Breaking News

BigTv News

ಪ್ರೀತಿಸಿದ ಯುವತಿ ಸಿಗಲಿಲ್ಲವೆಂದು ಯುವಕ ಆತ್ಮಹತ್ಯೆ

ಹಿರೇಕೆರೂರ: ಪ್ರೀತಿಸಿದ ಯುವತಿ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಎಂ.ಎಂ. ಯತ್ತಿನಹಳ್ಳಿಯಲ್ಲಿ ನಡೆದಿದೆ. ಧನರಾಜ ರಾಜಾನಾಯ್ಕ ಲಮಾಣಿ (24) ಮೃತ ಯುವಕ. ಈತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಯುವತಿ ನಮ್ಮ ಮದುವೆಗೆ ಮನೆಯಲ್ಲಿ ಒಪ್ಪುವುದಿಲ್ಲ. ಆದ್ದರಿಂದ ನಮ್ಮ ಮದುವೆ ಸಾಧ್ಯವಿಲ್ಲ ಎಂದು ಹೇಳಿದ್ದಳು. ಇದರಿಂದ ಮನನೊಂದು ಧನರಾಜ ಮನೆಯಲ್ಲಿದ್ದ ಶುಂಠಿ ಬೆಳೆಗೆ ಹೊಡೆಯುವ ಔಷಧ ಕುಡಿದು ಮೃತಪಟ್ಟಿದ್ದಾನೆ. ಈ ಕುರಿತು ಹಿರೇಕೆರೂರ …

Read More »

ಮೈಸೂರಿನಲ್ಲಿ ಬೈಕ್, ಸ್ಕೂಟರ್ ಕಳವು

ಮೈಸೂರು: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ನಗರದಲ್ಲಿ ಬೈಕ್ ಹಾಗೂ ಸ್ಕೂಟರ್ ಕಳುವಾಗಿದೆ. ಮೈಸೂರು ಅರಮನೆ ವೀಕ್ಷಿಸಲು ಕೇರಳದ ಮಲ್ಲಪ್ಪುರಂನಿಂದ ಆಗಮಿಸಿದ್ದ ಟಿ.ಪಿ. ಮೊಹಮ್ಮದ್ ಆಶಿಕ್ ಅವರ ಬೈಕ್ ಕಳವುವಾಗಿದೆ. ಇವರು ಸ್ನೇಹಿತ ಅನೀಶ್ ಅವರೊಂದಿಗೆ ಬೈಕ್‌ನಲ್ಲಿ ಏ.25 ರಂದು ನಗರಕ್ಕೆ ಆಗಮಿಸಿದ್ದರು. ಅರಮನೆ ವೀಕ್ಷಿಸಲು ಸಲುವಾಗಿ ಬೈಕ್‌ಅನ್ನು ಕಾಡಾ ಕಚೇರಿ ಫುಟ್‌ಪಾತ್ ಬಳಿ ನಿಲ್ಲಿಸಿದ್ದರು. ಅರಮನೆ ವೀಕ್ಷಿಸಿ ವಾಪಾಸ್ ಬಂದು ನೋಡಿದಾಗ ಬೈಕ್ ಕಳುವಾಗಿತ್ತು. ಈ ಕುರಿತು ಮೊಹಮ್ಮದ್ ಆಶಿಕ್ …

Read More »

ವಿಟ್ಲ: ಆಟೊ ರಿಕ್ಷಾದಲ್ಲಿದ್ದ 15 ಮೂಟೆ ಪಡಿತರ ಅಕ್ಕಿ ವಶ

ಬಂಟ್ವಾಳ ತಾಲ್ಲೂಕಿನ ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರದಲ್ಲಿ ಆಟೊರಿಕ್ಷಾದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆಯ ಇಲಾಖೆ ಅಧಿಕಾರಿಗಳು ಪೊಲೀಸರ ನೆರವಿನಿಂದ ಶನಿವಾರ ವಶಕ್ಕೆ ಪಡೆದಿದ್ದಾರೆ. ಶಿವಾಜಿ ನಗರದ ನಿವಾಸಿ ಅಲಿ ಅಕ್ಬರ್‌ (40) ಪಡಿತರ ಅಕ್ಕಿ ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪಿ. ಆತನ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಶಿವಾಜಿ ನಗರದಲ್ಲಿ ಆಟೊರಿಕ್ಷಾವೊಂದರಲ್ಲಿ ಪಡಿತರ …

