ಸಂಗಮ ವನ್ಯಜೀವಿ ವಲಯದಲ್ಲಿರುವ ಉಯ್ಯಂಬಳ್ಳಿ ಗ್ರಾಮದ ಜಮೀನಿನಲ್ಲಿ 6 ವರ್ಷಗಳ ಹಿಂದೆ ವಿದ್ಯುತ್ ಪ್ರವಹಿಸಿ ಕಾಡಾನೆ ಮರಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಜಮೀನು ಮಾಲೀಕ ಶಿವಲಿಂಗೇಗೌಡ ಎಂಬುವರಿಗೆ ₹5 ಸಾವಿರ ದಂಡ ವಿಧಿಸಿದೆ.ಆರೋಪಿಗೆ ಶಿಕ್ಷೆ ಕೊಡಿಸುವಲ್ಲಿ ಠಾಣೆಯ ಕೋರ್ಟ್ ಸಿಬ್ಬಂದಿ ಮೆಹಬೂಬ್ ಸಾಬ್ ಮುಲ್ಲಾ ಹಾಗೂ ಇತರ ಅಧಿಕಾರಿಗಳು ಶ್ರಮಿಸಿದ್ದರು.
Read More »ಬೈಂದೂರು | ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ
ವಿಪರೀತ ಮದ್ಯಪಾನ ಮಾಡುವ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಡುವರಿ ಗ್ರಾಮದ ದೊಂಬೆಯ ನರಸಿಂಹ ಪೂಜಾರಿ(62) ಎಂಬವರು ಡಿ.7ರಂದು ಪಡುವರಿ ಗ್ರಾಮದ ಚೌಕಿಮನೆ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಸಿಗದ ಸರ್ಕಾರಿ ಕೆಲಸ – ಮನನೊಂದು ಯುವಕ ಆತ್ಮಹತ್ಯೆಗೆ ಶರಣು.!
ಅಂಜಿನಪ್ಪ ಪದವಿ ಮುಗಿಸಿದ ನಂತರದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ದಿನರಾತ್ರಿ ಓದುತ್ತಿದ್ದ. ದಿನನಿತ್ಯ ಹಗಲು ರಾತ್ರಿ ಎನ್ನದೆ ಓದುತ್ತಿದ್ದ.. ಆದರೆ ಎಷ್ಟೇ ಪ್ರಯತ್ನಿಸಿದರೂ ಕೆಲಸ ಸಿಗದಿರುವುದು ಅವನನ್ನು ತುಂಬಾ ಖಿನ್ನನಾಗಿಸಿತ್ತು.ಬಾಗಿಲು ತಟ್ಟಿದಾಗ ಕೊಂಚ ಭಯಗೊಂಡು ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ಕೂಡಲೇ ಹೇಗೋ ಕಷ್ಟಪಟ್ಟು ಬಾಗಿಲು ತೆಗೆದು ಒಳಗೆ ಹೋಗಿದ್ದಾರೆ ಆದರೆ ಅಷ್ಟರಲ್ಲಿ ಅಂಜಿನಪ್ಪ ಮೃತಪಟ್ಟಿದ್ದ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, …
Read More »ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!
ಹುಟ್ಟುಹಬ್ಬದ ಸಂಭ್ರಮದಲ್ಲೇ ಹೆರಿಗೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಗರ್ಭಿಣಿಯೊಬ್ಬರು ಮಾರ್ಗ ಮಧ್ಯೆಯೇ ಅಕಾಲಿಕವಾಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಜಗಲ್ಬೇಟ್ನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಆಂಬ್ಯುಲೆನ್ಸ್ನಲ್ಲಿ ರೋಹಿಣಿಯನ್ನು ಧಾರವಾಡಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ, ಹಳಿಯಾಳ ಪಟ್ಟಣ ತಲುಪುವಷ್ಟರಲ್ಲಿ ರೋಹಿಣಿಯ ಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ತುರ್ತು ಪರಿಸ್ಥಿತಿಯನ್ನು ಅರಿತ ಕುಟುಂಬಸ್ಥರು, ಆಕೆಯನ್ನು ಹಳಿಯಾಳ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದರು. ಆದರೆ, ಹಳಿಯಾಳದ ವೈದ್ಯರು ಪರಿಶೀಲನೆ ನಡೆಸಿದಾಗ ರೋಹಿಣಿ ಆಗಲೇ ಸಾವನ್ನಪ್ಪಿರುವುದು ದೃಢಪಟ್ಟಿದೆ.
