Breaking News

ಗುಹೆಯಲ್ಲಿ ವಾಸವಾಗಿದ್ದ ರಷ್ಯಾ ಮಹಿಳೆ-ಮಕ್ಕಳ ಗಡಿಪಾರಿಗೆ ಹೈಕೋರ್ಟ್​​ ತಡೆ!

ಗೋಕರ್ಣದ ರಾಮತೀರ್ಥ ಬೆಟ್ಟದ ಗುಹೆಯೊಂದರಲ್ಲಿ ವಾಸವಿದ್ದ ರಷ್ಯಾ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳನ್ನು ಗಡೀಪಾರು ಮಾಡುವುದನ್ನು ಹೈಕೋರ್ಟ್ ತಡೆದಿದೆ.ಹೈಕೋರ್ಟ್‌ನ ಈ ನಿರ್ಧಾರವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶದ (UNCRC) ತತ್ವಗಳನ್ನು ಆಧರಿಸಿದೆ. ನೀನಾ ಅವರ ಪರ ವಕೀಲರಾದ ಬೀನಾ ಪಿಳ್ಳೈ ಅವರು, ಗಡೀಪಾರು ಪ್ರಕ್ರಿಯೆಯು ಮಕ್ಕಳ ಕಲ್ಯಾಣವನ್ನು ಸಂಪೂರ್ಣವಾಗಿ ಕಡೆಗಣಿಸುತ್ತದೆ. UNCRC ಯ 3ನೇ ವಿಧಿಯ ಪ್ರಕಾರ, ಮಕ್ಕಳ ಹಿತಾಸಕ್ತಿಗಳು ಎಲ್ಲಾ ನಿರ್ಧಾರಗಳಲ್ಲಿ ಪ್ರಮುಖ ಆದ್ಯತೆಯಾಗಿರಬೇಕು ಎಂದು ಬಲವಾಗಿ ವಾದಿಸಿದರು.ಪ್ರಸ್ತುತ, ನೀನಾ ಮತ್ತು ಅವರ ಮಕ್ಕಳನ್ನು ತುಮಕೂರಿನ ಮಹಿಳಾ ಆಶ್ರಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ರಷ್ಯಾ ರಾಯಭಾರ ಕಚೇರಿಯ ಸಹಾಯದಿಂದ ಗಡೀಪಾರು ಪ್ರಕ್ರಿಯೆಯನ್ನು ಆರಂಭಿಸಲಾಗಿತ್ತು. ಆದರೆ, ಹೈಕೋರ್ಟ್ ಆದೇಶದಿಂದಾಗಿ ಈ ಪ್ರಕ್ರಿಯೆಗೆ ಸದ್ಯಕ್ಕೆ ತಡೆ ಬಿದ್ದಿದೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *