ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ Form 7 ಅರ್ಜಿಗಳ ವಿಚಾರವಾಗಿ ವಿವಾದಕ್ಕೆ ಕಾರಣವಾಗಿದೆ. ಮತದಾರರ ಹೆಸರುಗಳನ್ನು ಅಳಿಸಲು ದೊಡ್ಡ ಪ್ರಮಾಣದಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳಗಾವಿ, ಬೀದರ್ ಹಾಗೂ ಮೈಸೂರಿನಲ್ಲಿ FIR ದಾಖಲಾಗಿವೆ. ಬೆಳಗಾವಿಯಲ್ಲಿ 198 ಅಲ್ಪಸಂಖ್ಯಾತ ಮತದಾರರ ಹೆಸರು ಅಳಿಸಲು ಅರ್ಜಿ ಸಲ್ಲಿಸಲು ಪ್ರಯತ್ನಿಸಲಾಗಿದೆ ಎಂಬ ಆರೋಪದಡಿ ಬಿಜೆಪಿ ಮುಖಂಡ ರವಿ ಬಿ. ಪಾಟೀಲ್ ಸೇರಿದಂತೆ ಹಲವರ ವಿರುದ್ಧ …
Read More »ಬೆಂಗಳೂರಲ್ಲಿ ಬಯಲಾಯ್ತು ಖೋಟಾ ನೋಟು ಜಾಲ: 21.68 ಲಕ್ಷ ರೂ. ನಕಲಿ ಕಂತೆ, 17 ಪ್ರಿಂಟಿಂಗ್ ಮಷಿನ್ ಜಪ್ತಿ!
ಬೆಂಗಳೂರು: ಲಕ್ಷಾಂತರ ರೂಪಾಯಿ ಮೌಲ್ಯದ ಖೋಟಾ ನೋಟು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಚಾಮರಾಜಪೇಟೆ ಪೊಲೀಸರು ಭೇದಿಸಿದ್ದಾರೆ. ಏಳು ಮಂದಿಯನ್ನು ಬಂಧಿಸಿ ₹21.68 ಲಕ್ಷ ಮೌಲ್ಯದ 4,337 ನಕಲಿ ₹500 ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ರಸ್ತೆ ಫ್ಲೈಓವರ್ ಬಳಿ ಕಾರಿನಲ್ಲಿ ನಕಲಿ ನೋಟುಗಳಿದ್ದ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಜಾಲದ ಮಾಹಿತಿ ಸಿಕ್ಕಿದೆ. ತಮಿಳುನಾಡು ಹಾಗೂ ತೆಲಂಗಾಣದಲ್ಲಿ ದಾಳಿ ನಡೆಸಿ 17 ಪ್ರಿಂಟಿಂಗ್ ಯಂತ್ರಗಳು ಮತ್ತು ಹೆಚ್ಚುವರಿ ₹6 …
Read More »ರಾಣಿ ಚೆನ್ನಮ್ಮ ಸರ್ಕಲ್ನಲ್ಲಿ ಮಹಿಳೆಯನ್ನು ಜುಟ್ಟು-ಬಟ್ಟೆ ಹಿಡಿದು ಎಳೆದಾಡಿ ಹೊಡೆದ ದುರುಳ!
ಬೆಳಗಾವಿ: ಬಸ್ನಿಂದ ಇಳಿಯಲು ದಾರಿ ಬಿಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಹಿಳೆಯ ಮೇಲೆ ನಡುರಸ್ತೆಯಲ್ಲೇ ಚಪ್ಪಲಿಯಿಂದ ಹಲ್ಲೆ ನಡೆಸಿದ ಘಟನೆ ರಾಣಿ ಚನ್ನಮ್ಮ ವೃತ್ತದಲ್ಲಿ ನಡೆದಿದೆ. ಹಳಿಯಾಳದಿಂದ ಬೆಳಗಾವಿಗೆ ಬರುತ್ತಿದ್ದ ಬಸ್ನಲ್ಲಿ ದಾರಿ ಬಿಡುವ ವಿಚಾರಕ್ಕೆ ಮಹಿಳೆ ಹಾಗೂ ಸಹಪ್ರಯಾಣಿಕನ ನಡುವೆ ಜಗಳ ಆರಂಭವಾಗಿತ್ತು. ಬಸ್ನಿಂದ ಇಳಿದ ಬಳಿಕವೂ ಜಗಳ ಮುಂದುವರಿದಿದ್ದು, ಆರೋಪಿ ಚಪ್ಪಲಿ ತೆಗೆದು ಮಹಿಳೆಯ ಮುಖ ಹಾಗೂ ದೇಹಕ್ಕೆ ಹಲ್ಲೆ ನಡೆಸಿ, ಕಾಲಿನಿಂದ ಒದ್ದಿದ್ದಾನೆ. ಜನನಿಬಿಡ …
Read More »ಕೊಲ್ಲೂರು: ಬೀಡಾಡಿ ದನವನ್ನು ಕಾರಿನಲ್ಲಿ ಹಿಂಸಾತ್ಮಕವಾಗಿ ತುಂಬಿಕೊಂಡು ಪರಾರಿ: ಆರೋಪಿ ಬಂಧನ
ಉಡುಪಿ: ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಸೆ.29ರಂದು ನಡೆದ ಕೃತ್ಯದ ಸಿಸಿ ಕ್ಯಾಮೆರಾ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿ ಸ್ಥಳೀಯರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡು, ಕುಂದಾಪುರ ತಾಲ್ಲೂಕಿನ ಗುಲ್ವಾಡಿ ಗ್ರಾಮದ ಮೊಹಮ್ಮದ್ ಸಿನಾನ್ …
Read More »ಬೆಂಗಳೂರು: ವೃದ್ಧೆಗೆ ನಿದ್ದೆ ಮಾತ್ರೆ ಬೆರೆಸಿದ ಟೀ ಕುಡಿಸಿ ಚಿನ್ನಾಭರಣ ಕಳವು
ಬೆಂಗಳೂರು: ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ವೃದ್ಧೆಯನ್ನು ಸಲುಗೆಯಿಂದ ಮಾತನಾಡಿಸಿ, ನಿದ್ದೆ ಮಾತ್ರೆ ಬೆರೆಸಿದ ಟೀ ಕುಡಿಸಿ ₹3 ಲಕ್ಷ ಮೌಲ್ಯದ 30 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಈ ಕುರಿತು ಚನ್ನಮ್ಮ ಎಂಬುವರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದಾರೆ. ಸೆ.25ರಂದು ಮಗಳ ಮನೆಗೆ ತೆರಳಲು ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದಿದ್ದ ಚನ್ನಮ್ಮ, ಮೈಸೂರಿನ ಬಸ್ಗೆ ಹತ್ತಿದ್ದರು. ಅದೇ ಬಸ್ಗೆ ಹತ್ತಿದ ಅಪರಿಚಿತ ವ್ಯಕ್ತಿ ಅವರೊಂದಿಗೆ …
Read More »ಮಾಲೂರು: ದಾರಿ ಬಿಡದ್ದಕ್ಕೆ ದಲಿತ ಯುವಕನ ಹತ್ಯೆ
ಕೋಲಾರ: ದೇವರಹಳ್ಳಿ ಗ್ರಾಮದಲ್ಲಿ ಜಮೀನಿನ ಮೂಲಕ ಕಲ್ಲು ಗಣಿಗಾರಿಕೆ ಸ್ಥಳಕ್ಕೆ ಹೋಗಲು ದಾರಿ ಬಿಡದ ವಿಚಾರಕ್ಕೆ ನಡೆದ ಜಗಳದಲ್ಲಿ ಪರಿಶಿಷ್ಟ ಪಂಗಡದ ಡಿ.ಎಸ್. ಮುರಳಿ (26) ಎಂಬ ಯುವಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಘಟನೆ ಸಂಬಂಧ ಎಂಟು ಮಂದಿ ವಿರುದ್ಧ ಕೊಲೆ ಹಾಗೂ ಎಸ್ಸಿ, ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ವಿಶ್ವಕರ್ಮ ಸಮುದಾಯದ ಅಶೋಕ್, ಮುನಿರಾಜು, ಸುರೇಶ್, ವೆಂಕಟೇಶ್, ರಾಜೇಂದ್ರ ಹಾಗೂ ಕುರುಬ ಸಮುದಾಯದ ನಾಗರಾಜ, …
Read More »ಸಚಿವ ಹೆಚ್.ಬಾಲಕೃಷ್ಣ 600 ಕೋಟಿ ಸರ್ಕಾರಿ ಜಾಮೀನು ಕಬಳಿಕೆ : ಎ.ಮಂಜು ಗಂಭೀರ ಆರೋಪ!
