Breaking News

BigTv News

500 ಕೋಟಿ ರೂ. ವಂಚನೆ ಪ್ರಕರಣ: 32ನೇ ಅವೆನ್ಯೂ ಸಿಇಓ ಅರೆಸ್ಟ್

ಚಂಡೀಗಢ : 500 ಕೋಟಿ ರೂ. ವಂಚನೆ ಪ್ರಕರಣದಲ್ಲಿ 32ನೇ ಅವೆನ್ಯೂ ವಾಣಿಜ್ಯ ರಿಯಲ್ ಎಸ್ಟೇಟ್ ಯೋಜನೆಯ ಸ್ಥಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಧ್ರುವ್ ದತ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಒಂದು ಫ್ಲೋರ್ ಅನ್ನು 25 ಕ್ಕೂ ಹೆಚ್ಚು ಜನರಿಗೆ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ.ಈ ವೇಳೆ ಈತ ಸುಮಾರು 500 ಕೋಟಿ ರೂ. ವಂಚನೆ ಎಸಗಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಫೆ. 6ರಂದು ಬಂಧಿಸಲಾಗಿತ್ತು. ನಂತರ …

Read More »

ಬೆಂಗಳೂರು: ಬ್ರೇಕ್ ವೈಫಲ್ಯ; ಮರ, ಹೋಟೆಲ್‌ಗೆ ಬಸ್‌ ಡಿಕ್ಕಿ

ಮಹಾಲಕ್ಷ್ಮಿ ಲೇಔಟ್‌ನ ಕಮಲಾನಗರದತ್ತ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್‌ವೊಂದು ಬ್ರೇಕ್ ವೈಫಲ್ಯದಿಂದ ನಿಯಂತ್ರಣ ತಪ್ಪಿ ಮರ ಹಾಗೂ ಹೋಟೆಲ್‌ಗೆ ಡಿಕ್ಕಿ ಹೊಡೆದಿದೆ. ಹಲವು ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು.ಇದೇ ವೇಳೆ ಬ್ರೇಕ್ ವೈಫಲ್ಯದಿಂದ ನಿಂತಿದ್ದ ಬಸ್‌ಗೆ ಹಿಂಬದಿಯಿಂದ ಬೈಕ್ ಹಾಗೂ ಕಾರು ಡಿಕ್ಕಿ ಹೊಡೆದ ಘಟನೆ ಸಹ ನಡೆದಿದೆ. ಯಾವುದೇ ಗಂಭೀರ ಅನಾಹುತ ಸಂಭವಿಸಿಲ್ಲ. ಘಟನೆಯ ಮಾಹಿತಿ ತಿಳಿದ ಕೂಡಲೇ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರು …

Read More »

ವಿವಾಹಿತನಿಂದ ಕಿರುಕುಳ: ತಾಯಿ, ಮಗಳು ಆತ್ಮಹತ್ಯೆ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಳವಾಯಿ ಕೋಡಿಹಳ್ಳಿಯಲ್ಲಿ ತಾಯಿ ಮತ್ತು ಮಗಳು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ.ಎಂ. ಮಹೇಶ್ ಅವರ ಪತ್ನಿ ಶಕುಂತಲಾ(37), ಅವರ ಪುತ್ರಿ ಪ್ರಿಯಾ(18) ಮೃತಪಟ್ಟವರು. ಪಕ್ಕದ ಮನೆಯ 35 ವರ್ಷದ ವಿವಾಹಿತ ಪುತ್ರಿಯನ್ನು ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸಿದ್ದ. ಆತನಿಗೆ ಮಹೇಶ್ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಪುತ್ರಿಗೆ ಬೇರೊಬ್ಬನ ಜೊತೆ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವುದನ್ನು ತಿಳಿದ ಆತ ಬೇರೆಯವರೊಂದಿಗೆ ಮದುವೆ ಮಾಡಿದರೆ …

Read More »