Read More »ಬೆಂಗ್ಳೂರು, ದಿಲ್ಲಿ ಪೊಲೀಸರಿಗೆ ಬೆದರಿಕೆ: ಆರೋಪಿ ಬಂಧನ
ನವದೆಹಲಿ: ಬೆಂಗಳೂರು ಸೇರಿ ದೇಶದ ವಿವಿಧ ನಗರಗಳ ಪೊಲೀಸರಿಗೆ ಬೆದರಿಕೆ ಇಮೇಲ್ಗಳನ್ನು ಕಳಿಸುತ್ತಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಭಯ್ ಎಂದು ಗುರುತಿಸಲಾಗಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವುದಾಗಿ ಸುಳ್ಳು ಹೇಳಿ ದೆಹಲಿ, ಬೆಂಗಳೂರು, ರಾಜಸ್ಥಾನದ ಹಲವು ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಭಯ್ ಸಂದೇಶಗಳನ್ನು ಕಳುಹಿಸುತ್ತಿದ್ದ.ಅಲ್ಲದೆ, ತನಿಖಾಧಿಕಾರಿಗಳನ್ನು ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ಮತ್ತೋರ್ವ ವ್ಯಕ್ತಿಯ ಮೊಬೈಲ್ ಸಂಖ್ಯೆಯನ್ನು ಇಮೇಲ್ನಲ್ಲಿ ಉಲ್ಲೇಖಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
Read More »ಮಣಿಪಾಲ ಸಮೀಪದ ಮಂಚಿಯಲ್ಲಿ ಕೋಳಿ ಅಂಕಕ್ಕೆ ದಾಳಿ- 8 ಮಂದಿ ವಶಕ್ಕೆ
ಡಿ.7ರಂದು ಮಧ್ಯಾಹ್ನ ಕೋಳಿ ಅಂಕ ನಡೆಸುತ್ತಿದ್ದ ಎಂಟು ಮಂದಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.ಇವರಿಂದ 6500ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ 22100ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಹುಲಸೂರ | ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಸುಟ್ಟು ಹೋದ 6 ಎಕರೆ ಕಬ್ಬು
ತಾಲ್ಲೂಕಿನ ಬೇಲೂರ ಗ್ರಾಮದಲ್ಲಿ ಮಂಗಳವಾರ ರೈತ ಕಾಶಿನಾಥ್ ಬಿರಾದಾರ ಎಂಬುವರಿಗೆ ಸೇರಿದ ಹೊಲದಲ್ಲಿ ಬೆಂಕಿ ಹೊತ್ತಿಕೊಂಡು 6 ಎಕರೆ ಕಬ್ಬು ಸುಟ್ಟು ಹೋಗಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ತಗುಲಿ ಈ ಘಟನೆ ಸಂಭವಿಸಿದೆ. ಗ್ರಾಮದ ಸರ್ವೇ ನಂಬರ್ 258 ರ 6 ಎಕರೆ ಜಮೀನಿನಲ್ಲಿ 14 ಅಡಿಗಳಷ್ಟು ಎತ್ತರ ಕಬ್ಬು ಬೆಳೆದಿತ್ತು.ಬೆಂಕಿ ತಗುಲಿದ ವಿಷಯ ತಿಳಿದು ಬಸವಕಲ್ಯಾಣ ಅಗ್ನಿಶಾಮಕ ಠಾಣೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಆದರೆ, ಅಷ್ಟೊತ್ತಿಗೆ ಕಬ್ಬು ಸುಟ್ಟು …
