Breaking News

BigTv News

ಸೈಬರ್‌ ವಂಚನೆ ತಡೆ ಜಾಗೃತಿಗಾಗಿ “ಸೈಬರ್‌ ಕವಚ’

ಮಂಗಳೂರು: ಸೈಬರ್‌ ವಂಚನೆಗಳಿಂದ ಸಾರ್ವಜನಿಕರನ್ನು ಎಚ್ಚರಿಸಲು ಮಂಗಳೂರು ನಗರ ಪೊಲೀಸರು ಅಕ್ಟೋಬರ್‌ ತಿಂಗಳನ್ನು ‘ಸೈಬರ್‌ ಸುರಕ್ಷತೆ’ ಜಾಗೃತಿ ತಿಂಗಳಾಗಿ ಆಚರಿಸುತ್ತಿದ್ದು, ‘ಸೈಬರ್‌ ಕವಚ’ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅಪರಿಚಿತ ಲಿಂಕ್‌, ಎಪಿಕೆ ಫೈಲ್‌, ಉದ್ಯೋಗದ ಆಮಿಷದ ಜಾಹೀರಾತುಗಳನ್ನು ಪರಿಶೀಲಿಸದೆ ಕ್ಲಿಕ್‌ ಮಾಡದಂತೆ ಹಾಗೂ ಬ್ಯಾಂಕ್‌, ಪೊಲೀಸ್‌ ಅಧಿಕಾರಿಗಳ ಹೆಸರಿನಲ್ಲಿ ಬರುವ ಕರೆಗಳಿಗೆ ವೈಯಕ್ತಿಕ ಮಾಹಿತಿ, ಒಟಿಪಿ, ಪಾಸ್‌ವರ್ಡ್‌ ಹಂಚಿಕೊಳ್ಳದಂತೆ ಪೊಲೀಸರು ಎಚ್ಚರಿಕೆ ನೀಡಲಿದ್ದಾರೆ. ಪ್ರತಿ ಪೊಲೀಸ್‌ ಠಾಣೆಯಲ್ಲಿ …

Read More »

ಮೈಸೂರು To ಕೋಲಾರ; ಹೆಲ್ಮೆಟ್‌ ಗ್ಯಾಂಗ್‌ ಕೈಚಳಕ!

ಕೋಲಾರ: ಸಾಲಗಾರರ ಕಿರುಕುಳ ಹಾಗೂ ತಾಯಿಯ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳತನಕ್ಕಿಳಿದಿದ್ದ ಮೈಸೂರು ಮೂಲದ ಇಬ್ಬರು ಸ್ನೇಹಿತರು ಬಳಿಕ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿರುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಸೈಯದ್ ಸಲ್ಮಾನ್ ಅಲಿಯಾಸ್ ಪೈಲ್ವಾನ್ ಹಾಗೂ ಮತ್ತೊಬ್ಬ ಆರೋಪಿ ಹೆಲ್ಮೆಟ್, ಮಾಸ್ಕ್ ಧರಿಸಿ ಅಂಗಡಿ, ಬೇಕರಿಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಹಗಲು ಅಂಗಡಿಗಳ ಮೇಲೆ ನಿಗಾ ಇಟ್ಟು, ರಾತ್ರಿ ಷಟರ್ ಬೀಗ ಮುರಿದು ಹಣ ಕದಿಯುತ್ತಿದ್ದರು. ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ ಹಾಗೂ …

Read More »

ಜಿಮ್‌ ಟ್ರೈನರ್‌ ಕೊಲೆಯ ಹಿಂದೆ ಸಲಿಂಗಕಾಮಿಗಳ ಕೈವಾಡ? – ಶವದ ಮೇಲೆ ಕಚ್ಚಿದ ಗುರುತು!

ಬೆಂಗಳೂರು: ಅಮೃತಹಳ್ಳಿಯಲ್ಲಿ ನಡೆದ ಜಿಮ್ ಟ್ರೈನರ್ ನಂದನ್ ಕೊಲೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಪೊಲೀಸರಿಗೆ ಹಲವು ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಕೊಲೆಗೂ ಮುನ್ನ ನಂದನ್ ಜೊತೆ ಆರೋಪಿಗಳು ಅನುಚಿತವಾಗಿ ವರ್ತಿಸಿರುವ ಶಂಕೆ ವ್ಯಕ್ತವಾಗಿದೆ. ನಂದನ್ ದೇಹದ ಮೇಲೆ ಕಚ್ಚಿದ ಗುರುತುಗಳು ಪತ್ತೆಯಾಗಿದ್ದು, ಈ ವಿಚಾರ ತನಿಖೆಯಲ್ಲಿ ಮಹತ್ವ ಪಡೆದಿದೆ. ಅನುಚಿತ ವರ್ತನೆಯನ್ನು ನಂದನ್ ವಿರೋಧಿಸಿದಾಗ ಪ್ರಮುಖ ಆರೋಪಿ ವಿಶ್ವನಾಥ್‌ ಜೊತೆ ತೀವ್ರ ಗಲಾಟೆ ನಡೆದಿದ್ದು, ಬಳಿಕ ಅದು ಕೊಲೆಯಲ್ಲಿ ಅಂತ್ಯಗೊಂಡಿದೆ …

Read More »

ಬೆಂಗಳೂರಲ್ಲಿ ಸ್ಪಾಗೆ ನುಗ್ಗಿ ಲೇಡಿ ಗ್ಯಾಂಗ್ ನಿಂದ ನೈತಿಕ ಪೊಲೀಸ್ ಗಿರಿ : ಬೆದರಿಸಿ ಹಣ ವಸೂಲಿ ಮಾಡಿದ ಗ್ಯಾಂಗ್, FIR ದಾಖಲು!

