ಧಾರವಾಡ; ಸಾಧನೆ ಪುಸ್ತಕದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಲಾಂಛನ ದೂರಪಯೋಗ ವಿಚಾರ ಕುರಿತು ನನಗೆ ಯಾವುದು ನೋಟಿಸ್ ಬಂದಿಲ್ಲ ಎಂದು ಪಶ್ಚಿಮ ಶಿಕ್ಷಕರ ವಿಧಾನ ಪರಿಷತ್ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆಗೆ ಮಾತನಾಡಿದರು, ಸಾಧನೆ ಪುಸ್ತಕದಲ್ಲಿ ರಾಷ್ಟ್ರೀಯ ಮತ್ತು ರಾಜ್ಯದ ಲಾಂಛನ ದೂರಪಯೋಗ ವಿಚಾರ ಮಾಡಿದ್ದಾರೆ ಮತ್ತು ಅದನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ನನ್ನ ಮೇಲೆ ಕೇಳಿ ಬಂದಿತು. ಈ ಕುರಿತು ಅಂತಹ ಯಾವುದೇ ಬೆಳವಣಿಗೆ ಆಗಿಲ್ಲ ನನಗೆ ಯಾವುದು ನೋಟಿಸ್ ಬಂದಿಲ್ಲ ಈ ಕುರಿತು ನಾನು ಸ್ಪಷ್ಟಪಡಿಸುತ್ತೇನೆ ಎಂದ ಬಸವರಾಜ ಹೊರಟ್ಟಿ ಅವರು, ಕಾನೂನು ಪ್ರಕಾರ ಏನಾಗುತ್ತೆ ನೋಡೋಣ ಈ ಬಗ್ಗೆ ಹೆಚ್ಚು ಮಾತನಾಡಲಾರೆ ನೋಟಿಸ್ ಕೊಟ್ಟಿದ್ದಕ್ಕೆ ನಾನು ಉತ್ತರ ಕೊಡುತ್ತೇನೆ ಅದರಲ್ಲಿ ಯಾವುದೇ ಸಂಶಯ ಬೇಡಾ ಎಂದು ಬಸವರಾಜ ಹೊರಟ್ಟಿ ಅವರು ಅಕ್ರೋಶ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

