Breaking News

BigTv News

ಬಕ್ರೀದ್‌ಗಾಗಿ ಕೂಡಿಹಾಕಿದ್ದ 80ಕ್ಕೂ ಹೆಚ್ಚು ಗೋವುಗಳನ್ನು ರಕ್ಷಿಸಿದ ತುಮಕೂರು ಪೊಲೀಸರು

ತುಮಕೂರಿನ ರಾಜೀವ್ ಗಾಂಧಿ ನಗರದಲ್ಲಿ ಬಕ್ರೀದ್ ಹಬ್ಬಕ್ಕಾಗಿ ಅಕ್ರಮವಾಗಿ ಕಟ್ಟಿಹಾಕಲಾಗಿದ್ದ ಸುಮಾರು 80ಕ್ಕೂ ಹೆಚ್ಚು ಗೋವುಗಳನ್ನು ಪೊಲೀಸರು ದಿಢೀರ್ ದಾಳಿ ನಡೆಸಿ ರಕ್ಷಿಸಿದ್ದಾರೆ. ಮಹಮ್ಮದ್ ಇಕ್ಬಾಲ್ ಅನ್ಸಾರಿ ಎಂಬವರ ಖಾಸಗಿ ಜಾಗದಲ್ಲಿ ಗೋವುಗಳನ್ನು ಇರಿಸಲಾಗಿತ್ತು ಎನ್ನಲಾಗಿದ್ದು, ಅವುಗಳನ್ನು ಗುಬ್ಬಿ ತಾಲೂಕಿನ ಗೋಶಾಲೆಗೆ ರವಾನಿಸಲಾಗಿದೆ. ಸುಮಾರು 20 ಲಕ್ಷ ರೂ. ಮೌಲ್ಯದ ಗೋವುಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ. ತಿಲಕ್ ಪಾರ್ಕ್ ಠಾಣೆ ಪೊಲೀಸರ ನೇತೃತ್ವದಲ್ಲಿ ನಡೆದ ಈ …

Read More »

ಹಣ ವಾಪಸ್‌ ಕೊಡದ ಕಾರಣಕ್ಕೆ ಸ್ನೇಹಿತನ ಕೊಂದು ಹೂತು ಹಾಕಿದ!

ಬೆಂಗಳೂರು ಸಮೀಪದ ರಾಮಸಂದ್ರದಲ್ಲಿ ಹಣಕಾಸಿನ ವಿಚಾರಕ್ಕೆ ಆಟೋ ಚಾಲಕ ರಕ್ಷಿತ್‌ (25) ಅವರನ್ನು ಸ್ನೇಹಿತರೆ ಬರ್ಬರವಾಗಿ ಹತ್ಯೆ ಮಾಡಿ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಮೋಹಿನ್‌ ಪಾಷಾ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಅಪ್ರಾಪ್ತನನ್ನು ವಶಕ್ಕೆ ಪಡೆದು ಬಾಲಮಂದಿರಕ್ಕೆ ಕಳುಹಿಸಿದ್ದಾರೆ. 8 ಸಾವಿರ ರೂ. ಸಾಲದ ವಿಚಾರವಾಗಿ ನಡೆದ ಗಲಾಟೆ ವೇಳೆ ಆರೋಪಿಗಳು ಕಲ್ಲು ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿ ರಕ್ಷಿತ್‌ನನ್ನು ಕೊಲೆ ಮಾಡಿದ್ದರು. …

Read More »

ಸಾರ್ವಜನಿಕರ ವಾಹನ ಧ್ವಂಸಗೊಳಿಸಿ ಪುಂಡಾಟಿಕೆ – ಮೂವರು ಕಿಡಿಗೇಡಿಗಳ ಸೆರೆ

ಬೆಂಗಳೂರಿನ ವಿ.ವಿ.ಪುರಂನಲ್ಲಿ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ ವಾಹನಗಳನ್ನು ಜಖಂಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಅಭಿಷೇಕ್ ಅಲಿಯಾಸ್ ಪಾಂಡು, ಉಮೇಶ್ ಹಾಗೂ ಪುನೀತ್ ಅಲಿಯಾಸ್ ಟೋನಿ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೇ 20ರ ಬೆಳಗಿನ ಜಾವ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದ್ದು, ಬಳಿಕ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ನಡೆಸಿದ್ದರು. ಕೌಟುಂಬಿಕ ಕಲಹದ ಹಿನ್ನೆಲೆ ರಬಿಯಾಳನ್ನು ಹೆದರಿಸಲು ಬಂದಿದ್ದ ಆರೋಪಿಗಳು ಸಾರ್ವಜನಿಕರ ಮೇಲೂ ಹಲ್ಲೆ …

Read More »

