Breaking News

BigTv News

ಹಾಸ್ಟೆಲ್ ನಲ್ಲಿಯೇ ನೇಣಿಗೆ ಶರಣಾದ ನರ್ಸಿಂಗ್ ವಿದ್ಯಾರ್ಥಿ

ಬೆಂಗಳೂರು: ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯೊಬ್ಬ ಹಾಸ್ಟೆಲ್​ನಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಅಗ್ಳೂರು ಹೊರವಲಯ ಬೊಮ್ಮಸಂದ್ರದಲ್ಲಿ ನಡೆದಿದೆ.ಬಿಟಿಎಲ್ ಕಾಲೇಜಿನ ಹಾಸ್ಟೆಲ್​ನಲ್ಲಿ ಎ.ಪಿ‌.ಆದಿತ್ಯ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ.ಆದಿತ್ಯ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಈ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. 2ನೇ ವರ್ಷದ ಬಿಎಸ್​ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಆದಿತ್ಯ, ಹಾಸ್ಟೆಲ್​ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಹಪಾಠಿಗಳು ಕೊಠಡಿಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. …

Read More »

ಪೋಕ್ಸೋ-ಕೊಲೆ ಕೇಸ್‌ನಲ್ಲಿ ತಿರುವು: ಮರಣದಂಡನೆ ರದ್ದು, ಜೀವಾವಧಿ ಶಿಕ್ಷೆ-ಧಾರವಾಡ ಹೈಕೋರ್ಟ್ ಮಹತ್ವದ ತೀರ್ಪು!

ಧಾರವಾಡ: ನಗರದಲ್ಲಿ ಮಹತ್ವದ ತೀರ್ಪೊಂದು ಹೊರಬಂದಿದೆ. ಪೋಕ್ಸೋ ಹಾಗೂ ಕೊಲೆ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಆರೋಪಿಗೆ ಹೈಕೋರ್ಟ್ ಶಿಕ್ಷೆ ಕಡಿಮೆ ಮಾಡಿ ಜೀವಾವಧಿ ಶಿಕ್ಷೆ ವಿಧಿಸಿದೆ.ಕರ್ನಾಟಕದ ರಾಯಬಾಗ ತಾಲೂಕಿನ ಗ್ರಾಮವೊಂದರ ನಿವಾಸಿ ಉದ್ದಪ್ಪ ಗಾಣಗೇರ (39) 2017ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಹತ್ಯೆಗೈದಿದ್ದನು.ಈ ಭೀಕರ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಬೆಳಗಾವಿ ಸೆಷನ್ ಕೋರ್ಟ್ 2024ರಲ್ಲಿ ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ …

Read More »

ಗಂಡನ ಕಿರುಕುಳಕ್ಕೆ ಬೇಸತ್ತು ಗೃಹಿಣಿ ಆತ್ಮಹತ್ಯೆ

ಚಿಕ್ಕೋಡಿ: ಗಂಡನ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಶಂಕರಮಠ ಗಲ್ಲಿಯಲ್ಲಿ ಸಂಭವಿಸಿದೆ.35 ವರ್ಷದ ಸಂಗೀತಾ ಗಾಡಿವಡ್ಡರ ಆತ್ಮಹತ್ಯೆಗೆ ಶರಣಾದ ಮಹಿಳೆ. 15 ವರ್ಷಗಳ ಹಿಂದೆ ವೆಂಕಟೇಶ್ ಗಾಡಿವಡ್ಡರ್ ಜೊತೆ ವಿವಾಹವಾಗಿದ್ದ ಸಂಗೀತಾ, ಕಳೆದ ಕೆಲ ವರ್ಷಗಳಿಂದ ದಾಂಪತ್ಯ ಕಲಹದಿಂದ ಸಂಕಷ್ಟದಲ್ಲಿದ್ದರು.ಏಪ್ರಿಲ್ 29ರ ರಾತ್ರಿ ಗಂಡನ ಕಿರುಕುಳ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೃತಳ ತಾಯಿ ಗಂಭೀರ …

Read More »

ಬೆಂಗಳೂರಲ್ಲಿ ಮಿತಿ ಮೀರಿದ ಪುಂಡರ ಅಟ್ಟಹಾಸ : ಕುಡಿದ ಮತ್ತಲ್ಲಿ ಜನರ ಮೇಲೆ ಲಾಂಗು, ಮಚ್ಚು ಬೀಸಿ ಬೆದರಿಕೆ

