Breaking News

BigTv News

ಹಿರಿಯ ದಂಪತಿ ಅನುಮಾನಾಸ್ಪದ ಸಾವು

ಶಿವಮೊಗ್ಗ ಜಿಲ್ಲೆ ಭದ್ರಾವತಿ ನಗರದಲ್ಲಿ ವೃದ್ಧ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.ಭದ್ರಾವತಿ ಹಳೆನಗರ ಪೊಲೀಸ್ ಠಾಣಾ ವ್ಯಾಪ್ತಿಯ ಭೂತನಗುಡಿ ನಿವಾಸಿ ಚಂದ್ರಪ್ಪ(68), ಜಯಮ್ಮ(65) ಮೃತಪಟ್ಟ ದಂಪತಿ ಎಂದು ಹೇಳಲಾಗಿದೆ. ಮೃತದೇಹದ ಮೇಲೆ ಯಾವುದೇ ಗಾಯ, ಹಲ್ಲೆಯಾದ ಗುರುತುಗಳಿಲ್ಲ.ಶ್ವಾನದಳ, ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹಳೆನಗರ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಸಾವಿನ ಕುರಿತಾಗಿ ತನಿಖೆ ಕೈಗೊಳ್ಳಲಾಗಿದೆ.

Read More »

ಹಾವೇರಿಯಲ್ಲಿ ಭೀಕರ ರಸ್ತೆ ಅಪಘಾತ: ಲಾರಿ-ಬೈಕ್ ಮುಖಾಮುಖಿ ಡಿಕ್ಕಿ, ಸವಾರ ಸ್ಥಳದಲ್ಲೇ ಮೃತ್ಯು

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ್ ಕ್ರಾಸ್ ಬಳಿ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಹಾನಗಲ್ ಕಡೆಯಿಂದ ಹೊಂಕಣ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತರನ್ನು ಹೊಂಕಣ ಗ್ರಾಮದ ನಟರಾಜ್ ದಳವಾಯಿ (43) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆ ಎಷ್ಟು ಭೀಕರವಾಗಿತ್ತೆಂದರೆ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಅಡೂರು …

Read More »

ಕುಡಿದ ಮತ್ತಿನಲ್ಲಿ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿದ ವೈದ್ಯ

ಗುರುಗ್ರಾಮ: ಕುಡಿದ ಮತ್ತಿನಲ್ಲಿ ವೈದ್ಯನೊಬ್ಬ ಸ್ವಿಗ್ಗಿ ಡೆಲಿವರಿ ಏಜೆಂಟ್ ಮೇಲೆ ಕಾರು ಹತ್ತಿಸಿರುವ ವಿಡಿಯೋ ವೈರಲ್ ಆಗಿದೆ. ಗಾಯಗೊಂಡ ಡೆಲಿವರಿ ಏಜೆಂಟ್ ಟಿಂಕು ಪನ್ವಾರ್ ಅವರನ್ನು ಗುರುಗ್ರಾಮದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ನವೀನ್ ಯಾದವ್ , ಆಯುರ್ವೇದ ವೈದ್ಯ, ದೌಲತಾಬಾದ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕಪ್ಪು ಬಣ್ಣದ ಸ್ಕಾರ್ಪಿಯೋವನ್ನು ಸಹ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸ್ವಿಗ್ಗಿ ಗೋದಾಮಿನ ಬಳಿಯ ಬೀದಿಯಲ್ಲಿ ವಿತರಣಾ ಏಜೆಂಟ್‌ಗಳು ನಿರಂತರವಾಗಿ ಇರುವುದನ್ನು ನೋಡಿ …

Read More »

ಮೈಸೂರು | ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ

ಯುವಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಗೌಸಿಯಾ ನಗರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.ಗೌಸಿಯಾ ನಗರ ನಿವಾಸಿ ಎಂ.ಡಿ.ಶಹಬಾಜ್ (26) ಕೊಲೆಯಾದ ಯುವಕ. ಈತ ಫ್ಯಾಬ್ರಿಕೇಶನ್ ಕೆಲಸ ಮಾಡಿಕೊಂಡಿದ್ದನು ಎಂದು ತಿಳಿದುಬಂದಿದೆ.ಸೋಮವಾರ ತಡರಾತ್ರಿ ಶಹಬಾಜ್ ಮೇಲೆ ಸ್ಥಳೀಯರಾದ ಜುಬೇರ್ ಮತ್ತು ಇತರರು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವ್ಯವಹಾರಿಕ ವಿಚಾರವಾಗಿ ಈ ಕೊಲೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಈಗಾಗಲೇ …

Read More »

ಹಿಂದೂಗಳ ಮೇಲಿನ ದೌರ್ಜನ್ಯ ಕೋಮಿನ ಕಾರಣಕ್ಕಲ್ಲ: ಬಾಂಗ್ಲಾ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಭಾರತದ ಕಳವಳಗಳ ನಡುವೆಯೇ, 2025ರಲ್ಲಿ ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆದ ಹೆಚ್ಚಿನ ದೌರ್ಜನ್ಯದ ಘಟನೆಗಳು ಅಪರಾಧ ಸ್ವರೂಪದ್ದಾಗಿದ್ದು, ಕೋಮು ದ್ವೇಷದಿಂದ ಪ್ರೇರಿತವಾಗಿಲ್ಲ ಎಂದು ಅಲ್ಲಿನ ಮಧ್ಯಂತರ ಸರ್ಕಾರ ಸೋಮವಾರ ತಿಳಿಸಿದೆ.2025ರಲ್ಲಿ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಒಟ್ಟು 645 ದೌರ್ಜನ್ಯಗಳು ದಾಖಲಾಗಿವೆ. ಈ ಪೈಕಿ 71 ಘಟನೆಗಳು ಮಾತ್ರವೇ ಕೋಮು ಪ್ರೇರೇಪಿತವಾಗಿದ್ದವು ಎಂದು ತಿಳಿಸಿದೆ. ಏತನ್ಮಧ್ಯೆ, ಬಾಂಗ್ಲಾದೇಶ ಮಧ್ಯಂತರ ಸರ್ಕಾರ ನೀಡಿರುವ ಅಂಕಿಅಂಶಗಳನ್ನು …

Read More »

ಬೆಂಗಳೂರಲ್ಲಿ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಕೇಸಲ್ಲಿ 8 ಆರೋಪಿಗಳು ಅರೆಸ್ಟ್

ನಗರದಲ್ಲಿ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಪ್ರಕರಣದಲ್ಲಿ ಬಂಡೆಪಾಳ್ಯ ಠಾಣೆಯ ಪೊಲೀಸರಿಂದ ಎಂಟು ಆರೋಪಿಗಳನ್ನು ಬಂಧಿಸಲಾಗಿದೆಬಂಧಿತ ಆರೋಪಿಗಳನ್ನು ನೂರುಲ್ಲಾ, ನದೀಮ್, ಸಲ್ಮಾನ್ ಖಾನ್, ಮೊಹಮ್ಮದ್ ಆಲಿ, ಸೈಯದ್ ಇಸ್ಮಾಯಿಲ್, ಮೊಹಮ್ಮದ್ ಸಿದ್ಧಿಕ್, ಕಲೀಂ, ಉಮ್ರೇಜ್ ಸೆರೆ ಹಿಡಿಯಲಾಗಿದೆ.ಜನವರಿ.12ರಂದು ಕಣ್ಣಿಗೆ ಖಾರದಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ರೌಡಿ ಶೀಟರ್ ಮೊಹಮ್ಮದ್ ಶಬ್ಬೀರ್ ಕೊಲೆ ಮಾಡಲಾಗಿತ್ತು. ಹಳೇ ವೈಷಮ್ಯದ ಹಿನ್ನಲೆಯಲ್ಲಿ ಕೋರಮಂಗಲ ಠಾಣೆ ರೌಡಿ ಶೀಟರ್ ಶಬ್ಬ್ರೀರ್ ಹತ್ಯೆ ಮಾಡಲಾಗಿತ್ತು. …

Read More »

ಧಾರವಾಡ : ನವಜಾತ ಶಿಶುವನ್ನು ಹೊಲದಲ್ಲಿ ಬಿಟ್ಟು ಹೋದ ಹೆತ್ತವರು; ಕಾಲಿನ ಹೆಬ್ಬೆರಳನ್ನು ಕಚ್ಚಿ ತಿಂದ ನಾಯಿ; ಗ್ರಾಮಸ್ಥರಿಂದ ಮಗು ರಕ್ಷಣೆ

ಕೃಷಿ ಜಮೀನಿನಲ್ಲಿ ಬಿಟ್ಟು ಹೋಗಿದ್ದ ನವಜಾತ ಶಿಶುವಿಗೆ ನಾಯಿ ಕಚ್ಚಿದ್ದು ಹುಬ್ಬಳ್ಳಿಯ ಕೆಎಂಸಿಆರ್‌ಐ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಧಾರವಾಡ ನಗರದಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬೈಹಟ್ಟಿ ಗ್ರಾಮದಲ್ಲಿರುವ ಹೊಲದಲ್ಲಿ ಮಗು ಅಳುತ್ತಿರುವುದನ್ನು ಕೇಳಿದ ಜನರು ಮಗುವನ್ನು ಪತ್ತೆಹಚ್ಚಿದ್ದಾರೆ.ನಾಯಿ ಕಚ್ಚಲು ಪ್ರಾರಂಭಿಸಿದಾಗ ಮಗು ನೋವಿನಿಂದ ಜೋರಾಗಿ ಅಳುತ್ತಿತ್ತು. ಹೊಲದಲ್ಲಿದ್ದ ಜನರು ಸ್ಥಳಕ್ಕೆ ಧಾವಿಸಿ ಆಶಾ ಕಾರ್ಯಕರ್ತರ ಸಹಾಯದಿಂದ ಅದನ್ನು ರಕ್ಷಿಸಿದರು. ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ …

Read More »

ಬೆಳಗಾವಿಯಲ್ಲಿ ಭೀಕರ ಮರ್ಡರ್ : ಅಕ್ಕನ ಮೇಲೆ ಕಣ್ಣು ಹಾಕಿದವನನ್ನ ಬರ್ಬರವಾಗಿ ಹತ್ಯೆಗೈದ ತಮ್ಮ!

ಅಕ್ಕನ ಮೇಲೆ ಕಣ್ಣು ಹಾಕಿದ ದೇವಸ್ಥಾನದ ಪೂಜಾರಿಯನ್ನು ಅಪ್ರಾಪ್ತ ಬಾಲಕ ಒಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನೆಡೆದಿದೆ. ರಾಜಾಪುರ ಗ್ರಾಮದ ಮಂಜುನಾಥ್ ಸುಭಾಷ್ ಎಣ್ಣಿ (23) ಭೀಕರವಾಗಿ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ.17 ವರ್ಷದ ಅಪ್ರಾಪ್ತ ಬಾಲಕನಿಂದ ಮಂಜುನಾಥ್ ಎಣ್ಣಿ ಕೊಲೆಯಾಗಿದೆ. ಹಲವು ವರ್ಷಗಳಿಂದ ಮಂಜುನಾಥ್ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಅಕ್ಕನ ತಂಟೆಗೆ ಬರದಂತೆ ಬಾಲಕ …

Read More »

ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ಹೊತ್ತಿ ಉರಿದ ಆಟೋ

ಬೆಂಗಳೂರು ನಗರದ ಡಬಲ್ ಡೆಕ್ಕರ್ ಫ್ಲೈ ಓವರ್ ಮೇಲೆ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ನಿಧಾನಗತಿಯ ಸಂಚಾರವಿದೆ. ಸಂಚಾರಿ ಪೊಲೀಸರು ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಅಪ್‌ಡೇಟ್ ಕೊಟ್ಟಿದ್ದಾರೆ.ಮಂಗಳವಾರ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ಸಿಲ್ಕ್‌ಬೋರ್ಡ್ ಬಳಿ ಆಟೋಗೆ ಬೆಂಕಿ ಹೊತ್ತಿಕೊಂಡಿದೆ.ಈ ಅಪಘಾತದ ಕಾರಣ ಹೆಚ್‌ಎಸ್‌ಆರ್ ಲೇಔಟ್ ಕಡೆಗೆ ನಿಧಾನಗತಿಯ ಸಂಚಾರವಿದೆ.

Read More »

*ಡಿಜಿಪಿ ರಾಮಚಂದ್ರ ರಾವ್ ಸಸ್ಪೆಂಡ್*

ಕಚೇರಿಯಲ್ಲೇ ಹಲವು ಮಹಿಳೆಯರೊಂದಿಗೆ ರಾಸಲೀಲೆ ಮತ್ತು ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಅಮಾನತು ಮಾಡಿದೆ. ಸರ್ಕಾರಿ ಕರ್ತವ್ಯದಲ್ಲಿ ಸಮವಸ್ತ್ರದಲ್ಲಿ ಇರುವಾಗಲೇ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಡಿಜಿಪಿ ರಾಮಚಂದ್ರ ರಾವ್ ರನ್ನು ಅಮಾನತ್ತು ಮಾಡಿ ಸಿಎಂ ಕಚೇರಿಯಿಂದ ಅಧಿಕೃತ ಆದೇಶ ಹೋರಡಿಸಲಾಗಿದೆ.ತನಿಖೆ ವೇಳೆ ರಾಮಚಂದ್ರ ವಿರುದ್ಧ ಗಂಭೀರ ಆರೋಪಗಳು …

Read More »