Breaking News

BigTv News

ರಕ್ತಚಂದನ ಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಕೊಳ್ಳೇಗಾಲ:ತಾಲೂಕಿನ ಬೆಂಗಳೂರು ಹೆದ್ದಾರಿ ಮಾರ್ಗದ ಸತ್ತೇಗಾಲದಿಂದ ಶ್ರೀ ವೀರಭದ್ರಸ್ವಾಮಿ ದೇವಾಲಯಕ್ಕೆ ತೆರಳುವ ಜಂಕ್ಷನ್ ಬಳಿ ಶನಿವಾರ ಕಾರಿನಲ್ಲಿ ರಕ್ತಚಂದನ ಮರಗಳನ್ನು ಸಾಗಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಸಿಐಡಿ ಅರಣ್ಯ ಸಂಚಾರ ದಳ ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ನಿವಾಸಿಗಳಾದ ಜಯಚಂದ್ರ, ಸುಮಂತ್, ಕಾರು ಚಾಲಕ ಹರೀಶ್ ಬಂಧಿತರು. 85 ಕೆ.ಜಿ.ತೂಕದಷ್ಟು ರಕ್ತ ಚಂದನ ಮರಗಳನ್ನು ವಶಕ್ಕೆ ಪಡೆದಿದ್ದಾರೆ. ರಕ್ತಚಂದನ ಮರದ ತುಂಡುಗಳನ್ನು ಬೆಂಗಳೂರಿನಿಂದ ಕೇರಳಕ್ಕೆ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಐಡಿ …

Read More »

ಲಾಭದ ಆಮಿಷವೊಡ್ಡಿ 30 ಲ.ರೂ. ವಂಚನೆ

ಉಡುಪಿ: ಸ್ಟಾಕ್ ಮಾರ್ಕೆಟ್ ನಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂದು ನಿವೃತ್ತ ಬ್ಯಾಂಕ್ ಉದ್ಯೋಗಿಗೆ ಲಕ್ಷಾಂತರ ರೂ.ವಂಚಿಸಿದ ಘಟನೆ ನಡೆದಿದೆ.ಎಂಐಟಿ ನಿವೃತ್ತ ಉದ್ಯೋಗಿ ಉಮಾನಂದ ಕೆ.ವಿ. ಹಣ ಕಳೆದುಕೊಂಡವರು. ವಾಟ್ಸಾಪ್ ನಲ್ಲಿ ವಂಚಕನೊಬ್ಬ ಇವರನ್ನು ಸಂಪರ್ಕಿಸಿ ಆಮಿಷವೊಡ್ಡಿದ್ದಾನೆ.ವಂಚಕರ ಮಾತು ನಂಬಿದ ಅವರು ನ. 6 ರಿಂದ ಡಿ. 31 ರ ವರೆಗೆ ಸ್ಟಾಕ್ ಮಾರ್ಕೇಟ್ ಕಂಪೆನಿಯಲ್ಲಿ ಆರೋಪಿಗಳು ಸೂಚಿಸಿದ ವಿವಿಧ ಖಾತೆಗಳಿಗೆ ಒಟ್ಟು 30,32,000 ರೂ. …

Read More »

ಕಾಶ್ಮೀರ: ಉಗ್ರರ ಅಡಗುತಾಣ ನಾಶ

ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿದ್ದ ಉಗ್ರರ ಅಡಗುತಾಣವೊಂದನ್ನು ಭದ್ರತಾ ಪಡೆ ಅಧಿಕಾರಿಗಳು ನಾಶಗೊಳಿಸಿದ್ದಾರೆ.ಅಡಗುತಾಣದಲ್ಲಿದ್ದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.ಜಿಲ್ಲೆಯ ಶೀರಿ ಪ್ರದೇಶದಲ್ಲಿರುವ ಅರಣ್ಯದಲ್ಲಿ ಶನಿವಾರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಅಡಗುತಾಣ ಪತ್ತೆಯಾಯಿತು. ಎರಡು ಹ್ಯಾಂಡ್‌ ಗ್ರೆನೇಡ್‌ಗಳು, ಎಕೆ-47 ರೈಫಲ್‌ನ 24 ಗುಂಡುಗಳು, ವೈರ್‌ಲೆಸ್ ಆಯಂಟೆನಾ ಹಾಗೂ ಒಂದು ಕೊಡಲಿ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

Read More »

