Breaking News

ಅಧಿಕಾರಿ ಮೇಲೆ ನಟಿ ರಚಿತಾ ರಾಮ್ ಬೌನ್ಸರ್ ಹಲ್ಲೆ

ಹಂಪಿ ಉತ್ಸವದಲ್ಲಿ ನಟಿ ರಚಿತಾರಾಮ್ ಅವರ ಬೌನ್ಸರ್ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.ಹಂಪಿ ಉತ್ಸವದ ಕಾರ್ಯಕ್ರಮಕ್ಕೆ ಭಾನುವಾರ ರಾತ್ರಿ ನಟಿ ರಚಿತಾ ರಾಮ್ ಆಗಮಿಸಿದ್ದರು. ಅವರ ಬೌನ್ಸರ್ ವಿಜಯನಗರ ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರವಿಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ರವಿಕುಮಾರ್ ಹಂಪಿ ಉತ್ಸವದ ನಿರ್ವಹಣೆಯಲ್ಲಿದ್ದರು. ನಟಿ ರಚಿತಾರಾಮ್ ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದ ವೇಳೆ ಬೌನ್ಸರ್ ತಳ್ಳಾಡಿ ಮುಖಕ್ಕೆ ಬಾವು ಬರುವಂತೆ ಹೊಡೆದಿದ್ದಾನೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಅವರು ಅಧಿಕಾರಿ ರವಿಕುಮಾರ್ ಅವರನ್ನು ಸಮಾಧಾನಪಡಿಸಿದ್ದಾರೆ. ನಂತರ ಬೌನ್ಸರ್ ಅಧಿಕಾರಿ ರವಿಕುಮಾರ್ ಬಳಿ ಕ್ಷಮೆ ಕೇಳಿದ್ದಾನೆ. ಇಲ್ಲಿಗೆ ಪ್ರಕರಣ ತಿಳಿಯಾಗಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *