ಬೆಂಗಳೂರು-ಮನೆ ಬಳಿ ಆಟೋ ನಿಲ್ಲಿಸುವ ವಿಚಾರಕ್ಕೆ ನೆರೆಮನೆಯಾತ ಜಗಳವಾಡಿ ಮರದ ರಿಪೀಸ್ ಪಟ್ಟಿಯಿಂದ ಹಲ್ಲೆ ನಡೆಸಿ ಆಟೋ ಚಾಲಕನನ್ನು ಕೊಲೆ ಮಾಡಿರುವ ಘಟನೆ ಜೆಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಜೆಜೆ ನಗರದ 9ನೇ ಮುಖ್ಯ ರಸ್ತೆ ನಿವಾಸಿ ಮುಬಾರಕ್(26) ಕೊಲೆಯಾದ ಆಟೋಚಾಲಕ. ಪ್ರತಿನಿತ್ಯ ಮುಬಾರಕ್ ಆಟೋ ಬಾಡಿಗೆಗೆ ಹೋಗಿ ರಾತ್ರಿ ವಾಪಸ್ ಬಂದು ಮನೆ ಬಳಿ ಆಟೋ ನಿಲ್ಲಿಸುತ್ತಾರೆ. ಅದರಂತೆ ಮೊನ್ನೆ ರಾತ್ರಿ 8.30 ರ ಸುಮಾರಿನಲ್ಲಿ …
Read More »ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ, ವ್ಯಕ್ತಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಶಿವಮೊಗ್ಗ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಆಕೆ ಗರ್ಭಾವತಿ ಆಗಲು ಕಾರಣನಾದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್ ಟಿಎಸ್ ಸಿ-1) 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 2 ಲಕ್ಷ ರೂ. ದಂಡ ವಿಧಿಸಿದೆ. ನೊಂದ ಬಾಲಕಿಗೆ 1.80 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ. ಕುಂಸಿ ಠಾಣಾ ವ್ಯಾಪ್ತಿಯ 30 ವರ್ಷದ ವ್ಯಕ್ತಿ ಶಿಕ್ಷಿಗೆ ಒಳಗಾದವ. ಈತ 2022ನೇ ಸಾಲಿನಲ್ಲಿ …
Read More »ಮನೆಯಲ್ಲಿದ್ದ ಕರಿಮಣಿ ಸರ ಕಳವು: ಪ್ರಕರಣ ದಾಖಲು
ಬ್ರಹ್ಮಾವರ: ಮನೆಯ ಡ್ರಾವರ್ನಲ್ಲಿ ಇರಿಸಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನದ ಕರಿಮಣಿ ಸರ ಕಳವಾಗಿರುವ ಘಟನೆ ಕಾಡೂರು ಗ್ರಾಮದ ತಂತ್ರಾಡಿ ಹೊಸ್ಕೆರೆ ಎಂಬಲ್ಲಿ ನಡೆದಿದೆ. ಮುಂಬೈಯಲ್ಲಿ ವ್ಯವಹಾರ ಮಾಡಿಕೊಂಡಿದ್ದ ಹೊಸ್ಕೆರೆ ನಿವಾಸಿ ಉಮೇಶ್ ಶೆಟ್ಟಿ ಎಂಬವರ ಮನೆಯಲ್ಲಿ ತಾಯಿ ಮತ್ತು ತಂದೆ ಮಾತ್ರ ಇದ್ದು, ತಾಯಿ ಪಾರ್ವತಿ ಎಂಬವರ 4ಲಕ್ಷ ರೂ.ಮೌಲ್ಯದ 38 ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ಫೆ.16ರಂದು ಮನೆಯ ಕೋಣೆಯ ಡ್ರಾವರ್ನಲ್ಲಿ ಇಟ್ಟಿದ್ದರು. ಪಾರ್ವತಿ ಎ.23ರಂದು …
Read More »ಬಂಟ್ವಾಳ: ಖೋಟಾ ನೋಟು ಚಲಾವಣೆ ಜಾಲ ಪತ್ತೆ; ಇಬ್ಬರು ಅರೆಸ್ಟ್
ಬಂಟ್ವಾಳ: ಬಡಗಕಜೆಕ್ಕಾರು ಗ್ರಾಮದ ಪಾಂಡವರಕಲ್ಲು ಬಳಿಯ ಕೂಮಿನಡ್ಕ ಎಂಬಲ್ಲಿ ಅಕ್ರಮವಾಗಿ ಖೋಟಾ ನೋಟುಗಳನ್ನು ಚಲಾವಣೆ ಮಾಡಲು ಸಂಗ್ರಹಿಸಿಟ್ಟಿದ್ದ ಇಬ್ಬರು ಆರೋಪಿಗಳನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಬಂಧಿತರನ್ನು ಮುಹಮ್ಮದ್ ಸಮೀರ್ (28) ಮತ್ತು ಮಹಮ್ಮದ್ ಇರ್ಫಾನ್ (26) ಎಂದು ಗುರುತಿಸಲಾಗಿದ್ದು, ಮತ್ತೊಬ್ಬ ಆರೋಪಿ ರಶೀದ್ ಕುಂಡಡ್ಕ ಎಂಬಾತ ಪರಾರಿಯಾಗಿದ್ದಾನೆ. ಮೇ 1ರಂದು ಸ್ವಿಫ್ಟ್ ಕಾರಿನಲ್ಲಿ ಖೋಟಾ ನೋಟುಗಳನ್ನು ಇಟ್ಟುಕೊಂಡಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಹಿನ್ನಲೆ …
Read More »ಜೂಜಾಟದ ಅಡ್ಡೆ ಮೇಲೆ ಖಾಕಿ ರೈಡ್! ಸೀಜ್ ಆಯ್ತು ಕಂತೆ ಕಂತೆ ನೋಟು!
