ಬ್ಯಾನರ್ ವಿಚಾರಕ್ಕೆ ಗಲಭೆ ಮತ್ತು ಫೈರಿಂಗ್ ಪ್ರಕರಣ ಘಟನೆ ಖಂಡಿಸಿ ಜ 17ರಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.ಈ ಬಗ್ಗೆ ಎಸ್ಪಿ ಸುಮನ್ ಡಿ.ಪನ್ನೇಕರ್ ಪ್ರತಿಕ್ರಿಯಿಸಿದ್ದು, ಸಮಾವೇಶದಲ್ಲಿ 15-20 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಬ್ಬರು ಎಸ್ಪಿ, 7 ಹೆಚ್ಚವರಿ ಎಸ್ಪಿ, 15 …
Read More »ಬಾಂಗ್ಲಾದೇಶದಲ್ಲಿ ನಿಲ್ಲದ ದೌರ್ಜನ್ಯ: ಹಿಂದು ಶಿಕ್ಷಕನ ಮನೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಹಿಂದು ಶಿಕ್ಷಕರೊಬ್ಬರ ಮನೆಯನ್ನು ಗುರಿಯಾಗಿಸಿಕೊಂಡು ಬೆಂಕಿ ಹಚ್ಚಲಾಗಿದೆ.ದಾಳಿಕೋರರು ರಾತ್ರಿ ವೇಳೆ ಮನೆಗೆ ಬೆಂಕಿ ಹಚ್ಚಿದ ಘಟನೆ ಸಂಭವಿಸಿದೆ. ಅದೃಷ್ಟವಶಾತ್, ಘಟನೆಯ ಸಮಯದಲ್ಲಿ ಕುಟುಂಬ ಸದಸ್ಯರು ಸುರಕ್ಷಿತವಾಗಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಶಿಕ್ಷಕ ಬೀರೇಂದ್ರ ಕುಮಾರ್ ಎಂದು ಗುರುತಿಸಿಕೊಳ್ಳಲಾಗಿದೆ. ಈ ವಾರದ ಆರಂಭದಲ್ಲಿ, ಫೆನಿ ಜಿಲ್ಲೆಯ ದಗನ್ಭುಯಾನ್ ಉಪಜಿಲ್ಲಾದಲ್ಲಿ ಮತ್ತೊಬ್ಬ ಹಿಂದು ವ್ಯಕ್ತಿಯನ್ನು ದುಷ್ಕರ್ಮಿಗಳು ಕಡಿದು, ಇರಿದು ಕೊಂದಿದ್ದರು. ಬಾಂಗ್ಲಾದೇಶದ ಜಗತ್ಪುರ ಗ್ರಾಮದ ಬೆಳೆ ಹೊಲದಿಂದ 27 …
Read More »ಬೆಂಗಳೂರಲ್ಲಿ ‘BMTC’ ಬಸ್ ನಲ್ಲಿ ಟಿಕೆಟ್ ಪಡೆಯದೆ, ಉದ್ಧಟತನ : ಶಕ್ತಿ ಯೋಜನೆ ಟಿಕೆಟ್ ಕೊಟ್ರು ಹರಿದು ಹಾಕಿ ಮಹಿಳೆ ದರ್ಪ!