ಯಲ್ಲಾಪುರ ರಂಜಿತಾ ಹತ್ಯೆ ಕೇಸ್: ಮೃತ ಮಹಿಳೆ ಕುಟುಂಬಕ್ಕೆ ಪರಿಹಾರ ಘೋಷಿಸಿದ ಬಿ.ವೈ ವಿಜಯೇಂದ್ರ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹತ್ಯೆಯಾದ ರಂಜಿತಾ ಮನೆಗೆ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿ ನೀಡಿದರು.ನಿನ್ನೆ ಚಾಕುವಿನಿಂದ ಇರಿದು ರಂಜಿತ (30) ರಫೀಕ್ ಭೀಕರವಾಗಿ ಕೊಲೆ ಮಾಡಿದ್ದ.ಇಂದು ಬೆಳಗ್ಗೆ ಕೊಲೆ ಆರೋಪಿ ರಫೀಕ್ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಸದ್ಯ ರಂಜಿತಾ ಮನೆಗೆ ಭೇಟಿ ನೀಡಿದ ಬಿವೈ ವಿಜಯೇಂದ್ರ ರಂಜಿತಾ ಕುಟುಂಬಕ್ಕೆ ಬಿಜೆಪಿಯಿಂದ 5 ಲಕ್ಷ ಪರಿಹಾರ ಘೋಷಣೆ …

Read More »

ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ : ಮೂವರು ಹೆಣ್ಣು ಮಕ್ಕಳನ್ನ ಸಾಕೋದಕ್ಕೆ ಆಗದೆ, ಪತ್ನಿಗೆ ಕೈಕೋಟ್ಟು ಹೋದ ಪತಿ!

ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೂವರು ಹೆಣ್ಣು ಮಕ್ಕಳು ಎಂದು ಪತ್ನಿಗೆ ಪತಿ ಕೈಕೊಟ್ಟ ಘಟನೆ ವರದಿಯಾಗಿದೆ. ಪತ್ನಿ ಹಾಗು ಮೂವರು ಹೆಣ್ಣು ಮಕ್ಕಳನ್ನು ಪತಿ ಬಿಟ್ಟು ಹೋಗಿದ್ದಾನೆ. ಬೆಂಗಳೂರಿನ ಯಲಹಂಕದಲ್ಲಿ ಈ ಒಂದು ಘಟನೆ ನಡೆದಿದೆ.ಪತಿ ಹರೀಶ್ ಹಾಗೂ ಪತ್ನಿ ವರಲಕ್ಷ್ಮಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದರು. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಆಗಿದ್ದು ಇದೀಗ ಒಂದುವರೆ ತಿಂಗಳ ಹಸುಗೂಸನ್ನು ಪತಿ ಹರೀಶ್ ಇದೀಗ ಬಿಟ್ಟು ಹೋಗಿದ್ದಾನೆ. …

Read More »

ಕಲ್ಲು ಕ್ವಾರಿಯಲ್ಲಿ ಸ್ಫೋಟ: ನಾಲ್ವರು ಕಾರ್ಮಿಕರು ಸಾವು

ಧೆಂಕನಲ್: ಒಡಿಶಾದ ಧೆಂಕನಲ್ ಜಿಲ್ಲೆಯ ಮೋಟಂಗಾ ಪೊಲೀಸ್ ಠಾಣೆ ವ್ಯಾಪ್ತಿಯ ಗೋಪಾಲ್‌ಪುರ ಗ್ರಾಮದ ಬಳಿಯ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಕಾರ್ಮಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.ದಿನನಿತ್ಯದ ಕಲ್ಲು ಕ್ವಾರಿ ಕೆಲಸ ನಡೆಸುತ್ತಿದ್ದ ನಾಲ್ವರು ಕಾರ್ಮಿಕರು ಸ್ಫೋಟ ಸಂಭವಿಸಿದಾಗ ಸಾವನ್ನಪ್ಪಿದ್ದಾರೆ.ಪ್ರಬಲವಾದ ಸ್ಫೋಟವು ನಾಲ್ವರು ಜನರಿಗೆ ಮಾರಕವಾಗಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಓಡಪದ ತಹಶೀಲ್ದಾರ್ ಮತ್ತು ಮೋಟಂಗಾ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಾಥಮಿಕ …

Read More »

ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಡಿ ಗ್ರೂಪ್ ನೌಕರ

ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿಯೇ ಡಿ ಗ್ರೂಪ್ ನೌಕರ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ.35 ವರ್ಷದ ಮೈಲಾರಲಿಂಗೇಶ್ವರ ಆತ್ಮಹತ್ಯೆಗೆ ಶರಣಾದ ನೌಕರ. ಆಯುಷ್ ಇಲಾಖೆ ನಡೆಸುತ್ತಿದ್ದ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿಯೇ ಡಿ ಗ್ರೂಪ್ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಚಿಕ್ಕಮುದುರೆ ಗ್ರಾಮದ ನಿವಾಸಿಯಾಗಿದ್ದ ಮೈಲಾರಲಿಂಗ ಗದಗ ಜಿಲ್ಲೆಯ ಬೆಟಗೇರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ನಿನ್ನೆ ಆಸ್ಪತ್ರೆಯಲ್ಲಿ ಜಗಳ ಮಾಡಿಕೊಂಡಿದ್ದ …

Read More »

