Breaking News

BigTv News

ಮಹಿಳೆ ನಾಪತ್ತೆ; ದೂರು ದಾಖಲು

ಬೈಂದೂರು: ಬಿಜೂರು ಗ್ರಾಮದ ಕಂಚಿಕಾನು ನಿವಾಸಿ ಕೆ. ಲೀಲಾವತಿ ಭಟ್‌ (71) ನಾಪತ್ತೆಯಾಗಿದ್ದಾರೆ.ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದ ಅವರು ಸುಮಾರು ಒಂದು ತಿಂಗಳಿನಿಂದ ಸಂಬಂಧಿಕರೊಂದಿಗೆ ದೂರವಾಣಿ ಸಂಪರ್ಕದಲ್ಲೂ ಇರಲಿಲ್ಲ. ಸಂಬಂಧಿಕರು ಕರೆ ಮಾಡಿದಾಗಲೆಲ್ಲ ಲೀಲಾವತಿ ಅವರ ಮೊಬೈಲ್‌ ಸ್ವಿಚ್‌ ಆಫ್‌ ಆಗಿದೆ ಎಂದೇ ಸಂದೇಶ ಬರುತ್ತಿತ್ತು.ಪ್ರಸ್ತುತ ಅವರು ಕಾಣೆಯಾಗಿರುವ ಬಗ್ಗೆ ಬೈಂದೂರು ಆರಕ್ಷಕ ಠಾಣೆಗೆ ದೂರು ನೀಡಲಾಗಿದೆ. ಅವರ ಪತ್ತೆಯಾದಲ್ಲಿ ಠಾಣೆಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.

Read More »

ಬೈಕಂಪಾಡಿ ರಿಕ್ಷಾ ನಿಲ್ದಾಣದ ಬಳಿ 2 ವರ್ಷದ ಮಗು ಪತ್ತೆ

ಮಂಗಳೂರು: ನಗರದ ಬೈಕಂಪಾಡಿ ರಿಕ್ಷಾ ನಿಲ್ದಾಣದ ಬಳಿ ಅಂದಾಜು 2 ವರ್ಷದ ಗಂಡು ಮಗು ಪತ್ತೆಯಾಗಿದೆ. ಮಕ್ಕಳ ಕಲ್ಯಾಣ ಸಮಿತಿಯ ಆದೇಶದಂತೆ ನಗರದ ಬೋಂದೆಲ್ ಕೃಷ್ಣ ನಗರ ಸರ್ಕಾರಿ ವಿಶೇಷ ದತ್ತು ಸಂಸ್ಥೆಯಲ್ಲಿ ದಾಖಲಿಸಲಾಗಿದೆ.ಈ ಮಗುವಿನ ವಾರಸುದಾರರು ಇದ್ದಲ್ಲಿ 60 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಪಡೀಲ್ ಪ್ರಜಾಸೌಧ ಕಟ್ಟಡದಲ್ಲಿರುವ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ (ದೂ.ಸಂ: 0824-2440004) ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Read More »

ಆನೇಕಲ್: ₹10 ಮೌಲ್ಯದ ಚಿನ್ನಾಭರಣ, 3 ಲಕ್ಷ ನಗದು ದೋಚಿದ ಕಳ್ಳರು

ಆನೇಕಲ್: ತಾಲೂಕಿನ ಚಂದಾಪುರದಲ್ಲಿ ಊರಿಗೆ ಹೋದ ಕುಟುಂಬದ ಮನೆ ಹಾಗೂ ಕ್ಲಿನಿಕ್‌ನ ಬೀಗ ಒಡೆದು ಕಳ್ಳರು ₹10 ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.ಎಎನ್‌ಆರ್ ಕಲ್ಯಾಣ ಮಂಟಪದ ಬಳಿಯ ಧನುಷ್ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ₹50,000 ನಗದು ಮತ್ತು 80 ಗ್ರಾಂ ಚಿನ್ನ, ಒಂದು ಡೈಮಂಡ್ ಉಂಗುರ ಮತ್ತು ಬೆಳ್ಳಿ ಆಭರಣಗಳು ಸೇರಿದಂತೆ ₹10 ಲಕ್ಷಕ್ಕೂ ಹೆಚ್ಚು ಮೌಲ್ಯದ …

