ಪತ್ನಿ ಜೊತೆ ಅಕ್ರಮ ಸಂಬಂಧ ಕಾರಣ ಜಗಳ ನಡೆದಿದ್ದು, ತನ್ನ ಸೋದರ ಮಾವನನ್ನು ವ್ಯಕ್ತಿಯು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಮಿಟಿಕಾನಹಳ್ಳಿ ಬಳಿ ಬುಧವಾರ ಮಧ್ಯಾಹ್ನ ನಡೆದಿದೆ.ಆರೋಪಿ ಶಾಹಿದ್ ಹೊಸಕೋಟೆಯನಾಗಿದ್ದು, ಟೇಕಲ್ ಬಳಿಯ ಮಿಟಿಕಾನಹಳ್ಳಿ ಗ್ರಾಮದ ಬಳಿ ವಹಾಬ್ ಖಾನ್ ಎಂಬುವರ ಜಮೀನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ. ಈತನ ಸಂಸಾರ ಹೊಸಕೋಟೆಯಲ್ಲಿಯೇ ಇತ್ತು. ನಯಾಜ್ ತನ್ನ ಪತ್ನಿಯೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದ ಎಂಬ ಕಾರಣಕ್ಕೆ ಶಾಹಿದ್ ತನ್ನ ಸಂಸಾರವನ್ನು …
Read More »ಮಂಗಳೂರು ಬಿಎಸ್ಎನ್ಎಲ್ ಕಚೇರಿಯಲ್ಲಿ ಲಕ್ಷಾಂತರ ಮೌಲ್ಯದ ಕೇಬಲ್ ಕಳವು: ಅಧಿಕಾರಿ ಸೇರಿ ಮೂವರು ಅರೆಸ್ಟ್
ಬಿಎಸ್ಎನ್ಎಲ್ ಅಧಿಕಾರಿಗಳಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಕೇಬಲ್ ಕಳ್ಳತನ ನಡೆದಿದೆ. 70 ಲಕ್ಷ ರೂಪಾಯಿ ಮೌಲ್ಯದ ಕಾಪರ್ ಕೇಬಲ್ ಅನ್ನು ಅಧಿಕಾರಿಗಳು ಲಪಟಾಯಿಸಿದ್ದಾರೆ. ಮಂಗಳೂರಿನ ಪಾಂಡೇಶ್ವರದ ಬಿಎಸ್ಎನ್ಎಲ್ ಕಚೇರಿಯಲ್ಲಿ ಘಟನೆ ನಡೆದಿದೆ. ಮಂಗಳೂರು ದಕ್ಷಿಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಎಸ್ಎನ್ಎಲ್ ಸಹಾಯಕ ಆಫೀಸ್ ಸೂಪರಿಂಟೆಂಡೆಂಟ್ ತನ್ವೀರ್ ಬಾಷಾ(50), ಟೆಲಿಕಾಂ ಟೆಕ್ನಿಷಿಯನ್ ಕೆ.ಕೆ. ಚಾಮಿ(59) ಹಾಗೂ ಎಲ್ ಅಂಡ್ ಟಿ ಕಂಪನಿಯ ಕೇಬಲ್ ಜಾಯಿಂಟರ್ ಡಿ. ಮಂಜುನಾಥ್ ಅವರನ್ನು ಬಂಧಿಸಲಾಗಿದೆ. …
Read More »ಮಂಡ್ಯದಲ್ಲಿ ರೈಲಿಗೆ ತಲೆಕೊಟ್ಟು ಮನ್ ಮುಲ್ ಅಧಿಕಾರಿ ಆತ್ಮಹತ್ಯೆ
ಮಂಡ್ಯ : ಮದ್ದೂರು ತಾಲೂಕಿನ ಮನ್ ಮುಲ್ ಮೇಗಾ ಡೈರಿಯ ಉಪ ವ್ಯವಸ್ಥಾಪಕರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗುರುವಾರ ಸಂಜೆ ಜರುಗಿದೆ. ಮೇಗಾ ಡೈರಿಯ ಹಾಲು ಶೇಖರಣಾ ವಿಭಾಗದ ಉಪ ವ್ಯವಸ್ಥಾಪಕ ಭರತ್ ರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯಾಗಿದ್ದಾರೆ. ಗುರುವಾರ ಸಂಜೆ 4 ರಿಂದ 5 ಗಂಟೆಯೊಳಗೆ ಮಂಡ್ಯ ನಗರದ ಸಕ್ಕರೆ ಕಾರ್ಖಾನೆ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಆತ್ಮಹತ್ಯೆ ಗೆ ನಿಖರ ಕಾರಣ ತಿಳಿದು …
Read More »ಪ್ರವಾಸಕ್ಕೆ ಹೋಗಲು ಅನುಮತಿ ನೀಡದ ಪತಿ: ದುಡುಕಿದ ಪತ್ನಿ ಆತ್ಮಹತ್ಯೆ
