Breaking News

BigTv News

ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ- ಮಗು ಮೃತ್ಯು

ಗ್ಯಾಸ್ ಗೀಸರ್ ಸೋರಿಕೆಯಿಂದ ತಾಯಿ – ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ನಡೆದಿದೆ. ಮೃತರನ್ನು ಚಾಂದಿನಿ (26), ಯುವಿ (4) ಎಂದು ಗುರುತಿಸಲಾಗಿದೆ. ಸೋಮವಾರ (ಡಿ.8) ಮಧ್ಯಾಹ್ನ ಸ್ನಾನಕ್ಕೆಂದು ತೆರಳಿದ್ದಾಗ ಗ್ಯಾಸ್ ಸೋರಿಕೆಯಾಗಿ ಅಸ್ವಸ್ಥರಾಗಿದ್ದರು.ಗ್ಯಾಸ್ ಗೀಸರ್ ಸೋರಿಕೆಯಿಂದ ದುರ್ಘಟನೆ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಸಂಬಂಧ ಗೋವಿಂದ ರಾಜ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ‌

Read More »

ಮಾಲವಿ ಹಾಲು ಉತ್ಪಾದಕರ ಸಂಘ: ಹುಸೇನ್, ಪತ್ರೆಪ್ಪ ಅವಿರೋಧ ಆಯ್ಕೆ

ಮಾಲವಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿ ನಂದಿಹಳ್ಳಿ ಹುಸೇನ್ ಸಾಹೇಬ್, ಉಪಾಧ್ಯಕ್ಷರಾಗಿ ಬಣವಿಕಲ್ಲು ಪತ್ರೆಪ್ಪ ಅವಿರೋಧ ಆಯ್ಕೆಯಾದರು.ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸೋಮವಾರ ನಡೆದ ಚುನಾವಣೆಯಲ್ಲಿ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.ಮುಖಂಡರಾದ ಹ್ಯಾಳ್ಯಾದ ಚನ್ನಬಸಪ್ಪ, ನರೇಗಲ್ ಮಲ್ಲಿಕಾರ್ಜುನ, ಚಿನಿವಾಲರ ಈಶಪ್ಪ, ರೆಡ್ಡಿ ಸುರೇಶ್, ಸಂಘದ ನಿಕಟ ಪೂರ್ವ ಅಧ್ಯಕ್ಷ ಜೆ.ಎಸ್.ಕೊಟ್ರೇಶ್, ನಿರ್ದೇಶಕರಾದ ಎಸ್.ಎಂ.ವೀರಮ್ಮ, ಕೆ.ಪಿ.ನೂರ್‌ಜಾನ್, ಕಾಳಿ ರೇವಣಸಿದ್ದಪ್ಪ, ಡೊಕ್ಕಿ ಶಿವಪ್ಪ, ಹಣಗಿ ಚಂದ್ರಪ್ಪ, ಕೆ.ಕೋಟೆಪ್ಪ, ಬೆಳಗಿ …

Read More »

ಬೆಂಕಿಯಿಂದ ಕಾಪಾಡಲು ಹೋಗಿ ಬೆಂಕಿಯಲ್ಲಿ ಬೆಂದು ಹೋದ ವ್ಯಕ್ತಿ!

ಉತ್ತರ ಪ್ರದೇಶ ಗಾಜಿಯಾಬಾದ್ ಇವರ ಮೂಲ. ರಜೆಯು ದುರಂತದಲ್ಲಿ ಕೊನೆಗೊಂಡಿತ್ತು. ವಿನೋದ್ ಕುಮಾರ್ ತಮ್ಮ ಪತ್ನಿಯನ್ನು ಬೆಂಕಿಯಿಂದ ರಕ್ಷಿಸಿ ಬಳಿಕ ಮೂವರು ನಾದಿನಿಯರನ್ನು ರಕ್ಷಿಸಲು ಹೋಗಿ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಕುಟುಂಬವು ಡಿಸೆಂಬರ್ 4 ರಂದು ಗೋವಾಕ್ಕೆ ಆಗಮಿಸಿ ಬಾಗಾದಲ್ಲಿರುವ ಹೋಟೆಲ್‌ನಲ್ಲಿ ತಂಗಿತ್ತು.ಶನಿವಾರ ರಾತ್ರಿ ಅವರು ನೈಟ್‌ಕ್ಲಬ್‌ಗೆ ಭೇಟಿ ನೀಡಿದ್ದರು. ಬೆಂಕಿ ಹೊತ್ತಿಕೊಂಡಾಗ ಕೇವಲ 15 ನಿಮಿಷಗಳ ಕಾಲ ಒಳಗೆ ಇದ್ದರು. ಬೆಂಕಿ ಹರಡುತ್ತಿದ್ದಂತೆ, ವಿನೋದ್ ಕುಮಾರ್ ತನ್ನ ಪತ್ನಿ …

Read More »

ಬೆಂಗಳೂರು ಜನರಿಗೆ ಹೊಟ್ಟೆತುಂಬಾ ಬಿರಿಯಾನಿ ಬಾಡೂಟ ಕೊಟ್ಟ ಕುಟುಂಬ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ!

