Breaking News

BigTv News

ಸಿಗರೇಟ್ ಹೊಗೆ ಬಿಟ್ಟ ವಿಚಾರಕ್ಕೆ ಗಲಾಟೆ: ಆಟೋ ಚಾಲಕನ ಕೊಲೆ

ಬೆಂಗಳೂರು : ಸಿಗರೇಟ್ ಸೇದಿ ಹೊಗೆ ಬಿಟ್ಟ ವಿಚಾರಕ್ಕೆ ಆರಂಭವಾದ ಗಲಾಟೆ ಆಟೋರಿಕ್ಷಾ ಚಾಲಕನೊಬ್ಬನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಅಬ್ಬಿಗೆರೆ ಮುಖ್ಯರಸ್ತೆಯಲ್ಲಿ ಮೇ 24ರ ರವಿವಾರ ತಡರಾತ್ರಿ ವರದಿಯಾಗಿದೆ. ಬಾಗಲೂರಿನ ರಾಜಾಸಾಬ್ ಪಾಳ್ಯದ ನಿವಾಸಿ ಸೈಯದ್ ಶಫೀ (36) ಹತ್ಯೆಯಾದ ಆಟೋ ಚಾಲಕ ಎಂದು ಗುರುತಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಎಂಬಾತನನ್ನು ಚಿಕ್ಕಬಾಣಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿದ ಚಿಕ್ಕಬಾಣಾವರ …

Read More »

24 ಕೋಟಿ ಡಿಜಿಟಲ್ ಅರೆಸ್ಟ್ ವಂಚನೆ ಭೇದಿಸಿದ ಬೆಂಗಳೂರು ಸೈಬರ್ ಪೊಲೀಸರು!

ಬೆಂಗಳೂರು: ರಾಜ್ಯವನ್ನು ಬೆಚ್ಚಿಬೀಳಿಸಿದ್ದ ಭಾರೀ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣವನ್ನು ಬೆಂಗಳೂರು ಸೈಬರ್ ಕಮಾಂಡ್ ಪೊಲೀಸರು ಭೇದಿಸಿ 6 ಆರೋಪಿಗಳನ್ನು ಬಂಧಿಸಿದ್ದಾರೆ. ಉತ್ತರ ಭಾರತದ ಸೈಬರ್ ಜಾಲಕ್ಕೆ ಸೇರಿದ ಆರೋಪಿಗಳು ಗುರುಗ್ರಾಮದಲ್ಲಿ ಕಚೇರಿ ಸ್ಥಾಪಿಸಿ ದೇಶದ ವಿವಿಧ ಭಾಗಗಳಲ್ಲಿ ವಂಚನೆ ನಡೆಸುತ್ತಿದ್ದರು. ಬಂಧಿತರಿಂದ ಸುಮಾರು 1.46 ಕೋಟಿ ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಶಿವಾಜಿನಗರದ 74 ವರ್ಷದ ನಿವೃತ್ತ ಶಿಕ್ಷಕಿಗೆ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಿ, ಬ್ಯಾಂಕ್ ಖಾತೆಯಲ್ಲಿ …

Read More »

ನಕಲಿ ಚಿನ್ನ ಅಡವಿಟ್ಟು ಬ್ಯಾಂಕಿಗೆ 3.49 ಲಕ್ಷ ರೂ. ಮೋಸ

ಪಡುಬಿದ್ರಿಯ ಆಯಕ್ಸಿಸ್‌ ಬ್ಯಾಂಕಿನಲ್ಲಿ ಅಸಲಿ ಚಿನ್ನವೆಂದು 103.750ಗ್ರಾಂ ನಕಲಿ ಚಿನ್ನವನ್ನು ಅಡವಿರಿಸಿ ಗೋವಾದ ರಾಜೀವ ಕಲಾಯ ಚಿನ್ನಲ್‌ಕುಜಿಲ್‌ ಕುಟ್ಟಪ್ಪನ್‌ ಎಂಬಾತನು 3.49ಲಕ್ಷ ರೂ. ಗಳನ್ನು ಪಡೆದು ಮೋಸಮಾಡಿರುವ ಕುರಿತಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿಂದು ಪ್ರಕರಣವು ದಾಖಲಾಗಿದೆ. 2025ರ ಡಿಸೆಂಬರ್‌ನಲ್ಲಿ ಅಡವಿಟ್ಟ ಚಿನ್ನವನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಪತ್ತೆಯಾಗಿತ್ತು. ಇದೀಗ ಶಾಖಾಧಿಕಾರಿ ಪ್ರದೀಪ್‌ ಕುಮಾರ್‌ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ.