ಗಾಂಜಾ ಮಾರಲು ಯತ್ನಿಸುತ್ತಿದ್ದ ಇಬ್ಬರ ಬಂಧನ

ಬೇಲೂರು: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಿರುವ ಬೇಲೂರು ಪೊಲೀಸರು, ಬಂಧಿತರಿಂದ 50,000 ರೂ ಬೆಲೆ ಗಾಂಜಾ ವಶಕ್ಕೆ ಪಡೆದಿದ್ದಾರೆ. ಪಟ್ಟಣ ಸಮೀಪದ ಬಂಟೇನಹಳ್ಳಿಯಲ್ಲಿರುವ ಅರಣ್ಯ ಇಲಾಖೆ ಸಮೀಪ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಇನ್‌ಸ್ಪೆಕ್ಟರ್ ರೇವಣ್ಣ ನೇತೃತ್ವದ ತಂಡ ಕಾರ್ಯಚರಣೆ ನಡೆಸಿ ಸ್ಕೂಟಿಯಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಂಟೇನಹಳ್ಳಿ ನಿವಾಸಿ ಶಶಾಂಕ್, ಹೊಸ ನಗರ ನಿವಾಸಿ ದಿಲೀಪ್‌ನನ್ನು ವಶಕ್ಕೆ ಪಡೆದು 220 …

Read More »

ಮಂಗಳೂರು ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

ಮಂಗಳೂರು: ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ಭಾನುವಾರ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಮಂಗಳೂರು ವಿಮಾನ ನಿಲ್ದಾಣದಿಂದ ಮಣ್ಣಗುಡ್ಡಕ್ಕೆ ಕಡೆಗೆ ತೆರಳುತ್ತಿದ್ದ ಕಾರಿನ ಒಳಭಾಗದಿಂದ ಏಕಾಏಕಿ ಹೊಗೆ ಕಾಣಿಸಿಕೊಂಡಿದ್ದು, ತಕ್ಷಣ ಚಾಲಕ ಕಾರಿನಿಂದ ಇಳಿದು ಮಣ್ಣಗುಡ್ಡ ನಿವಾಸಿ ಶೇಖರ್ ಶೆಟ್ಟಿ ಅವರು ಹೊರಬಂದಿದ್ದಾರೆ.ಕದ್ರಿ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕದ್ರಿ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಸುಗಮ ವಾಹನ ಸಂಚಾರಕ್ಕೆ ಅನುವು …

Read More »

ತುಮಕೂರು | ಸರಣಿ ಅಪಘಾತ: ಇಬ್ಬರು ಸಾವು

ತುಮಕೂರು: ತಾಲ್ಲೂಕಿನ ಬಾಣಾವರ ಗೇಟ್‌ ಬಳಿ ಭಾನುವಾರ ಸಂಜೆ ಮೂರು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿದ್ದಾರೆ.ನಗರದ ಯಾದವ ನಗರದ ಸುರೇಶ್‌ (55), ಮುರಳಿ (60) ಮೃತರು. ಸುರೇಶ್‌ ಗುಬ್ಬಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು. ಸೈಬರ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣಪ್ಪ, ಜೆಡಿಎಸ್‌ ವಕ್ತಾರ ಜಯಣ್ಣ, ಮಂಜುನಾಥ್‌ ಸೇರಿದಂತೆ 5 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಕೃಷ್ಣಪ್ಪ ಸ್ನೇಹಿತರ ಜತೆಗೆ ಆದಿಚುಂಚನಗಿರಿಗೆ ಹೋಗಿ ಕುಣಿಗಲ್‌ …

Read More »

ಅಡುಗೆ ಮಾಡಲು ಆಗಲ್ಲ ಎಂದ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

ಗ್ವಾಲಿಯರ್: ತನ್ನ ಕೈಯಲ್ಲಿ ಅಡುಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಕ್ಕೆ, ಕುಡಿದ ಮತ್ತಿನಲ್ಲಿದ್ದ ಪತಿಯು ಆಕೆಯನ್ನು ಗುಂಡಿಕ್ಕಿ ಕೊಂದಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜರುಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋನು ತೋಮರ್(45) ಕೊಲೆ ಆರೋಪಿಯಾಗಿದ್ದಾರೆ. ಶನಿವಾರ (ಫೆ.7) ರಾತ್ರಿ 11 ಗಂಟೆಯ ಸುಮಾರಿಗೆ ಕುಡಿದ ಮತ್ತಿನಲ್ಲಿ ಮನೆಗೆ ಆಗಮಿಸಿದ ಆತ, ಹೆಂಡತಿಗೆ ಅಡುಗೆ ಮಾಡುವಂತೆ ಒತ್ತಾಯಿಸಿದ್ದಾನೆ. ಅನಾರೋಗ್ಯದ ಕಾರಣ ಪತ್ನಿಯು ಅಡುಗೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದಕ್ಕೆ ಕೋಪಗೊಂಡ ಆರೋಪಿ, …

Read More »

ಕರ್ತವ್ಯ ಲೋಪ: ಇಬ್ಬರು ಎಎಸ್‌ಐ, ಕಾನ್‌ಸ್ಟೆಬಲ್‌ಗಳು ಅಮಾನತು

ಯಾದಗಿರಿ: ಅಕ್ರಮವಾಗಿ ಮರಳು ಸಾಗಣೆಗೆ ಬಳಸುತ್ತಿದ್ದ ವಾಹನಗಳನ್ನು ಬಿಟ್ಟು ಕಳುಹಿಸಿದ ಆರೋಪದಡಿ ಸುರಪುರ ಠಾಣೆಯ ಇಬ್ಬರು ಎಎಸ್‌ಐ ಸೇರಿ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸುರಪುರ ವಿಭಾಗದ ಡಿವೈಎಸ್‌ಪಿ ಅವರು ನೀಡಿದ್ದ ವರದಿ ಆಧರಿಸಿ ಎಎಸ್‌ಐಗಳಾದ ನಿಂಗಪ್ಪ, ಬಲರಾಮ, ಕಾನ್‌ಸ್ಟೆಬಲ್‌ಗಳಾದ ತಾಯಣ್ಣ ಮತ್ತು ಲಕ್ಷ್ಮಣ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿವೆ.ಕೃಷ್ಣಾ ನದಿ ತೀರದಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಆರು ಟಿಪ್ಪರ್‌ಗಳನ್ನು ದೇವಿಕೇರಾ ಕ್ರಾಸ್‌ ಸಮೀಪ …

Read More »

ಉಡುಪಿ: ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಬೇರ್ಪಟ್ಟ ವ್ಯಕ್ತಿಯ ರುಂಡ-ಮುಂಡ!

ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ವೇಳೆ ರುಂಡ-ಮುಂಡ ಬೇರ್ಪಟ್ಟ ಭೀಭತ್ಸ ಘಟನೆ ಅಂಬಾಗಿಲು ಸಮೀಪದ‌ ಕಕ್ಕುಂಜೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಪುರುಷೋತ್ತಮ‌ ನಾಯಕ್ (52) ಎನ್ನುವವರು ಅತ್ಮಹತ್ಯೆ ಮಾಡಿಕೊಡವರು. ನೈಲಾನ್ ಹಗ್ಗ ಬಳಸಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ರುಂಡ -ಮುಂಡ ಬೇರ್ಪಟ್ಟಿದೆ. ತೀವ್ರ ರಕ್ತ ಸ್ರಾವದಿಂದ ಬಾವಿಯ ನೀರಿನ ಬಣ್ಣವೇ ಬದಲಾಗಿತ್ತು. ಮಣಿಪಾಲದ‌ ಹೋಟೆಲ್ ವೊಂದರಲ್ಲಿ ಎಲೆಕ್ಟ್ರಿಶಿಯನ್ ಆಗಿದ್ದ ಪುರುಷೋತ್ತಮ‌ ನಾಯಕ್ ಅರ್ಥಿಕ ಸಮಸ್ಯೆಯಿಂದ ಖಿನ್ನತೆಯಿಂದ ಬಳಲುತ್ತಿದ್ದರು …

Read More »

ಬೆಂಗಳೂರಿನಲ್ಲಿ ಘೋರ ಘಟನೆ : ಮೀನು ಹಿಡಿಯಲು ಹೋಗಿ ಬಾಲಕ ಸೇರಿ ಇಬ್ಬರು ನೀರುಪಾಲು!

ಕೃಷಿಹೊಂಡದಲ್ಲಿ ಮೀನು ಹಿಡಿಯಲು ಹೋಗಿಓರ್ವ ಬಾಲಕ ಸೇರಿ ಇಬ್ಬರು ನೀರು ಪಾಲಾಗಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಚಂದುರಾಯನ ಪಾಳ್ಯದಲ್ಲಿ ನಡೆದಿದೆ. ಚಂದುರಾಯನ ಪಾಳ್ಯದಲ್ಲಿ ಮೀನು ಹಿಡಿಯಲು ಹೋಗಿ ಶಂಕರ್ (32) ಹಾಗೂ ಬಾಲಕ ಮೋಹಿತ್ (17) ಎಂದು ತಿಳಿದು ಬಂದಿದೆ.ಘಟನೆ ಕುರಿತು ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »