ಚನ್ನರಾಯಪಟ್ಟಣ (ಹಾಸನ): ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಹೇಮಾವತಿ ನಾಲೆಗೆ ಬಿದ್ದು ತಾಯಿ ಮತ್ತು ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲನಘಟ್ಟ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ. ಪ್ರಿಯಾಂಕಾ (30), ಮಗು ವೈಭವ್ ಮೃತರು. ಕಾರಲ್ಲಿದ್ದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗೊಡ್ಲಮುದ್ದನಹಳ್ಳಿಯ ಮಂಜುನಾಥ್, ಧರ್ಮಸ್ಥಳದಲ್ಲಿ ತಮ್ಮ ಸಹೋದರನ ಮದುವೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ವಾಪಸಾಗುತ್ತಿದ್ದಾಗ …
Read More »ಮದ್ಯ ಮಾರಾಟ ದೂರು: ಪರಿಶೀಲನೆ
ಸಂತೇಬಾಚಹಳ್ಳಿ: ದೊಡ್ಡಸೋಮನಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟ ಆರೋಪ ಪ್ರಯುಕ್ತ ಅಬಕಾರಿ ಪೊಲೀಸರು ತಪಾಸಣೆ ನಡೆಸಿದರು. ಗ್ರಾಮದಲ್ಲಿ ಪೆಟ್ಟಿ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂದು ರೈತ ಸಂಘದ ಮುಖಂಡ ನಾಗೇಶ್ ಅಬಕಾರಿ ಅಧಿಕಾರಿಗಳಿಗೆ ದೂರವಾಣಿಯಲ್ಲಿ ದೂರು ನೀಡಿದ್ದರು. ಅಬಕಾರಿ ಅಧಿಕಾರಿಗಳು ಸ್ಥಳಕ್ಕೆ ಬಂದು ಎಲ್ಲ ಅಂಗಡಿಗಳನ್ನು ತಪಾಸಣೆ ನಡೆಸಿದರು. ಮಧ್ಯ ಸಿಗದೆ ವಾಪಸ್ ತೆರಳಿದರು. ಅಬಕಾರಿ ಇನ್ಸ್ಪೆಕ್ಟರ್ ದೀಪಕ್ ಕುಮಾರ್ ಮಾತನಾಡಿ, ಮದ್ಯ ಅನಧಿಕೃತವಾಗಿ ಮಾರಾಟ ಮಾಡುವುದು ಅಪರಾಧವಾಗಿದೆ. ಮಾರಾಟ ಮಾಡಿದರೆ …
Read More »ಮಾಗಡಿ ಕೆರೆಯಲ್ಲಿ ಮಗು ಶವ ಪತ್ತೆ: ಬೆಚ್ಚಿಬಿದ್ದ ಜನತೆ..!
ಬೆಂಗಳೂರು: ಮಾಗಡಿ ಉಪವಿಭಾಗದ ಕುದೂರು ಪೊಲೀಸ್ ವ್ಯಾಪ್ತಿಯ ಬಸವಣ್ಣ ದೇವಸ್ಥಾನದ ಬಳಿಯ ಬನವಾಡಿ ಕೆರೆಯಲ್ಲಿ ಮೂರು ತಿಂಗಳ ಮಗುವಿನ ಶವವೊಂದು ತೇಲುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಬಸವಣ್ಣ ದೇವಸ್ಥಾನದ ಸಮೀಪದ ಕೆರೆಯಲ್ಲಿ ಮಗುವಿನ ಶವ ತೇಲುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸದಸ್ಯ ವಿ. ಸುಬ್ಬಣ್ಣ ಅವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, …
Read More »ಗಾಂಜಾ ಮಾರಾಟಗಾರನ ಬಂಧನ
ಬೆಳಗಾವಿ: ಕ್ಯಾಂಪ್ ಫಾತಿಮಾ ಚರ್ಚ್ ಬಳಿಯ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿರುವ ಕ್ಯಾಂಪ್ ಠಾಣೆ ಪೊಲೀಸರು ಸುಳಗಾದ ಗಂಗಾರಾಮ ಪರಶುರಾಮ ಸಿಂಗನಗುಡಿ(24)ಯನ್ನು ಬಂಧಿಸಿ 56,500 ರೂ. ಮೌಲ್ಯದ ಗಾಂಜಾ 1.130 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದಲ್ಲಿ ಗಾಂಜಾ ಮಾರಾಟ ಮಾಡಲು ಮಹಾರಾಷ್ಟ್ರದ ಸೊಲ್ಲಾಪುರದ ಸುನೀಲ ಪೂರೈಕೆ ಮಾಡುತ್ತಿರುವುದಾಗಿ ಆರೋಪಿ ಮಾಹಿತಿ ನೀಡಿದ್ದು, ಆತನ ವಿರುದ್ಧವೂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Read More »ಕೌಟುಂಬಿಕ ಸಮಸ್ಯೆ; ಪತ್ನಿ ಬಿಟ್ಟು ಹೋದಳೆಂದು ಇಬ್ಬರು ಅಪ್ರಾಪ್ತ ಮಕ್ಕಳನ್ನು ಕೊಂದು ವ್ಯಕ್ತಿ ಆತ್ಮಹತ್ಯ