Read More »ಗಾಂಜಾ ಸೇವಿಸಿದ ಯುವಕನ ಬಂಧನ
ಮಂಗಳೂರು: ಕುಡುಪು ಗ್ರಾಮದ ಪಂಜಿರೇಲು ರಸ್ತೆ ಬಳಿ ಮಾದಕ ಪದಾರ್ಥ ಸೇವನೆ ಮಾಡಿದಂತೆ ಕಂಡು ಬಂದ ಕೇರಳದ ಕೊಟ್ಟಾಯಂನ ಪುಳಿಯನ್ನೂರು ಸ್ಟೀವ್ ಸ್ಟೀಫನ್ (24) ಎಂಬಾತನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ.ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
Read More »ವಿಜಯ್ ರ್ಯಾಲಿಗೆ ಪಿಸ್ತೂಲ್ ಜತೆ ಪ್ರವೇಶಿಸಲು ಯತ್ನ: ವ್ಯಕ್ತಿ ವಶ
ಪುದುಚೇರಿ: ನಟ ವಿಜಯ್ ನೇತೃತ್ವದ ಟಿವಿಕೆ ಪಕ್ಷದ ರ್ಯಾಲಿಗೆ ಪಿಸ್ತೂಲ್ ಹಿಡಿದು ಪ್ರವೇಶಿಸಲು ಯತ್ನಿಸಿದ ತಮಿಳುನಾಡಿನ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ವಶಪಡೆದಿದ್ದಾರೆ. ಪುದುಚೇರಿಯ ಉಪ್ಪಳಂನಲ್ಲಿರುವ ಮೈದಾನವೊಂದರಲ್ಲಿ ರ್ಯಾಲಿ ಆಯೋಜಿಸಲಾಗಿತ್ತು.ಈ ವೇಳೆ ಮೈದಾನದ ಒಳಪ್ರವೇಶಿಸುತ್ತಿದ್ದ ಪ್ರತಿಯೊಬ್ಬರನ್ನು ತಪಾಸಣೆ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಬಳಿ ಪಿಸ್ತೂಲ್ ಪತ್ತೆಯಾಗಿದೆ. ಎಡ ಸೊಂಟಕ್ಕೆ ಪಿಸ್ತೂಲ್ ಸಿಕ್ಕಿಸಿಕೊಂಡಿದ್ದ ಆರೋಪಿಯು ತಮಿಳುನಾಡಿನ ಶಿವಗಂಗಾ ಮೂಲದವನಾಗಿದ್ದು, ಪಿಸ್ತೂಲ್ಗೆ ಪರವಾನಗಿ ಇದೆ ಎಂದು ವಾದಿಸಿದ್ದಾನೆ. ಅಲ್ಲದೆ ತಾನೊಬ್ಬ ಭದ್ರತಾ ಸಿಬ್ಬಂದಿ …
Read More »ತೆಂಗಿನ ಮರದಿಂದ ಬಿದ್ದು ಕೃಷಿಕ ಸಾವು
ಸಿದ್ದಾಪುರ: ತೆಂಗಿನ ಮರವೇರಿ ಕಾಯಿ ಕೊಯ್ಯುತ್ತಿದ್ದ ವೃದ್ಧ ಕೃಷಿಕರೊಬ್ಬರು ಮರದಿಂದ ಬಿದ್ದು ಮೃತಪಟ್ಟಿದ್ದಾರೆ.ಸಿದ್ದಾಪುರ ಗ್ರಾಮದ ಮೇಲ್ಕಡ್ರಿ ರವೀಂದ್ರನಾಥ ಶೆಟ್ಟಿ (70) ಮೃತಪಟ್ಟವರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರು ಡಿ. 9ರಂದು ತಮ್ಮ ಮನೆಯ ತೆಂಗಿನಮರದಿಂದ ತೆಂಗಿನ ಕಾಯಿ ಕೊಯ್ಯುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡರು.ತತ್ಕ್ಷಣ ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





