Breaking News

BigTv News

ಮೈಸೂರು : ಮೂವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಲೋಕಾಯುಕ್ತ ಪೊಲೀಸರು ಇಂದು ನಗರದ ಮೂವರು ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಹಾಗೂ ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ತಲಾಶ್‌ ನಡೆಸಿದ್ದಾರೆ. ಜ್ಯೂನಿಯರ್‌ ಎಂಜಿನಿಯರ್‌ ಕೆ.ಆರ್‌. ಚಂದ್ರಶೇಖರ್‌, ಮೈಸೂರು ನಗರ ಪಾಲಿಕೆಯ ಅಲ್ತಾಫ್‌ ಹುಸೇನ್‌ ಜಪ್ಪಾರ್ಪಿ, ಡೆಪ್ಯುಟಿ ಎಲೆಕ್ಟ್ರಿಕಲ್‌ ಇಸ್‌‍ಪೆಕ್ಟರ್‌ ದಾಳಿಗೊಳಗಾದವರು. ನಗರದ ವಿಜಯನಗರ ಮೊದಲ ಹಾಗೂ ಎರಡನೇ ಹಂತ ಸೇರಿ ಆರು ಕಡೆ ಹಾಗೂ ತಿ.ನರಸೀಪುರದಲ್ಲಿ ಒಂದು ಕಡೆ ದಾಳಿ ನಡೆಸಿದ್ದಾರೆ. ಅಕ್ರಮ …

Read More »

ಬನ್ನೇರುಘಟ್ಟದಲ್ಲಿ ಭೀಕರ ಸರಣಿ ಅಪಘಾತ | ನಾಲ್ವರಿಗೆ ಗಂಭೀರ ಗಾಯ!

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.ಬನ್ನೇರುಘಟ್ಟ ಮುಖ್ಯರಸ್ತೆಯ ಕೊಪ್ಪ ಗೇಟ್ ಬಳಿ ರಾಕೆಟ್ ವೇಗದಲ್ಲಿ ಬಂದ ಕಾರುಗಳ ನಡುವೆ ಈ ಸರಣಿ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಿಗಣಿ ಕಡೆಯಿಂದ ಬರುತ್ತಿದ್ದ ಎರಡು ಕಾರುಗಳು, ಚಾಲಕನ ನಿಯಂತ್ರಣ ತಪ್ಪಿ ಮುಂಬದಿಯ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರುಗಳು …

Read More »

ಜಿಗಣಿಯಲ್ಲಿ ಅಪಘಾತ: ಬೈಕ್‌ ಸವಾರು ಸಾವು

ಆನೇಕಲ್: ತಾಲ್ಲೂಕಿನ ಜಿಗಣಿಯಲ್ಲಿ ಬುಧವಾರ ಚಾಲಕನ ನಿಯಂತ್ರಣ ತಪ್ಪಿ ಕಾರವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಜಯಪುರದ ಸಂಗಮೇಶ್(50) ಮೃತರು. ಕಾರು ಚಾಲಕನನ್ನು ಜಿಗಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಗಣಿ ಕೈಗಾರಿಕಾ ಪ್ರದೇಶದ ವ್ಯಾಪ್ತಿಯ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂಗಮೇಶ್ ಹರಪನಹಳ್ಳಿಯ ಕ್ಲಾಸಿಕ್ ಬಡಾವಣೆಯಲ್ಲಿ ವಾಸವಾಗಿದ್ದರು. ಬುಧವಾರ ಎಂದಿನಂತೆ ಕಂಪನಿಗೆ ತೆರಳುವ ಸಮಯದಲ್ಲಿ ಕಾರು ಏಕಾಏಕಿ ಡಿಕ್ಕಿ ಹೊಡೆದಿದ್ದರಿಂದ ಸಂಗಮೇಶ್ ತಲೆಯ ಭಾಗಕ್ಕೆ …

Read More »

ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ: 10 ಕಾರ್ಮಿಕರು ದುರ್ಮರಣ

ಮೇಘಾಲಯದ ಪೂರ್ವ ಜೈಂಟಿಯಾ ಹಿಲ್ಸ್ ಜಿಲ್ಲೆಯ ಮೈನ್ಸಿಂಗಟ್-ಥಾಂಗ್ಸ್ಕೊ ಪ್ರದೇಶದ ಅಕ್ರಮ ಕಲ್ಲಿದ್ದಲು ಗಣಿಯಲ್ಲಿ ಗುರುವಾರ ಸಂಭವಿಸಿದ ಡೈನಮೈಟ್ ಸ್ಫೋಟದಲ್ಲಿ 10 ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೂರದಲ್ಲಿರುವ ಕಲ್ಲಿದ್ದಲು ಗಣಿ ಪ್ರದೇಶದಿಂದ 10 ಮಂದಿ ಶವಗಳನ್ನು ಹೊರತೆಗೆಯಲಾಗಿದೆ. ಸುಟ್ಟ ಗಾಯಗಳಾಗಿರುವ ಒಬ್ಬ ವ್ಯಕ್ತಿಯನ್ನು ಚಿಕಿತ್ಸೆಗಾಗಿ ಶಿಲ್ಲಾಂಗ್‌ಗೆ ಸ್ಥಳಾಂತರಿಸಲಾಗಿದೆ ಎಂದು ಪೂರ್ವ ಜೈಂಟಿಯಾ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿಕಾಶ್ ಕುಮಾರ್ ತಿಳಿಸಿದ್ದಾರೆ. ಮೇಘಾಲಯಯ ಜೈಂಟಿಯಾ ಹಿಲ್ಸ್ ನಲ್ಲಿ ಈ ಘಟನೆ …