ಹೈದರಾಬಾದ್: ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯಲ್ಲಿ 30 ವರ್ಷದ ವ್ಯಕ್ತಿಯೊಬ್ವ, ಕೌಟುಂಬಿಕ ಸಮಸ್ಯೆಗಳಿಂದಾಗಿ ಪತ್ನಿ ಮನೆ ಬಿಟ್ಟು ಹೋದ ಹಿನ್ನೆಲೆ ತನ್ನ ಮೂರು ಮತ್ತು ಐದು ವರ್ಷದ ಇಬ್ಬರು ಗಂಡು ಮಕ್ಕಳನ್ನು ಕೊಂದು, ತಾನು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸೋಮವಾರ ರಾತ್ರಿ ತೋರೂರು ಹೊರವಲಯದಲ್ಲಿ ಈ ಘಟನೆ ನಡೆದಿದೆ. ಮೃತ ವ್ಯಕ್ತಿ ಅಮ್ಮಾಪುರಂ ನಿವಾಸಿಯಾಗಿದ್ದು, ಕಳೆದ 10 ದಿನಗಳ ಹಿಂದೆ ಪತ್ನಿ ಮನೆ ಬಿಟ್ಟು ಹೋಗಿದ್ದಳು …
Read More »ಲಂಚ ಪಡೆಯುವ ವೇಳೆ ಆರ್ಟಿಒ ಸಿಬ್ಬಂದಿ ಲೋಕಾಯುಕ್ತ ಬಲೆಗೆ
ಕೊಪ್ಪಳ: ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚ ಬೇಡಿಕೆಯಿಟ್ಟಿದ್ದ ಆರ್ಟಿಒ ಕಚೇರಿಯ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಬಂಧಿಸಿರುವ ಘಟನೆ ನಡೆದಿದೆ. ಕೊಪ್ಪಳ ಆರ್ಟಿಒ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಸ್ಡಿಎ ರಂಜಿತ್ ಎಂಬಾತನು ಲೈಸನ್ಸ್ ನೀಡಲು 21 ಸಾವಿರ ಲಂಚ ಕೇಳಿದ್ದನು. ಈ ಸಂಬಂಧ ನಯೀಮ್ ಎಂಬವರು ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ಆಧರಿಸಿ ಲೋಕಾಯುಕ್ತರು ಕಾರ್ಯಾಚರಣೆ ನಡೆಸಿ, ನಯೀಮ್ ಅವರು ಹಣ ನೀಡುವ ವೇಳೆ ರಂಜಿತ್ನನ್ನು ಬಂಧಿಸಿದ್ದಾರೆ. …
Read More »ವೇಶ್ಯಾವಾಟಿಕೆ ದಂಧೆ: ಸಿಸಿಬಿ ಪೊಲೀಸರಿಂದ 6 ವಿದೇಶಿ ಮಹಿಳೆಯರು ವಶಕ್ಕೆ
ಬೆಂಗಳೂರು: ಮಡಿವಾಳ ಚೆಕ್ಪೋಸ್ಟ್ ಬಳಿಯ ಪಾದಚಾರಿ ಮಾರ್ಗದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ 6 ಮಂದಿ ವಿದೇಶಿ ಮಹಿಳೆಯರನ್ನು ಸಿಸಿಬಿ ಮಹಿಳಾ ರಕ್ಷಣಾ ದಳ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ. ನೈಜೀರಿಯಾ ಮತ್ತು ಉಗಾಂಡ ದೇಶದ ವಿದೇಶಿ ಮಹಿಳೆಯರು ವೀಸಾ ಅವಧಿ ಮುಕ್ತಾಯಗೊಂಡಿ ದ್ದರೂ ನಗರದಲ್ಲಿ ಅಕ್ರಮವಾಗಿ ವಾಸ ವಾಗಿದ್ದರು. ಮಡಿವಾಳ ಬಸ್ ನಿಲ್ದಾಣದ ಪಾದಚಾರಿ ಮಾರ್ಗದ ಬಳಿ ನಿಂತುಕೊಂಡು ರಸ್ತೆಯಲ್ಲಿ ಓಡಾಡುವ ಪುರುಷರನ್ನು ವೇಶ್ಯವಾಟಿಕೆಗೆ ಪ್ರಚೋದಿಸುತ್ತಿದ್ದರು. ಈ ಕುರಿತು ಸ್ಥಳೀಯರು ಪೊಲೀಸರಿಗೆ …
Read More »ಬೆಂಗಳೂರು ಪೊಲೀಸರ ಅತಿ ದೊಡ್ಡ ಡ್ರಗ್ಸ್ ಸೀಜ್ : ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ!
