ಕನಕಪುರ: ಸಾಂಬಾರ್ ಕೇಳುವ ನೆಪದಲ್ಲಿ ವೃದ್ಧೆ ಕಿವಿಯೋಲೆ ಮತ್ತು ಮೂಗು ಬೊಟ್ಟು, ಒಂದು ಸರ, ಎರಡು ಉಂಗುರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಆಲಗಡಕಲು ಗ್ರಾಮದ ಪುಟ್ಟಮ್ಮ ಚಿನ್ನದ ಒಡವೆ ಕಳೆದುಕೊಂಡ ವೃದ್ಧೆ. ಅದೇ ಗ್ರಾಮದ ಕುಮಾರ್ಎಂಬ ವ್ಯಕ್ತಿ ಚಿನ್ನದ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.ಆರೋಪಿ ಕುಮಾರ್ಪ್ರತಿದಿನ ಸಾಂಬಾರ್ ಕೊಡು ಎಂದು ಚೊಂಬು ಹಿಡಿದುಕೊಂಡು ಪುಟ್ಟಮ್ಮ ಅವರ ಮನೆ ಬಳಿ ಬರುತ್ತಿದ್ದ. ಜ.14ರಂದು ವೃದ್ಧೆ ಪುಟ್ಟಮ್ಮ ಮನೆಯಲ್ಲಿ …
Read More »ಕಾರು-ಬೈಕ್ ಭೀಕರ ಅಪಘಾತ: ಯುವಕ ಸ್ಥಳದಲ್ಲೇ ದುರ್ಮರಣ
ಬೆಳಗಾವಿ: ಕಾರು ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.ಬೆಳಗಾವಿ-ಬಾಗಲಕೋಟೆ ರಸ್ತೆಯ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸೊಪ್ಪಡ್ಲ ಗ್ರಾಮದ ಲಕ್ಕಣ್ಣ ಬಸಪ್ಪ ಮೃತ ದುರ್ದೈವಿ. ದಿವ್ಯ ಎಂಬ ಯುವತಿ ವೇಗವಾಗಿ ಕಾರು ಚಲಾಯಿಸಿಕೊಂಡು ಬರುತ್ತಿದ್ದರು. ಮುರಗೋಡ ಬಳಿ ನಿಯಂತ್ರಣ ತಪ್ಪಿದ ಕಾರು ಬೈಕ್ ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ …
Read More »ದೊಡ್ಡಬಳ್ಳಾಪುರ: ಕೊಲೆ ಆರೋಪದ ಮೇಲೆ ನಾಪತ್ತೆಯಾಗಿದ್ದ ವ್ಯಕ್ತಿ ಆತ್ಮಹತ್ಯೆ
ದೊಡ್ಡಬಳ್ಳಾಪುರ: ಮಹಿಳೆ ಹತ್ಯೆ ಆರೋಪಿಯೊಬ್ಬರು ತನ್ನ ಸ್ವಗ್ರಾಮ ತಾಲ್ಲೂಕಿನ ಕೋಳೂರಿಗೆ ಬಂದು ಮಂಗಳವಾರ ರಾತ್ರಿ ನೇಣಿ ಹಾಕಿಕೊಂಡಿದ್ದಾರೆ.ಕೋಳೂರಿನ ವೀರಭದ್ರಪ್ಪ(60) ನೇಣಿಗೆ ಶರಣದವರು. ಮೃತ ವೀರಭದ್ರಪ್ಪ ಚಿಕ್ಕಬಾಣವಾರದಲ್ಲಿ ವಾಸವಿದ್ದರು. ಸೋಮವಾರ ಹಣಕಾಸಿನ ವ್ಯವಹಾರದ ಹಿನ್ನೆಲೆ ದಾಕ್ಷಾಯಿಣಿ ಎನ್ನುವ ಮಹಿಳೆಯನ್ನು ಕೊಂದು ಪರಾರಿಯಾಗಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು.ಈ ಕುರಿತಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಲೆ ಮರೆಸಿಕೊಂಡಿದ್ದ ವೀರಭದ್ರಪ್ಪ ಮಂಗಳವಾರ ರಾತ್ರಿ ಸ್ವಗ್ರಾಮ ಕೋಳೂರಿಗೆ ಬಂದು ಗ್ರಾಮದ ರಸ್ತೆ ಬದಿಯ …
Read More »ಕಾಳಿನದಿಯಿಂದ ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು
ಕಾರವಾರ: ತಾಲ್ಲೂಕಿನ ಕಿನ್ನರ ಗ್ರಾಮದ ಬಳಿ ಕಾಳಿನದಿಯಿಂದ ಅಕ್ರಮವಾಗಿ ಮರಳು ತೆಗೆದು, ಸಾಗಾಟ ಮಾಡುತ್ತಿದ್ದ ಆರೋಪದಡಿ ಇಬ್ಬರ ವಿರುದ್ಧ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಸದಾಶಿವಗಡದ ಅರ್ಜುನಕೋಟ ನಿವಾಸಿ ಕಾರ್ತಿಕ್ ಗೌಡ (32), ನಂದನಗದ್ದಾದ ತೇಲಂಗ ರಸ್ತೆಯ ಅನೂಪ ಮಾಳ್ಸೇಕರ (42) ವಿರುದ್ಧ ಪ್ರಕರಣ ದಾಖಲಿಸಿದ್ದೇವೆ.ಇಬ್ಬರು ಸೇರಿ ಟಿಪ್ಪರ್ ತುಂಬ ಅಕ್ರಮವಾಗಿ ತೆಗೆದ ಮರಳನ್ನು ಸಾಗಾಟ ಮಾಡುತ್ತಿದ್ದರು. ಕಡವಾಡ ಕ್ರಾಸ್ ಬಳಿ ವಾಹನ ಸಮೇತ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು …
Read More »ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಪೊಲೀಸ್ ವಶಕ್ಕೆ
ಬೆಂಗಳೂರು: ಹಿಂದೂ ಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿನ್ನೆ ರಾತ್ರಿ ಬನ್ನೇರುಘಟ್ಟ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸಿದ್ದಾರೆ. ಬನೇರುಘಟ್ಟ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಸೇರಿದಂತೆ ಇತರರ ವಿರುದ್ಧ ಕೇಸ್ ದಾಖಲಾಗಿದೆ. ಎಸ್.ಬೆಂಗೀಪುರದಲ್ಲಿ ಅಕ್ರಮ ವಲಸಿಗರ ಶೆಡ್ಗಳ ಮೇಲೆ ದಾಖಲೆ ಕೇಳಿ ದಾಳಿ ನಡೆಸಲಾಗಿತ್ತು. ಜಾಗದ ಮಾಲೀಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಕೇಳಿ ಬಂದಿತ್ತು. …
Read More »ರೋಡ್ ಮಧ್ಯದಲ್ಲಿ ಬೈಕ್ ನಲ್ಲಿ ಸ್ಟಂಟ್: ವಿಡಿಯೋ ವೈರಲ್, ಬೈಕ್ ಸವಾರರ ವಿರುದ್ಧ
ರೋಡ್ ಮಧ್ಯದಲ್ಲಿ ಕೆಲ ಯುವಕರು ನಡೆಸಿದ ಅಪಾಯಕಾರಿ ಬೈಕ್ ಸಾಹಸವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಜನಸಂಚಾರ ಹೆಚ್ಚಿರುವ ರಸ್ತೆಯಲ್ಲೇ ಮೋಟಾರ್ ಸೈಕಲ್ ಮೇಲೆ ನಿಂತು, ಕೈಗಳನ್ನು ಕಟ್ಟಿಕೊಂಡು ವೇಗವಾಗಿ ಚಲಿಸಿದ ಈ ದೃಶ್ಯಗಳು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿವೆ. ವಿಡಿಯೋ ವೈರಲ್ ಆದ ಬೆನ್ನಲ್ಲೇ ಬಿಹಾರ ಸಂಚಾರ ಪೊಲೀಸರು ಸಂಬಂಧಿತ ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಕ್ಲಿಪ್ನಲ್ಲಿ, ಯುವಕರು ಟ್ರಕ್ಗಳ ಸಮೀಪ ಅಪಾಯಕಾರಿಯಾಗಿ …
Read More »ಟ್ರಾಫಿಕ್ ಸಿಗ್ನಲ್ ನಲ್ಲಿ ಗಲಾಟೆ; ನಡುರಸ್ತೆಯಲ್ಲೇ ಡ್ರ್ಯಾಗರ್ ಹಿಡಿದು ಬೆದರಿಸಿದ ಯುವಕ!
ಬೆಂಗಳೂರು: ಟ್ರಾಫಿಕ್ ಸಿಗ್ನಲ್ ಬಳಿ ಕಾರು ಚಾಲಕನೊಂದಿಗೆ ಗಲಾಟೆ ನಡೆಸಿ, ಕೈಯಲ್ಲಿ ಚಾಕು ಹಿಡಿದು ಬೆದರಿಕೆ ಹಾಕಿದ ಘಟನೆ ವೈಟ್ಫೀಲ್ಡ್ ವಿಭಾಗದಲ್ಲಿ ನಡೆದಿದೆ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, KA53 JB 3274 ನೋಂದಣಿ ಸಂಖ್ಯೆಯ ಬೈಕ್ ಸವಾರ ದುರ್ವರ್ತನೆ ತೋರಿದ್ದಾನೆ ಎಂದು ಆರೋಪಿಸಲಾಗಿದೆ. ಅರ್ಬಾಜ್ ಖಾನ್ ಎಂಬ ಹೆಸರಲ್ಲಿ ನೋಂದಣಿಯಾಗಿರುವ ಬೈಕ್ ಚಲಾಯಿಸುತ್ತಿದ್ದ ಯುವಕ, ಸಿಗ್ನಲ್ ಬಳಿ ಕಾರು ಚಾಲಕನೊಂದಿಗೆ ವಾಗ್ವಾದಕ್ಕಿಳಿದಿದ್ದಾನೆ. ಗಲಾಟೆ …
Read More »KSRTC ಬಸ್ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿ: ಚಾಲಕ ಬದುಕಿದ್ದೇ ಪವಾಡ
ಚಾಲಕನ ನಿಯಂತ್ರಣ ತಪ್ಪಿ KSRTCಬಸ್ಗೆ ಹಿಂದಿನಿಂದ ಬೊಲೆರೋ ಪಿಕ್-ಅಪ್ ಡಿಕ್ಕಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ಕೆರೆಕತ್ತಗಿನೂರು ಗೇಟ್ ಬಳಿ ನಡೆದಿದೆ. ಅಪಘಾತದಲ್ಲಿ ಪವಾಡ ಎಂಬಂತೆ ಬೊಲೆರೋ ಪಿಕ್-ಅಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಕಾಮಗಾರಿ ಹಿನ್ನೆಲೆ ಒಂದೇ ಟ್ರ್ಯಾಕ್ನಲ್ಲಿ ವಾಹನಗಳು ಸಂಚಾರ ನಡೆಸುತ್ತಿದ್ದು, ಎರಡು ದಿನದ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Read More »ಹಳೇ ಹುಬ್ಬಳ್ಳಿ ಠಾಣೆ ಪಕ್ಕದಲ್ಲೇ ಗೂಂಡಾಗಿರಿ: ಪ್ರೀತಿಸಿದ ತಪ್ಪಿಗೆ ಯುವಕನ ಅಪಹರಣ!
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ನಿಲ್ಲುವ ಲಕ್ಷಣವೇ ಕಾಣಿಸುತ್ತಿಲ್ಲ. ದಿನೇ ದಿನೇ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದ್ದು, ಸಾರ್ವಜನಿಕರ ಭದ್ರತೆ ಪ್ರಶ್ನಾರ್ಥಕವಾಗುತ್ತಿದೆ.ಹಾಡಹಗಲೇ ಯುವಕನ ಮೇಲೆ ಗೂಂಡಾಗಿರಿ ನಡೆಸಿ, ಆಟೋದಲ್ಲಿ ಅಪಹರಣ ಮಾಡಿರುವ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಅಣತಿ ದೂರದಲ್ಲೇ ನಡೆದಿದೆ. ಪ್ರೀತಿ ವಿಚಾರಕ್ಕೆ ಸಂಬಂಧಿಸಿದಂತೆ ಯುವತಿಯ ಪೋಷಕರು ಹಾಗೂ ಸಹೋದರರು ಯುವಕನ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಬಲವಂತವಾಗಿ ಆಟೋದಲ್ಲಿ ಅಪಹರಣ ಮಾಡಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.ಹಳೇ ಹುಬ್ಬಳ್ಳಿ …
Read More »ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಜೈಲಿನಲ್ಲಿಯೇ ಆತ್ಮಹತ್ಯೆಗೆ ಶರಣು
ಧಾರವಾಡ: ಕೊಲೆ ಆರೋಪದಲ್ಲಿ ಜೈಲು ಸೇರಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿ ಕಾರಾಗೃಹದಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ.ಈಶ್ವರಪ್ಪ ಪೂಜಾರ್ ಆತ್ಮಹತ್ಯೆಗೆ ಶರಣಾದ ಕೈದಿ. 14 ವರ್ಷಗಳ ಜೈಲು ಶಿಕ್ಷೆ ಪೈಕಿ 7 ವರ್ಷ ಪೂರೈಸಿದ್ದ ಈಶ್ವರಪ್ಪ, ಇದೀಗ ಏಕಾಏಕಿ ಜೈಲಿನಲ್ಲಿಯೇ ನೇಣು ಬಿಗಿದಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಈಶ್ವರಪ್ಪ ಗದಗ ಜಿಲ್ಲೆಯ ಲಕ್ಷ್ಮೀಶ್ವರ ಮೂಲದವನು. ಪತ್ನಿ ಹತ್ಯೆಗೈದು ಜೈಲು ಸೇರಿದ್ದ. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಈಶ್ವರಪ್ಪೆಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





