದಳು. ಕಳೆದ ಜುಲೈನಿಂದ ಆಕೆಯನ್ನು ಒಂದೇ ಕೋಣೆ ಮತ್ತು ಶೌಚಾಲಯದಲ್ಲಿ ಕೂಡಿಹಾಕಲಾಗಿತ್ತು. …
Read More »ಬೆಟ್ಟಿಂಗ್: ಐವರ ಬಂಧನ
ಚಿಂತಾಮಣಿ: ತಾಲ್ಲೂಕಿನ ಕಾಗತಿ ಹಾಗೂ ಕರಿಯಪಲ್ಲಿ ಗ್ರಾಮದಲ್ಲಿನ ಕ್ರಿಕೆಟ್ ಬೆಟ್ಟಿಂಗ್ ಅಡ್ಡೆಗಳ ಮೇಲೆ ಗ್ರಾಮಾಂತರ ಠಾಣೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಕಾಗತಿಯ ಜಯಮ್ಮ ಎಂಬವರ ಚಿಲ್ಲರೆ ಅಂಗಡಿ ಮುಂಭಾಗದಲ್ಲಿ ಭಾನುವಾರ ರಾತ್ರಿ ಗುಂಪೊಂದು ಬೆಟ್ಟಿಂಗ್ ನಡೆಸುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆದಿದೆ. ಮುಬಾರಕ್, ಎಸ್.ಮಣಿ, ಕೆ.ಮಣಿ ಬಂಧಿತ ಆರೋಪಿಗಳು. ಪ್ರವೀಣ್ ರೆಡ್ಡಿ, ಶ್ರೀಕಾಂತ್, ಮುನಿರಾಜು ಪರಾರಿಯಾಗಿರುವ ಆರೋಪಿಗಳು. ಬಂಧಿತರಿಂದ ₹5 ಸಾವಿರ ನಗದು, 3 ಮೊಬೈಲ್ …
Read More »ಮಾರಕಾಸ್ತ್ರದಿಂದ ಹಲ್ಲೆ: ಯುವಕನಿಗೆ ಗಂಭೀರ ಗಾಯ
ರಾಯಚೂರು: ಐಪಿಎಲ್ ಕ್ರಿಕೆಟ್ ಪಂದ್ಯ ಜಯದ ಸಂಭ್ರಮಾಚರಣೆ ವೇಳೆ ನಡೆದ ವಾಗ್ವಾದವು ಯುವಕರ ನಡುವಿನ ಘರ್ಷಣೆಗೆ ತಿರುಗಿ, ಒಬ್ಬ ಯುವಕನಿಗೆ ಗಂಭೀರ ಗಾಯವಾದ ಘಟನೆ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ನಗರದ ಲಕ್ಷ್ಮಮ್ಮದೇವಿ ದೇವಸ್ಥಾನ ಬಳಿ, ಜಯದ ಸಂಭ್ರಮದಲ್ಲಿ ಬೈಕ್ಗಳಲ್ಲಿ ಆಗಮಿಸಿದ ಯುವಕರು ಅತಿಯಾದ ಶಬ್ದ ಮಾಡುತ್ತಿದ್ದುದನ್ನು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ಉಂಟಾಗಿ, ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದು ತಿಳಿದುಬಂದಿದೆ. ಘರ್ಷಣೆಯ ವೇಳೆ …
Read More »ಪೊಲೀಸರ ನಾಕಾಬಂದಿ – ಕಂತೆ ಕಂತೆ ಹಣ ನದಿಗೆಸೆದ ಡ್ರಗ್ ಪೆಡ್ಲರ್ಸ್!