ಮಂಡ್ಯ: ಹಲ್ಲೆಗೆರೆ ಗ್ರಾಮ ಪಂಚಾಯಿತಿ ಸದಸ್ಯ ಆತ್ಮಹತ್ಯೆ

ಮಂಡ್ಯ: ತಾಲ್ಲೂಕಿನ ಹಲ್ಲೆಗೆರೆ ಗ್ರಾಮ ಪಂಚಾಯಿತಿ ಸದಸ್ಯ ಎ.ಎನ್.ಕೃಷ್ಣ (53) ಅವರು ನೇಣು ಹಾಕಿಕೊಂಡು ಶನಿವಾರ ಆತ್ಮಹತ್ಯೆ ಮಾಡಿಕೊಂಡರು.ಪಂಚಾಯಿತಿ ಮಾಜಿ ಸದಸ್ಯೆ ಪುಟ್ಟಮಣಿ ಹಾಗೂ ವನಜಾಕ್ಷಿ, ಚಂದ್ರಶೇಖರ್, ಮುರಳಿ ಎಂಬುವರು ಪೊಲೀಸರಿಗೆ ಸುಳ್ಳು ದೂರು ನೀಡಿ, ಕಿರುಕುಳ ಕೊಟ್ಟಿರುವುದೇ ಆತ್ಮಹತ್ಯೆಗೆ ಕಾರಣ’ ಎಂದು ಮೃತರ ಪತ್ನಿ ಎಂ.ಎಸ್. ಶೋಭಾ ದೂರು ನೀಡಿದ್ದು, ಕೆರಗೋಡು ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಸಂಬಂಧಿಕರ ಆಸ್ತಿ ವಿಚಾರದಲ್ಲಿ ಪಂಚಾಯ್ತಿಯಲ್ಲಿ ನನ್ನ ಪರವಾಗಿ ಸಹಕರಿಸದೇ ಎದುರುದಾರರ …

Read More »

ಹಿಂದೂ ಇನ್‌ಸ್ಪೆಕ್ಟರನ್ನೇ ಸುಟ್ಟಿದ್ದೇವೆ: ಬಾಂಗ್ಲಾ ವಿದ್ಯಾರ್ಥಿ ನಾಯಕ!

ಢಾಕಾ: 2024ರ ದಂಗೆ ವೇಳೆ ಹಿಂದೂ ಪೊಲೀಸ್‌ ಅಧಿಕಾರಿಯೊಬ್ಬರನ್ನು ಜೀವಂತವಾಗಿ ಸುಟ್ಟು ಹಾಕಿದ್ದೇವೆ ಎಂದು ಬಾಂಗ್ಲಾದ ವಿದ್ಯಾರ್ಥಿ ನಾಯಕನೊಬ್ಬ ಪೊಲೀಸರಿಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋವನ್ನು ತನಿಖಾ ಪತ್ರಕರ್ತ ಸಾಹಿದುಲ್ ಹಸನ್ ಖೋಕೋನ್ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ವಿದ್ಯಾರ್ಥಿಯನ್ನು ಹಬಿಗಂಜ್ ಜಿಲ್ಲೆಯ ವಿದ್ಯಾರ್ಥಿ ನಾಯಕ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಆತ, ‘ಬನಿಯಾಚಾಂಗ್ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಅಲ್ಲಿನ ಸಬ್‌ ಇನ್ಸ್‌ಪೆಕ್ಟರ್‌ ಸಂತೋಷ್‌ ಎಂಬ ಹಿಂದೂ ಅಧಿಕಾರಿಯನ್ನು …

Read More »

ರಾಜ್ಯದಲ್ಲಿ `ಬೆಚ್ಚಿ ಬೀಳಿಸುವ ಕೃತ್ಯ’ : ನಿಧಿಗಾಗಿ 8 ತಿಂಗಳ ಮಗುವಿನ ನರಬಲಿಗೆ ಯತ್ನ.!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲೆಬೆಲೆಯ ಜನತಾ ಕಾಲೋನಿಯಲ್ಲಿ ನಿಧಿಗಾಗಿ ಮನೆಯಲ್ಲಿ ಗುಂಡಿ ತೋಡಿ ಮಗು ಬಲಿಗಾಗಿ ಪೂಜೆ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ.ಈ ವೇಳೆ 8 ತಿಂಗಳ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಸೈಯದ್ ಇಮ್ರಾನ್ ಎಂಬುವರ ಮನೆಯಲ್ಲಿ ನಿಧಿಗಾಗಿ ಮಗು ಬಲಿ ಪೂಜೆ ನಡೆಸಲಾಗುತ್ತಿತ್ತು ಎನ್ನಲಾಗಿದ್ದು, ಬೇರೆಯವರಿಂದ ಗಂಡು ಮಗುವನ್ನು ಖರೀದಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಹುಣ್ಣಿಮೆ ಹಿನ್ನೆಲೆ ಮಗು …

Read More »