Breaking News

BigTv News

ಸಾಗರದಲ್ಲಿ ನಗದು, ಚಿನ್ನಾಭರಣ ಲೂಟಿ

ಸಾಗರ: ಪಟ್ಟಣದ ಗಾಂಧಿ ನಗರದಲ್ಲಿ ಮನೆಯ ಬಾಗಿಲು ಮುರಿದು ಸುಮಾರು 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಕಳವು ಮಾಡಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಗಾಂಧಿನಗರದ ನಂದನಕುಮಾರ್ ಅವರ ಕುಟುಂಬ ಏ.25ರಿಂದ ಮನೆಯಲ್ಲಿ ಇರಲಿಲ್ಲ. ಇದೇ ಸಮಯದಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು ಬೀರುವಿನಲ್ಲಿದ್ದ ಐದೂವರೆ ಕೆ.ಜಿ. ಬೆಳ್ಳಿ ವಸ್ತುಗಳು, 2 ಲಕ್ಷ ರೂ. ನಗದು, 340 ಗ್ರಾಂನ ಬಂಗಾರದ ನೆಕ್ಲೇಸ್, ಉಂಗುರ, ತಾಳಿಸರ, …

Read More »

ಪೊಲೀಸ್ ಕಿರುಕುಳ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ : ಸಿಪಿಐ ಮೊಹಮ್ಮದ್ ತಲೆದಂಡ

ಧಾರವಾಡ : ಗಾಂಜಾ ಪ್ರಕರಣದಲ್ಲಿ ಪೊಲೀಸ್ ಕಿರುಕುಳದಿಂದ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ವಿದ್ಯಾಗಿರಿ ಪೊಲೀಸ್ ಇನ್ಸ್ ಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್ ತಲೆದಂಡವಾಗಿದೆ. ಈಗಾಗಲೇ ಮೂವರು ಪೇದೆಗಳನ್ನು ಅಮಾನತ್ತು ಮಾಡಲಾಗಿದ್ದು , ಇದೀಗ ಹಿರಿಯ ಪೊಲೀಸ್ ಅಧಿಕಾರಿಯನ್ನು ಪೊಲೀಸ್ ಆಯುಕ್ತರು ಅಮಾನತ್ತು ಮಾಡಿದ್ದಾರೆ. ಒಂದು ದಿನ ಆದಿತ್ಯ ಮ್ಯಾಗೇರಿ ಎಂಬ ಪದವಿ ವಿದ್ಯಾರ್ಥಿಯನ್ನು ಠಾಣೆಯಲ್ಲಿ ಕುಳ್ಳಿರಿಸಿ ಆತನಿಗೆ ಇಲ್ಲಸಲ್ಲದ ಭಯ ಹುಟ್ಟಿಸಿ ದುಡ್ಡು ಕೇಳಿದ್ದರು …

Read More »

ಗಂಡನ ಸಾಲಕ್ಕೆ, ಹೆಂಡತಿ ಗೃಹಲಕ್ಷ್ಮೀ ಹಣಕ್ಕೆ ಕತ್ತರಿ

ಹಾವೇರಿ: ಗಂಡ ಸಾಲದ ಕಂತು ಪಾವತಿ ಮಾಡದ ಹಿನ್ನೆಲೆ ನಗರದ ನಾಗೇಂದ್ರನಮಟ್ಟಿಯ ಬ್ಯಾಂಕ್‌ವೊಂದರ ಅಧಿಕಾರಿಗಳು ಆತನ ಹೆಂಡತಿಯ ಗೃಹಲಕ್ಷ್ಮೀ ಕಂತಿನ 15,000 ರೂ.ಗೆ ಕತ್ತರಿ ಹಾಕಿರುವ ಆರೋಪ ಕೇಳಿ ಬಂದಿದೆ. ನಾಗೇಂದ್ರನಮಟ್ಟಿಯ ಹುಸೇನ್‌ಖಾನ್ ಪಠಾಣ ಎಂಬುವರು ಬ್ಯಾಂಕ್ ಒಂದರಲ್ಲಿ 2 ಲಕ್ಷ ರೂ. ಸಾಲ ಪಡೆದಿದ್ದರು. ಪಠಾಣ ಸಮಯಕ್ಕೆ ಸರಿಯಾಗಿ ಸಾಲದ ಕಂತು ಪಾವತಿ ಮಾಡಿರಲಿಲ್ಲ. ಹೀಗಾಗಿ, ಅವರ ಪತ್ನಿ ಶಬಾನಬಾನು ಅವರ ಅದೇ ಬ್ಯಾಂಕ್‌ನ ಖಾತೆಗೆ ಜಮೆಯಾಗಿದ್ದ ಗೃಹಲಕ್ಷ್ಮೀ …

Read More »