Read More »

ಪ್ರಪೋಸಲ್ ನಿರಾಕರಿಸಿದ್ದಕ್ಕೆ ಯುವತಿಯ ಮನೆ ಮೇಲೆ ಪ್ರೇಮಿಯಿಂದ ಬಾಂಬ್ ದಾಳಿ

ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ ಯುವತಿಯೊಬ್ಬರು ಪುರುಷನ ಪ್ರಪೋಸಲ್ ನಿರಾಕರಿಸಿದ ಕಾರಣದಿಂದ ಆತ ತನ್ನ ಗ್ಯಾಂಗ್ ಜೊತೆ ಸೇರಿ ಆಕೆಯ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ.ಆ ಯುವತಿ ಸ್ವಲ್ಪ ಸಮಯದಿಂದ ಅವನೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ಆದರೆ ಇತ್ತೀಚೆಗೆ ಅವನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದರಿಂದ ಆಕೆ ಅವನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದರು. ಇದು ಆ ವ್ಯಕ್ತಿಯನ್ನು ಕೆರಳಿಸಿತು. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆ ಯುವತಿ …

Read More »

ಬೆಂಗಳೂರು| ಊಟ ಮಾಡುವಾಗ ಇಬ್ಬರ ನಡುವೆ ಗಲಾಟೆ: ದೊಣ್ಣೆಯಿಂದ ಹೊಡೆದು ವ್ಯಕ್ತಿ ಕೊಲೆ

ಊಟ ಮಾಡುವಾಗ ಇಬ್ಬರ ನಡುವೆ ಗಲಾಟೆ ನಡೆದು, ವ್ಯಕ್ತಿಯೊಬ್ಬರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ವೈಟ್‌ಫೀಲ್ಡ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯಲ್ಲಿ ನಡೆದಿದೆ. ಎಸ್‌.ಮೆಹಬೂಬ್‌ ಬಾಷಾ (59) ಕೊಲೆಯಾದವರು. ಕೃತ್ಯ ಎಸಗಿದ ಸುಂದರಮೂರ್ತಿ ವಿರುದ್ಧ ವೈಟ್‌ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೆಹಬೂಬ್ ಬಾಷಾ ಅವರ ಪುತ್ರಿ ಸಬೀಹಾ ಅವರು ದೂರು ನೀಡಿದ್ಧಾರೆ ಎಂದು ಪೊಲೀಸರು ಹೇಳಿದರು. ಮೆಹಬೂಬ್‌ ಬಾಷಾ ಅವರಿಗೆ ವಿಪರೀತ ಮದ್ಯ ಸೇವಿಸುವ ಅಭ್ಯಾಸವಿತ್ತು. ಭಾನುವಾರ ಸಹ …

Read More »

ಮಂಗಳೂರು: ಆರಿಫ್ ಕೊಲೆ ಪ್ರಕರಣ; ಮತ್ತೋರ್ವ ಆರೋಪಿ ಸೆರೆ

ಉಳ್ಳಾಲದ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿ ನಡೆದ ಆರಿಫ್ ಹುಸೈನ್ ಅಲಿಯಾಸ್ “ಟ್ಯಾಬ್ಲೆಟ್ ಆರೀಫ್” ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಜಾಲ್ ಶಾಂತಿನಗರದ ಇಬ್ರಾಹಿಂ ಸಿನಾನ್ ಯಾನೆ ಚಿನ್ನು (21) ಬಂಧಿತನಾಗಿದ್ದು, ಕೊಲೆ ಸಂಚಿನ ವೇಳೆ ಹಾಜರಿದ್ದು ಆರೋಪಿಗಳಿಗೆ ಹಣಕಾಸಿನ ನೆರವು ನೀಡಿದ್ದಾನೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈತ ಮೃತ ರೌಡಿಶೀಟರ್ ಟೊಪ್ಪಿ ನೌಫಾಲ್ ಸಹೋದರನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾ.27ರಂದು ತೊಕ್ಕೊಟ್ಟು …

Read More »

ಕೆಂಪುಕೋಟೆ ಬಳಿ ಕಾರು ಸ್ಫೋಟಿಸಿದ್ದವರು ಸರಣಿ ದಾಳಿಗೆ ಯೋಜಿಸಿದ್ದರು: NIA ವರದಿ

ದೆಹಲಿ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಭಯಾನಕ ಮಾಹಿತಿಯೊಂದು ಬಹಿರಂಗವಾಗಿದೆ. ಪ್ರಮುಖ ಆರೋಪಿಗಳಾದ ಡಾ. ಮುಜಮ್ಮಿಲ್ ಶಕೀಲ್ ಹಾಗೂ ಡಾ. ಶಾಹೀನ್ ಸಯೀದ್ ಲಖನೌನ ವಿಧಾನಸಭೆ, ಬಾಪು ಭವನ, ಇಮಾಂಬರಾ, ಲಾಲ್ ಬಾಗ್ ಮತ್ತು ಅಮೀನಾಬಾದ್ ಸೇರಿ ಜನಸಂದಣಿ ಪ್ರದೇಶಗಳಲ್ಲಿ ಸರಣಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ಎನ್‌ಐಎ ಮೂಲಗಳು ತಿಳಿಸಿವೆ. 2025ರ ಆಗಸ್ಟ್ 25ರಿಂದ 30ರವರೆಗೆ ಫರಿದಾಬಾದ್‌ನಿಂದ ಲಖನೌವರೆಗೆ ರಹಸ್ಯವಾಗಿ ಸಂಚರಿಸಿ, …

Read More »

ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ; ಆರೋಪಿ ಪತ್ತೆಗೆ ತೀವ್ರಗೊಂಡ ತನಿಖೆ –

ಕೊಲ್ಲೂರು ದಳಿ ಎಂಬಲ್ಲಿ ಕೊಡಚಾದ್ರಿಯಿಂದ ಕೇರಳದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜೀಪು ಹಾಗೂ ಟೆಂಪೋ ನಡುವೆ ನಡೆದಿದ್ದ ಭೀಕರ ಅಪಘಾತದಲ್ಲಿ ಇಬ್ಬರು ಮೃತರಾಗಿ ಹಲವರು ಗಾಯಗೊಂಡಿದ್ದು ಮೃತ ಮಹಿಳೆಯ ಚಿನ್ನಾಭರಣಕ್ಕೆ ಕನ್ನ ಹಾಕಿದ ಘಟನೆ ವರದಿಯಾಗಿದೆ. ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಮೃತರ ಸಂಬಂಧಿಕರು ಪ್ರಕರಣ ದಾಖಲಿಸಿದ್ದು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ. ಕಳೆದ ರವಿವಾರ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಮೃತರಾಗಿ ಮಕ್ಕಳು ಸಹಿತ ಎಂಟು ಮಂದಿ ತೀವ್ರವಾಗಿ …

Read More »

ಬೆಂಗಳೂರು | ಹಣಕಾಸು ವಿಚಾರಕ್ಕೆ ಗಲಾಟೆ: ಆಟೊ ಚಾಲಕನ ಕೊಲೆ

ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಾವರೆಕೆರೆಯ ಉದಯ ಲೇಔಟ್‌ನ ಎರಡನೇ ಹಂತದ ನಿವಾಸಿ, ಆಟೊ ಚಾಲಕ ಎನ್‌. ರಕ್ಷಿತ್‌ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಆರೋಪಿಗಳು ಪರಾರಿ ಆಗಿದ್ದಾರೆ. ರಕ್ಷಿತ್ ಅವರ ತಾಯಿ ಪುಷ್ಪಾ ಅವರು ನೀಡಿದ ದೂರಿನ ಮೇಲೆ ಮೋಹಿನ್‌ ಪಾಷಾ ಹಾಗೂ ಹಸನ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಎನ್‌.ರಕ್ಷಿತ್‌ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. …

Read More »

ಪೊಲೀಸ್ ಠಾಣೆ ಮುಂದೆಯೇ ಬೆಂಗಳೂರು ‘ಪಂಕ್ಚರ್ ಮಾಫಿಯಾ’ ಆಟ! ರಸ್ತೆ ತುಂಬಾ ಮೊಳೆಗಳನ್ನು ಚೆಲ್ಲಿ ಕೃತ್ಯ!

ಬೆಂಗಳೂರು ನಗರದಲ್ಲಿ ಮತ್ತೆ ‘ಪಂಕ್ಚರ್ ಮಾಫಿಯಾ’ ಸಕ್ರಿಯವಾಗಿದ್ದು, ಸಾರ್ವಜನಿಕರ ವಾಹನಗಳಿಗೆ ಉದ್ದೇಶಪೂರ್ವಕವಾಗಿ ಮೊಳೆಗಳನ್ನು ಚೆಲ್ಲಿ ಹಣ ದೋಚುತ್ತಿರುವ ಆರೋಪ ಕೇಳಿಬಂದಿದೆ. ಈ ಬಾರಿ ಪೊಲೀಸ್ ಠಾಣೆ ಎದುರಿನ ರಸ್ತೆಯಲ್ಲೇ ನೂರಾರು ಮೊಳೆಗಳನ್ನು ಹರಡಿರುವುದು ಆತಂಕಕ್ಕೆ ಕಾರಣವಾಗಿದೆ. ರಾತ್ರಿವೇಳೆ ಮುಖ್ಯರಸ್ತೆಗಳಲ್ಲಿ ಮೊಳೆಗಳನ್ನು ಚೆಲ್ಲಿ ವಾಹನಗಳ ಟೈರ್ ಪಂಕ್ಚರ್ ಆಗುವಂತೆ ಮಾಡಿ, ಬಳಿಕ ಹತ್ತಿರದ ಪಂಕ್ಚರ್ ಅಂಗಡಿಗಳ ಮೂಲಕ ಸವಾರರಿಂದ ಸಾವಿರಾರು ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ …

Read More »