ಧಾರವಾಡದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಪಶು ಆಸ್ಪತ್ರೆ ಮುಂದೇನೆ ಮರಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಕಳೆದ ರಾತ್ರಿ ಈ ಒಂದು ಘಟನೆ ಸಂಭವಿಸಿದೆ.ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹನುಮಂತ (36) ಎನ್ನುವ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾನೆ.ಆಸ್ಪತ್ರೆ ಮುಂದೆ ಮರಕೆ ನೇಣು ಹಾಕಿಕೊಂಡು ಹನುಮಂತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹನುಮಂತ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ಇದೀಗ ತಿಳಿದು …
Read More »ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಮಂಡ್ಯ: ಮನೆಯಲ್ಲಿ ಯಾರೂ ಇಲ್ಲದ ವೇಳೆ ದುಷ್ಕರ್ಮಿಗಳು ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯದ ಪಾಂಡವಪುರ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪೂಜಾರಿ ಕೃಷ್ಣ ಎಂಬುವರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಕ್ರೌರ್ಯ ಮರೆದಿದ್ದಾರೆ.ಕೃಷ್ಣ ಅವರು ಜಮೀನಿಗೆ ಹೋದ ಸಂದರ್ಭದಲ್ಲಿ, ಮನೆಯಲ್ಲಿ ಯಾರೂ ಇಲ್ಲದ್ದನ್ನು ಮನಗಂಡ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಈ ಘಟನೆಯಿಂದ ಮನೆಯಲ್ಲಿದ್ದ ಹಣ, ಚಿನ್ನ ಸೇರಿ ಹಲವು ವಸ್ತುಗಳು ನಾಶವಾಗಿದೆ. …
Read More »ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ತಂದೆ ಮಗನಿಗೆ ಹಲ್ಲೆ: ಪ್ರಕರಣ ದಾಖಲು
ಮಣಿಪಾಲ: ಜಾಗದ ವಿಚಾರದ ಧ್ವೇಷದಲ್ಲಿ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬಂದ ತಂದೆ ಮಗನಿಗೆ ಆರೋಪಿಗಳ ತಂಡ ಹಲ್ಲೆ ನಡೆಸಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನ.11ರಂದು ಬೊಮ್ಮರಬೆಟ್ಟು ಗ್ರಾಮದ ಹುಸೇನ್ ಶೇಖ್ ಅಹ್ಮದ್ ಹಾಗೂ ಆರೋಪಿಗಳಾದ ಮೊಹಮ್ಮದ್ ರಫೀಕ್, ಮೊಹಮ್ಮದ್ ಅಶ್ರಫ್, ಮೊಹಮ್ಮದ್ ಸಾಜೀಕ್ ಎಂಬವರಿಗೆ ಜಾಗದ ವಿಚಾರದಲ್ಲಿ ಬೊಮ್ಮರಬೆಟ್ಟು ಗ್ರಾಮದಲ್ಲಿ ಗಲಾಟೆ ನಡೆದಿತ್ತು.ನಂತರ ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಹುಸೇನ್ ಶೇಖ್ ಹಾಗೂ ಅವರ ಮಗ ಹೋಗಿದ್ದು, …
Read More »ಬಾಗಲಕೋಟೆ | ಬಾಲಕನ ಮೇಲೆ ಹಲ್ಲೆ; ನಾಲ್ವರ ಸೆರೆ
ಬುದ್ಧಿಮಾಂದ್ಯ ಬಾಲಕನ ಮೇಲೆ ಹಲ್ಲೆ ನಡೆಸಿದ್ದ ಶಾಲೆ ಮುಖ್ಯಸ್ಥ, ಶಿಕ್ಷಕ ಅಕ್ಷಯ ಇಂದೋಲ್ಕರ್ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.ಅಕ್ಷಯ ಇಂದೋಲ್ಕರ್, ಅವರ ಪತ್ನಿ ಮಾಲಿನಿ, ರವಿ ಮತ್ತು ವಿಶಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಸ್ಪಿ ಗಜಾನನ ಸುತಾರ್ ನೇತೃತ್ವದ ತಂಡ ಸ್ಥಳದ ಮಹಜರು ನಡೆಸಿದ್ದು, ಹಲ್ಲೆಗೆ ಬಳಸಿದ್ದ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿತು.ಶಾಲೆಯಲ್ಲಿದ್ದ 28 ಮಕ್ಕಳನ್ನು ಪಾಲಕರ ವಶಕ್ಕೆ ಒಪ್ಪಿಸಲು ಕ್ರಮ ವಹಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ …
Read More »ಚೀಟಿ ಹಣ ಕೊಡಡಿದಕ್ಕೆ ಸೇತುವೆ ಮೇಲಿಂದ ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ!