Read More »

ಕನಕಪುರ: ರೆಸಾರ್ಟ್ ಕೊಠಡಿಯ ಕಿಟಕಿ ಗಾಜು ಒಡೆದು ಗ್ರಾಹಕರ ಲ್ಯಾಪ್ ಟಾಪ್ ಕಳ್ಳತನ

ನಗರದ ಹೊರವಲಯದ ರೆಸಾರ್ಟ್‌ನಲ್ಲಿ ಶುಕ್ರವಾರ ರಾತ್ರಿ ರೂಮಿನ ಕಿಟಕಿಯ ಗಾಜು ಒಡೆದ ಕಳ್ಳರು ಗ್ರಾಹಕರ ಲ್ಯಾಪ್‌ಟಾಪ್‌ ಕಳ್ಳತನ ಮಾಡಲಾಗಿದೆ. ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿ ಅನನ್ಯ ಎಂಬುವರ ಲ್ಯಾಪ್‌ಟಾಪ್‌ ಕಳ್ಳತನವಾಗಿದೆ. ಅದರ ಮೌಲ್ಯ ₹50 ಸಾವಿರ ಎಂದು ಅಂದಾಜಿಸಲಾಗಿದೆ.ಬೆಂಗಳೂರಿನ ಬಾಸ್ ಆಟೋಮೆಟಿಕ್ ಎಲೆಕ್ಟ್ರಾನಿಕ್ ಕಂಪನಿಯ 15 ಉದ್ಯೋಗಿಗಳು ಶುಕ್ರವಾರ ರಾತ್ರಿ ಕನಕಪುರದ ಹೊರ ವಲಯದ ರೆಸಾರ್ಟ್‌ಗೆ ಬಂದು ತಂಗಿದ್ದರು. ರಾತ್ರಿ ಕಿಟಕಿಯ ಗಾಜು ಒಡೆದು ಲ್ಯಾಪ್‌ಟಾಪ್‌ ಕಳ್ಳತನ ಮಾಡಲಾಗಿದೆ.ಲ್ಯಾಪ್‌ ಟಾಪ್ …

Read More »

ಸುಳ್ಯ: ನೇಣು ಬಿಗಿದ ಹಗ್ಗ ತುಂಡಾಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು

ಆತ್ಮಹತ್ಯೆಗೆ ಪ್ರಯತ್ನಿಸಿ ನೇಣು ಬಿಗಿದು ಜಿಗಿದ ವೇಳೆ ಹಗ್ಗ ತುಂಡಾಗಿ ಬಿದ್ದು ತಲೆಗೆ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಕಲ್ಲುಗುಂಡಿಯಲ್ಲಿ ನಡೆದಿದೆಕಲ್ಲುಗುಂಡಿ ಕೂಲಿಶೆಡ್ ಬಳಿ ಕಳೆದ ಹಲವು ವರ್ಷಗಳಿಂದ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದ ಐವರ್ನಾಡು ಗ್ರಾಮದ ಮಾಧವ (60)ಎಂಬವರು ಅವರ ಬಾಡಿಗೆ ರೂಮಿನಲ್ಲಿ ಡಿ.5ರಂದು ಆತ್ಮಹತ್ಯೆ ಮಾಡಿಕೊಳ್ಳಲು ನೇಣು ಬಿಗಿದು ಕೆಳಕ್ಕೆ ಜಿಗಿದ ಸಂದರ್ಭ ಕೇಬಲ್ ತುಂಡಾಗಿ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿತ್ತು. …

Read More »

ಬಾಲಕನ ಕೆನ್ನೆಗೆ ಬಾರಿಸಿದ ಆರೋಪ: ಬೆಂಗಳೂರಿನ ಖಾಸಗಿ ಶಾಲೆ ಪಿಟಿ ಟೀಚರ್ ಮೇಲೆ ಎಫ್‌ಐಆರ್ ದಾಖಲು!