ಬೆಂಗಳೂರಲ್ಲಿ ‘BMTC’ ಬಸ್ ನಲ್ಲಿ ಟಿಕೆಟ್ ಪಡೆಯದೆ, ಉದ್ಧಟತನ : ಶಕ್ತಿ ಯೋಜನೆ ಟಿಕೆಟ್ ಕೊಟ್ರು ಹರಿದು ಹಾಕಿ ಮಹಿಳೆ ದರ್ಪ!ಹಣಕೊಟ್ಟು ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾರೆಆದರೂ ಸಹ ಟಿಕೆಟ್ ಪಡೆಯದೆ ಮಹಿಳೆ ಉದ್ಧಟತನ ತೋರಿದ್ದಾರೆ. ಚೆಕಿಂಗ್ ನವರು ಬರುತ್ತಾರೆ ಅಂತ ಹೇಳಿದರೆ, ಯಾರಾದರೂ ಬರಲಿ ನಾನು ಮಾತನಾಡುತ್ತೇನೆ ಅಂತ ಉದ್ಧಟತನ ತೋರಿದ್ದಾರೆ. ಇನ್ನೋರ್ವ ಮಹಿಳೆ ಮೇಡಂ ಟಿಕೆಟ್ ತೊಗೊಳ್ಳಿ ನಿಮ್ ಜೊತೆ ನಮಗೂ ಲೇಟ್ ಆಗುತ್ತೆ ಎಂದಿದ್ದಾರೆ. ಏನ್ …
Read More »ಗೌರಿಬಿದನೂರು: ಚಿನ್ನದ ಸರ ಕಸಿದು ಪರಾರಿ
ಗೌರಿಬಿದನೂರು: ನಗರದ ಶ್ರೀನಗರ ಬಡಾವಣೆಯಲ್ಲಿ ಸಂಕ್ರಾಂತಿ ಹಬ್ಬದ ದಿನವೇ ಕಳ್ಳರು ಕೈಚಳಕ ತೋರಿಸಿದ್ದಾರೆ.ಚಂದ್ರಲೀಲಾ ಎಂಬುವವರು ಬೆಳಗ್ಗೆ ಹಾಲು ತರಲು ಹೋಗುತ್ತಿದ್ದಾಗ ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಬಂದ ಇಬ್ಬರು ಕಳ್ಳರು, ಆಕೆಯ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಸಿದುಕೊಳ್ಳಲು ಯತ್ನಿಸಿದ್ದಾರೆ. ಮಹಿಳೆ ಪ್ರತಿರೋಧ ತೋರಿ ಕಿರುಚಾಡಿದ್ದರಿಂದ ಕಳ್ಳರ ಕೈಗೆ 20ಗ್ರಾಂ ನಷ್ಟು ಚಿನ್ನದ ಸರ ಮಾತ್ರ ಸಿಕ್ಕಿದ್ದು ಅದನ್ನೇ ಕಸಿದುಕೊಂಡು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೋಲಿಸ್ ಅಧೀಕ್ಷಕ …
Read More »ಸಾರಿಗೆ ಸಂಸ್ಥೆ ಬಸ್ ಗೆ ಬೆಂಕಿ: ಅದೃಷ್ಟವಶಾತ್ ಪ್ರಯಾಣಿಕರು ಪಾರು
ಕಲಬುರಗಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಗ್ರಾಮೀಣ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಉಂಟಾಗಿ ಪ್ರಯಾಣಿಕರು ಆತಂಕಗೊಂಡ ಘಟನೆ ಗುರುವಾರ ನಡೆದಿದೆ.ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಮದಿ ಗ್ರಾಮದ ಬಳಿ ಚಲಿಸುತ್ತಿದ್ದ ಬಸ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ.ಕೂಡಲೇ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಕೆಳಗೆ ಇಳಿಸಿದ್ದಾರೆ. ಈ ವೇಳೆಗೆ ಬಸ್ ಗೆ ಬೆಂಕಿ ಹೆಚ್ಚಾಗ ತೊಡಗಿದ್ದು ಸ್ಥಳೀಯರು ನೀರು ಹಾಕಿ ಬೆಂಕಿಯನ್ನು …
Read More »ಬಳ್ಳಾರಿ ಫೈರಿಂಗ್ ‘ಕೇಸ್ : ‘CID’ ಯಿಂದ ಇಬ್ಬರು ಗನ್ ಮ್ಯಾನ್’ ಗಳು ಅರೆಸ್ಟ್.!
