Breaking News

ಬೆಂಗಳೂರು | ಹಣಕಾಸು ವಿಚಾರಕ್ಕೆ ಗಲಾಟೆ: ಆಟೊ ಚಾಲಕನ ಕೊಲೆ

ಹಣಕಾಸು ವಿಚಾರಕ್ಕೆ ನಡೆದ ಗಲಾಟೆಯಲ್ಲಿ ತಾವರೆಕೆರೆಯ ಉದಯ ಲೇಔಟ್‌ನ ಎರಡನೇ ಹಂತದ ನಿವಾಸಿ, ಆಟೊ ಚಾಲಕ ಎನ್‌. ರಕ್ಷಿತ್‌ ಅವರನ್ನು ಕೊಲೆ ಮಾಡಿ ಮೃತದೇಹವನ್ನು ಎಸೆದು ಆರೋಪಿಗಳು ಪರಾರಿ ಆಗಿದ್ದಾರೆ. ರಕ್ಷಿತ್ ಅವರ ತಾಯಿ ಪುಷ್ಪಾ ಅವರು ನೀಡಿದ ದೂರಿನ ಮೇಲೆ ಮೋಹಿನ್‌ ಪಾಷಾ ಹಾಗೂ ಹಸನ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಎನ್‌.ರಕ್ಷಿತ್‌ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ರಕ್ಷಿತ್‌ ಅವರಿಂದ ಕಂಬೀಪುರದ ನಿವಾಸಿ ಮೋಹಿನ್ ಪಾಷಾ ಹಣ ಪಡೆದುಕೊಂಡಿದ್ದ. ಸ್ನೇಹಿತನೇ ಆಗಿದ್ದ ಮೋಹಿನ್‌ ಪಾಷಾನಿಂದ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ಭಾನುವಾರ ಸಂಜೆ ರಕ್ಷಿತ್ ಮನೆಯಿಂದ ಹೊರಟಿದ್ದರು. ಹಣ ವಾಪಸ್‌ ಕೇಳಿದ ವಿಚಾರಕ್ಕೆ ಭಾನುವಾರ ಸಂಜೆ ಇಬ್ಬರ ಮಧ್ಯೆ ಗಲಾಟೆ ನಡೆದಿತ್ತು. ಆಗ ಆರೋಪಿಗಳಾದ ಮೋಹಿನ್‌ ಪಾಷಾ ಹಾಗೂ ಹನಸ್ ಸೇರಿಕೊಂಡು ರಕ್ಷಿತ್‌ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಮೃತದೇಹವನ್ನು ರಾಮಸಂದ್ರದ ಖಾಲಿ ಪ್ರದೇಶದ ಗುಂಡಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಹೇಳಿದರು.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *