Breaking News

BigTv News

ಬೆಳ್ತಂಗಡಿ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಬೆಳಾಲು ಗ್ರಾಮದ ನದಿಯಲ್ಲಿ ಪತ್ತೆ

ನಾಪತ್ತೆಯಾಗಿದ್ದ ಬೆಳಾಲು ಪುರುಷರಬೆಟ್ಟು ನಿವಾಸಿ ರಾಜೇಶ್ ಪಿ. (30) ರವರ ಮೃತದೇಹ ಬೆಳಾಲು ಗ್ರಾಮದ ಬಲಿಪೆ ನೇತ್ರಾವತಿ ನದಿಯಲ್ಲಿ ಡಿ.30 ರಂದು ಪತ್ತೆಯಾಗಿದೆಡಿ. 27ರಂದು ಬೆಳಿಗ್ಗೆ ಮನೆಯಿಂದ ಹೊರಟ ರಾಜೇಶ್ ಪಿ, ವಾಪಾಸು ಹಿಂದಿರುಗದೆ ನಾಪತ್ತೆಯಾಗಿದ್ದರು.ಅವರ ಪತ್ತೆಗಾಗಿ ಮನೆಯವರು ಹಾಗೂ ಸ್ಥಳೀಯವರು ಹುಡುಕಾಟ ನಡೆಸಿದ್ದರೂ ಪತ್ತೆಯಾಗಿರಲಿಲ್ಲಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿ ನಂತರ ತೀವ್ರ ಹುಡುಕಾಟ ನಡೆಸಿದಾಗ ಇಂದು ಬೆಳಿಗ್ಗೆ ಬಲಿಪೆಯ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಧರ್ಮಸ್ಥಳ …

Read More »

ನಾಯಿ ತಪ್ಪಿಸಲು ಹೋಗಿ ಭೀಕರ ಅಪಘಾತ: ASI ಸ್ಥಳದಲ್ಲೇ ಸಾವು

ರಾಜ್ಯದಲ್ಲಿ ಸಾಲು ಸಾಲು ಅಪಘಾತ ಪ್ರಕರಣಗಳು ನಡೆಯುತ್ತಿವೆ. ರಸ್ತೆಗೆ ಅಡ್ಡಬಂದ ನಾಯಿ ತಪ್ಪಿಸಲು ಹೋಗಿ ಬೈಕ್ ನಿಂದ ಬಿದ್ದು ಎಎಸ್‌ಐ ಓರ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಕ್ರಾಸ್ ನಲ್ಲಿ ಈ ದುರಂತ ಸಂಭವಿಸಿದೆ.ಪರಶರಾಂಪುರ ಪೊಲೀಸ್ ಠಾಣೆಯ ಎಎಸ್‌ಐ ಮಂಜುನಾಥ್ (50) ಮೃತ ದುರ್ದೈವಿ. ಐಮಂಗಲ ಪೊಲೀಸ್ ತರಬೇತಿ ಶಾಲೆಯಿಂದ ವಾಪಸ್ ಆಗಿವಾಗ ರಸ್ತೆಯಲ್ಲಿ ನಾಯಿಯೊಂದು ಅಡ್ಡ ಬಂದಿದೆ. ನಾಯಿ ತಪ್ಪಿಸಲು ಹೋಗಿ …

Read More »

ಅಕ್ರಮ ಗೋಮಾಂಸ ಸಾಗಾಟ: ಆರೋಪಿಗಳ ಸಮೇತ ವಾಹನ ಮುಟ್ಟುಗೋಲು

ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕಲ್ಕಂದೂರಿನಲ್ಲಿ ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.KA50 M 6232 ನೋಂದಣಿ ಸಂಖ್ಯೆಯ ಆಲ್ಟೋ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ ಬಜರಂಗದಳ ಹಾಗೂ ಹಿಂಜಾವೇ ಕಾರ್ಯಕರ್ತರು ಕಲ್ಕಂದೂರಿನ ಅದ್ರಾಮ ಮತ್ತು ನಾಲ್ವರು ಅಸ್ಸಾಂ ಕಾರ್ಮಿಕರೂ ಸೇರಿದಂತೆ ಗೋಮಾಂಸ ಸಾಗಾಟ ಮಾಡುತ್ತಿದ್ದ ಒಟ್ಟು 5 ಆರೋಪಿಗಳ ಸಮೇತ ಆಲ್ಟೋ ಕಾರನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.