ಬಳ್ಳಾರಿ ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಇಬ್ಬರು ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ.ಶಾಸಕ ಜನಾರ್ಧನ ರೆಡ್ಡಿ ಮನೆ ಬ್ಯಾನರ್ ಕಟ್ಟುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿಯಾಗಿದ್ದರು.ಈ ಪ್ರಕರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಖಾಸಗಿ ಗನ್ ಮ್ಯಾನ್ ಗಳಾದ ಬಲ್ಜೀತ್ ಸಿಂಗ್ ಹಾಗೂ ಬಲ್ಜಿನಂದರ್ ಸಿಂಗ್ ಎಂಬುವವರನ್ನು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗುತ್ತಿದೆ. ಬಳ್ಳಾರಿಯಲ್ಲಿ ಬ್ಯಾನರ್ ಕಟ್ಟುವ ವಿಚಾರವಾಗಿ …
Read More »ಕೊಲೆ ಪ್ರಕರಣ: ಮೂವರು ಬಾಲಕರು ವಶಕ್ಕೆ
ಧಾರವಾಡ: ಜಿಲ್ಲೆಯ ಕುಂದುಗೋಳ ಪಟ್ಟಣದಲ್ಲಿ ಬುಧವಾರ ನಡೆದ ನಿಂಗರಾಜ ಅವಾರಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.ಸಾಮಾಜಿಕ ಮಾಧ್ಯಮದ (ಇನ್ಸ್ಟಾಗ್ರಾಂ) ಪೋಸ್ಟ್ ವಿಚಾರದಲ್ಲಿ ಬಾಲಕರು ಪರಸ್ಪರ ಜಗಳವಾಡಿದ್ದಾರೆ. ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ. ತನಿಖೆ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ‘ಪ್ರಜಾವಾಣಿ’ಗೆ ತಿಳಿಸಿದರು. ಕುಂದಗೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ರೌಡಿ ಗುಬ್ಬಚ್ಚಿ ಸೀನ ವಿರುದ್ದ ಕೋಕಾ ಕೇಸ್
ಬೆಂಗಳೂರು: ರೌಡಿಶೀಟರ್ಗುಬ್ಬಚ್ಚಿ ಸೀನ ಮತ್ತು ಆತನ ಸಹಚರ ಕಾರ್ತಿಕ್ ವಿರುದ್ಧ ಕೋಕಾ ಕಾಯ್ದೆ ಅಡಿ ವರ್ತೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವರ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಗುಬ್ಬಚ್ಚಿ ಸೀನ ಸದ್ಯ ಪರಪ್ಪನ ಅಗ್ರಹಾರ ಜೈಲಿನ ಲ್ಲಿದ್ದಾನೆ.ಅಲ್ಲಿಂದಲೇ ಬಿಲ್ಡರ್ವೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಜೈಲಿನಲ್ಲಿದ್ದುಕೊಂಡೆ ಮದ್ಯ ಸೇವನೆ ಹಾಗೂ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದ. ಈ ಫೋಟೋ ಗಳು ಸಾಮಾಜಿಕ ಜಾಲತಾ …
Read More »ಕಾಳಿ ನದಿಯಲ್ಲಿ ಮುಳುಗಿ ಯುವಕ ಸಾವು
ದಾಂಡೇಲಿ(ಉತ್ತರ ಕನ್ನಡ ಜಿಲ್ಲೆ): ಮೌಳಂಗಿ ಸಮೀಪದ ಕಾಳಿ ನದಿಯ ಸಂಗಮ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಗೆಳೆಯರೊಂದಿಗೆ ಸ್ನಾನಕ್ಕೆ ತೆರಳಿದ್ದ ನವಾಝ್ ನಾಯ್ಕ (18) ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆಸ್ನಾನ ಮಾಡುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ನೀರಿನ ಹರಿವು ತೀವ್ರಗೊಂಡು ನವಾಜ್ ನೀರಿನಲ್ಲಿ ಕಾಣೆಯಾದರು.ತಕ್ಷಣವೇ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಹಾಗೂ ಫ್ಲೈಕ್ಯಾಚರ್ ರಾಫ್ಟಿಂಗ್ ತಂಡದವರು ಮತ್ತು ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯ ನಡೆಸಿದರು. ನವಾಜ್ ಅವರ ಶವ ಪತ್ತೆಯಾಯಿತು’ ಎಂದು …
Read More »ಕೌಟುಂಬಿಕ ಕಲಹ- ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡ ತಾಯಿ
ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು ತಾಯಿ, ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಶಾಕಿಂಗ್ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೀವ್ರ ಸುಟ್ಟ ಗಾಯಗಳಿಂದಾಗಿ ತಾಯಿ ಮೃತಪಟ್ಟಿದ್ದಾರೆ.ತೀವ್ರವಾಗಿ ಗಾಯಗೊಂಡಿದ್ದ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದ್ದಾಳೆ. ಘಟನೆ ನಗರದ ಕೃಷ್ಣಪ್ಪ ಲೇಔಟ್ ನಲ್ಲಿ ನಿನ್ನೆ ಸಂಜೆ ನಡೆದಿದೆ. ಬೆಂಕಿ ಹಚ್ಚಿಕೊಂಡ ಹಿನ್ನೆಲೆ ತಾಯಿ ಸೀತಾ (29) ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪುತ್ರಿ ಸೃಷ್ಟಿಗೆ (4) ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