ಮಂಡ್ಯ ಜಿಲ್ಲೆಯ ಹಲಗೂರು ವ್ಯಾಪ್ತಿಯ ನಿಟ್ಟೂರು ಸಮೀಪದ ಪ್ರದೇಶದಲ್ಲಿ ಅಕ್ರಮ ಜೂಜಾಟ ನಡೆಯುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಖಚಿತ ಮಾಹಿತಿ ಆಧರಿಸಿ ಹಲಗೂರು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಜೂಜಾಟದಲ್ಲಿ ತೊಡಗಿದ್ದವರನ್ನು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ದಾಳಿಯ ವೇಳೆ ಪಣಕ್ಕೆ ಇಟ್ಟಿದ್ದ ಸುಮಾರು ₹29 ಸಾವಿರ ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಂಧಿತ ಐವರ ವಿರುದ್ಧ ಪ್ರಕರಣ ದಾಖಲಾಗಿದ್ದು. ಬಳಿಕ ಅವರನ್ನು …
Read More »4ವರ್ಷದ ಮಗು ಮೇಲೆ 65 ವರ್ಷದವನಿಂದ ರೇಪ್ ಆಂಡ್ ಮರ್ಡರ್, ಪುಣೆಯನ್ನೇ ಬೆಚ್ಚಿಬೀಳಿಸಿದ ಪ್ರಕರಣ
ಪುಣೆ ಜಿಲ್ಲೆಯಲ್ಲಿ 65 ವರ್ಷದ ವ್ಯಕ್ತಿಯೊಬ್ಬ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ. ಗ್ರಾಮಸ್ಥರ ಸಾಮೂಹಿಕ ಪ್ರತಿಭಟನೆ ಬಳಿಕ, ಪೊಲೀಸರ ಮಧ್ಯ ಪ್ರವೇಶಿಸಿದರು. ಮಹಾರಾಷ್ಟ್ರದಲ್ಲಿ ಆತಂಕಕಾರಿ ಘಟನೆಯೊಂದರಲ್ಲಿ, ಪುಣೆ ಜಿಲ್ಲೆಯ ಹಳ್ಳಿಯೊಂದರಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಆರೋಪಿಯನ್ನು 65 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಆತನನ್ನು ಬಂಧಿಸಲಾಗಿದೆ. ಘಟನೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದು, ಗ್ರಾಮಸ್ಥರು ಹೆಚ್ಚಿನ …
Read More »ರಾಯಚೂರಲ್ಲಿ ಬೆಂಕಿಯ ಕಿಡಿ ತಗುಲಿ ಹೊತ್ತಿ ಉರಿದ ಶೆಡ್ : 3 ಲಕ್ಷ ಮೌಲ್ಯದ 20 ಕೋಳಿ, 10 ಮೇಕೆ ಸಜೀವ ದಹನ!
ರಾಯಚೂರಿನಲ್ಲಿ ಘೋರ ದುರಂತ ಒಂದು ಸಂಭವಿಸಿದ್ದು ಪಕ್ಕದ ಜಮೀನಿನಿಂದ ಬೆಂಕಿ ಕಿಡ್ಡಿ ತಗುಲಿ ಕುರಿ ಶೆಡ್ ಸುಟ್ಟು ಭಸ್ಮವಾಗಿದೆ. ಘಟನೆಯಲ್ಲಿ 20 ಕೋಳಿಗಳು, 10 ಮೇಕೆ ಸಜೀವ ದಹನಗೊಂಡಿದ್ದು, ಮನೆಗೂ ಹಾನಿಯಾಗಿದೆ ರಾಯಚೂರು ತಾಲೂಕಿನ ಬುರ್ದಿಪಾಡ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ನಾಗಮ್ಮ ಎಂಬುವರಿಗೆ ಈ ಒಂದು ಕುರಿ ಶೆಡ್ ಹಾಗೂ ಮನೆ ಸೇರಿತ್ತು. ನಾಗಮ್ಮಳ ಪಕ್ಕದ ಹೊಲದಲ್ಲಿ ಕಸಕ್ಕೆ ಬೆಂಕಿ ಹಾಕಲಾಗಿತ್ತು. ಈ ವೇಳೆ ಬೆಂಕಿ ಕಿಡಿ ತಾಗಿ …
Read More »ದಾವಣಗೆರೆಯಲ್ಲಿ 50 ಸಾವಿರ ಲಂಚ ಸ್ವೀಕರಿಸುವ ವೇಳೆ, ಲೋಕಾಯುಕ್ತ ಬಲೆಗೆ ಬಿದ್ದ ಸರ್ವೇ ಸೂಪರ್ ವೈಸರ್!
