Breaking News

ತುಮಕೂರು | ಸರಣಿ ಅಪಘಾತ: ಇಬ್ಬರು ಸಾವು

ತುಮಕೂರು: ತಾಲ್ಲೂಕಿನ ಬಾಣಾವರ ಗೇಟ್‌ ಬಳಿ ಭಾನುವಾರ ಸಂಜೆ ಮೂರು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿದ್ದಾರೆ.ನಗರದ ಯಾದವ ನಗರದ ಸುರೇಶ್‌ (55), ಮುರಳಿ (60) ಮೃತರು. ಸುರೇಶ್‌ ಗುಬ್ಬಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು. ಸೈಬರ್‌ ಠಾಣೆಯ ಇನ್‌ಸ್ಪೆಕ್ಟರ್‌ ರಾಮಕೃಷ್ಣಪ್ಪ, ಜೆಡಿಎಸ್‌ ವಕ್ತಾರ ಜಯಣ್ಣ, ಮಂಜುನಾಥ್‌ ಸೇರಿದಂತೆ 5 ಜನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮಕೃಷ್ಣಪ್ಪ ಸ್ನೇಹಿತರ ಜತೆಗೆ ಆದಿಚುಂಚನಗಿರಿಗೆ ಹೋಗಿ ಕುಣಿಗಲ್‌ ಮಾರ್ಗವಾಗಿ ವಾಪಸ್‌ ಆಗುತ್ತಿದ್ದರು. ಇದೇ ವೇಳೆ ತುಮಕೂರು ಕಡೆಯಿಂದ ತೆರಳುತ್ತಿದ್ದ ಕಾರು ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎದುರುಗಡೆ ಬರುತ್ತಿದ್ದ ರಾಮಕೃಷ್ಣಪ್ಪ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಇದೇ ಕಾರಿನಲ್ಲಿದ್ದ ಸುರೇಶ್‌, ಮುರಳಿ ಮೃತಪಟ್ಟಿದ್ದಾರೆ. ಹೆಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *