Breaking News

BigTv News

ಅಪ್ರಾಪ್ತ ವಯಸ್ಸಿನವರಿಂದ ವಾಹನ ಚಾಲನೆ: ಕೇಸು ದಾಖಲು

ಕುಂಬಳೆ: ಅಪ್ರಾಪ್ತ ವಯಸ್ಸಿನವರು ವಾಹನ ಚಲಾಯಿಸಿದ ಪ್ರಕರಣದಲ್ಲಿ ಅವರು ಹಿಡಿದ ಪೊಲೀಸರು ಅವರ ಹೆತ್ತವರ ವಿರುದ್ಧ ಕೇಸು ದಾಖಲಿಸಿ ದ್ವಿಚಕ್ರ ವಾಹನಗಳನ್ನು ವಶಪಡಿಸಿದ್ದಾರೆ. ಇಚ್ಲಂಗೋಡು ಎಲ್‌.ಪಿ. ಶಾಲೆ ಪರಿಸರದಲ್ಲಿ ಬೈಕ್‌ ಚಲಾಯಿಸಿದ ಬಾಲಕನ ತಾಯಿಯ ವಿರುದ್ಧ ಪೊಲೀಸರು ಕೇಸು ದಾಖಲಿಸಿದ್ದಾರೆ.ಬಾಲಕನಿಗೆ ನೋಟಿಸ್‌ ನೀಡಲಾಗಿದೆ. ಇನ್ನೊಂದು ಘಟನೆಯಲ್ಲಿ ಮಂಡೆಕಾಪುನಲ್ಲಿ ಬಾಲಕ ಸ್ಕೂಟರ್‌ ಚಲಾಯಿಸಿದ್ದು, ಈ ಹಿನ್ನೆಲೆಯಲ್ಲಿ ಈತನ ತಂದೆಯ ವಿರುದ್ಧ ಕೇಸು ದಾಖಲಿಸಿ ಸ್ಕೂಟರನ್ನು ವಶಪಡಿಸಿದ್ದಾರೆ.

Read More »

ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಭೀಕರ ಮರ್ಡರ್ : ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ!

ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಇಂದು ಮುಂಜಾನೆ ಈ ಒಂದು ಘಟನೆ ನಡೆದಿದೆ. ಮಾರಕಾಸ್ತ್ರಗಳಿಂದ ತಲೆಯ ಮೇಲೆ ಹಲ್ಲೆ ನಡೆಸಿ ಕಿರಣ್ (25) ಎನ್ನುವ ಯುವಕನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆಕೊಲೆಯಾದ ಕಿರಣ್ ಅಪರಾಧ ಪ್ರಕರಣಗಳ ಹಿನ್ನೆಲೆ ಹೊಂದಿದ್ದ ಎನ್ನಲಾಗಿದೆ. ಇಂದು ಮುಂಜಾನೆ ಕಿರಣನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಾಮಮೂರ್ತಿ ನಗರದ …

Read More »

ಡಿಆರ್ ಐ ಭರ್ಜರಿ ಬೇಟೆ: ರೈಲಿನಲ್ಲಿ ಸಾಗಿಸುತ್ತಿದ್ದ 9 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

ಬೆಂಗಳೂರು: ಡಿಆರ್ ಐ ಭರ್ಜರಿ ಕಾರ್ಯಾಚರಣೆ ನಡೆಸಿದೆ. ದೆಹಲಿಯಿಂದ ಬೆಂಗಳೂರಿಗೆ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಾಟ ಮಾಡುತ್ತಿದ್ದ 9 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ. ನಾಯಿಗೆ ನೀಡುವ ಆಹಾರದ ಪ್ಯಾಕೆಟ್‌ಗಳಲ್ಲಿ ಅಡಗಿಸಿ, ಯಾರಿಗೂ ಅನುಮಾನ ಬಾರದಂತೆ ಡ್ರಗ್ಸ್ ಗಳನ್ನು ಸಾಗಿಸಲು ಯತ್ನಿಸಲಾಗಿತ್ತು. ಖಚಿತ ಮಾಅಹಿತಿ ಮೇರೆಗೆ ಡಿಆರ್ ಐ ಅಧಿಕಾರಿಗಳು ದಾಳಿ ನಡೆಸಿದ್ದು, ಕಾರ್ಯಪ್ರವೃತ್ತರಾಗಿ ರೈಲಿನಲ್ಲಿಯೇ ಈ ದಂಧೆಯನ್ನು ಪತ್ತೆ ಹಚ್ಚಿ, ಡ್ರಗ್ಸ್ ಸಹಿತ ಆರೋಪಿಯನ್ನು …

