Breaking News

BigTv News

ಗಜೇಂದ್ರಗಡ: ಲೋಕಾ ಬಲೆಗೆ ಬಿದ್ದ ಮುಖ್ಯಶಿಕ್ಷಕ

ಕರಾಟೆ ತರಬೇತುದಾರನಿಗೆ ಗೌರವಧನ ಮಂಜೂರು ಮಾಡಲು ₹5 ಸಾವಿರ ಲಂಚ ಕೇಳಿದ್ದ ಮುಶಿಗೇರಿ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್‌ ಶಾಲೆಯ ಮುಖ್ಯಶಿಕ್ಷಕ ಕಳಕಪ್ಪ ರಾಜೂರ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಕರಾಟೆ ತರಬೇತುದಾರ ಆನಂದ ವಿರುಪಾಕ್ಷಪ್ಪ ವಾಲ್ಮೀಕಿ 8 ಮತ್ತು 9ನೇ ತರಗತಿ ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿ ನೀಡಿದ್ದರು.ಗೌರವಧನ ₹9 ಸಾವಿರ ಮಂಜೂರು ಮಾಡಲು ಕೋರಿದ್ದರು. ಅದಕ್ಕಾಗಿ ಲಂಚ ಕೇಳಿದ್ದ ಕಳಕಪ್ಪ, ಸೋಮವಾರ ₹4 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. ಗದಗ …

Read More »

ದನ ಹಟ್ಟಿಗೆ ಆಕಸ್ಮಿಕ ಬೆಂಕಿ ,ಹಟ್ಟಿ ಸಂಪೂರ್ಣ ನಾಶ, ಹಟ್ಟದಲ್ಲಿಟ್ಟ ಅಡಿಕೆ ಹಾನಿ

ಕೈಕಂಬ: ಗುರುಪುರ ಹಳೆ ಪಂಚಾಯತ್‌ ಕಟ್ಟಡದ ಬಳಿಯ ಸ್ಟೆಲ್ಲಾ ಮಿಸ್ಕಿತ್‌ ಎಂಬವರ ದನ ಹಟ್ಟಿಗೆ ಮಧ್ಯಾಹ್ನ 3ರ ವೇಳೆಗೆ ಅಕಸ್ಮಿಕ ವಾಗಿ ಬೆಂಕಿ ತಗುಲಿ ದನ ಹಟ್ಟಿ ಹಾಗೂ ಹಟ್ಟದಲ್ಲಿದ್ದ ಅಡಿಕೆ ಯೂ ಸುಟ್ಟು ಹೋಗಿ ನಷ್ಟಸಂಭವಿಸಿದೆ.ಸ್ಟೆಲ್ಲಾ ಮಿಸ್ಕಿತ್‌ ಅವರ ದನದ ಹಟ್ಟಿಯಲ್ಲಿದ್ದ ದನಗಳನ್ನು ತೋಟದಲ್ಲಿ ಕಟ್ಟಿಹಾಕಿದ ಕಾರಣ ದನಗಳಿಗೆ ಯಾವುದೇ ತೊಂದರೆಯಾಗಿಲ್ಲ.ಮಧ್ಯಾಹ್ನ 3ಕ್ಕೆ ಅಕಸ್ಮಿಕವಾಗಿ ಬೆಂಕಿ ತಗುಲಿದ್ದು ಪರಿಸರದವರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ.ಅಗ್ನಿಶಾಮಕ ದಳ ದ ವಾಹನ ಅಲ್ಲಿಗೆ …

Read More »

ಒಡಿಶಾ ಮೂಲದ ಮೀನುಗಾರ ನಾಪತ್ತೆ

ಮಲ್ಪೆ ಬಂದರಿನ ಈಶದುರ್ಗಾ ಹೆಸರಿನ ಪರ್ಸಿನ್‌ ಬೋಟಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಒಡಿಶಾ ರಾಜ್ಯದ ಪುರಿ ಜಿಲ್ಲೆಯ ನಿವಾಸಿ ಬಿಸು ಬೆಹೆರಾ (35) ಎಂಬವರು ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಮಲ್ಪೆ ಹನುಮಾನ್‌ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು ಡಿ.5ರಿಂದ ಬೋಟಿನ ಕೆಲಸಕ್ಕೆ ಹೋಗಿರಲಿಲ್ಲ. ಡಿ. 8ರಂದು ತನ್ನ ಬಟ್ಟೆಬರೆ ಜತೆ ಹೋದವರು ವಾಪಸು ಬಂದಿಲ್ಲ. ಅತ್ತ ತನ್ನ ಊರಿಗೂ ಹೋಗದೆ ನಾಪತ್ತೆಯಾಗಿದ್ದಾರೆ ಎಂದು …

Read More »

ಅಸ್ಸಾಂನಲ್ಲಿ ರೈಲು ಡಿಕ್ಕಿಗೆ 7 ಆನೆ ಸಾವು: ವರದಿ ಕೇಳಿದ ಕೇಂದ್ರ ಸರ್ಕಾರ

ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಶನಿವಾರ ರೈಲು ಡಿಕ್ಕಿಯಾಗಿ 7 ಆನೆಗಳು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವರದಿ ಕೇಳಿದೆ ಎಂದು ಕೇಂದ್ರ ಸಚಿವ ಭೂಪೇಂದರ್ ಯಾದವ್ ಭಾನುವಾರ ಹೇಳಿದ್ದಾರೆಬಂಗಾಳದ ಸುಂದರ್‌ಬನ್ಸ್‌ನಲ್ಲಿ ಆನೆ ಮತ್ತು ರಾಷ್ಟ್ರೀಯ ಹುಲಿ ಯೋಜನೆಯ ಸಂರಕ್ಷಣಾ ಪ್ರಾಧಿಕಾರದ ಸಭೆ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಹಳಿಗಳಲ್ಲಿ ಆನೆಗಳ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಎಲ್ಲಾ ರಾಜ್ಯಗಳ ರೈಲ್ವೆ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಕೋರಲಾಗಿದೆ.ಲೋಕೋ ಪೈಲಟ್‌ಗಳು …

Read More »

ಸರಗೂರು ತಾಲೂಕು ಕಚೇರಿಗೆ ಬಾಂಬ್ ಬೆದರಿಕೆ: ಬೆಚ್ಚಿಬಿದ್ದ ಅಧಿಕಾರಿಗಳು, ಸಿಬ್ಬಂದಿಗಳು

ಮೈಸೂರು ಜಿಲ್ಲೆಯ ಸರಗೂರು ತಾಲೂಕು ಕಚೇರಿಗೆ RDX ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಲಾಗಿದೆ. ಬಾಂಬ್ ಬೆದರಿಕೆಯಿಂದ ತಾಲೂಕು ಕಚೇರಿ ಅಧಿಕಾರಿಗಳು, ಸಿಬ್ಬಂದಿಗಳು ಕಂಗಾಲಾಗಿದ್ದಾರೆ.ಸರಗೂರು ತಾಲೂಕು ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ.ಮಧ್ಯಾಹ್ನ 1 ಗಂಟೆಗೆ ತಾಲೂಕು ಕಚೇರಿಯಲ್ಲಿ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ದುಷ್ಕರ್ಮಿಗಳು ಬೆದರಿಕೆಯೊಡ್ಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ತಾಲೂಕು ಕಚೇರಿಗೆ ಪೊಲೀಸರು, ಬಾಂಬ್ ಪತ್ತೆ ದಳ, ಬಾಂಬ್ ನಿಷ್ರಿಯ ದಳ, ಶ್ವಾನ ದಳ ಆಗಮಿಸಿದ್ದು, ಕಚೇರಿಯಲ್ಲಿ ತಪಾಸಣೆ …