Read More »

ಧಾರವಾಡದಲ್ಲಿ ಭೀಕರ ಅಪಘಾತ : ಲಾರಿ ಚಕ್ರದಡಿ ಸಿಲುಕಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು!

ಧಾರವಾಡದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಬೈಕ್ ನಲ್ಲಿ ಚಲಿಸುತ್ತೀದ್ದ ಲಾರಿಯ ಚಕ್ರದ ಅಡಿಗೆ ಸಿಲುಕಿ ಇಬ್ಬರು ಯುವಕರು ಲಾರಿಯ ಚಕ್ರದ ಅಡಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗ ನಡೆದಿದೆ.ಮೃತರನ್ನು ಧಾರವಾಡದ ಗೌಳಿ ಗಲ್ಲಿಯ ಕಿಶನ್​​ ಖಾನವಾಲೆ (30) ಮತ್ತು ಕಿರಣ ಖಡವಾಕರ್​ (32) ಎಂದು ಗುರುತಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಯರಿಕೊಪ್ಪ ಬಳಿ ಮಿಶ್ರಾಪೇಡಾ ಮುಂಭಾಗ ಸ್ಕೂಟಿ​​ ಹಾಗೂ ಲಾರಿ …

Read More »

ಆತೂರಿನಲ್ಲಿ ಟೆಂಪೋ ಢಿಕ್ಕಿ: ಕಾಸರಗೋಡಿನ ಶಿಕ್ಷಕ ಮೃತ್ಯು

ಕಡಬ: ಪಾದಚಾರಿಯೋರ್ವರಿಗೆ ಟೆಂಪೋ ಡಿಕ್ಕಿಯಾಗಿ ಮೃತಪಟ್ಟ ಘಟನೆ ಆತೂರು ಎಂಬಲ್ಲಿ ಸೋಮವಾರ ಮಧ್ಯಾಹ್ನ ಸಂಭವಿಸಿದೆ.ಕಾಸರಗೋಡಿನ ಮೈಮಾತ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿ ಕಡಬದ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ (53) ಮೃತಪಟ್ಟವರು.ಸಂಬಂಧಿಕರ ಮದರಂಗಿ ಕಾರ್ಯಕ್ರಮಕ್ಕೆ ಮನೆಯವರ ಜೊತೆ ಬಂದಿದ್ದ ಅವರು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ಬಸ್ಸಿನಿಂದ ಇಳಿದು, ಮನೆಯವರನ್ನು ರಿಕ್ಷಾದಲ್ಲಿ ಕಳುಹಿಸಿದ್ದರು. ಬಳಿಕ ನಡೆದುಕೊಂಡು ಮದರಂಗಿ ಕಾರ್ಯಕ್ರಮಕ್ಕೆ ಹೋಗುತ್ತಿದ್ದರು ಎನ್ನಲಾಗಿದೆ. ಅಷ್ಟರಲ್ಲಿ ಗೂಡ್ಸ್ ಟೆಂಪೋವೊಂದು ಇವರಿಗೆ ಡಿಕ್ಕಿ …

Read More »