50 ಸಾವಿರ ಲಂಚ ಪಡೆಯುತ್ತಿದ್ದ ಸರ್ವೇ ಸುರ್ವೈಸರ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ADLR ಕಚೇರಿಯಲ್ಲಿ ನಡೆದಿದ್ದು, ಸರ್ವೇ ಸೂಪರ್ ಕೆ.ಹೆಚ್ ಅಂಜಿನಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 50 ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಅಂಜಿನಪ್ಪ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ದಾವಣಗೆರೆ ನಗರದ ಹಳೆ ಬಸ್ ನಿಲ್ದಾಣದ ದ್ವಾರಕಾ ಲಾಡ್ಜ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳು ಅವರನ್ನು ವಶಕ್ಕೆ …
Read More »ತರಬೇತಿ ನಿರತ ಗಗನಸಖಿಗೆ ಪ್ರೀತಿಸುವಂತೆ ದುಂಬಾಲು ಬಿದಿದ್ದ ಯುವಕನ ಬಂಧನ
ಬೆಂಗಳೂರು: ತರಬೇತಿ ನಿರತ ಗಗನಸಖಿಗೆ ಪ್ರೀತಿಸುವಂತೆ ದುಂಬಾಲು ಬಿದ್ದು ಕಿರುಕುಳ ನೀಡುತ್ತಿದ್ದ ಯುವಕನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ್ಬಂಧಿತ. ಚಂದ್ರಶೇಖರ್ ಹಾಗೂ ಸಂತ್ರಸ್ತೆ ಪರಿಚಿತರಾಗಿದ್ದು, ಒಂದೇ ಏರಿಯಾದಲ್ಲಿ ವಾಸಿಸುತ್ತಿದ್ದರು. ಯುವತಿಯು ತರಬೇತಿ ನಿರತ ಗಗನಸಖೀಯಾಗಿದ್ದಳು. ಆರಂಭದಲ್ಲಿ ಇಬ್ಬರು ಸ್ನೇಹಿತರಾಗಿದ್ದರು. ಇತ್ತೀಚೆಗೆ ಆರೋಪಿ ಚಂದ್ರಶೇಖರ್ ಪ್ರೀತಿಸುವಂತೆ ಯುವತಿಯ ಹಿಂದೆ ದುಂಬಾಲು ಬಿದ್ದಿದ್ದ. ಯುವಕನ ವರ್ತನೆಯಿಂದ ಬೇಸತ್ತಿದ್ದ ಯುವತಿ ಆತನನ್ನು ನಿರ್ಲಕ್ಷಿಸಿದ್ದಳು. ಇದರಿಂದ ಆಕ್ರೋಶಗೊಂಡ ಆರೋಪಿಯು, ಆಕೆ ಕಾಲೇಜಿಗೆ ಹೋಗುವಾಗ ಬೈಕ್ನಲ್ಲಿ ಸ್ನೇಹಿತರೊಂದಿಗೆ …
Read More »ಮಕ್ಕಳ ಕೊಂದು ತಂದೆ ಆತ್ಮಹತ್ಯೆ: ಪತ್ನಿ ಅಕ್ರಮ ಸಂಬಂಧದಿಂದ ಬೇಸತ್ತು ನೇಣಿಗೆ ಶರಣು
ಕುಣಿಗಲ್: ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಆಲ್ಕೆರೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಇಬ್ಬರು ಮಕ್ಕಳನ್ನು ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಲ್ಲೇಶ್ವರ ಸ್ವಾಮಿ ದೇಗುಲದ ಅರ್ಚಕ ಶಿವಣ್ಣ (40), ಪುತ್ರರಾದ ಜೀವಂತ್ (10), ಪ್ರಾಣೇಶ್ (5) ಮೃತರು. ಮಕ್ಕಳನ್ನು ಉಸಿರು ಗಟ್ಟಿಸಿ ಕೊಂದು, ನಂತರ ಶಿವಣ್ಣ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವಣ್ಣ ಪತ್ನಿ ಕಾವ್ಯಾ (35) ಬೇರೊಬ್ಬರ ಜತೆಗೆ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಕಾರಣಕ್ಕೆ ಇಬ್ಬರ ಮಧ್ಯೆ ಆಗಾಗ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