Read More »

ವಿಜಯಪುರದಲ್ಲಿ ಕಾರು ಸರ್ವಿಸ್ ಸೆಂಟರ್ ನಲ್ಲಿ ಭೀಕರ ಅಗ್ನಿ ಅವಘಡ : 20ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮ!

ವಿಜಯಪುರದ HMK ಕಾರು ಸರ್ವಿಸ್ ಸೆಂಟರ್ ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಕಾರು ಸರ್ವಿಸ್ ಸೆಂಟರ್ ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಹನುಮಂತ ಕನವಡಿ ಎಂಬವರಿಗೆ ಸೇರಿದ ಕಾರು ಸರ್ವಿಸ್ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ.ಕಾರು ಸರ್ವಿಸ್ ಸೆಂಟರ್ ಗೆ ರಿಪೇರಿ ಮತ್ತು ಸರ್ವಿಸ್ಗಾಗಿ ಬಂದಿದ್ದು, ಸುಮಾರು 20 ಕಾರುಗಳು ಸುಟ್ಟು ಭಸ್ಮವಾಗಿದ್ದು 1 ಕೋಟಿಗೂ ಅಧಿಕ ನಷ್ಟವಾಗಿದೆ. ಅಗ್ನಿ ದುರಂತಕ್ಕೆ …

Read More »

ಬೆಂಗಳೂರಿನ ಇಟಲಿ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ ನಗರದ ಶಾಂತಿನಗರದಲ್ಲಿರುವ ಇಟಲಿ ರಾಯಭಾರಿ ಕಚೇರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾನೆ. ಇಟಲಿಯ ಕಾನ್ಸುಲ್ ಜನರಲ್ ಕಚೇರಿಗೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. ರಾಯಭಾರಿ ಕಚೇರಿಯ ಇಮೇಲ್ ಗೆ ಈ ಬೆದರಿಕೆ ಬಂದಿದೆ ಎಂದು ತಿಳಿದುಬಂದಿದೆ. ಕಚೇರಿ ಆವರಣದಲ್ಲಿ 5 ಆರ್ ಡಿ ಎಕ್ಸ್ ಬಾಂವ್ ಸ್ಪೋಟಿಸುವುದಾಗಿ ದುಷ್ಕರ್ಮಿಗಳು ಎಚ್ಚರಿಕೆ ನೀಡಿದ್ದಾರೆ. ವಿಷಯ …

Read More »

ನಂತೂರಿನಲ್ಲಿ ಸ್ಕೂಟರ್ ಗೆ ಖಾಸಗಿ ಬಸ್ ಡಿಕ್ಕಿ, ಹಿಂಬದಿ ಸವಾರೆ ಸಾವು

ಮಂಗಳೂರು: ಸ್ಕೂಟರ್ ಗೆ ಸಿಟಿ ಬಸ್‌ವೊಂದು ಡಿಕ್ಕಿ ಹೊಡೆದು ಯುವತಿಯೊಬ್ಬಳು ಸಾವನ್ನಪ್ಪಿದ ಘಟನೆ ಮಂಗಳೂರಿನ ನಂತೂರು ವೃತ್ತದ ಬಳಿ ನಡೆದಿದೆ. ಮೃತರನ್ನು ಬಳ್ಳಾಲ್ ಬಾಗ್ ನಿವಾಸಿ ದೀಪ್ತಿ (26) ಎಂದು ಗುರುತಿಸಲಾಗಿದೆ. ಸ್ಕೂಟರ್ ಸವಾರ ಗಾಯಗೊಂಡಿದ್ದಾರೆ.ಬಸ್ ಮತ್ತು ಸ್ಕೂಟರ್ ಶಿವಭಾಗ್ ಕಡೆಯಿಂದ ನಂತೂರು ಕಡೆಗೆ ಹೋಗುತ್ತಿದ್ದವು. ನಂತೂರು ಬಸ್‌ ನಿಲ್ದಾಣದ ಬಳಿ ಸ್ಕೂಟರ್ ಗೆ ಬಸ್ ಢಿಕ್ಕಿಯಾದ ಪರಿಣಾಮ ಸ್ಕೂಟರ್ ಬಸ್ ನಡಿ ಬಿದ್ದಿದೆ. ಈ ವೇಳೆ ಸಹಸವಾರೆಯ ಮೇಲೆಯೆ …

Read More »

ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್​​ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು

ಚಿಕ್ಕಮಗಳೂರು: ವಿವಾಹಿತ ‌ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಸಿಕ್ಕಿಬಿದ್ದ ಘಟನೆಯೊಂದು ನಡೆದಿದೆ. ಹಿಂದೂ ಮಹಿಳೆಯ ಜೊತೆ ಕಾಂಗ್ರೆಸ್ ಮುಖಂಡ ಇರುವ ಫೋಟೋ ವೈರಲ್​ ವೈರಲ್​​ ಆಗಿದೆ. ಅಕ್ಕಪಕ್ಕದ ಮನೆಯ ಯುವಕರು ಮುಖಂಡನಿಗೆ ಥಳಿಸಿದ್ದಾರೆ. ಹಿಂದೂ ಮಹಿಳೆಯ ಮನೆಯಲ್ಲಿ ಇರುವಾಗಲೇ ಈ ಮುಖಂಡ ಸಿಕ್ಕಿಬಿದ್ದಿದ್ದಾನೆ. ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ ಎಂದು ಥಳಿಸಿದ್ದಾರೆ. ಈ ಬಗ್ಗೆ ವಿಡಿಯೋ ಕೂಡ ವೈರಲ್​ ಆಗಿದೆ. ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ಈ ಘಟನೆ …

Read More »

4 ಲಕ್ಷ ಲಂಚಕ್ಕೆ ಬೇಡಿಕೆ ಪ್ರಕರಣ : ಇನ್ಸ್ಪೆಕ್ಟರ್ ಗೋವಿಂದರಾಜು ಸಸ್ಪೆಂಡ್, ತನಿಖೆಗೆ ಕಮಿಷನರ್ ಆದೇಶ

ಬೆಂಗಳೂರು : ಲೋಕಾಯುಕ್ತ ಪೊಲೀಸರಿಂದ ಪಿ.ಐ ಗೋವಿಂದರಾಜು ಟ್ರ್ಯಾಕ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕೆಪಿ ಅಗ್ರಹಾರ ಠಾಣೆಯ ಇನ್ಸ್ಪೆಕ್ಟರ್ ಗೋವಿಂದರಾಜನನ್ನು ಅಮಾನತು ಮಾಡಲಾಗಿದೆ. ಪಿ ಐ ಗೋವಿಂದರಾಜು ಅಮಾನತು ಮಾಡಿ ಇಲಖಾ ತನಿಖೆಗೆ ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಆದೇಶ ಹೊರಡಿಸಲಾಗಿದೆ.ಪ್ರಕರಣ ಸಂಬಂಧಪಟ್ಟ ಗೋವಿಂದರಾಜ ಮತ್ತು ದೂರುದಾರನ ಆಡಿಯೋ ವೈರಲ್ ಆಗಿತ್ತು. ಚೀಟಿ ವ್ಯವಹಾರ ಪ್ರಕರಣ ಸಂಬಂಧ ನಾಲ್ಕು ಲಕ್ಷ ರೂಪಾಯಿ ಈ ಲಂಚಕ್ಕೆ ಕೆ ಪಿ …

Read More »

ಮಂಚದ ಪೆಟ್ಟಿಗೆಯಲ್ಲಿ 13 ವರ್ಷದ ಬಾಲಕಿಯನ್ನು ಅಡಗಿಸಿಟ್ಟಿದ್ದ ಮನೆ ಮಾಲೀಕ

ಗುವಾಹಟಿಯ ಮನೆಯೊಂದರಲ್ಲಿ ವ್ಯಕ್ತಿಯೊಬ್ಬ ಮಂಚದ ಪೆಟ್ಟಿಗೆಯಲ್ಲಿ 13 ವರ್ಷದ ಬಾಲಕಿಯನ್ನು ಅಡಗಿಸಿಟ್ಟಿದ್ದ ವಿಡಿಯೋ ವೈರಲ್ ಆಗಿದೆ. ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಬಾಲಕಿಯನ್ನು ಮಂಚದ ಪೆಟ್ಟಿಗೆಯಿಂದ ಹೊರಗೆ ತೆಗೆದಿದ್ದಾರೆ.ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಮನೆಗೆಲಸಗಾರರಾಗಿ ನೇಮಿಸಿಕೊಂಡು ದೌರ್ಜನ್ಯವೆಸಗುವವರ ಸಂಖ್ಯೆ ಹೆಚ್ಚಾಗಿದೆ. ಬಾಲಕಿ ಸುಮಾರು ಆರು ವರ್ಷಗಳಿಂದ ಆ ಮನೆಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆ ಮಾಲೀಕ ಅರಿನಾ ಲಸ್ಕರ್ ಖತುನ್, ಬಾಲಕಿಯ ಮೇಲೆ ಪದೇ …

Read More »