Breaking News

ಬಳ್ಳಾರಿ ಗಲಭೆ: ನಾಳೆ ನಡೆಯಲಿರುವ ಬಿಜೆಪಿ ಬೃಹತ್​ ಪ್ರತಿಭಟನೆ ರ‍್ಯಾಲಿ ಬಗ್ಗೆ ಎಸ್​​ಪಿ ಹೇಳಿದ್ದಿಷ್ಟು

ಬ್ಯಾನರ್​​​ ವಿಚಾರಕ್ಕೆ ಗಲಭೆ ಮತ್ತು ಫೈರಿಂಗ್ ಪ್ರಕರಣ ಘಟನೆ ಖಂಡಿಸಿ ಜ 17ರಂದು ಬಳ್ಳಾರಿಯಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.ಈ ಬಗ್ಗೆ ಎಸ್​​ಪಿ ಸುಮನ್ ಡಿ.ಪನ್ನೇಕರ್​ ಪ್ರತಿಕ್ರಿಯಿಸಿದ್ದು, ಸಮಾವೇಶದಲ್ಲಿ 15-20 ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದೆ. ಭದ್ರತೆಗಾಗಿ ಬೇರೆ ಜಿಲ್ಲೆಗಳಿಂದ ಅಧಿಕಾರಿಗಳು, ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇಬ್ಬರು ಎಸ್​ಪಿ, 7 ಹೆಚ್ಚವರಿ ಎಸ್​​​ಪಿ, 15 ಡಿವೈಎಸ್​ಪಿ, 55 ಸಿಪಿಐ, 122 ಪಿಎಸ್ಐ, 81 ಎಎಸ್ಐ, 1233 ಪೊಲೀಸ್ ಕಾನ್ಸ್​ಟೇಬಲ್, 171 ಮಹಿಳಾ ಪೊಲೀಸ್ ಸಿಬ್ಬಂದಿ, 500 ಹೋಮ್​ಗಾರ್ಡ್​ ಸಿಬ್ಬಂದಿ, 12 ಡಿಎಆರ್ ತುಕಡಿ, 17 ಕೆಎಸ್​ಆರ್​ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಸಮಾವೇಶದ ಆಯೋಜಕರಿಂದ ಮಾಹಿತಿ ಪಡೆದಿದ್ದೇವೆ ಎಂದು ಹೇಳಿದ್ದಾರೆ.

Share News

About BigTv News

Check Also

ಚಿತ್ತಾಪುರ | ಕೈಗಡ ಹಣ ವಾಪಸ್‌ ಕೇಳಿದಕ್ಕೆ ಹಲ್ಲೆ: ಇಬ್ಬರ ವಿರುದ್ಧ ಎಫ್‌ಐಆರ್

ಚಿತ್ತಾಪುರ: ಕೈಗಡವಾಗಿ ನೀಡಿದ್ದ ₹2 ಲಕ್ಷ ಹಣವನ್ನು ವಾಪಸ್ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ, ಅವಾಚ್ಯವಾಗಿ ಬೈದು ಜೀವ …

Leave a Reply

Your email address will not be published. Required fields are marked *