ಬೆಂಗಳೂರಿನಲ್ಲಿ ಪುಂಡರ ಅಟ್ಟಹಾಸ ಮಿತಿ ಮೀರಿದ್ದು, ಮದ್ಯದ ಅಮಲಿನಲ್ಲಿ ಜನರ ಮೇಲೆ ಮಚ್ಚು, ಲಾಂಗು ಬೀಸಿದ ಪುಂಡರು, ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ಪುಂಡರ ಅಟ್ಟಹಾಸ ಇದೀಗ ಮಿತಿಮೀರಿದೆ. ಮನೆಗಳ ಕಿಟಕಿ ಮತ್ತು ಗಾಜುಗಳನ್ನು ಹೊಡೆದಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಚ್ಚು ಲಾಂಗ್ ಹಿಡಿದು ಓಡಾಡಿದ್ದಾರೆ. ರಸ್ತೆಗಳಲ್ಲಿ ಸಿಕ್ಕ ಸಿಕ್ಕವರನ್ನು ಮಚ್ಚಿನಿಂದ ಪುಂಡರು ಬೆದರಿಸಿದ್ದಾರೆ. ಪುಂಡರ ಅಟ್ಟಹಾಸದ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಮನೆಗಳ ಕಿಟಕಿ ಮತ್ತು …

Read More »

20ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ : ಬೆಂಗಳೂರಲ್ಲಿ ಮಕ್ಕಳ ಆಯೋಗ ಸಮಿತಿ ಸದಸ್ಯ ಅರೆಸ್ಟ್!

ಬೆಂಗಳೂರಲ್ಲಿ ಮಹಿಳೆಯ ಜೊತೆ ರಾಸಲೀಲೆ ವಿಡಿಯೋ ಇಟ್ಟುಕೊಂಡು ಕಾಮುಕನೊಬ್ಬ ಬ್ಲ್ಯಾಕ್ ಮೇಲ್ ಮಾಡುತ್ತಿದ್ದು, ಆರ್ ಆರ್ ನಗರ ಪೊಲೀಸ್ರಿಂದ ಆರೋಪಿ ಚಂದ್ರೇಗೌಡನನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿ ಚಂದ್ರೇಗೌಡ ರಾಮನಗರ ಮಕ್ಕಳ ಆಯೋಗ ಸಮಿತಿ ಸದಸ್ಯನಾಗಿದ್ದು, ನಾನು ಪೊಲೀಸ್, ರಿಪೋರ್ಟರ್, ವಕೀಲ ಎಂದು ಹೇಳಿ ವಂಚನೆ ಎಸಗುತ್ತಿದ್ದ. ಅಲ್ಲದೇ ಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಗಂಡನಿಂದ ದೂರವಾಗಿದ್ದ ಮಹಿಳೆಯನ್ನು ಪರಿಚಯ ಮಾಡಿಕೊಂಡಿದ್ದ ಚಂದ್ರೆಗೌಡ ನನಗೆ ಡಿವೋರ್ಸ್ …

Read More »

ವಿದ್ಯಾರ್ಥಿನಿ ಗರ್ಭಿಣಿ :16 ರ ಹರೆಯದ ಬಾಲಕನ ವಿರುದ್ಧ ಪೋಕ್ಸೋ ಕೇಸು ದಾಖಲು!

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಗರ್ಭಿಣಿಯಾಗಿದ್ದು, ಈ ಸಂಬಂಧ ಬಾಲಕಿಯ ಸಹಪಾಠಿಯಾದ 16 ರ ಹರೆಯದ ಬಾಲಕನ ವಿರುದ್ಧ ಹೊಸದುರ್ಗ ಪೊಲೀಸರು ಪೋಕ್ಸೋ ಕೇಸು ದಾಖಲಿಸಿದ್ದಾರೆ. ಅಸ್ವಸ್ಥತೆ ಕಂಡು ಬಂದ ಹಿನ್ನೆಲೆಯಲ್ಲಿ ಬಾಲಕಿಯನ್ನು ವೈದ್ಯರ ಬಳಿಗೆ ಕರೆದೊಯ್ಯಲಾಗಿತ್ತು. ವೈದ್ಯರು ತಪಾಸಣೆ ನಡೆಸಿದಾಗ ಬಾಲಕಿ ಗರ್ಭಿಣಿಯಾಗಿದ್ದಾಳೆಂದು ತಿಳಿದು ಬಂತು. ಈ ಬಗ್ಗೆ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Read More »

ಜೂಜಾಟ; 10 ಮಂದಿ ಬಂಧನ

ಶ್ರೀನಿವಾಸಪುರ‌: ತಾಲ್ಲೂಕಿನ ಯಲ್ದೂರು-ಹೊಗಳಗೆರೆ ತೋಟದ ಮಧ್ಯೆ ಅಕ್ರಮವಾಗಿ ಇಸ್ಟೀಟ್ ಜೂಜಾಟದಲ್ಲಿ ತೊಡಗಿದ್ದ 10 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಚಿಂತಾಮಣಿ ತಾಲ್ಲೂಕಿನ ಬರ‍್ಲಹಳ್ಳಿ ಗ್ರಾಮದ ನಾಗರಾಜು, ಶ್ರೀನಿವಾಸಪುರ ತಾಲ್ಲೂಕಿನ ದಿಗುವಚಿಂತಪಲ್ಲಿ ಗ್ರಾಮದ ರಾಜೇಂದ್ರಪ್ರಸಾದ್, ಹೆಬ್ಬಟ ನಾಸೀರ್ ಪಾಷ, ಮಂಜುನಾಥ್, ದಳಸನೂರು ಗ್ರಾಮದ ಮುರಳಿ, ಮೋಹನ್, ಅಲಂಗಿರಿ ನರಸಿಂಹಮೂರ್ತಿ, ಕಟ್ಟೆಕೆಳಗಿನ ಪಾಳ್ಯದ ಸುಧಾಕರ, ಕೋಲಾರ ಕೀಲಕೋಟೆಯ ಶ್ರೀನಿವಾಸ್ ಬಂಧಿತರು. ಆರೋಪಿಗಳು ಜೂಜಾಟದಲ್ಲಿ ಪಣಕ್ಕೆ ಇಟ್ಟಿದ್ದ ₹ 11,500 ನಗದು, ದ್ವಿಚಕ್ರ ವಾಹನ, ಮೊಬೈಲ್‌ಗಳನ್ನು …

Read More »

ಚಾಮರಾಜನಗರ: ಮರಕ್ಕೆ ಬೊಲೆರೋ ಢಿಕ್ಕಿ; ಇಬ್ಬರಿಗೆ ಗಾಯ

ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬೈಪಾಸ್ ರಸ್ತೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಬೊಲೆರೋ ವಾಹನ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧುವನಹಳ್ಳಿ ಬೈಪಾಸ್ ಬಳಿ ನಡೆದ ಅಪಘಾತದಲ್ಲಿ ಚಾಲಕನ ಜೊತೆಗಿದ್ದ ಕಾರ್ತಿಕ್ ಹಾಗೂ ಷಣ್ಮುಗ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಚಾಲಕ ಸೆಂಥಿಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆ ಸಂಬಂಧ ಗ್ರಾಮಾಂತರ …

Read More »

ನೀಟಾಗಿ ಗೋಡೆ ಕೊರೆದು ಕೋಟಿ ರೂಪಾಯಿ ಮೌಲ್ಯದ ಬೆಳ್ಳಿ ಕದ್ದೊಯ್ದ ಕಳ್ಳರು!

ರಾಜಧಾನಿ ಬೆಂಗಳೂರಿನಲ್ಲಿ ಕಳ್ಳರ ಕೈಚಳಕ ಹೆಚ್ಚಾಗುತ್ತಿದೆ. ಚಿನ್ನ ಬೆಳ್ಳಿ ರೇಟ್‌ ಹೆಚ್ಚಳವಾಗಿದ್ದೇ ತಡ ರಾಬರಿ ಕೇಸ್‌ಗಳು ಜಾಸ್ತಿಯಾಗುತ್ತಿವೆ, ದಾಸರಹಳ್ಳಿಯ ಎಂಟನೇ ಮೈಲಿ ಬಳಿಯ ಹಾವನೂರಿನಲ್ಲಿರುವ ಎಂಬಿ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ ನಡೆದಿದೆ. ಬಹಳ ದಿನಗಳಿಂದ ವ್ಯವಸ್ಥಿತವಾದ ಪ್ಲಾನ್‌ ಮಾಡಿರುವ ಖದೀಮರು ಪಕ್ಕದಂಗಡಿಯ ಬೀಗ ಒಡೆದು ಒಳಕ್ಕೆ ನುಗ್ಗಿದ್ದಾರೆ. ಸದ್ದು ಬಾರದಂತೆ ಗೋಡೆ ಕೊರೆದು ಬಂಗಾರದ ಅಂಗಡಿಯೊಳಕ್ಕೆ ನುಗ್ಗಿದ್ದಾರೆ. ಸುಮಾರು 70 ಕೆಜಿ ಬೆಳ್ಳಿ ವಸ್ತುಗಳನ್ನು ಕಳ್ಳರು ಎಗರಿಸಿದ್ದಾರೆ. ಇದರ ಬೆಲೆ ಒಂದು …

Read More »

ಕುವೆಂಪು ವಿವಿ ಕುಲಪತಿ ಕಚೇರಿಗೆ ನುಗ್ಗಿ ಗಲಾಟೆ ಪ್ರಕರಣ: ಮೂವರು ಅರೆಸ್ಟ್

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಮೂವರನ್ನು ಭದ್ರಾವತಿ ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಪ್ರತಿಭಟನೆಯಲ್ಲಿ ನೇತೃತ್ವ ವಹಿಸಿದ್ದ ಚಂದ್ರೋಜಿರಾವ್, ಅಬ್ದುಲ್ ಘನಿ, ಅಭಿಷೇಕ್ ಬಂಧಿತರು. ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದ್ದು, ಪ್ರತಿಭಟನೆಯ ವೇಳೆ ಕುಲಪತಿ ಕಚೇರಿಗೆ ನುಗ್ಗಿದ ಕೆಲವರು ಅಲ್ಲಿನ ಕುರ್ಚಿ ಪೀಠೋಪಕರಣ ಜಖಂಗೊಳಿಸಿ ಆವರಣದಲ್ಲಿದ್ದ ಹೂವಿನ ಗಿಡಗಳ ಕುಂಡಗಳನ್ನು ಒಡೆದು ಹಾಕಿದ್ದರು. ಕಿಟಕಿ ಗಾಜುಗಳಿಗೆ ಹಾನಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ …

Read More »