ಶಿವಮೊಗ್ಗದಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಹತ್ಯೆ

ನಗರದಲ್ಲಿ ಕೊಲೆ ಪ್ರಕರಣಗಳು ಮುಂದುವರೆದಿವೆ. ಕೌಟುಂಬಿಕ ಕಲಹದಿಂದಾಗಿ ಯುವಕನೊಬ್ಬನನ್ನು ಸಂಬಂಧಿಕರೇ ಹತ್ಯೆ ಮಾಡಿರುವಂತ ಘಟನೆ ವಿನೋಬನಗರದಲ್ಲಿ ನಡೆದಿದೆ.ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ತರಕಾರಿ ಮಾರುಕಟ್ಟೆ ಬಳಿಯಲ್ಲಿ ಇಂದು ಸಂಜೆ ಕ್ಷುಲ್ಲಕ ಕಾರಣಕ್ಕಾಗಿ ಯುವನೊಬ್ಬನನ್ನು ಸಂಬಂಧಿಕರೇ ಹತ್ಯೆ ಮಾಡಿರೋ ಘಟನೆ ನಡೆದಿದೆ.ಕೊಲೆಯಾದ ಯುವಕನನ್ನು ಅರುಣ್(26) ಎಂಬುದಾಗಿ ಗುರುತಿಸಲಾಗಿದೆ. ವೈವಾಹಿಕ ವಿಚಾರವಾಗಿ ಈ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ಈ ಗಲಾಟೆ ತಾರಕಕ್ಕೆ ಏರಿದಂತ ಸಂದರ್ಭದಲ್ಲಿ ಸಂಬಂಧಿಕರೇ ಹತ್ಯೆ ಮಾಡಿರೋದಾಗಿ ಹೇಳಲಾಗುತ್ತಿದೆ. ವಿಷಯ …

Read More »

ಟ್ರ್ಯಾಕ್ಟರ್ ನಲ್ಲಿದ್ದ ನಾಲ್ವರು ಕೂಲಿ ಕಾರ್ಮಿಕರ ಮೇಲೆ 30ಕ್ಕೂ ಹೆಚ್ಚು ಜನರಿಂದ ಹಲ್ಲೆ

ದಾವಣಗೆರೆ: ಟ್ರ್ಯಾಕ್ಟರ್ ಗೆ ಪಿಕಪ್ ವಾಹನ ಟಚ್ ಆಗಿ ಗಲಾಟೆ ನಡೆದು ಕೂಲಿ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ. ನಾಲ್ವರ ಮೇಲೆ ಮೂವತ್ತಕ್ಕೂ ಹೆಚ್ಚು ಜನರು ಹಲ್ಲೆ ಮಾಡಿದ ಘಟನೆ ಅರಿಶಿನಘಟ್ಟ ಬಳಿ ನಡೆದಿದೆ.ದಾವಣಗೆರೆ ಜಿಲ್ಲೆ, ಚೆನ್ನಗಿರಿ ತಾಲೂಕಿನ ಅರಿಶಿನಘಟ್ಟ ಗ್ರಾಮದ ಬಳಿ ಅಡಿಕೆ ಚೀಲಗಳನ್ನು ತುಂಬಿಕೊಂಡು ಟ್ರ್ಯಾಕ್ಟರ್ ಹೋಗುತ್ತಿತ್ತು.ಬೊಲೆರೋ ಪಿಕಪ್ ವಾಹನ ಅಡಿಕೆ ಚೀಲಕ್ಕೆ ಟಚ್ ಆಗಿದ್ದರಿಂದ ಚೀಲ ಹರಿದು ರಸ್ತೆಗೆ ಅಡಿಕೆ ಚೆಲ್ಲಿದ್ದಕ್ಕೆ ಪರಸ್ಪರ ವಾಗ್ವಾದ ನಡೆದಿದೆ. …

Read More »