ಬೆಂಗಳೂರು: ವಿದ್ಯಾರಣ್ಯಪುರದ ಸ್ಪಾವೊಂದಕ್ಕೆ ನುಗ್ಗಿದ ನಾಲ್ವರು ಮಹಿಳೆಯರು ಹಾಗೂ ಇಬ್ಬರು ಯುವಕರ ತಂಡ ನೈತಿಕ ಪೊಲೀಸ್‌ಗಿರಿ ನಡೆಸಿ ಹಣಕ್ಕಾಗಿ ಬೆದರಿಸಿ ಸುಲಿಗೆ ಮಾಡಿದ ಘಟನೆ ನಡೆದಿದೆ. ಅಕ್ಟೋಬರ್‌ 3ರಂದು ರಾತ್ರಿ ‘ಮೈ ಸಲೂನ್ ಅಂಡ್ ಸ್ಪಾ’ಗೆ ನುಗ್ಗಿದ ಆರೋಪಿಗಳು, ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾರೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟು ಸ್ಪಾದ ಹೆಸರು ಕೆಡಿಸುವುದಾಗಿ ಬೆದರಿಸಿದ್ದಾರೆ. ಆರಂಭದಲ್ಲಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟ …

Read More »

ಯುವತಿ ಆತ್ಮಹತ್ಯೆ; ಪತಿ-ಕುಟುಂಬದ ವಿರುದ್ಧ ಕಿರುಕುಳ ಆರೋಪ!

ಯಾದಗಿರಿ: ಪತಿ ಹಾಗೂ ಆತನ ಕುಟುಂಬಸ್ಥರಿಂದ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ 21 ವರ್ಷದ ಕವಿತಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರಪುರ ತಾಲೂಕಿನ ಏವೂರು ಸಣ್ಣ ತಾಂಡಾದಲ್ಲಿ ನಡೆದಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸುನೀಲ್ ಜಾಧವ್ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಕವಿತಾಗೆ ತವರು ಮನೆಯವರೊಂದಿಗೆ ಮಾತನಾಡದಂತೆ ಹಾಗೂ ಭೇಟಿಯಾಗದಂತೆ ಪತಿ ಕುಟುಂಬದವರು ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ. ನಿರಂತರ ಕಿರುಕುಳದಿಂದ ಮನನೊಂದಿದ್ದ ಕವಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು …

Read More »

ರಾಡ್‌ನಿಂದ ಹೊಡೆದು ವ್ಯಕ್ತಿಯ ಹತ್ಯೆ: ಕಾರಿನಲ್ಲಿ ಮೃತದೇಹ ಪತ್ತೆ

ಕಲಬುರಗಿ: ನಗರದ ಹೊರವಲಯದಲ್ಲಿ ವ್ಯಕ್ತಿಯೊಬ್ಬರನ್ನು ಸ್ಟಿಕ್ ರಾಡ್‌ನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೃತರನ್ನು ಬ್ರಹ್ಮಪುರದ ಕನಕನಗರ ನಿವಾಸಿ ಹಾಗೂ ಹೋಟೆಲ್ ಉದ್ಯಮಿ ಸಿದ್ದಲಿಂಗ ಸಾವಳಗಿ (35) ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ ಮನೆಯಿಂದ ಹೊರಗೆ ತೆರಳಿದ್ದ ಸಿದ್ದಲಿಂಗ ನಾಪತ್ತೆಯಾಗಿದ್ದರು. ಭಾನುವಾರ ಸಂಜೆ ನಗರದ ಹೊರವಲಯದ ಹೋಟೆಲ್‌ವೊಂದರ ಬಳಿ ಕಾರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಸ್ನೇಹಿತರೇ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಶಂಕೆ …

Read More »

ವ್ಯಕ್ತಿ ಭೀಕರ ಕೊಲೆ, ಮಾರಕಾಸ್ತ್ರಗಳಿಂದ ದಾಳಿ; 6 ಮಂದಿ ಗ್ಯಾಂಗ್ ನಿಂದ ಕೃತ್ಯ!