ಬೆಂಗಳೂರು: ತಾವರೆಕೆರೆ ಬಳಿಯ ಕುರುಬರಹಳ್ಳಿಯಲ್ಲಿ ಬಡವರಿಗೆ ಹಂಚಿಕೆಯಾಗಬೇಕಿದ್ದ ಸುಮಾರು 36 ಎಕರೆ ಸರ್ಕಾರಿ ಜಮೀನನ್ನು ಪೌರಾಡಳಿತ ಸಚಿವ ಎಚ್.ಸಿ. ಬಾಲಕೃಷ್ಣ ಅವರು ರಾಜಕೀಯ ಪ್ರಭಾವ ಬಳಸಿ ಅಕ್ರಮವಾಗಿ ಕಬಳಿಸಿದ್ದಾರೆ ಎಂದು ಮಾಗಡಿ ಮಾಜಿ ಶಾಸಕ ಎ. ಮಂಜುನಾಥ್ ಆರೋಪಿಸಿದ್ದಾರೆ. ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿ ವಿಚಾರಣೆಗೆ ಅನುಮತಿ ಕೋರಲಾಗುವುದು ಎಂದು ಅವರು ತಿಳಿಸಿದ್ದಾರೆ. ಸರ್ವೇ ನಂಬರ್ 158ರಲ್ಲಿರುವ ಜಮೀನಿನ ಪೈಕಿ 10 ಎಕರೆ ಸಚಿವರ ಪತ್ನಿಯ ಹೆಸರಿಗೆ ಹಾಗೂ …
Read More »ಚನ್ನಗಿರಿ | ಅತ್ಯಾಚಾರಿ ಬಂಧಿಸದ ಪೊಲೀಸರು: ಮನನೊಂದು ವ್ಯಕ್ತಿ ಆತ್ಮಹತ್ಯೆ
ಚನ್ನಗಿರಿ: ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಬಂಧಿಸಿಲ್ಲ ಎಂದು ಮನನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದಿದೆ. ಆಗಸ್ಟ್ 22ರಂದು ಮಗಳ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ದೂರು ನೀಡಲಾಗಿದ್ದು, ಪೋಕ್ಸೊ ಪ್ರಕರಣ ದಾಖಲಾಗಿತ್ತು. ಆದರೆ ಒಂದೂವರೆ ತಿಂಗಳಾದರೂ ಆರೋಪಿ ಬಂಧನವಾಗಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ತಂದೆ ಗುರುವಾರ ತೋಟದಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು …
Read More »ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ನಡುವೆ ಮಾರಾಮಾರಿ: ಚಾಕು ಇರಿದು ಬಿಕಾಂ ವಿದ್ಯಾರ್ಥಿಯ ಹತ್ಯೆ!
ಬೆಂಗಳೂರು: ನಾಗರಬಾವಿಯಲ್ಲಿ ಕಾಲೇಜು ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ನಡೆದ ಗಲಾಟೆಯಲ್ಲಿ ಬಿಕಾಂ ವಿದ್ಯಾರ್ಥಿ ಯೋಗೇಶ್ (19) ಕೊಲೆಯಾಗಿದ್ದಾನೆ. ಕಾಲೇಜಿನ ಹಿಂಭಾಗದ ಜಿಮ್ ಬಳಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು, ಈ ವೇಳೆ ಯೋಗೇಶ್ನ ಎದೆಗೆ ಚಾಕುವಿನಿಂದ ಇರಿಯಲಾಗಿದೆ. ಗಂಭೀರವಾಗಿ ಗಾಯಗೊಂಡ ಯೋಗೇಶ್ನನ್ನು ಸ್ನೇಹಿತರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಪ್ರಾಥಮಿಕ ಮಾಹಿತಿಯಂತೆ ಕೊಲೆ ಆರೋಪಿಗಳು ಕಾಲೇಜಿನ ವಿದ್ಯಾರ್ಥಿಗಳಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ …
Read More »ಯುವತಿಗಾಗಿ ಯುವಕರ ನಡುವೆ ಗಲಾಟೆ: ಮನನೊಂದು ಯುವಕ ಆತ್ಮಹ*ತ್ಯೆ ಶಂಕೆ..?
ಬೀದರ್: ಭಾಲ್ಕಿಯಲ್ಲಿ 21 ವರ್ಷದ ಸುದರ್ಶನ ರತ್ಕಲೆ ಎಂಬ ಯುವಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಯುವತಿಯ ವಿಚಾರವಾಗಿ ಯುವಕರ ನಡುವೆ ಗಲಾಟೆ ನಡೆದಿದ್ದೇ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ಸುದರ್ಶನ ಕುಟುಂಬಸ್ಥರು ಇದನ್ನು ಆತ್ಮಹತ್ಯೆಯಲ್ಲ, ಕೊಲೆ ಎಂದು ಆರೋಪಿಸಿದ್ದಾರೆ. ಸುದರ್ಶನ ತಾಯಿ ಲಕ್ಷ್ಮೀ, ತನ್ನ ಮಗನನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ತನಿಖೆಗೆ ಒತ್ತಾಯಿಸಿದ್ದಾರೆ. ರೈಲ್ವೆ ಪೊಲೀಸರು ಪ್ರಾಥಮಿಕವಾಗಿ ಇದನ್ನು ಆತ್ಮಹತ್ಯೆ ಎಂದು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