ತೀವ್ರ ಸಾಲದ ಸುಳಿಗೆ ಸಿಲುಕಿದ್ದ ಒಂದೇ ಕುಟುಂಬದ ಮೂವರು ಸದಸ್ಯರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಬೆಂಗಳೂರಿನ ಕೋರಮಂಗಲ ಸಮೀಪದ ತಾವರೇಕೆರೆ 2ನೇ ಕ್ರಾಸ್‌ನಲ್ಲಿ ಸೋಮವಾರ ವರದಿಯಾಗಿದೆ. ಅಜ್ಜಿ, ಮಗಳು ಮತ್ತು ಮೊಮ್ಮಗ ಹೀಗೆ ಮೂವರು ಏಕಕಾಲಕ್ಕೆ ಸಾವಿಗೆ ಶರಣಾಗಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.ಮೃತರನ್ನು ಮಾದಮ್ಮ (68), ಆಕೆಯ ಮಗಳು ಸುಧಾ (38), ಮತ್ತು ಮೊಮ್ಮಗ ಮೋನಿಷ್ (14) ಎಂದು ಗುರುತಿಸಲಾಗಿದೆ. ಬೆಳಗ್ಗೆ 9 ಗಂಟೆಯ …

Read More »

ಭಾರತ-ದಕ್ಷಿಣ ಆಫ್ರಿಕಾ ಟಿ20 ಟಿಕೆಟ್‌ ಅಕ್ರಮ ಮಾರಾಟ: ನಾಲ್ವರ ಸೆರೆ

ಭುವನೇಶ್ವರ: ಒಡಿಶಾದ ಕಟಕ್‌ನ ಬಾರಬತಿ ಮೈದಾನದಲ್ಲಿ ಮಂಗಳವಾರ ನಡೆಯಲಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಟಿ20 ಕ್ರಿಕೆಟ್‌ ಪಂದ್ಯದ ಟಿಕೆಟ್‌ಗಳನ್ನು ಅಕ್ರಮವಾಗಿ (ಬ್ಲಾಕ್) ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಡಾನಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದ್ದ 12 ಟಿಕೆಟ್‌ಗಳನ್ನು, ದರ್ಗಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.ಘಟನೆಗೆ ಸಂಬಂಧಿಸಿದಂತೆ 2 ಪೊಲೀಸ್ ಠಾಣೆಗಳಲ್ಲಿ 4 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು …

Read More »

ಬೋಳ ಗ್ರಾಮದಲ್ಲಿ ಕಳ್ಳರ ಕೈಚಳಕ: ಇನ್ವರ್ಟರ್ ಬ್ಯಾಟರಿ ಕಳವು

ಕಾರ್ಕಳ: ಬೋಳ ಗ್ರಾಮದ ಬೋಳಕೋಡಿ ಕುದುರೆಬೆಟ್ಟು ಎಂಬಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಮನೆಯ ಹಿಂಬಾಗಿಲು ಒಡೆದು ಪ್ರವೇಶಿಸಿ ಇನ್ವರ್ಟರ್ ಬ್ಯಾಟರಿ ಮತ್ತು ಸ್ಟೀಲ್ ಟ್ಯಾಪ್ ಕಳವು ಮಾಡಿದ್ದಾರೆ. ಕಳವಾದ ಸೊತ್ತಿನ ಅಂದಾಜು 12,000 ರೂ. ಎಂದು ಅಂದಾಜಿಸಲಾಗಿದೆ.ಸೆಲಿನ್ ಡಿಸೋಜ ಈ ಮನೆಯಲ್ಲಿ ವಾಸವಾಗಿದ್ದು, ಅನಾರೋಗ್ಯದ ಕಾರಣ ನ.30ರಂದು ಮಂಗಳೂರಿನ ಪುತ್ರಿ ಮನೆಗೆ ತೆರಳಿದ್ದರು. ಡಿ.7ರಂದು ಮನೆಗೆ ಆಗಮಿಸಿ ಪರಿಶೀಲಿಸಿದಾಗ ಮನೆಯ ಹಿಂಬಾಗಿಲು ಒಡೆದಿರುವುದು ಕಂಡುಬಂದಿದೆ. ಅಡುಗೆ ಕೋಣೆಯಲ್ಲಿದ್ದ ನೀರಿನ …

Read More »

ಶಿರ್ವದಲ್ಲಿ ಬೈಕುಗಳು ಢಿಕ್ಕಿ: ನಾಲ್ವರಿಗೆ ಗಾಯ

ಇಲ್ಲಿನ ಮುಖ್ಯರಸ್ತೆಯ ಕುತ್ಯಾರು ಜಂಕ್ಷನ್‌ ಬಳಿ ಡಿ. 5ರ ಸಂಜೆ ಎರಡು ಬೈಕ್‌ಗಳು ಢಿಕ್ಕಿಯಾಗಿ ನಾಲ್ವರು ಗಾಯಗೊಂಡಿದ್ದಾರೆ.ಗಾಯಾಳುಗಳಾದ ಲೂಯಿಸ್‌ ಪಿಂಟೋ ಮತ್ತು ಲೇರೀಶಾ ಪಿಂಟೋ ಅವರನ್ನು ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಿಸಲಾಗಿದೆ.ಮತ್ತೊಂದು ಬೈಕಿನ ಸವಾರರಾದ ವಿನೀಶ್‌ ದೇವಾಡಿಗ ಮತ್ತು ಧನುಷ್‌ ಅವರಿಗೆ ತರಚಿದ ಗಾಯಗಳಾಗಿವೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಕೋಳಿ ಅಂಕ; 8 ಮಂದಿ ವಶಕ್ಕೆ

ಮಣಿಪಾಲ: ಇಲ್ಲಿನ ಮಂಚಿಯ ಸಾರ್ವಜನಿಕ ಹಾಡಿಯಲ್ಲಿ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ನಡೆಸುತ್ತಿದ್ದ 8 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಯ ದೇವಾಡಿಗ, ದಯಾನಂದ ಪೂಜಾರಿ, ಪ್ರಜ್ವಲ್‌, ಅಚ್ಚಣ್ಣ ಮೂಲ್ಯ, ಸಚಿನ್‌, ಪ್ರದೀಪ್, ಅಮೀರ್‌ ಮತ್ತು ಫಾರೂಕ್‌ ಅಹಮ್ಮದ್‌ ಬಂಧಿತರು.ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಸ್ಥಳದಿಂದ ಅಂದಾಜು 6,500 ರೂ. ಮೌಲ್ಯದ 4 ಕೋಳಿಗಳು, 15 ವಾಹನಗಳು ಹಾಗೂ ಪಣವಾಗಿ ಇಟ್ಟ 22,100 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. …

Read More »

ಎಂಡಿಎಂಎ ಮಾರಾಟ ಆರೋಪ: ಮೂವರನ್ನು ಬಂಧಿಸಿದ ಉಳ್ಳಾಲ ಪೊಲೀಸರು

ಉಳ್ಳಾಲ: ಇಲ್ಲಿನ ಠಾಣಾ ವ್ಯಾಪ್ತಿಯ ತಲಪಾಡಿ ಗ್ರಾಮದ ತಚ್ಚಣಿ ಎಂಬಲ್ಲಿ ನಿಷೇದಿತ ಮಾಧಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.ಅಬ್ದುಲ್ ರವೂಫ್ (30), ಶರೀಫ್ ಯಾನೆ ಅಮಿನ್ (34), ನಿಯಾಝ್ ( 23) ಬಂಧಿತರು.ಬಂಧಿತರಿಂದ 42 ಗ್ರಾಂ ತೂಕದ ಎಂಡಿಎಂಎ, ಟೊಯೋಟಾ ಕಾರು, ಮೂರು ಮೊಬೈಲ್, 2500 ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಆರೋಪಿ ಪೈಕಿ ನಿಯಾಝ್ …

Read More »

ಮದುವೆ ಸಮಾರಂಭದ ವೇಳೆ ಕುಸಿದ ಮನೆಯ ಮೇಲ್ಛಾವಣಿ

ಚಂಬಾ, ಡಿಸೆಂಬರ್ 09: ಮದುವೆ ಸಮಾರಂಭ ನಡೆಯುತ್ತಿತ್ತು, ನೂರಾರು ಮಂದಿ ಅಲ್ಲಿ ಸೇರಿದ್ದರು. ಒಂದೆಡೆ 50ಕ್ಕೂ ಅಧಿಕ ಮಂದಿ ನೃತ್ಯ ಮಾಡುತ್ತಿದ್ದರೆ, ಒಂದಷ್ಟು ಮಂದಿ ಕುಳಿತು ನೋಡುತ್ತಿದ್ದರು. ಹಿಮಾಚಲ ಪ್ರದೇಶದ ಚಂಬಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಜನರು ಕುಳಿತಿದ್ದ ಮೇಲ್ಛಾವಣಿ ಇದ್ದಕ್ಕಿದ್ದಂತೆ ಕುಸಿತುಬಿದ್ದಿತ್ತು.ಘಟನೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಈಗ ಈ ಘಟನೆಯ ಡ್ರೋನ್ ದೃಶ್ಯಾವಳಿ ಹೊರಬಿದ್ದಿದೆ.

Read More »