ಬೆಂಗಳೂರು: ನಗರದ ಖಾಸಗಿ ಶಾಲೆಯ ಪಿಟಿ ಶಿಕ್ಷಕ ರಾಜೇಶ್ ವಿರುದ್ಧ ಏಳನೇ ತರಗತಿಯ ಬಾಲಕನಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಹುಳಿಮಾವು ಪೊಲೀಸರು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಶಿಕ್ಷಕರನ್ನು ಬಂಧಿಸಿದ್ದಾರೆ.ಮಾಹಿತಿ ಪ್ರಕಾರ, ಸ್ಟಾಪ್ ರೂಮ್‌ನಲ್ಲಿ ಇತರ ಶಿಕ್ಷಕರ ಸಮ್ಮುಖದಲ್ಲೇ ಪಿಟಿ ಟೀಚರ್ ರಾಜೇಶ್ ಬಾಲಕನ ಕೆನ್ನೆಗೆ ಕೈಯಿಂದ ಬಾರಿಸಿದ ಆರೋಪ ಕೇಳಿ ಬಂದಿದೆ.ಹೊಡೆತದ ಪರಿಣಾಮ ಬಾಲಕನ ಕೆನ್ನೆ ಉದಿಕೊಂಡಿದ್ದು, ನೋವಿನಿಂದ ಬಳಲುತ್ತಿದ್ದಾನೆ ಎಂದು ಕುಟುಂಬದವರು. ಮಗ ಶಾಲೆಯಿಂದ ಮನೆಗೆ ತಡವಾಗಿ ಬಂದ …

Read More »

ಕೊಡಿಹಬ್ಬಕ್ಕೆ ಹೋದ ಮಹಿಳೆ ನಾಪತ್ತೆ

ಕುಂದಾಪುರ: ಇಲ್ಲಿನ ಹೊದ್ರೋಳಿಯ ದಿಣ ಸಂಜೀವ ಪೂಜಾರಿ ಅವರ ಪುತ್ರಿ ರೇಷ್ಮಾ (25) ಅವರು ಕೋಟೇಶ್ವರ ಕೊಡಿ ಹಬ್ಬಕ್ಕೆಂದು ಹೋದವರು ಕಾಣೆಯಾಗಿದ್ದಾರೆ.ಅವರು ಪತಿ ಮನೆ ತರಿಕೆರೆ ತಾಲೂಕಿನ ಎರಂಗಾಪುರ ಗ್ರಾಮದಿಂದ ಪತಿಯ ಜತೆ ಆಗಮಿಸಿದ್ದರು. ಡಿ. 6ರಂದು ಜಾತ್ರೆಗೆ ಹೋದವರು ಕುಂದಾಪುರ ಶಾಸ್ತ್ರಿ ಸರ್ಕಲ್ ವರೆಗೆ ಬಂದಿದ್ದು ಬಳಿಕ ಕಾಣೆಯಾಗಿದ್ದಾರೆ.5.4 ಅಡಿ ಎತ್ತರದ ಅವರು ಗೋಧಿ ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕಾಣೆಯಾಗುವಾಗ ನೇರಳೆ ಬಣ್ಣದ ಸ್ಲೀವ್‌ಲೆಸ್ ಟಾಪ್, ನೀಲಿ …

Read More »