ಮೈಸೂರು: ಪ್ರವಾಸಕ್ಕೆ ತೆರಳಲು ಪತಿ ಅನುಮತಿ ನೀಡದ ಹಿನ್ನೆಲೆಯಲ್ಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರು ನಗರದ ಸರಸ್ವತಿಪುರಂನಲ್ಲಿ ನಡೆದಿದೆ.ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಸಂಧ್ಯಾ(46) ಪತ್ತೆಯಾಗಿದ್ದಾರೆ. ಸಂಧ್ಯಾ ಅವರನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. 25 ವರ್ಷಗಳ ಹಿಂದೆ ಬೆಂಗಳೂರು ಮೂಲದ ಸಂಧ್ಯಾ ಚಾಮರಾಜನಗರ ಜಿಲ್ಲೆಯ ರಂಗನಾಥ್ ಅವರನ್ನು ಮದುವೆಯಾಗಿದ್ದರು. ಸಂಧ್ಯಾ -ರಂಗನಾಥ್ ದಂಪತಿಗೆ ಪುತ್ರ, ಪುತ್ರಿ ಇದ್ದಾರೆ. ಮಗಳು ವಿದೇಶದಲ್ಲಿ ವ್ಯಾಸಂಗ …
Read More »ಹುಬ್ಬಳ್ಳಿ ಸೂಫಿ ನೈಟ್ನಲ್ಲಿ ಕೈ ನಾಯಕರ ‘ನೋಟು ಮಳೆ’! ಸಂಗೀತಗಾರರ ಮೇಲೆ ಹಣ ಎಸೆದು ಕೈ ಮುಖಂಡರ ಎಡವಟ್ಟು!
ಹುಬ್ಬಳ್ಳಿಯಲ್ಲಿ ನಡೆದ ಗ್ರ್ಯಾಂಡ್ ಸೂಫಿ ನೈಟ್ ಕಾರ್ಯಕ್ರಮ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸಂಗೀತಗಾರರ ಮೇಲೆ ಹಣ ಹಾಕಿದ ಘಟನೆ ಕೈ ನಾಯಕರಿಗೆ ಎಡವಟ್ಟಾಗಿ ಪರಿಣಮಿಸಿರುವ ಮಾತುಗಳು ಕೇಳಿಬರುತ್ತಿವೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ರೀತಿಯ ನಡೆ ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಮೂಡಿಸಿದೆ. ಕೆಲವರು ಇದನ್ನು ಕಲಾವಿದರಿಗೆ ಗೌರವ ಸೂಚನೆ ಎಂದು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಸಾರ್ವಜನಿಕ ವೇದಿಕೆಯಲ್ಲಿ ನೋಟು ಎಸೆಯುವುದು ಸರಿಯಲ್ಲ ಎಂದು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ …
Read More »ಮಂಗಳೂರಿನಲ್ಲಿ ಘೋರ ದುರಂತ: ಬಾಲ್ ಎಂದು ಬಾಂಬ್ನಿಂದ ಬೌಲಿಂಗ್: ಬ್ಯಾಟ್ನಿಂದ ಹೊಡೆದಾಗ ಬ್ಲಾಸ್ಟ್
ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಭೀಶ್ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಸದ್ಯ ಬಾಲಕ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 9(B), 1(b) ಸ್ಫೋಟಕಗಳ ಕಾಯ್ದೆ, 125 A BNS ಆಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಬಾಲಕ ಅಭೀಶ್ ಮನೆ ಅಂಗಳದಲ್ಲಿ …
Read More »ಹಲ್ಲು ನೋವೆಂದು ಆಸ್ಪತ್ರೆಗೆ ಹೋದವಳು ಕೋಮಾಗೆ!