ಚೀಟಿ ಹಣ ಕೊಡಡಿದಕ್ಕೆ ಸೇತುವೆ ಮೇಲಿಂದ ಸೆಲ್ಫಿ ವಿಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆಗೆ ಯತ್ನ!20 ಲಕ್ಷ ಚೀಟಿ ಹಣ ಕೊಡದೆ ಸಂಬಂಧೀಯೊಬ್ಬ ಸತಾಯಿಸುತ್ತಿದ್ದ.ಸೋದರ ಸಂಬಂಧಿ 5 ರಿಂದ 6 ತಿಂಗಳಿಂದ ಸತಾಯಿಸುತ್ತಿದ್ದ. ಈ ವೇಳೆ ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಅಪಾಯದಿಂದ ಇನಾಯತ್ ಪಾರಾಗಿದ್ದಾನೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಜಮ್ಮು-ಕಾಶ್ಮೀರದ ಮನೆಯಲ್ಲಿ ಆಹಾರ ತೆಗೆದುಕೊಂಡು ಹೋದ ಉಗ್ರರಿಗಾಗಿ ಶೋಧ
ಜಮ್ಮು-ಕಾಶ್ಮೀರದ ಉಧಮ್ಪುರ ಜಿಲ್ಲೆಯಲ್ಲಿ ಭಯೋತ್ಪಾದಕರು ಮನೆಯೊಂದರಿಂದ ಆಹಾರವನ್ನು ತೆಗೆದುಕೊಂಡು ಹೋಗಿರುವುದಾಗಿ ಮಾಹಿತಿ ದೊರೆತ ಕಾರಣ ಭದ್ರತಾ ಪಡೆಗಳು ಶೋಧ ಕಾರ್ಯ ಆರಂಭಿಸಿವೆ.ಮಜಾಲ್ತಾ ಪ್ರದೇಶದಲ್ಲಿನ ಚೋರ್ ಮೋಟು ಮತ್ತು ಅದರ ಸಮೀಪವಿರುವ ಅರಣ್ಯ ಗ್ರಾಮಗಳಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆಯವರು ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.ಇಬ್ಬರು ಭಯೋತ್ಪಾದಕರು ಶನಿವಾರ ಸಂಜೆ ಮನೆಯೊಂದಕ್ಕೆ ಬಂದು ಆಹಾರವಸ್ತುಗಳನ್ನು ಕೊಂಡುಹೋಗಿದ್ದಾರೆ ಎಂದು ಗುಪ್ತಚರ ಮಾಹಿತಿ ಬಂದಿತ್ತು. ಮಜಾಲ್ತಾ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿ ಮತ್ತು …
Read More »ಓಮ್ನಿ ಕಾರಿನ ಮೇಲೆ ಬಿದ್ದ ಲಾರಿ
ಲಾರಿಯೊಂದು ಓಮ್ಮಿ ಮೇಲೆ ಪಲ್ಟಿಯಾಗಿ ಲಾರಿ ಚಾಲಕನಿಗೆ ಗಂಭೀರ ಗಾಯಗಳಾದ ಘಟನೆ ಗೂನಡ್ಕ ಬಳಿ ಡಿ.21ರಂದು ಸಂಭವಿಸಿದೆ.ಮಡಿಕೇರಿ ಕಡೆಯಿಂದ ಪೈಪ್ ಹೇರಿಕೊಂಡು ಸುಳ್ಯ ಕಡೆಗೆ ಬರುತ್ತಿದ್ದ ಲಾರಿ ಸುಳ್ಯದಿಂದ ಕಲ್ಲುಗುಂಡಿ ಕಡೆಗೆ ಹೋಗುತ್ತಿದ್ದ ಓಮ್ಮಿನಿ ಕಾರಿಗೆ ಗುದ್ದಿ ಪಲ್ಟಿಯಾಯಿತು.ಲಾರಿಯಡಿಗೆ ಓಮ್ಮಿ ಸಿಲುಕಿದ್ದು, ಓಮ್ಮಿಯಲ್ಲಿದ್ದ ಚಾಲಕ ಪಕ್ಕದ ಅಂಗಡಿಯಲ್ಲಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಜೆಸಿಬಿ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾಗಿದ್ದು, ಲಾರಿ ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಅಂಬ್ಯುಲೆನ್ಸ್ ಮೂಲಕ ಸುಳ್ಯ …
Read More »ಭೀಕರ ಅಪಘಾತ; ಇಬ್ಬರು ಸ್ಥಳದಲ್ಲಿಯೇ ಸಾವು!
ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿ 13 ರ ಸುಖಸಾಗರ್ ಹೊಟೇಲ್ ಬಳಿ ಬೈಕ್ ಮೇಲೆ ಲಾರಿ ಹರಿದ ಪರಿಣಾಮ, ಇಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ.ಮೃತರನ್ನು ಮಾಡನಾಯಕನಹಳ್ಳಿ ನಿವಾಸಿಗಳಾದ ಕೆಸಿನಾಗರಾಜ್ 53 ಮತ್ತು ಏಕಾಂತಪ್ಪ@ಕಾಂತರಾಜ್ ಎಂದು ಗುರುತಿಸಿದೆ.ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದು,ಲಾರಿ ಚಾಲಕ ಪರಾರಿಯಾಗಿದ್ದು, ಪತ್ತೆ ಕಾರ್ಯ ಆರಂಭಿಸಿದ್ದಾರೆ.
Read More »ಅಂಗಡಿ ಬಾಗಿಲು ಮುರಿದು ಸರಣಿ ಕಳ್ಳತನ, ಮುಖ ಕಾಣಿಸಿದಂತೆ ಹೆಲ್ಮೆಟ್
ಕನಕಪುರ: ತುಂಗಣಿ ಮತ್ತು ಶಿವನಹಳ್ಳಿ ನಡುವಿನ ಬೈಪಾಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಹಲವು ಚಿಲ್ಲರೆ ಅಂಗಡಿಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಲಾಗಿದೆ. ಬೈಪಾಸ್ ರಸ್ತೆಯ ತುಂಗಣಿ ಬಳಿ ಮೂರು ಅಂಗಡಿ, ಎಪಿಎಂಸಿ ಮಾರುಕಟ್ಟೆ, ಹೌಸಿಂಗ್ ಬೋರ್ಡ್ ಹಾಗೂ ಶಿವನಹಳ್ಳಿ ಬಳಿ ತಲಾ ಒಂದೊಂದು ಅಂಗಡಿ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆಅಂಗಡಿಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗದಂತೆ ಮುಖ ಕಾಣದಂತೆ ಹೆಲ್ಮೆಟ್ ಧರಿಸಿದ್ದಾರೆ. ಸಿಸಿಟಿವಿಗಳನ್ನು ಬಟ್ಟೆಯಿಂದ ಮುಚ್ಚಲು ಪ್ರಯತ್ನಿಸಿದ್ದಾರೆ. ಇವೆಲ್ಲವೂ …
Read More »ಬಂಟ್ವಾಳ: ದಿನಪತ್ರಿಕೆ-ಹಾಲು ವಿತರಿಸುತ್ತಿದ್ದ ವ್ಯಕ್ತಿ ಆತ್ಮಹತ್ಯೆ
ಬಂಟ್ವಾಳ ಪರಿಸರದಲ್ಲಿ ಹಲವು ವರ್ಷ ಗಳಿಂದ ದಿನ ಪತ್ರಿಕೆಗಳು ಹಾಗೂ ಹಾಲನ್ನು ನಿತ್ಯ ಮನೆ ಮನೆಗಳಿಗೆ ತಲುಪಿಸುತ್ತಿದ್ದ ಬಡ್ಡಕಟ್ಟೆ ಬಳಿಯ ದೈವಗುಡ್ಡೆ ನಿವಾಸಿ ಪ್ರಶಾಂತ್ ಬಾಳಿಗಾ (54) ಅವರು ಶನಿವಾರ ಬೆಳಗ್ಗೆ ಬಂಟ್ವಾಳ ಬೈಪಾಸ್ ಬಳಿಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶನಿವಾರ ಮುಂಜಾನೆಯೂ 4ರ ಸುಮಾರಿಗೆ ಮನೆಯಿಂದ ಹೊರಟು ಸಾಕಷ್ಟು ವಿತರಣೆಯ ಕಾರ್ಯ ಮುಗಿಸಿದ್ದರು. ಬೆಳಗ್ಗೆ 8 ಗಂಟೆ ವರೆಗೂ ದಿನಪತ್ರಿಕೆಗಳು, ಹಾಲಿನ ಪ್ಯಾಕೆಟ್ ತುಂಬಿದ್ದ ಅವರ ಸ್ಕೂಟರ್ ಬಂಟ್ವಾಳ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