Read More »

ದಾವಣಗೆರೆ | ಚುನಾವಣಾ ಕರ್ತವ್ಯಕ್ಕೆ ಗೈರು: ಉಪನ್ಯಾಸಕ ಅಮಾನತು

ಚುನಾವಣಾ ತರಬೇತಿಗೆ ಗೈರು ಹಾಜರಾಗಿದ್ದ ಹರಿಹರದ ಎಸ್‌ಜೆವಿಪಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಕೆ.ಎಂ. ರುದ್ರಮುನಿಸ್ವಾಮಿ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಶುಕ್ರವಾರ ಆದೇಶ ಹೊರಡಿಸಿದ್ದಾರೆ. ಮತಗಟ್ಟೆ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದ ರುದ್ರಮುನಿಸ್ವಾಮಿ ಸೇರಿದಂತೆ 210 ಉಪನ್ಯಾಸಕರಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಾರ್ಚ್‌ 19ರಂದು ತರಬೇತಿ ಹಮ್ಮಿಕೊಳ್ಳಲಾಗಿತ್ತು. ‘ತರಬೇತಿಗೆ ಹಾಜರಾಗುವಂತೆ ನೀಡಿದ ಸೂಚನೆಯನ್ನು ಉಪೇಕ್ಷಿಸಲಾಗಿದೆ. ಪೂರ್ವಾನುಮತಿ ಪಡೆಯದೇ ತರಬೇತಿಗೆ ಗೈರಾಗಿದ್ದಾರೆ. ಪ್ರಜಾ ಪ್ರಾತಿನಿಧ್ಯ ಕಾಯ್ದೆ ಪ್ರಕಾರ ಅವರ …

Read More »

ಬೇಟೆಗಾರರಿಬ್ಬರ ಬಂಧನ

ಕೊಳ್ಳೇಗಾಲ: ತಾಲೂಕಿನ ಸತ್ತೇಗಾಲ ಜಾಗೇರಿ ಭರಚುಕ್ಕಿ ಅರಣ್ಯ ಪ್ರದೇಶದಲ್ಲಿ ಗುರುವಾರ ಸಂಜೆ ಅರಣ್ಯ ಸಿಬ್ಬಂದಿ ಗಸ್ತು ತಿರುಗುವಾಗ ಬೇಟೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಬಂಧಿಸಿದ್ದಾರೆ. ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಮುತ್ತತಿ ಗ್ರಾಮದ ನಿವಾಸಿ ಸಿದ್ದರಾಜು, ಸುಂದರ್ ಬಂಧಿತರು. ಇವರು ಕಾಡು ಪ್ರಾಣಿಗಳ ಬೇಟೆಗಾಗಿ ಸಂಚು ರೂಪಿಸಲು ಕಾಡಿನೊಳಗೆ ತೆರಳುವಾಗ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದು, ಆರೋಪಿಗಳ ಬಳಿ 5 ಉರುಳು ಪತ್ತೆಯಗಿದೆ. ಅರಣ್ಯಾಧಿಕಾರಿಗಳ ವಿಚಾರಣೆ ವೇಳೆ ಕಾಡು ಪ್ರಾಣಿಗಳ …

Read More »

ಟ್ರೆಡಿಂಗ್‌ಗೆ ಹೂಡಿಕೆ: ಮಹಿಳೆಗೆ 11.75ಲಕ್ಷ ರೂ. ಆನ್‌ಲೈನ್ ವಂಚನೆ

ಉಡುಪಿ: ಟ್ರೆಡಿಂಗ್ ಆಯಪ್‌ನಲ್ಲಿ ಹೂಡಿಕೆ ಮಾಡಿ ಮಹಿಳೆಯೊಬ್ಬರು 11.75ಲಕ್ಷ ರೂ. ಆನ್‌ಲೈನ್ ವಂಚನೆಗೆ ಒಳಗಾದ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹನ ಎಂಬವರು ಟ್ರೆಡಿಂಗ್ ಬಗ್ಗೆ ತಿಳಿದುಕೊಳ್ಳಲು ಆಯಪ್‌ವೊಂದನ್ನು ಡೌನ್‌ಲೋಡ್ ಮಾಡಿದ್ದು, ಮುಂದೆ 15 ದಿನ ಗಳ ನಂತರ ಅಪರಿಚಿತ ಕರೆ ಮಾಡಿ, ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದನು. ಅದರಲ್ಲಿ ಲಿಂಕ್ ನ್ನು ಕಳುಹಿಸಿ ಕೆವೈಸಿ ಡಿಟೈಲ್ ಫಿಲ್ ಮಾಡುವಂತೆ ತಿಳಿಸಲಾಗಿತ್ತು. ನಂತರ ಟ್ರೆಡಿಂಗ್ ಬಗ್ಗೆ …

Read More »

ಬೆಂಗಳೂರಲ್ಲಿ ಹೈಟೆಕ್ ಕಾರ್ ಡ್ರಿಫ್ಟಿಂಗ್ : ಅಪರಿಚಿತ ಚಾಲಕನ ವಿರುದ್ಧ FIR ದಾಖಲು

ಎಂ.ಜಿ. ರಸ್ತೆಯ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಇಂದು ಬೆಳಗಿನಜಾವ ಐಷಾರಾಮಿ ಲಾಂಬೊರ್ಗಿನಿ ಕಾರು ಡ್ರಿಫ್ಟಿಂಗ್ ಮಾಡಿ ಅಪಾಯಕಾರಿ ಚಾಲನೆ ಮಾಡಿದ್ದು, ಈ ಸಂಬಂಧ ಅಪರಿಚಿತ ಕಾರು ಚಾಲಕನ ವಿರುದ್ಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಂದು ಬೆಳಗಿನಜಾವ 2 ಗಂಟೆ ಸುಮಾರಿಗೆ ಲಾಂಬೊರ್ಗಿನಿ ಕಾರು ಅನಿಲ್ ಕುಂಬ್ಳೆ ವೃತ್ತದ ಬಳಿ ಬಂದಿತ್ತು. ಈ ವೇಳೆ ಕಾರು ಡ್ರಿಫ್ಟಿಂಗ್ ಮಾಡಿದೆ. ಇದನ್ನು ಕಂಡು ಸ್ಥಳೀಯರು ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ …

Read More »