Read More »

ಕ್ಷುಲ್ಲಕ ಕಾರಣಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

ಆನೇಕಲ್ : ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಆನೇಕಲ್ ತಾಲೂಕಿನ ಹಳೆ ಚಂದಾಪುರದಲ್ಲಿ ನಡೆದಿದೆ. ಹಳೆ ಚಂದಾಪುರದ ಶೆಲ್ ಪೆಟ್ರೋಲ್ ಬಂಕ್ ಬಳಿ ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಚಂದಾಪುರ ನಿವಾಸಿ ಚಂದನ್ (28) ಹಲ್ಲೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಚಂದನ್ ಟೀ ಕುಡಿಯಲು ಶೆಲ್ ಪೆಟ್ರೋಲ್ ಬಂಕ್‌ನ ಸ್ಟಾಲ್‌ಗೆ ತೆರಳಿದ್ದ ವೇಳೆ ಕೆಲವರೊಂದಿಗೆ ಮಾತಿನ ಚಕಮಕಿ ನಡೆದಿದ್ದು, ಬಳಿಕ …

Read More »

ಜೂಜಾಡುತ್ತಿದ್ದವರ ಆರೋಪಿಗಳ ಬಂಧನ

ಗುಂಡ್ಲುಪೇಟೆ: ತಾಲೂಕಿನ ಬೇಗೂರು ಪೊಲೀಸರು ಕಾರ್ಯಾಚರಣೆ ನಡೆಸಿ ಜೂಜಾಡುತ್ತಿದ್ದವರನ್ನು ಬಂಧಿಸಿದ್ದಾರೆ. ಠಾಣೆ ವ್ಯಾಪ್ತಿಯ ಕಮರಹಳ್ಳಿ ಸಮೀಪ ಜೂಜಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಬ್‌ಇನ್‌ಸ್ಪೆಕ್ಟರ್ ನವೀನ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರು ಆರೋಪಿಗಳಿಂದ 41 ಸಾವಿರ ರೂ.ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪಟ್ಟಣದ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

Read More »

ಪಾರಂಪರಿಕ ವೈದ್ಯನೆಂದು ನಂಬಿಸಿ ವಂಚನೆ

ಚಿಂತಾಮಣಿ: ಕ್ಯಾನ್ಸರ್​ ರೋಗ ಗುಣಪಡಿಸುವೆ. ಮಕ್ಕಳಾಗುವ ಔಷಧ ಕೊಡುವೆ ಎಂದು ನಂಬಿಸಿ 60 ಸಾವಿರ ರೂ. ಪಡೆದು ವಂಚಿಸಿರುವುದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪಂಡಿತ್​ ಗಂಗಾಧರ್​ ಹೆಸರಿನ ವ್ಯಕ್ತಿಯೊಬ್ಬ ಫೆಬ್ರವರಿಯಲ್ಲಿ ಕೈವಾರ ಗ್ರಾಮದ ಮುರಳಿ ಎಂಬುವರ ಮನೆಗೆ ಬಂದು ತಂದೆಗಿರುವ ರೋಗ ಗುಣಪಡಿಸುವೆ ಹಾಗೂ ಮಕ್ಕಳಾಗಲು ಔಷಧ ನೀಡುವೆ ಎಂದು ಪುಸಲಾಯಿಸಿ ವಂಚನೆ ಮಾಡಿದ್ದಾನೆ ಎಂದು ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂತ್ರಾಲಯದಿಂದ ಬಂದಿರುವುದಾಗಿ ಪರಿಚಯಿಸಿಕೊಂಡ ವಂಚಕ, …

Read More »

ಬಾಗಲಕೋಟೆ : ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳಿಂದ ಹಲ್ಲೆ!

