ತುಮಕೂರು : ಅರಣ್ಯ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ ಎಸಲಾಗಿದೆ. ಬರೋಬ್ಬರಿ 15 ಯುವಕರಿಂದ ಮೂರರಿಂದ ಐದು ಲಕ್ಷ ಪಡೆದು ವಂಚನೆ ಎಸಗಲಾಗಿದೆ. ಮೈಸೂರಿನ ಅರಣ್ಯ ಪ್ರದೇಶದಲ್ಲಿ ಹುದ್ದೆ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಲಾಗಿದೆ. ಯುವಕರಿಗೆ ನಕಲಿ ನೇಮಕಾತಿ ಆದೇಶ ಪ್ರತಿನಿಧಿ ಕಳುಹಿಸಿ ವಂಚನೆ ಎಸಲಾಗಿದೆ. ಇನ್ನು ತರಬೇತಿ ನೆಪದಲ್ಲಿ ತೋಟದ ಮನೆಯಲ್ಲಿ ಯುವಕರಿಗೆ ಟ್ರೇನಿಂಗ್ ಕೂಡ ಕೊಟ್ಟಿದ್ದಾರೆ. ಅರಣ್ಯ ಇಲಾಖೆಯ ಮೇಲಾಧಿಕಾರಿಗಳ ನಕಲಿ ಲೆಟರ್ ಹೆಡ್ ಬಳಸಿ ಯುವಕರಿಗೆ …
Read More »ಉಪ ಚುನಾವಣೆ ಕರ್ತವ್ಯ ಲೋಪ: ಅಧಿಕಾರಿ ಅಮಾನತು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ನಿಯೋಜಿತರಾಗಿದ್ದ ಅಧಿಕಾರಿ ಕರ್ತವ್ಯ ಲೋಪ ಎಸಗಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ. ದಾವಣಗೆರೆ ಮಹಾನಗರ ಪಾಲಿಕೆಯ ಸಹಾಯಕ ಕಂದಾಯ ಅಧಿಕಾರಿ ಬಿ. ವಿನಾಯಕ ಅವರನ್ನು ಸೇವೆಯಿಂದ ಅಮಾನತು ಮಾಡಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಗುರುವಾರ ಆದೇಶ ಹೊರಡಿಸಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಉಪ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾದ ಅಧಿಕಾರಿಗಳಿಗೆ ವಾಹನಗಳ ಹಂಚಿಕೆ ಮಾಡುವ ಜವಾಬ್ದಾರಿಯನ್ನು ವಿನಾಯಕ ಅವರಿಗೆ ವಹಿಸಲಾಗಿತ್ತು. 70 ವಾಹನಗಳನ್ನು ಚುನಾವಣಾ …
Read More »ಬೆಂಗಳೂರಿನ ಟಿ. ಬೇಗೂರು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಟಿ. ಬೇಗೂರಿನಲ್ಲಿರುವ ಖ್ಯಾತ ಸಿದ್ಧಾರ್ಥ ಮೆಡಿಕಲ್ ಕಾಲೇಜಿಗೆ ಅಪರಿಚಿತರಿಂದ ಬಾಂಬ್ ಬೆದರಿಕೆ ಬಂದಿದೆ. ಇ-ಮೇಲ್ ಮೂಲಕ ಬಂದ ಈ ಸಂದೇಶದಿಂದ ಕಾಲೇಜು ಆವರಣದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ. ಅಪರಿಚಿತ ವ್ಯಕ್ತಿಗಳಿಂದ ಅಧಿಕೃತ ಇ-ಮೇಲ್ ಐಡಿಗೆ ಬಾಂಬ್ ಇಟ್ಟಿರುವುದಾಗಿ ಸಂದೇಶ ರವಾನೆಯಾಗಿದೆ.ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳಕ್ಕೆ ಶ್ವಾನದಳ ಮತ್ತು ಬಾಂಬ್ ವಿಲೇವಾರಿ ದಳ ಧಾವಿಸಿದೆ. ಕಾಲೇಜು ಆವರಣದಲ್ಲಿರುವ …
Read More »ನಂಜನಗೂಡು ಕಪಿಲಾ ನದಿ ದಂಡೆಯಲ್ಲಿ 45 ಮರಗಳ ನಾಶ – ಆರೋಪಿ ಬಂಧನ
ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಪಿಲಾ ನದಿಯ ದಡದಲ್ಲಿ ಅರಣ್ಯ ಇಲಾಖೆ ಬೆಳೆಸಿದ್ದ 45 ವಿಭಿನ್ನ ಜಾತಿಯ ಮರಗಳನ್ನು ಅನುಮತಿ ಪಡೆಯದೆ ಕಡಿತ ಮಾಡಿದ ಪ್ರಕರಣದಲ್ಲಿ ಆಲತ್ತೂರು ಗ್ರಾಮದ ಕೃಷ್ಣ (45) ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.ಈ ಕಟರ್ಪಣೆ ಮಾರ್ಚ್ 8ರಂದು ನಡೆದಿದೆ ಮತ್ತು ಮಾಧ್ಯಮಗಳಲ್ಲಿ ಸದ್ದು ಮಾಡಿತ್ತು. ಆದರೆ ಪ್ರಕರಣ ನಡೆದರೂ ಕೆಲ ದಿನಗಳವರೆಗೆ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾರ್ಚ್ 10ರಂದು …
Read More »ಉಳ್ಳಾಲ: ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಬೈಕ್ ಅಡ್ಡಗಟ್ಟಿ ವ್ಯಕ್ತಿ ಹತ್ಯೆ
ತೊಕ್ಕೊಟ್ಟು ಮೇಲ್ಸೇತುವೆಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಬೈಕ್ ಅಡ್ಡಗಟ್ಟಿ ಭೀಕರವಾಗಿ ಹತ್ಯೆ ಮಾಡಲಾಗಿದೆ. ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ (40) ಹತ್ಯೆಯಾದ ವ್ಯಕ್ತಿ. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿರಬಹುದು ಎಂಬ ಮಾಹಿತಿ ಲಭ್ಯವಾಗಿದೆ. ‘ಮೇಲ್ನೋಟಕ್ಕೆ ಇದು ಕೊಲೆಯೆಂದು ಕಂಡು ಬಂದಿದ್ದು, ತನಿಖೆ ನಡೆಯುತ್ತಿದೆ. ಬಿಎನ್ಎಸ್ ಕಲಂ 302ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರಿಫ್ ಮೇಲೆ ಈ ಹಿಂದೆ ದಕ್ಷಿಣ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ದಾಖಲಿಸಲಾಗಿತ್ತು’ …
Read More »ಅಗ್ನಿ ಅವಘಡ – ಲುಲು ಮಾಲ್ ಎದುರು ಹೊತ್ತುರಿದ ಸಾರಿಗೆ ಬಸ್.!
ಬೆಂಗಳೂರು: ರಾಜಧಾನಿಯ ಪ್ರತಿಷ್ಠಿತ ಲುಲು ಮಾಲ್ ಮುಂಭಾಗದ ರಸ್ತೆಯಲ್ಲಿ ಗುರುವಾರ ಭೀಕರ ಅನಾಹುತವೊಂದು ಸಂಭವಿಸಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ನೋಡನೋಡುತ್ತಿದ್ದಂತೆಯೇ ಬಸ್ ಸಂಪೂರ್ಣವಾಗಿ ಧಗಧಗನೆ ಹೊತ್ತಿ ಉರಿದಿದೆ. ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಬಸ್ ಚಲಿಸುತ್ತಿದ್ದ ವೇಳೆಯೇ ಇಂಜಿನ್ ಭಾಗದಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡಿದೆ. ತಕ್ಷಣ ಎಚ್ಚೆತ್ತುಕೊಂಡ ಚಾಲಕ ಸಮಯಪ್ರಜ್ಞೆ ಮೆರೆದು ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಬೆಂಕಿ ಇಡೀ ಬಸ್ಸಿಗೆ …
Read More »ಸಾಲ ಕೊಡಿಸುವುದಾಗಿ ₹3.50 ಲಕ್ಷ ವಂಚನೆ
ಕಲಬುರಗಿ: ಮೀನುಗಾರಿಕೆ ಇಲಾಖೆಯಿಂದ ಎಸ್ಸಿ, ಎಸ್ಟಿ ಯೋಜನೆ ಅಡಿ ಸಬ್ಸಿಡಿ ದರದಲ್ಲಿ ಸಾಲ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಗೆ ₹3.50 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಮೂಲತಃ ಕಾಳಗಿ ತಾಲ್ಲೂಕಿನ ಕೊಡ್ಲಿ ಗ್ರಾಮದ ರಾಮನಗರ ತಾಂಡಾ ನಿವಾಸಿ, ಹಾಲಿ ಕಲಬುರಗಿಯ ಶಹಾಬಜಾರ್ನಲ್ಲಿ ನೆಲೆಸಿರುವ ವಿಠಲ ಚವ್ಹಾಣ ವಂಚನೆಗೆ ಒಳಗಾದವರು. ‘ಸಂಬಂಧಿಕರ ಮೂಲಕ ಫೋನ್ನಲ್ಲಿ ಪರಿಚಿತನಾದ ಗುಂಡಪ್ಪ ಪೂಜಾರಿ, ಮೀನುಗಾರಿಕೆ ಇಲಾಖೆಯಿಂದ ಸಬ್ಸಿಡಿ ಸಾಲ ಕೊಡಿಸುತ್ತೇನೆ. ಅದಕ್ಕೆ ಶುಲ್ಕ ಕಟ್ಟಬೇಕು ಎಂದು 2023ರ ಮಾರ್ಚ್ …
Read More »ಕ್ರೇನ್ ಢಿಕ್ಕಿ; ಪಾದಚಾರಿ ಮಹಿಳೆ ಸಾವು
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಗುಡ್ಡೆಯಂಗಡಿ ಬಳಿ ಪಾದಚಾರಿ ಮಹಿಳೆಗೆ ಕ್ರೇನ್ ಢಿಕ್ಕಿ ಹೊಡೆದು ಮಹಿಳೆಯೋರ್ವರು ಮೃತಪಟ್ಟ ಘಟನೆಯು ಮಾ.26ರ ಸಂಜೆ ಸಂಭವಿಸಿದೆ.ಕಾರವಾರ ಮೂಲದ (40) ಮೃತ ಮಹಿಳೆಯಾಗಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರ ಸಹಕಾರದಿಂದ ಖಾಸಗಿ ವಾಹನದಲ್ಲಿ ಮಹಿಳೆಯನ್ನು ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರೂ ಯಾವುದೇ ಪ್ರಯೋಜನವಾಗಲಿಲ್ಲ.ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ಗೊಂಡ ಪುತ್ರಿಯನ್ನು ಕಾರವಾರದತ್ತ ಕಾರಿನಲ್ಲಿ ಕರೆದೊಯ್ಯುತ್ತಿದ್ದರು. ಈ ವೇಳೆ ಉದ್ಯಾವರ ಬಲಾಯಿಪಾದೆ ಬಳಿ ಯು-ಟರ್ನ್ …
Read More »ಉಪಚುನಾವಣೆ ಕಾವು: ದಾವಣಗೆರೆಯಲ್ಲಿ ಚೆಕ್ಪೋಸ್ಟ್ಗಳಲ್ಲಿ ಲಕ್ಷಾಂತರ ನಗದು ಪತ್ತೆ
ದಾವಣಗೆರೆ: ಉಪಚುನಾವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸುತ್ತಿದ್ದ ಅಧಿಕಾರಿಗಳು, ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ₹6.17 ಲಕ್ಷ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾರಿಗನೂರ, ಮಾಗಾನಹಳ್ಳಿ ಮತ್ತು ಭೂಮಿಕಾ ನಗರ ಚೆಕ್ಪೋಸ್ಟ್ಗಳಲ್ಲಿ ವಿಶೇಷ ತಪಾಸಣೆ ಕೈಗೊಳ್ಳಲಾಗಿತ್ತು. ಈ ವೇಳೆ ಸಂಶಯಾಸ್ಪದವಾಗಿ ಸಾಗಿಸುತ್ತಿದ್ದ ನಗದು ಪತ್ತೆಯಾಗಿದೆ. ಭೂಮಿಕಾ ನಗರ ಚೆಕ್ಪೋಸ್ಟ್ನಲ್ಲಿ ಜಯನಗರದ ಪವನಕುಮಾರ್ ಅವರಿಂದ ₹4 ಲಕ್ಷ, ಕಾರಿಗನೂರ ಕ್ರಾಸ್ ಚೆಕ್ಪೋಸ್ಟ್ನಲ್ಲಿ ಪ್ರಕಾಶ ಮರುಳಸಿದ್ದ …
Read More »ಗಾಂಜಾ ನಶೆಯಲ್ಲಿ ಶಾಲಾ ಬಸ್ ನಿಲ್ಲಿಸಿ ಕಬ್ಬಿಣದ ರಾಡ್ ಹಿಡಿದು ಬೆದರಿಸಿದ ಯುವಕರು
ಚೆನ್ನೈ: ಗಾಂಜಾ ನಶೆಯಲ್ಲಿ ಯುವಕರು ಕಬ್ಬಿಣದ ರಾಡ್ ಹಿಡಿದು ಶಾಲಾ ಬಸ್ ನಿಲ್ಲಿಸಿ ಬೆದರಿಕೆ ಹಾಕಿರುವ ಘಟನೆ ತಮಿಳುನಾಡಿನ ಉತ್ತಂಗರೈನಲ್ಲಿ ನಡೆದಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರನ್ನು ನಿಂದಿಸಿ ಬೆದರಿಸಿಸಿದ್ದಾರೆ. ಉತ್ತಂಗರೈ-ಸೇಲಂ ರಸ್ತೆಯಲ್ಲಿ ಓಡಾಡುವ ಬಸ್, ಲಾರಿಗಳನ್ನು ತಡೆ ಹಿಡಿದು ಬೆದರಿಸಿದ್ದಾರೆ. ಸ್ಥಳೀಯರು ದೂರು ದಾಖಲಿಸಿದ್ದಾರೆ. ಆರೋಪಿಗಳ ವಿರುದ್ಧ ಈ ಹಿಂದೆಯೂ ಕ್ರಿಮಿನಲ್ ಪ್ರಕರಣಗಳಿವೆ. ಆರೋಪಿಗಳ ವಿರುದ್ಧ ಹಿಂದೆಯೂ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು. ಪೊಲೀಸರು ತನಿಖೆ ಆರಂಭಿಸಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