ದಿನಕ್ಕೆ 400 ರೂ. ಆಸೆ ತೋರಿಸಿ 13 ಸಾವಿರ ಜನರನ್ನು ಲೂಟಿ ಮಾಡಿದ ಕ್ರಿಪ್ಟೋ ಗ್ಯಾಂಗ್! ಪ್ರಮುಖ ಆರೋಪಿ ಅರೆಸ್ಟ್

ದಾವಣಗೆರೆಯಲ್ಲಿ ನಕಲಿ ಕ್ರಿಪ್ಟೋ ಕರೆನ್ಸಿ ಆ್ಯಪ್ ಮೂಲಕ ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡಿನ ಚೆಲ್ಲಪಂಡಿ ಸುಬ್ರಹ್ಮಣಿ (42) ಎಂಬ ಪ್ರಮುಖ ಆರೋಪಿಯನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ನಾವಾಬಿಟ್‌. ಇನ್‌ ಎಂಬ ನಕಲಿ ಆ್ಯಪ್ ಮೂಲಕ 10 ಸಾವಿರ ರೂ. ಹೂಡಿಕೆ ಮಾಡಿದರೆ ದಿನಕ್ಕೆ 300-400 ರೂ. ಲಾಭ ಸಿಗುತ್ತದೆ ಎಂದು ನಂಬಿಸಿ ಜನರನ್ನು ಮೋಸಗೊಳಿಸಲಾಗಿತ್ತು. ಆರಂಭದಲ್ಲಿ ಹಣ ನೀಡಿ ವಿಶ್ವಾಸ ಗಳಿಸಿದ್ದ ಖದೀಮರು …

Read More »

ವಿಜಯಪುರದಲ್ಲಿ ಕಾರು ಅಪಘಾತ: ಚಿಂಚೋಳಿಯ ಯುವಕ ಸಾವು

ವಿಜಯಪುರ ಜಿಲ್ಲೆಯ ಕೊಲ್ಲಹಾರ ಗ್ರಾಮದ ಬಳಿ ರಾಜ್ಯ ಹೆದ್ದಾರಿಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಚಿಂಚೋಳಿ ಪಟ್ಟಣದ ಸುನಿಲ್ ಕುಮಾರ್ ಶಾಂತಕುಮಾರ್ ಮನ್ನಳ್ಳಿ (26) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದಾಂಡೇಲಿ ಹಾಗೂ ಬಂಟ್ವಾಳ ಪ್ರವಾಸ ಮುಗಿಸಿ ಸ್ನೇಹಿತರೊಂದಿಗೆ ಮರಳುವ ವೇಳೆ ಕಾರು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದ್ದು, ನಾಲ್ವರು ಸ್ನೇಹಿತರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುನಿಲ್ ನಿಧನಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್, ಸಂಸದ ಸಾಗರ್ ಖಂಡ್ರೆ ಸೇರಿದಂತೆ ಅನೇಕ ಗಣ್ಯರು …

Read More »

ಶಾರ್ಟ್ ಸರ್ಕ್ಯೂಟ್ ನಿಂದ ಆಸ್ಪತ್ರೆಗೆ ಭಾರೀ ಬೆಂಕಿ: ಅದೃಷ್ಟವಶಾತ್ ರೋಗಿಗಳು ಪಾರು

ಬೆಂಗಳೂರು: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಸ್ಪತ್ರೆಗೆ ಭಾರೀ ಬೆಂಕಿ ತಗುಲಿದ ಘಟನೆ ಬೆಂಗಳೂರಿನ ಯಲಹಂಕದ ಎಂಎಸ್ ಪಾಳ್ಯ ಸಮೀಪದ ಅವೇಕ್ಷಾ ಆಸ್ಪತ್ರೆಯಲ್ಲಿ ನಡೆದಿದೆ. 20ಕ್ಕೂ ಹೆಚ್ಚು ರೋಗಿಗಳು ಇದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಸ್ಪತ್ರೆಯ 3 ಅಂತಸ್ತಿನ ಕಟ್ಟಡಕ್ಕೆ ಬೆಂಕಿ ವ್ಯಾಪಿಸಿದ್ದು, ಕೂಡಲೇ ಕೆಲವು ಒಳ ರೋಗಿಗಳು ಆಸ್ಪತ್ರೆಯಿಂದ ಓಡಿ ಹೋಗಿದ್ದಾರೆ. ಉಳಿದ ರೋಗಿಗಳನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಮಾಹಿತಿ ತಿಳಿದ ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ …

Read More »

ಐಪಿಎಲ್ ಬೆಟ್ಟಿಂಗ್ ವಿರುದ್ಧ ಸಿಸಿಬಿ ಭರ್ಜರಿ ಕಾರ್ಯಾಚರಣೆ: 23 ಜನ ಅರೆಸ್ಟ್, 15 ಕೋಟಿ ರೂ. ಜಪ್ತಿ

ಬೆಂಗಳೂರು: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ವಿರುದ್ಧ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರತ್ಯೇಕವಾಗಿ 23 ಜನರನ್ನು ಬಂಧಿಸಲಾಗಿದ್ದು, 15 ಕೋಟಿ ರೂ. ಜಪ್ತಿ ಮಾಡಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರಸಕ್ತ ಐಪಿಎಲ್ ಪಂದ್ಯಾವಳಿ ನಡೆಯುವ ವೇಳೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಸಿಸಿಬಿ ಡಿಸಿಪಿ ಬಿ.ಎಲ್. ಹರಿಬಾಬು ನೇತೃತ್ವದಲ್ಲಿ ಅಧಿಕಾರಿಗಳು ಐಪಿಎಲ್ ಪಂದ್ಯಾವಳಿ …

Read More »

ಪ್ರಧಾನಿ ಮೋದಿ ಫೋಟೋ ತಿರುಚಿ ಅವಹೇಳನ: ಬಿಜೆಪಿಯಿಂದ ದೂರು ದಾಖಲು

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತಿರುಚಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿಯ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್ ಮಾಕನೂರು ನೀಡಿದ ದೂರಿನ ಅನ್ವಯ ಡಾ.ಲಕ್ಷ್ಮಿಕಾಂತ ಸಿಂಹ ಎಂಬುವರ ವಿರುದ್ಧ ದೂರು ದಾಖಲಾಗಿದೆ. ಲಕ್ಷ್ಮಿಕಾಂತ ಸಿಂಹ ಎಂಬ ವ್ಯಕ್ತಿಯು ತನ್ನ ಫೇಸ್ ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋವನ್ನು ಹೆಣ್ಣಿನ ಜೊತೆ ಅಶ್ಲೀಲ ರೀತಿ …

Read More »

ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ 2.92 ಲಕ್ಷ ರೂ. ವಂಚನೆ: ದೂರು

ಮಂಗಳೂರು: ಬ್ಯಾಂಕ್ ಮ್ಯಾನೇಜರ್ ಎಂದು ಹೇಳಿ ಮಹಿಳೆಯೊಬ್ಬರಿಗೆ 2.94 ಲಕ್ಷ ರೂ. ವಂಚಿಸಿರುವ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರ ಮಹಿಳೆ ಮೇ 22ರಂದು ಬ್ಯಾಂಕೊಂದರ ಪುತ್ತೂರು ಶಾಖೆಯಲ್ಲಿ 2.94 ಲಕ್ಷ ರೂ. ಗೋಲ್ಡ್ ಲೋನ್ ಪಡೆದಿದ್ದರು. ಜೂನ್ ತಿಂಗಳಿನಿಂದ ಪ್ರತೀ ತಿಂಗಳ 6 ಸಾವಿರ ರೂ.ಇಎಂಐ ಪಡೆಯುವ ಬಗ್ಗೆ ಬ್ಯಾಕ್ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಆದರೆ ಮೇ 22ರಂದೇ 6 ಸಾವಿರ ರೂ. ಕಡಿತವಾಗಿದೆ. ಆ ಹಣವನ್ನು ವಾಪಾಸು …

Read More »

ಟೈರ್ ಸ್ಫೋಟಗೊಂಡು ಮೀನಿನ ಲಾರಿ ಪಲ್ಟಿ; ಚಾಲಕ ಅಪಾಯದಿಂದ ಪಾರು

ಮಂಗಳೂರಿನಿಂದ ಮೀನು ಸಾಗಿಸಿಕೊಂಡು ಬರುತ್ತಿದ್ದ ಲಾರಿಯೊಂದು ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆ ಬದಿಗೆ ಪಲ್ಟಿಯಾದ ಘಟನೆ ಮಂಗಳವಾರ ಉಡುಪಿ ಅಂಬಾಗಿಲು ಸಮೀಪ ಸಂಭವಿಸಿದೆ. ಲಾರಿಯ ಹಿಂಬದಿ ಟೈರ್ ಏಕಾಏಕಿ ಸ್ಫೋಟಗೊಂಡಿದ್ದು, ಇದರಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಗೆ ಉರುಳಿ ಬಿದ್ದಿದ್ದಾನೆ ಎಂದು ತಿಳಿದುಬಂದಿದೆ.ಅಪಘಾತ ಸಂಭವಿಸಿದ ವೇಳೆ ಲಾರಿಯಲ್ಲಿ ಚಾಲಕ ಒಬ್ಬರೇ ಇದ್ದರು. ಘಟನೆಯಲ್ಲಿ ಲಾರಿಗೆ ಹಾನಿಯಾಗಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. …

Read More »