ಬೆಂಗಳೂರಿನಲ್ಲಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು ಒಂದೇ ವಾರದಲ್ಲಿ 50 ಕೋಟಿ ಮೌಲ್ಯದ ಡ್ರಗ್ಸ್ ಸಿಜ್ ಮಾಡಿದ್ದಾರೆ ಬೆಂಗಳೂರಿನ ಬಾಗಲೂರು ಪೊಲೀಸರು 16 ಕೋಟಿ ಮೌಲ್ಯದ ಎಲ್ಎಸ್ಡಿ ಪಕ್ಷಕ್ಕೆ ಪಡೆದಿದ್ದಾರೆ. ಸಿಸಿಬಿ ಪೊಲೀಸರಿಂದ 17.5 ಕೋಟಿ ಮೌಲ್ಯದ ಎಂ ಡಿ ಎಂ ಎ ವಶಕ್ಕೆ ಪಡೆಯಲಾಗಿದೆ. ಯಶವಂತಪುರ ಜಾಲಹಳ್ಳಿಯಲ್ಲಿ 6.47 ಕೋಟಿ ಮಾಡಿದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ ಹಾಡುಗೋಡಿ ಪೊಲೀಸ್ರಿಂದ 1.5 ಕೋಟಿ ಮೌಲ್ಯದ ಗ್ರೌಂಡ್ ಶುಗರ್ ಜಪ್ತಿ ಮಾಡಲಾಗಿದ್ದು …
Read More »ಮುಂಬೈ: ಮಹಾರಾಷ್ಟ್ರದಲ್ಲಿ ಪಹಲ್ಗಾಮ್ ಮಾದರಿ ದಾಳಿ – ಆರೋಪಿ ಬಂಧನ
ಮುಂಬೈ: ಭದ್ರತಾ ಸಿಬ್ಬಂದಿಯ ಹೆಸರು ಮತ್ತು ಧರ್ಮ ಕೇಳಿ ಇಸ್ಲಾಮಿಕ್ ಶ್ಲೋಕ ಪಠಿಸಲು ಹೇಳಿ ಚಾಕುವಿನಿಂದ ಇರಿದ ಘಟನೆ ಮುಂಬೈ ಸಮೀಪದ ಮೀರಾ ರೋಡ್ನಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 31 ವರ್ಷದ ಭಾನುವಾರ ಮುಂಜಾನೆ ಮೀರಾ ರೋಡ್ನ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ರಾಜ್ಕುಮಾರ್ ಮಿಶ್ರಾ ಮತ್ತು ಸುಬ್ರೋಟೊ ಸೇನ್ ಎಂಬ ಇಬ್ಬರು ಸೆಕ್ಯುರಿಟಿ ಗಾರ್ಡ್ ಕರ್ತವ್ಯದಲ್ಲಿದ್ದರು. ಅಲ್ಲಿಗೆ ಬಂದ ಆರೋಪಿ ಅನ್ಸಾರಿ, ಅವರ ಹೆಸರು ಮತ್ತು ಧರ್ಮವನ್ನು ಕೇಳಿದ್ದಾನೆ. ಬಳಿಕ …
Read More »ಮದುವೆ ಮನೆಯಲ್ಲಿ ಚಿನ್ನದ ವಿಚಾರಕ್ಕೆ ಮಾರಾಮಾರಿ
ಚಾಮರಾಜನಗರ: ಚಿನ್ನಾಭರಣದ ವಿಚಾರಕ್ಕೆ ಮದುವೆ ಮನೆಯಲ್ಲಿ ಮಾರಾಮಾರಿ ನಡೆದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. 70 ಗ್ರಾಂ ಚಿನ್ನದ ವ್ಯತ್ಯಾಸಕ್ಕಾಗಿ ವಧು-ವರರ ಕಡೆಯವರು ಬೀದಿ ಕಾಳಗಕ್ಕಿಳಿದಿದ್ದು, ಚಾಕು ಇರಿತದಂತಹ ಘಟನೆ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಕೊಳ್ಳೇಗಾಲದ ಆರ್.ಎಸ್.ಫಂಕ್ಷನ್ ಹಾಲ್ನಲ್ಲಿ ಬುಧವಾರ ಮದುವೆ ನಿಶ್ಚಯವಾಗಿತ್ತು. ಮಂಗಳವಾರ ರಾತ್ರಿ ನಡೆದ ಅರಶಿಣ ಶಾಸ್ತ್ರದ ಕಾರ್ಯಕ್ರಮಕ್ಕೆ ವರನ ಕಡೆಯವರು ತಡವಾಗಿ ಬಂದಿದ್ದು ಮೊದಲ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ನಡುವೆ, ವಧುವಿನ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