Read More »

ಅಕ್ರಮವಾಗಿ ದನಗಳ ಸಾಗಾಟ; ಇಬ್ಬರ ಬಂಧನ, ದನಗಳ ರಕ್ಷಣೆ

ಮಡಿಕೇರಿ: ಪಿರಿಯಾಪಟ್ಟಣದಿಂದ ಕೇರಳದ ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಜಾಲವನ್ನು ವೀರಾಜಪೇಟೆ ನಗರ ಠಾಣೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಕೇರಳದ ತಳಿಪರಂಬ ಮೂಲದ ಪಿ.ಪಿ. ಸಾದಿಕ್ (38) ಮತ್ತು ಅಬ್ದುಲ್ ಅಹಮ್ಮದ್ ತಂಙಳ್ (34) ಅವರನ್ನು ಬಂಧಿಸಿದ್ದಾರೆ.ಆರೋಪಿಗಳು ಪಿರಿಯಾಪಟ್ಟಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ರೈತರಿಂದ ದನ ಕರುಗಳನ್ನು ಖರೀದಿಸಿ ಕೇರಳಕ್ಕೆ ಸಾಗಿಸಲು ಸಂಚು ರೂಪಿಸಿದ್ದರು. ಪೊಲೀಸರ ಕಣ್ಣು ತಪ್ಪಿಸಲು ಲಾರಿಯಲ್ಲಿ ಹತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿಸಿ, ಅವುಗಳ ಮೇಲೆ ಆಲೂಗಡ್ಡೆ …

Read More »

ಸಿಲಿಕಾನ್‌ ಸಿಟಿಯಲ್ಲಿ ಅನುಮಾಸ್ಪದವಾಗಿ ಆಯುರ್ವೇದಿಕ್ ವೈದ್ಯೆ ಸಾವು..!

ಬೆಂಗಳೂರು: ಅನುಮಾಸ್ಪದವಾಗಿ ಆಯುರ್ವೇದಿಕ್ ವೈದ್ಯೆ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ತಲಘಟ್ಟಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಾಜರಹಳ್ಳಿ ನಿವಾಸಿ ಶೂಲಿ ಮಂಡೋಲಿ (32) ಸಾವನ್ನಪ್ಪಿದ ವೈದ್ಯೆಯಾಗಿದ್ದು,ಡಿಸೆಂಬರ್ 19ರಂದು ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಹೋಗಿದ್ದ ಮೃತಳು ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬಂದಿದ್ಲು.‌ ಆದ್ರೆ ಮರುದಿನ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.ಇನ್ನೂ ಈ ಸಾವಿಗೆ ಪತಿ ಅನೀರ್ ಬನ್ ವಿರುದ್ಧ ಮೃತಳ ಕುಟುಂಬಸ್ಥರಿಂದ ದೂರು ನೀಡಲಾಗಿದೆ.. ವರದಕ್ಷಿಣೆ ಕಿರುಕುಳ …

Read More »

ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ: ಆರು ಮಂದಿ ವಿರುದ್ಧ ಪ್ರಕರಣ

ಹೂವಿನಹಡಗಲಿ: ತಾಲ್ಲೂಕಿನ ಹರವಿ, ಲಿಂಗನಾಯಕನಹಳ್ಳಿ, ಕುರುವತ್ತಿ ಬಳಿಯ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆಗಳ ಮೇಲೆ ಶನಿವಾರ ದಾಳಿ ನಡೆಸಿದ ಅಧಿಕಾರಿಗಳು, 116 ಮೆಟ್ರಿಕ್ ಟನ್ ಮರಳು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಆರು ಜನರ ವಿರುದ್ಧ ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನದಿಯಲ್ಲಿನ ಮರಳನ್ನು ಕಬ್ಬಿಣದ ತೆಪ್ಪಗಳಲ್ಲಿ ತುಂಬಿ ದಡಕ್ಕೆ ಸಾಗಿಸಿ, ಅಲ್ಲಿಂದ ಲಾರಿ, ಟ್ರ್ಯಾಕ್ಟರ್ ಗಳ ಮೂಲಕ ಬೇರೆಡೆಗೆ ಕಳುಹಿಸಲಾಗುತಿತ್ತು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ …

Read More »

ಕೋಟೇಶ್ವರ ಎಸ್.ಎಲ್.ಆರ್.ಎಂ ಘಟಕಕ್ಕೆ ಆಕಸ್ಮಿಕ ಬೆಂಕಿ – ಲಕ್ಷಾಂತರ ರೂ. ನಷ್ಟ

ಉಡುಪಿ: ಕೋಟೇಶ್ವರ ಪಂಚಾಯತ್ ಗೆ ಸೇರಿರುವ ಎಸ್.ಎಲ್.ಆರ್.ಎಂ. ಒಣ ತ್ಯಾಜ್ಯ ಘಟಕಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ ಮೌಲ್ಯದ ಸ್ವತ್ತುಗಳು ಹಾನಿಯಾದ ಘಟನೆ ಭಾನುವಾರ ಮುಂಜಾನೆ ಕೋಟೇಶ್ವರದಲ್ಲಿ ಸಂಭವಿಸಿದೆ.ಪಂಚಾಯತ್ ಕೆಳಭಾಗದಲ್ಲಿ ವಾಣಿಜ್ಯ ಕಟ್ಟಡ ಇದ್ದು ಮೇಲ್ಭಾಗದಲ್ಲಿ ತ್ಯಾಜ್ಯ ಒಣ ಘಟಕ ಮಾಡಿದ್ದು ಅಲ್ಲಿ ಶೇಖರಣೆ ಮಾಡಿ ಇಟ್ಟಿದ್ದ ಒಣ ತ್ಯಾಜ್ಯಕ್ಕೆ ಆಕಸ್ಮಿಕ ಬೆಂಕಿ ತಗಲಿ ಒಣ ತ್ಯಾಜ್ಯಗಳು, ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ.ಅಲ್ಲದೆ ವಾಣಿಜ್ಯ ಸಂಕೀರ್ಣದ ಕಟ್ಟಡ ಮಹಡಿಗೆ ಹಾನಿಯಾಗುವ …

Read More »

ತುಂಗಾ ನದಿಯಲ್ಲಿ ಮುಳುಗಿ ಪಿಯು ಕಾಲೇಜು ವಿದ್ಯಾರ್ಥಿ ಮೃತ್ಯು

ತುಂಗಾ ನದಿಯಲ್ಲಿ ಮುಳುಗಿ ಪಿಯುಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಶಿವಮೊಗ್ಗ ತಾಲೂಕಿನ ಪಿಳ್ಳಂಗಿರಿ ಗ್ರಾಮದಲ್ಲಿ ನಡೆದಿದೆ.ಶಿವಮೊಗ್ಗ ನಗರದ ಕಾಮಕ್ಷಿ ಬೀದಿಯ ನಿವಾಸಿ ಪ್ರೇಮ್ ಕುಮಾರ್(17) ಮೃತ ಬಾಲಕ. ಪ್ರೇಮ್ ಕುಮಾರ್ ಸ್ನೇಹಿತರ ಜೊತೆ ದೇವಾಲಯ ತೆರಳಿದ ವೇಳೆ ಈಜಲು ನದಿಗೆ ಇಳಿದ್ದಾಗ ಅವಘಡ ಸಂಭವಿಸಿದೆ.ಡಿವಿಎಸ್ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಪ್ರೇಮ್ ಕುಮಾರ್ ಸ್ನೇಹಿತ ಜೊತೆ ಪಿಳ್ಳಂಗಿರಿಗೆ ತೆರಳಿದಾಗ ತುಂಗ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತದೇಹ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. …

Read More »