ಮಲ್ಪೆ ಬಂದರಿನಲ್ಲಿ ಹೊಡೆದಾಟ: 2 ಕೇಸು ದಾಖಲು

ಉಡುಪಿ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಮೀನುಗಾರರ ಎರಡು ತಂಡಗಳ ನಡುವೆ ಮಲ್ಪೆ ಬಂದರಿನಲ್ಲಿ ಗುರುವಾರ ಹೊಡೆದಾಟ ನಡೆದಿದೆ. ಬಾಕಿ ಇರುವ ದೊಡ್ಡಮೊತ್ತದ ಹಣವನ್ನು ವಾಪಾಸು ಕೇಳಿದ ವಿಷಯಕ್ಕೆ ಜಯೇಶ್ ಕೋಟ್ಯಾನ್ ಎಂಬಾತ ಬೋಟು ಮಾಲಕ ಛೋಟಾ ಹರೀಶ್ ಎಂಬಾತನಿಗೆ ಮಲ್ಪೆ ಬಂದರಿನಲ್ಲಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಾರೆ.ಇಬ್ಬರ ನಡುವೆ ಹೊಡೆದಾಟ ನಡೆದಿದೆ. ಇಬ್ಬರೂ ಉಡುಪಿಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ನಾಲ್ವರು ಛೋಟಾ ಹರೀಶ್ ಬೆಂಬಲಿಗರು ಅಜ್ಜರಕಾಡಿನ ಸರಕಾರಿ ಆಸ್ಪತ್ರೆಗೆ ಆಗಮಿಸಿ, …

Read More »

ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮಹಿಳೆಯ ಮೇಲೆ ಹಲ್ಲೆ ಆರೋಪ; ಸಾರ್ವಜನಿಕರ ಆಕ್ರೋಶ

ಉಡುಪಿ:ಜಿಲ್ಲೆಯ ಮಲ್ಪೆ ಮೀನುಗಾರಿಕಾ ದಕ್ಕೆಯಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಈ ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ಉದ್ಯಮಿ ಹರೀಶ್ ಪೂಜಾರಿ ಅಲಿಯಾಸ್ “ಚೋಟು” ಎಂಬವರು ಮಹಿಳೆಯ ಮೇಲೆ ಕೈ ಹಾಕಿದ ಆರೋಪ ಕೇಳಿಬಂದಿದೆ. ಸಾರ್ವಜನಿಕರ ಮುಂದೆಯೇ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದ್ದು, ಸ್ಥಳದಲ್ಲಿದ್ದ ಜನರು ತಕ್ಷಣ ಪ್ರತಿಕ್ರಿಯಿಸಿ ಆರೋಪಿಯನ್ನು ಪ್ರಶ್ನಿಸಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಗೆ ಸೂಕ್ತ ಕಾರಣ ಮತ್ತು ಹೆಚ್ಚಿನ ವಿವರ ಪೋಲಿಸ್ …

Read More »

ಮಹಿಳೆಯಿಂದ ಚಿನ್ನದ ಬಳೆ ಸುಲಿಗೆ: ಆರೋಪಿಗಳ ಸೆರೆ

ಬೈಂದೂರು: ಇಲ್ಲಿನ ತಾಲ್ಲೂಕು ಕಚೇರಿಯ ಮುಂಭಾಗದ ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರಿಂದ ಚಿನ್ನದ ಬಳೆಯನ್ನು ಸುಲಿಗೆ ಮಾಡಿಕೊಂಡು ಪರಾರಿಯಾಗಿದ್ದ ಇಬ್ಬರು ಮಹಿಳೆಯರು ಸೇರಿ ಮೂವರು ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಮುಂಬೈ ಮೂಲದ ಅವಿನಾಶ್ ಸುನಿಲ್ ಗಾಯಕವಾಡ (27) ಸಂತೋಷಿ ವಿಶಾಲ್ ಜಾಧವ (31) ಅರ್ಚನಾ ಸುಶೀಲ್ ಜಾಧವ (40) ಬಂಧಿತರು. ಏ.27ರಂದು ಬೈಂದೂರು ತಾಲ್ಲೂಕು ಕಚೇರಿಯ ಮುಂಭಾಗದ ಬಸ್ ನಿಲ್ದಾಣದಲ್ಲಿ ಇಬ್ಬರು ಮಹಿಳೆಯರು ಸಹನಾ ಪೈ ಎಂಬುವವರ ಗಮನ ಬೇರೆಡೆ …

Read More »

ಗುಂಡ್ಲುಪೇಟೆ| ಮನೆ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

ಗುಂಡ್ಲುಪೇಟೆ: ತಾಲ್ಲೂಕಿನ ಬೆಳವಾಡಿ ಗ್ರಾಮದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿ, ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗುಂಡ್ಲುಪೇಟೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ ಮಾಡ್ರಹಳ್ಳಿ ಗ್ರಾಮದ ಶಿವಸ್ವಾಮಿ(28) ಹಾಗೂ ಚಂದ್ರ (31) ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ಚಿನ್ನಾಭರಣಗಳು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗುಂಡ್ಲುಪೇಟೆ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ. 2026 ಫೆಬ್ರವರಿ 28ರಂದು ಬೆಳವಾಡಿ ಗ್ರಾಮದಲ್ಲಿ ಬೀಗ ಹಾಕಿದ್ದ ಮನೆಯೊಂದರಲ್ಲಿ ಆರೋಪಿಗಳು ತಮ್ಮ ಕೈಚಳಕ ತೋರಿಸಿದ್ದರು. ಈ …