ಉತ್ತರ ಪ್ರದೇಶದ ಸೋನಭದ್ರದಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಕಾರನ್ನು ತಪಾಸಣೆಗೆ ನಿಲ್ಲಿಸಲು ಪೊಲೀಸರು ಸೂಚಿಸಿದರೂ, ಆರೋಪಿಗಳು ವೇಗವಾಗಿ ಪರಾರಿಯಾಗಲು ಯತ್ನಿಸಿದರು. ವಿಶೇಷ ಕಾರ್ಯಾಚರಣೆ ತಂಡ (SOG) ಬೆನ್ನಟ್ಟಿದ ವೇಳೆ ಆರೋಪಿಗಳು ಪೊಲೀಸರ ವಾಹನಕ್ಕೆ ಡಿಕ್ಕಿ ಹೊಡೆದು ಹಾನಿಗೊಳಿಸಿದ್ದರು. ಆದರೂ ಸ್ಥಳೀಯರ ಸಹಾಯದಿಂದ ಮತ್ತೊಂದು ವಾಹನ ಪಡೆದು ಪೊಲೀಸರು ಚೇಸಿಂಗ್ ಮುಂದುವರಿಸಿದರು. ಬಂಧನದಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಕಾರಿನಿಂದ ₹100 ಮುಖಬೆಲೆಯ ನೋಟುಗಳನ್ನು ರಸ್ತೆಗೆ ಎಸೆದು ಪೊಲೀಸರ ಗಮನ ಬೇರೆಡೆ ಸೆಳೆಯಲು ಯತ್ನಿಸಿದರು. ಆದರೆ …
Read More »ಕಲಬುರಗಿಯಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಬಸ್ ಜೇವರ್ಗಿ ಬಳಿ ಪಲ್ಟಿ
ಜೇವರ್ಗಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕೆಲ್ಲೂರ ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಕೆಕೆಆರ್ಟಿಸಿ ಬಸ್ ಮಂಗಳವಾರ ಸಂಜೆ ಪಲ್ಟಿಯಾಗಿರ 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪೈಕಿ ಸಿಂಧನೂರಿನ ಶಿವಲಿಂಗಮ್ಮ ಸಿದ್ದಣ್ಣ, ಪದ್ಮ ಸತ್ಯನಾರಾಯಣ, ಶ್ರಾವ್ಯ ರಾಘವೇಂದ್ರ, ಭಾಗ್ಯಲಕ್ಷ್ಮೀ, ಮೀನಾಕ್ಷಿ, ಸಮರ್ಥ ಅವರು ಅಪಘಾತದಲ್ಲಿ ಗಂಭೀರ ಗಾಯಗಳಾಗಿವೆ. ಈ ಬಸ್ ಕಲಬುರಗಿ ನಗರದಿಂದ ಧರ್ಮಸ್ಥಳಕ್ಕೆ ಮಂಗಳವಾರ ಮಧ್ಯಾಹ್ನ ಹೊರಟಿತ್ತು. ತಾಲ್ಲೂಕಿನ ಕೆಲ್ಲೂರ ಗ್ರಾಮದ ಬಳಿ ಚಾಲಕ ನೀರು ಕುಡಿಯುತ್ತಾ ಬಸ್ ಚಲಾಯಿಸುವಾಗ …
Read More »ನವಜಾತ ಮೃತ ಗಂಡುವನ್ನು ತ್ಯಾಜ್ಯ ಘಟಕಕ್ಕೆ ಎಸೆದು ಹೋದ ಮಹಿಳೆ
ಹಾವೇರಿ: ನವಜಾತ ಮೃತ ಗಂಡು ಮಗುವನ್ನು ತ್ಯಾಜ್ಯ ವಿಲೇವಾರಿ ಘಟಕದ ಬಳಿ ಎಸೆದು ಹೋದ ಅಮಾನವೀಯ ಘಟನೆ ತಾಲೂಕಿನ ಗೌರಾಪುರ ತ್ಯಾಜ್ಯ ಘಟಕದ ಬಳಿ ನಡೆದಿದೆ. ಯಾರೋ ಮಹಿಳೆಯೊಬ್ಬಳು ತ್ಯಾಜ್ಯ ಘಟಕದ ಬಳಿ ಗಂಡು ಮಗುವಿಗೆ ಜನ್ಮ ನೀಡಿ ಅದನ್ನು ಅಲ್ಲಿಯೆ ಬಿಟ್ಟು ಹೋಗಿದ್ದಾಳೆ.ಮಗು ಅಲ್ಲಿಯೆ ಮೃತಪಟ್ಟಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬಂಗಾರಪೇಟೆ: ಕಾರ್ ಗ್ಯಾರೇಜ್ನಲ್ಲಿ ಭೀಕರ ಅಗ್ನಿ ಅವಘಡ; 5 ಕಾರುಗಳು ಭಸ್ಮ
ಕೋಲಾರ: ಬಂಗಾರಪೇಟೆ ತಾಲೂಕಿನ ಎಸ್.ಜಿ ಕೋಟೆ ಸಮೀಪದ ಚೌಡೇಶ್ವರಿ ಕಾರ್ ಸರ್ವಿಸ್ ಸೆಂಟರ್ನಲ್ಲಿ ಭಾನುವಾರ ರಾತ್ರಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಐದು ಕಾರುಗಳು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಮಾಲೀಕ ಈರಣ್ಣ ಅವರಿಗೆ ಸೇರಿದ ಗ್ಯಾರೇಜ್ನಲ್ಲಿ ತಡರಾತ್ರಿ ಹಠಾತ್ ಬೆಂಕಿ ಹೊತ್ತಿಕೊಂಡಿದ್ದು, ಒಳಗೆ ನಿಲ್ಲಿಸಿದ್ದ ಮೂರು ಕಾರುಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಗ್ಯಾರೇಜ್ ಹೊರಭಾಗದಲ್ಲಿ ನಿಲ್ಲಿಸಿದ್ದ ಇನ್ನೂ ಎರಡು ಕಾರುಗಳಿಗೆ ಭಾಗಶಃ ಹಾನಿಯಾಗಿದೆ ಎಂದು ತಿಳಿದುಬಂದಿದೆ. …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





