ಬೆಂಗಳೂರು: ನಟ ದುನಿಯಾ ವಿಜಯ್ ಅವರ ಪತ್ನಿ ಕೀರ್ತಿಗೌಡ ಮೇಲೆ, ಮೊದಲ ಪತ್ನಿ ನಾಗರತ್ನ ಹಲ್ಲೆ ಮಾಡಿದ್ದರು ಎನ್ನಲಾದ ವಿಡಿಯೋವೊಂದು ಮಾಧ್ಯಮಗಳಿಗೆ ಲಭ್ಯವಾಗಿದೆ. ಇದು ದುನಿಯಾ ವಿಜಿ ಜೈಲಿನಲ್ಲಿದ್ದ ವೇಳೆ ನಡೆದಿರುವ ಗಲಾಟೆ ಎನ್ನಲಾಗುತ್ತಿದೆ. ಕೈಯಲ್ಲಿ ಕಬ್ಬಿಣದ ರೀತಿಯ ಆಯುಧ ಹಿಡಿದು ಏಕಾಏಕಿ ದುನಿಯಾ ವಿಜಿಯವರ ಹೊಸಕೆರೆಹಳ್ಳಿ ಮನೆಯೊಳಗೆ ನುಗ್ಗಿದ ನಾಗರತ್ನ, ಕೀರ್ತಿಗೌಡ ಮೇಲೆ ಮನಸೋಯಿಚ್ಛೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕೀರ್ತಿ ಗೌಡ ಹಾಗೂ ನಾಗರತ್ನ ಪರಸ್ಪರ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು. ಕೀರ್ತಿಗೌಡ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಅಂತಾ ನಾಗರತ್ನ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಕೀರ್ತಿಗೌಡ ಕೂಡ ದೂರು ದಾಖಲಿಸಿದ್ದರು. ಇನ್ನು ಸಿಸಿಟಿವಿಯಲ್ಲಿ ಸೆರೆಯಾಗಿತ್ತು ಎನ್ನಲಾದ ಹಲ್ಲೆ ದೃಶ್ಯಾವಳಿ ಈಗ ಮಾಧ್ಯಮಗಳಿಗೆ ದೊರೆತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