ಚಲಿಸುತ್ತಿದ್ದ ಕಾರು ನಡುರಸ್ತೆಯಲ್ಲಿಯೇ ಧಗಧಗ, 8 ಮಂದಿ ಪ್ರಯಾಣಿಕರು ಜಸ್ಟ್ ಮಿಸ್

ಆನೇಕಲ್ ತಾಲೂಕಿನ ಚಂದಾಪುರದಲ್ಲಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸ್ಕಾರ್ಪಿಯೋ ಕಾರೊಂದು ಮಧ್ಯರಾತ್ರಿ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಸುಟ್ಟು ಕರಕಲಾಗಿದೆ.ರಾತ್ರಿ 12 ಗಂಟೆ ಸುಮಾರಿಗೆ ಚಂದಾಪುರದ ಬಳಿ ಯೂಟರ್ನ್ ತೆಗೆದುಕೊಳ್ಳುವಾಗ ಈ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಎಂಟು ಮಂದಿ ಪ್ರಯಾಣಿಕರು ಸಮಯಪ್ರಜ್ಞೆಯಿಂದ ತಕ್ಷಣವೇ ಕೆಳಗಿಳಿದು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ. ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದ್ದು, ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ.

Read More »

ಬೆಳಗಾವಿ | ಎಂಇಎಸ್ ವಿರುದ್ಧ ಪ್ರತಿಭಟನೆ: ಕರವೇ ಕಾರ್ಯಕರ್ತರು ವಶಕ್ಕೆ

ಎಂಇಎಸ್ ಧೋರಣೆ ಖಂಡಿಸಿ, ಇಲ್ಲಿನ ವ್ಯಾಕ್ಸಿನ್ ಡಿಪೊ ಮೈದಾನದತ್ತ ತೆರಳುತ್ತಿದ್ದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರನ್ನು ಧರ್ಮವೀರ ಸಂಭಾಜಿ ವೃತ್ತದಲ್ಲಿ ಪೊಲೀಸರು ವಶಕ್ಕೆ ಪಡೆದರು.ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಸೇರಿ ಹಲವರನ್ನು ವಶಕ್ಕೆ ಪಡೆಯಲಾಗಿದೆ.ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆ(ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ್ ಹಿರೇಕೋಡಿ ಅವರನ್ನು ವಶಕ್ಕೆ ಪಡೆಯಲಾಗಿದೆ. ನಗರದಲ್ಲಿ ಏಕಕಾಲಕ್ಕೆ ಕನ್ನಡ ಸಂಘಟನೆಯವರು ಮತ್ತು ಎಂಇಎಸ್ ನವರು ಬೇರೆ ಬೇರೆ ಸ್ಥಳಗಳಲ್ಲಿ ಪ್ರತಿಭಟಿಸುತ್ತಿದ್ದಾರೆ. …

Read More »

೪ ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ರಿಜ್ವಾನ್ ಬಂಧನ

ದೆಹಲಿಯ ನರೇಲಾ ಪ್ರದೇಶದಲ್ಲಿ ೪ ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಅತ್ಯಾಚಾರ ಮತ್ತು ಪೋಕ್ಸೋ ಕಾಯಿದೆಯ ಸಂಬಂಧಿತ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ರಿಜ್ವಾನ್‌ನನ್ನು ಬಂಧಿಸಿದ್ದಾರೆ.ಪೀಡಿತ ಬಾಲಕಿ ತನ್ನ ಕುಟುಂಬದವರೊಂದಿಗೆ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಆಕೆಯ ಕುಟುಂಬದವರು ಅವಳನ್ನು ಉರ್ದು ಕಲಿಯುವುದಕ್ಕಾಗಿ ಹತ್ತಿರದ ಮದರಸಾಗೆ ಕಳುಹಿಸುತ್ತಿದ್ದರು. ಡಿಸೆಂಬರ್ ೩ ರಂದು, ಅವಳು ಮದರಸಾಗ ಹೋಗುತ್ತಿದ್ದಳು. ದಾರಿಯಲ್ಲಿ ಕುಡಿದ ಮತ್ತಿನಲ್ಲಿದ್ದ ರಿಜ್ವಾನ್ …

Read More »