ಡ್ರಗ್ಸ್​ ಮಾರುತ್ತಿದ್ದ ಮೂವರ ಬಂಧನ

ಕನಕಪುರ: ರಸ್ತೆ ಬದಿಯ ಜಮೀನಿನಲ್ಲಿ ಮಾದಕ ದ್ರವ್ಯ ಮಾರುತ್ತಿದ್ದ ಮೂವರನ್ನು ನಗರ ಠಾಣೆ ಪೊಲೀಸರು ಬಂಧಿಸಿ, 30 ಸಾವಿರ ರೂ. ಮೌಲ್ಯದ 15 ಗ್ರಾಂ ಡ್ರಗ್ಸ್​ಅನ್ನು ವಶಪಡಿಸಿಕೊಂಡಿದ್ದಾರೆ. ಪಟ್ಟಣದ ಖಾಲಕ್​ನಗರ ನಿವಾಸಿಗಳಾದ ಮುಬಾರಕ್​(22), ಅಖಿಲ್​(21), ಹಸನ್​(21) ಬಂಧಿತರು. ನಗರದ ಮಹರಾಜರ ಕಟ್ಟೆ ಬೈಪಾಸ್​ ರಸ್ತೆಯ ಜಮೀನಿನಲ್ಲಿ ಆರು ಮಂದಿ ಮಾದಕ ದ್ರವ್ಯ ಮಾರುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಡಿವೈಎಸ್​ಪಿ ಗಿರಿ, ಸರ್ಕಲ್​ ಇನ್​ಸ್ಪೆಕ್ಟರ್​ ಅನಂತ್​ರಾಮ್​ ಮತ್ತವರ ಸಿಬ್ಬಂದಿ ಶುಕ್ರವಾರ …

Read More »

ಕರಗ ಮುಗಿಸಿ ಮನೆಗೆ ಬರುವಾಗ ಹಲ್ಲೆ

ಶಿಡ್ಲಗಟ್ಟ: ಕರಗ ಮುಗಿಸಿ ಮನೆಗೆ ತೆರಳುತ್ತಿದ್ದ ನಗರದ ಗಾಂಧಿನಗರ ನಿವಾಸಿ ಶ್ರೀಧರ್​ ಮೇಲೆ ವ್ಯಕ್ತಿಯೊಬ್ಬ ಗುರುವಾರ ರಾತ್ರಿ ಹಲ್ಲೆ ಮಾಡಿದ್ದಾನೆ. ದಾರಿಯಲ್ಲಿ ಬೋವಿ ನಗರದ ವ್ಯಕ್ತಿ ಅಡ್ಡಗಟ್ಟಿದ್ದಾನೆ. ಯಾವುದೇ ಪ್ರಚೋದನೆ ಇಲ್ಲದೆ ಶ್ರೀಧರ್​ ಮೇಲೆ ಹಲ್ಲೆ ನಡೆಸಿದ ಆರೋಪಿ, ದೇಹದ ವಿವಿಧ ಭಾಗಗಳಿಗೆ ಗಾಯ ಮಾಡಿದ್ದಾನೆ.ಶ್ರೀಧರ್​ ಅವರಿಗೆ ಹಿಂದಿನಿಂದ ಬಂದು ಕುತ್ತಿಗೆ ಮತ್ತು ಕೈಗೆ ಹಲ್ಲೆ ಮಾಡಲಾಗಿದ್ದು, ತೀವ್ರ ಗಾಯಗಳಾಗಿವೆ. ಪೊಲೀಸರು ಬಂದ ಕೂಡಲೇ ಆರೋಪಿ ಕಾಲ್ಕಿತ್ತಿದ್ದಾನೆ. ಗಾಯಾಳುವನ್ನು ಪೊಲೀಸರು …

Read More »

ಧಾರವಾಡ | ಬಾಲಕಿಗೆ ಲೈಂಗಿಕ ಕಿರುಕುಳ: ಮುಖ್ಯ ಶಿಕ್ಷಕ ಬಂಧನ

ಧಾರವಾಡ: ಜಿಲ್ಲೆಯ ನವಲಗುಂದ ತಾಲ್ಲೂಕಿನ ಗ್ರಾಮವೊಂದರ ಶಾಲೆಯಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿಗೆ ಸಂಬಂಧಿಸಿದಂತೆ ಆರೋಪಿ ಮುಖ್ಯಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಶಾಲೆಯ ಕೊಠಡಿಯಲ್ಲಿ ಮುಖ್ಯ ಶಿಕ್ಷಕ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ದೂರು ದಾಖಲಾಗಿದೆ.ಬಾಲಕಿಯ ತಾಯಿ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನವಲಗುಂದ ಪೋಲೀಸ್ ಠಾಣೆಯಲ್ಲಿ ‍ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Read More »