ಮೈಸೂರು: ನಗರದ ಗೋಕುಲಂನಲ್ಲಿ ಜನರ ಗುಂಪೊಂದು ಮಹೇಶ್ ಟಿ. (40) ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಮಹಿಳೆ ವಿಚಾರಕ್ಕೆ ಸಂಬಂಧಿಸಿದಂತೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಜನನಿಬಿಡ ಪ್ರದೇಶದಲ್ಲಿ ಹಾಡಹಗಲೇ ಸಾರ್ವಜನಿಕರ ಎದುರೇ ಮಹೇಶ್ ಮೇಲೆ ದಾಳಿ ನಡೆಸಿ ಹಂತಕರು ಪರಾರಿಯಾಗಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ವಿ.ವಿ. ಪುರಂ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, …

Read More »

ಹೆಣ್ಣಿನ ಆಸೆಗೆ ಬಿದ್ದು ಕೈದಿ ಬಿಡುಗಡೆ ಮಾಡಿದ್ದ ಡಿಐಜಿ ಸೋಮಶೇಖರ್?; ತನಿಖೆ ವೇಳೆ ಸ್ಫೋಟಕ ವಿಚಾರ ಬಯಲು!

ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಶಂಕರ್‌ನನ್ನು ಅಕ್ರಮವಾಗಿ ಬಿಡುಗಡೆ ಮಾಡಿದ ಪ್ರಕರಣದಲ್ಲಿ ಬಂಧನವಾಗಿರುವ ಜೈಲು ಡಿಐಜಿ ಸೋಮಶೇಖರ್ ಅವರನ್ನು ನ್ಯಾಯಾಲಯ ಅಕ್ಟೋಬರ್ 9ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರ ತನಿಖೆಯಲ್ಲಿ, ಕೈದಿ ಶಂಕರ್‌ನ ಪತ್ನಿಯೊಂದಿಗೆ ಡಿಐಜಿ ಸೋಮಶೇಖರ್ ಹಾಗೂ ಸಿಬ್ಬಂದಿ ಶ್ರೀಕಾಂತ್ ಅಕ್ರಮ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಆಕೆಯ ಮೂಲಕ ಕೈದಿಯನ್ನು ಬಿಡುಗಡೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು …

Read More »

ನಿಂಗಿದು ಬೇಕಿತ್ತಾ ಮಗನೇ.. ಜಗಳ ಬಿಡಿಸಲು ಹೋದ ಪೊಲೀಸರ ಮೇಲೆಯೇ ಹಲ್ಲೆ!

ದೊಡ್ಡಬಳ್ಳಾಪುರ: ಮದ್ಯದ ಅಮಲಿನಲ್ಲಿ ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿದ್ದಾಗ, ಬಿಡಿಸಲು ತೆರಳಿದ್ದ 112 ತುರ್ತು ಸೇವೆಯ ಪೊಲೀಸ್ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ ಘಟನೆ ಪಾಲಜೋಗಹಳ್ಳಿಯಲ್ಲಿ ನಡೆದಿದೆ. ಮಣಿಕಂಠ ಮತ್ತು ರಾಯಪ್ಪ ಪೂಜಾರಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರಹಾನ್ ಸಾರಿಹಾನ್ ಮತ್ತು ಬಸೀರ ಅಲಿಯಾಸ್ ಗಿಡ್ಡ ಎಂಬವರು ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದ ಬಗ್ಗೆ 112ಗೆ ಕರೆ ಬಂದಿತ್ತು. ಸ್ಥಳಕ್ಕೆ ತೆರಳಿದ ಪೊಲೀಸರು ಜಗಳ ಬಿಡಿಸಲು ಮುಂದಾದಾಗ ಆರೋಪಿಗಳು ಅವರ ಮೇಲೆಯೇ …

Read More »

ಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಗಲಾಟೆ, ಪತಿಯಿಂದಲೇ ಪತ್ನಿಯ ಭೀಕರ ಕೊ*ಲೆ!

ಬೆಳಗಾವಿ: ಹಸುಗಳಿಗೆ ಮೇವು ಹಾಕುವ ವಿಚಾರಕ್ಕೆ ಪತಿ-ಪತ್ನಿ ನಡುವೆ ನಡೆದ ಸಣ್ಣ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ರಾಯಭಾಗ ತಾಲೂಕಿನ ಮಾಡಲಗಿ ಗ್ರಾಮದಲ್ಲಿ ನಡೆದಿದೆ. ಕಲ್ಲವ್ವ ಮರಡಿ (55) ಕೊಲೆಯಾದ ಮಹಿಳೆಯಾಗಿದ್ದು, ಪತಿ ಸದಾಶಿವ ಮರಡಿ (67) ಆರೋಪಿಯಾಗಿದ್ದಾನೆ. ಜಾನುವಾರುಗಳಿಗೆ ಮೇವು ಹಾಕುವ ವಿಚಾರದಲ್ಲಿ ದಂಪತಿ ನಡುವೆ ಜಗಳ ನಡೆದಿತ್ತು. ಬಳಿಕ ಕಲ್ಲವ್ವ ಹಸಿರು ಮೇವು ತರಲು ಕಬ್ಬಿನ ಗದ್ದೆಗೆ ತೆರಳಿದ್ದರು. ಕೋಪಗೊಂಡಿದ್ದ ಸದಾಶಿವ ಕುಡಗೋಲು ಹಿಡಿದು ಆಕೆಯ ಹಿಂದೆಯೇ …

Read More »