ದನದ ಮಾಂಸ ಸಾಗಾಟ, ಹಲ್ಲೆ ಪ್ರಕರಣ: ಬಂಧಿತರಿಗೆ ಪೋಕ್ಸೋ ಕುಣಿಕೆ

ಮಂಗಳೂರು: ಮಳಲಿ ನಾರ್ಲಪದವು ಬಳಿ ಅಕ್ರಮವಾಗಿ ಗೋ ಮಾಂಸ ಸಾಗಾಟ, ಹಲ್ಲೆ ಪ್ರಕರಣದಲ್ಲಿ ಬಂಧಿತ ಅರೋಪಿಗಳ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ.ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿ ಅಬ್ದುಲ್ ಸತ್ತಾರ್ ನ ಆರೋಪಿ ಜತೆಗಿದ್ದ 11 ವರ್ಷದ ಆತನ‌ ಪುತ್ರಿ ನೀಡಿದ‌ ಹೇಳಿಕೆ ಆಧಾರದಲ್ಲಿ‌ ಪ್ರಕರಣ ದಾಖಲಾಗಿದೆ.ಬೈಕನ್ನು ಟಾಟಾ ಸುಮೊ ವಾಹನದಲ್ಲಿ ಹಿಂಬಾಲಿಸಿದ್ದ ಆರೋಪಿಗಳು ನಾರ್ಲಪದವು ಬಳಿ ವಾಹನವನ್ನು ರಸ್ತೆಗೆ ಅಡ್ಡ ನಿಲ್ಲಿಸಿ, ತಂದೆ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ನನ್ನ …

Read More »

ಮಂಗಳೂರು ಜೈಲಿನಲ್ಲಿ ದಿಢೀರ್ ತಪಾಸಣೆ; 2 ಮೊಬೈಲ್ , ಸಿಮ್ ಕಾರ್ಡ್ ಪತ್ತೆ

ನಗರ ಕಾರಾಗೃಹದ ಅಧೀಕ್ಷಕರ ನೇತೃತ್ವದಲ್ಲಿ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಸೋಮವಾರ ತಡರಾತ್ರಿ ನಡೆಸಿದ ದಿಢೀರ್ ತಪಾಸಣೆ ಸಂದರ್ಭ 2 ಮೊಬೈಲ್‌ಗಳು, 1 ಸಿಮ್ ಕಾರ್ಡ್ ಮತ್ತು 1 ಕೇಬಲ್ ರಹಿತ ಮೊಬೈಲ್ ಚಾರ್ಜ ರ್ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ.ಇವು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾಗಿರುವುದರಿಂದ ಮಂಗಳೂರು ಬರ್ಕೆ ಪೊಲೀಸ್ ಠಾಣೆಗೆ ನೀಡಿ ಪ್ರಕರಣ ದಾಖಲಿಸಲಾಗಿರುತ್ತದೆ. ಇದೇ ದಿನ ಇಲಾಖೆಯ ಮುಖ್ಯಸ್ಥರಾದ ಮಾನ್ಯ ಅಲೋಕ್ ಕುಮಾರ್ ಐ.ಪಿ.ಎಸ್. ಮಹಾನಿರ್ದೇಶಕರು ಕರ್ನಾಟಕ …

Read More »

ಮುಂಬೈ: ಬಸ್‌ ಡಿಕ್ಕಿ ಹೊಡೆದು ನಾಲ್ವರ ಸಾವು, 9 ಜನರಿಗೆ ಗಂಭೀರ ಗಾಯ

ಮುಂಬೈ ಮಹಾನಗರ ಸಾರಿಗೆ ಸಂಸ್ಥೆಗೆ ಸೇರಿದ (ಬೆಸ್ಟ್‌) ಬಸ್ಸೊಂದು ಸೋಮವಾರ ರಾತ್ರಿ ಹಿಮ್ಮುಖವಾಗಿ ಚಲಿಸಿದ ವೇಳೆ ಮಹಿಳೆ ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.‌’ಮುಂಬೈನ ಭಂಡಪ್‌ ಪ್ರದೇಶದ ಸ್ಟೇಷನ್‌ ರಸ್ತೆಯಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ಬಸ್‌ ಹಿಮ್ಮುಖವಾಗಿ ಚಲಿಸಿದ ವೇಳೆ ಪಾದಚಾರಿಗಳಿಗೆ ಡಿಕ್ಕಿ ಹೊಡೆದಿದೆ.ಈ ವೇಳೆ ನಾಲ್ವರು ಮೃತಪಟ್ಟಿದ್ದು, ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಸ್‌ ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ.

Read More »