Read More »

ಆದಿತ್ಯ ಮ್ಯಾಗೇರಿ ಆತ್ಯಹತ್ಯೆ: ವಿದ್ಯಾಗಿರಿ ಇನ್‌ಸ್ಪೆಕ್ಟರ್‌ ರಫಿಕ್‌ ಅಮಾನತು

ಧಾರವಾಡ: ಬಿಎಸ್‌.ಸಿ ವಿದ್ಯಾರ್ಥಿ ಆದಿತ್ಯ ಮ್ಯಾಗೇರಿ ಆತ್ಯಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿದ್ಯಾಗಿರಿ ಠಾಣೆಯ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ರಫಿಕ್‌ ತಹಶೀಲ್ದಾರ್‌ ಅವರನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದಲ್ಲಿ ಈವರೆಗೆ ಅಮಾನತಾದವರ ಸಂಖ್ಯೆ ನಾಲ್ಕಕ್ಕೆ ಏರಿದೆ. ‘ಗಾಂಜಾ ಪ್ರಕರಣದಲ್ಲಿ ಆದಿತ್ಯನ ವಿಚಾರಣೆ ನಡೆಸಿ ಪೊಲೀಸರು ₹ 2ಸಾವಿರ ಹಣ ಕೊಡುವಂತೆ ಪೊಲೀಸರು ಆತನಿಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಲಾಗಿದೆ. ವಿದ್ಯಾಗಿರಿ ಠಾಣೆಯ ಇನ್‌ಸ್ಪೆಕ್ಟರ್‌ ರಫಿಕ್‌ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಹುಬ್ಬಳ್ಳಿ-ಧಾರವಾಡ …

Read More »

ಪ್ರೇಯಸಿಯನ್ನೇ ಅತ್ಯಾಚಾರಗೈದು ಹತ್ಯೆಗೈದಿದ್ದ ಪ್ರಿಯಕರನಿಗೆ ಜೈಲಲ್ಲೇ ಕೊಳೆಯುವ ಶಿಕ್ಷೆ

ಹಾಸನ: ಬೇಲೂರು ತಾಲ್ಲೂಕಿನ ಯುವತಿಯನ್ನ ಪ್ರೀತಿಸೋದಾಗಿ ನಂಬಿಸಿ ಅತ್ಯಾಚಾರ ಎಸಗಿ ಬಳಿಕ ಕೊಲೆ ಮಾಡಿರುವ ಪ್ರಿಯಕರಿನಿಗೆ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರೇಮಿ ಪ್ರವೀಣ್ ಗೆ ಜೀವಾವದಿ ಶಿಕ್ಷೆ ವಿಧಿಸಿ ಹಾಸನದ 3ನೇ ಅಧಿಕ ಸಷೆನ್ಸ್ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇನ್ನು ಸಾಕ್ಷಿನಾಶ ಆರೋಪದಲ್ಲಿ ಎ2 ತಮ್ಮಣ್ಣಿಗೆ ಎರಡು ವರ್ಷ. ಕಠಿಣ ಜೈಲು ಶಿಕ್ಷೆ ವಿಧಿಸಿದೆ. 2018 ರ ಏಪ್ರಿಲ್ 22ರಂದು ತನ್ನ‌ ಹುಟ್ಟು ಹಬ್ಬ ಆಚರಣೆ ಮಾಡಲು …

Read More »

ಧಾರವಾಡದಲ್ಲಿ ಟಿಬೆಟಿಯನ್ ವ್ಯಕ್ತಿಯ ಬರ್ಬರ ಹತ್ಯೆ..!

ವಿದ್ಯಾಕಾಶಿ ಧಾರವಾಡದ ಹೊರವಲಯದಲ್ಲಿ ಟಿಬೆಟಿಯನ್ ಮೂಲದ ವ್ಯಕ್ತಿಯೊಬ್ಬರ ಭೀಕರ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಹಳಿಯಾಳ ರಸ್ತೆಯ ಪಕ್ಕದಲ್ಲಿ ಪತ್ತೆಯಾದ ಶವ ಮೊದಲು ರಸ್ತೆ ಅಪಘಾತವೆಂದು ತೋರಿಬಂದರೂ, ಪೊಲೀಸರ ಚಾಣಾಕ್ಷ ತನಿಖೆಯಿಂದ ಇದು ಪಕ್ಕಾ ಪ್ಲಾನ್ಡ್ ಮರ್ಡರ್ ಎಂಬುದು ದೃಢಪಟ್ಟಿದೆ. ಮೃತ ವ್ಯಕ್ತಿಯನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮೂಲದ ತಾಶಿ ಧೋಂಡು (39) ಎಂದು ಗುರುತಿಸಲಾಗಿದೆ. ಏಪ್ರಿಲ್ 29ರ ಮಧ್ಯಾಹ್ನ ರಸ್ತೆ ಬದಿಯಲ್ಲಿ ಶವ …

Read More »