ಕಲಬುರಗಿ : ಹಲ್ಲು ನೋವೆಂದು ಆಸ್ಪತ್ರೆಗೆ ಹೋದ ಮಹಿಳೆ ವೈದ್ಯರ ಎಡವಟ್ಟಿನಿಂದಾಗಿ ಕೋಮಾಗೆ ಜಾರಿರುವ ಘಟನೆಯೊಂದು ಜಿಲ್ಲೆಯಲ್ಲಿ ವರದಿಯಾಗಿದೆ. ಜಿಲ್ಲೆಯ ಜೇವರ್ಗಿಯ ನಾಜಿಯಾ ಬೇಗಂ ಹಲ್ಲು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಕಲಬುರಗಿ ನಗರದ ಬಸವೇಶ್ವರ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಆ ವೇಳೆ ಅನೆಸ್ತೇಶಿಯಾ ಇಂಜೆಕ್ಷನ್ ನೀಡಿದ್ದಾರೆ. ಕೆಲವೇ ಸಮಯದಲ್ಲಿ ಮಹಿಳೆ ಕೋಮಾಗೆ ಜಾರಿದ್ದು, ಕುಟುಂಬಸ್ಥರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವೈದ್ಯರು ನಿರ್ಲಕ್ಷ್ಯದಿಂದಾಗಿ ನಾಜಿಯಾಗೆ ಅತಿಯಾದ ಅನೆಸ್ತೇಶಿಯಾ ನೀಡಿದ್ದಾರೆ. ಹೀಗಾಗಿ …
Read More »ಇಸ್ಪೀಟ್ ಜೂಜಾಟ: ಇಬ್ಬರು ಪೊಲೀಸರ ಅಮಾನತು
ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ದಿಗ್ಗಾಂವ್ ಗ್ರಾಮದಿಂದ ಬೆನಕನಹಳ್ಳಿ ಕಡೆಗೆ ಹೋಗುವ ರಸ್ತೆಯ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುವ ವೇಳೆ ಸಿಕ್ಕಿಬಿದ್ದಿದ್ದ ಇಬ್ಬರು ಪೊಲೀಸರನ್ನು ಕಲಬುರಗಿ ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ.ಇಲಾಖಾ ವಿಚಾರಣೆ ಬಾಕಿ ಇರಿಸಿ ಗುರುವಾರ ಅಮಾನತುಗೊಳಿಸಿದ್ದಾರೆ. ಕಲಬುರಗಿ ನಗರದ ಎಂ.ಬಿ ನಗರ ಪೊಲೀಸ್ ಠಾಣೆ ಸಿವಿಲ್ ಪೊಲೀಸ್ ಕಾನ್ಸ್ಟೆಬಲ್ ಗುರುನಾಥ ಹಾಗೂ ನಗರದ ಸಶಸ್ತ್ರ ಮೀಸಲು ಘಟಕದ ಕಾನ್ಸ್ಟೆಬಲ್ ಮಡಿವಾಳಪ್ಪ ಅಮಾನತುಗೊಂಡವರು. …
Read More »ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾದ ಪತಿ
ಮಂಗಳೂರು: ಪತಿ ಮಹಾಶಯನೊಬ್ಬ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಾಸರಗೋಡಿನ ಕಂಗಾಡಿನನಲ್ಲಿ ಎಂಬಲ್ಲಿ ನಡೆದಿದೆ. ಕಡಪ್ಪುರದ ಭಾವಾನಗರದ ನಿವಾಸಿ ಇಬ್ರಾಹಿಂ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇಬ್ರಾಹಿಂ, ಪತ್ನಿ ಮರ್ಯಮ್ ಅವರ ತಲೆಗೆ ಗಂಭೀರವಾಗಿ ಹೊಡೆದು ಹಲ್ಲೆ ನಡೆಸಿದ್ದ. ಮಾರಣಾಂತಿಕವಾಗಿ ಹಲ್ಲೆಗೊಳಗಾದ ಮರ್ಯಮ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಮರ್ಯಮ್ ಅವರ ಕೂಗಾಟ ಕೇಳಿ ಅಕ್ಕಪಕ್ಕದ ಮನೆಯವು ಧಾವಿಸಿ ಬಂದಿದ್ದಾರೆ. …
Read More »ಸಿಗರೇಟ್ ಕಿಡಿಗೆ ಬಸ್ ಬೆಂಕಿಗಾಹುತಿ: ನಶೆಯಲ್ಲಿ ಕಿಡಿಗೇಡಿಗಳ ಕೃತ್ಯ!
ಬೆಂಗಳೂರು: ನಗರದ ಚಂದ್ರಾಲೇಔಟ್ ನ ಬಿಎಂಟಿಸಿ ಡಿಪೋ ಬಳಿ ಖಾಸಗಿ ಬಸ್ಸೊಂದು ಬೆಂಕಿಗೆ ಆಹುತಿ ಯಾಗಿದೆ. ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಬಸ್ನಲ್ಲಿ ಯಾವುದೇ ಪ್ರಯಾಣಿಕರು ಇಲ್ಲದಿರುವ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿಯ ಜ್ವಾಲೆ ಬಸ್ನ ಅಕ್ಕಪಕ್ಕ ನಿಲುಗಡೆ ಮಾಡಿದ್ದ ಇತರೆ ವಾಹನ ಗಳಿಗೂ ಹಬ್ಬಿ ಹಾನಿಯಾಗಿದೆ.ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಕಿಡಿಗೇಡಿಗಳು ಮದ್ಯದ ನಶೆಯಲ್ಲಿ ಸಿಗರೆಟ್ ತುಂಡನ್ನು ಬಸ್ ಮೇಲೆ ಎಸೆದಿದ್ದರಿಂದ ಬೆಂಕಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