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಜೈಲಲ್ಲಿ ಜಗಳ ಬಿಡಿಸಲು ಹೋದ ಜೈಲರ್ ಮೇಲೆ ಕೈದಿಗಳು ಭೀಕರವಾಗಿ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ. ಜಮಖಂಡಿ ಜೈಲಿನ ಜೈಲರ್ ವಿಡಿ ಕುಂಬಾರ್ ಗೆ ಕೈದಿಗಳಿಂದ ಹಲ್ಲೆ ನಡೆದಿದೆ. ಹೌದು ಜಮಖಂಡಿ ಜೈಲಿನ ಜೈಲರ್ ವಿಡಿ ಕುಂಬಾರ್ ಗೆ ಕೈದಿಗಳಿಂದ ಹಲ್ಲೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ವಿಡಿ ಕುಂಬಾರ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಡಿತರ ಅಕ್ಕಿ ಅಕ್ರಮ ಸಾಗಾಟ ಕೇಸ್ ನಲ್ಲಿ …

Read More »

ನಾಲ್ವರ ವಿರುದ್ಧ ಆರೋಪ: ಆಡಿಯೋ ರೆಕಾರ್ಡ್ ಮಾಡಿಟ್ಟು ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

ಹಾಸನ: ಯುವತಿಯ ವಿಷಯವಾಗಿ ನಾಲ್ವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಯುವಕನೊಬ್ಬ ಆಡಿಯೋ ರೆಕಾರ್ಡ್ ಮಾಡಿಟ್ಟು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕಡುವಿನಕೋಟೆ ಬಳಿ ಈ ದುರಂತ ಸಂಭವಿಸಿದೆ. ಮಾಕವಳ್ಳಿ ಗ್ರಾಮದ ಅಭಿಷೇಕ್ (26) ಮೃತ ಯುವಕ. ಮಾಕವಳ್ಳಿ ಗ್ರಾಮದ ಶಂಕರ, ದರ್ಶನ್, ಚೇತನ್, ದಿನೇಶ್ ಎಂಬವರು ಯುವತಿಯೊಬ್ಬಳ ವಿಚಾರದಲ್ಲಿ ನನಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ, ನಾಲ್ವರ …

Read More »

ಧಗಧಗನೆ ಹೊತ್ತಿ ಉರಿದ ಬೆಳಗಾವಿಯ ಪ್ಲಾಸ್ಟಿಕ್‌ ಫ್ಯಾಕ್ಟರಿ, ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ

ಬೆಳಗಾವಿಯ ತಾಲೂಕಿನ ಹೊನಗಾ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿರುವ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಡಾಂಗೆ ಪ್ಲಾಸ್ಟಿಕ್‌ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಯಂತ್ರೋಪಕರಣಗಳು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಯಾಗಿವೆ. ತಡರಾತ್ರಿಯಲ್ಲಿ ಅಗ್ನಿ ಆರಂಭವಾಗಿದೆ. ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿರುವ ಶಂಕೆ ವ್ಯಕ್ತವಾಗಿದೆ. ಪ್ಲಾಸ್ಟಿಕ್‌ ವಸ್ತುಗಳು ಧಗಧಗನೆ ಉರಿದು ಇಡೀ ಕಾರ್ಖಾನೆಯೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸರಿಯಾದ ಸಮಯಕ್ಕೆ …

Read More »

ಬೆಂಗಳೂರಲ್ಲಿ ಡ್ರಂಕ್ ಅಂಡ್ ಡ್ರೈವ್‌ಗೆ ಬ್ರೇಕ್..! 575 ಜನರ ವಿರುದ್ಧ ಕೇಸ್

ಬೆಂಗಳೂರು: ನಗರದಲ್ಲಿ ಡ್ರಂಕ್ ಅಂಡ್ ಡ್ರೈವ್‌ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ಕಠಿಣ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ವಿಶೇಷ ತಪಾಸಣೆ ನಡೆಸಿದ ಪೊಲೀಸರು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮೇ 04ರಿಂದ ಮೇ 10ರವರೆಗೆ ನಡೆದ ವಿಶೇಷ ಡ್ರೈವ್‌ನಲ್ಲಿ ಒಟ್ಟು 45 ಸಾವಿರದ 272 ವಾಹನಗಳನ್ನು ಪರಿಶೀಲಿಸಲಾಗಿದೆ. ಕಾರು, ಬೈಕ್ ಸೇರಿದಂತೆ ವಿವಿಧ ಮಾದರಿಯ ವಾಹನಗಳ …

Read More »