Breaking News

BigTv News

ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ; ಸವಾರ ಮೃತ್ಯು

ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಕೂತನೂರು ಗ್ರಾಮದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಪಟ್ಟಣದ ಕೇರಳ ರಸ್ತೆಯ ಟೀಚರ್ಸ್ ಬಡಾವಣೆ ಬಳಿ ನಡೆದಿದೆ.ಶಿವಣ್ಣ(50) ಮೃತ ಬೈಕ್ ಸವಾರ.ಈತ ಗುಂಡ್ಲುಪೇಟೆ ಕಡೆಯಿಂದ ತೆರಳುತ್ತಿದ್ದ ವೇಳೆ ಎದುರಿಗೆ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಈ ವೇಳೆ ಶಿವಣ್ಣ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಕೂಡಲೇ ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ …

Read More »

ಲೈಂಗಿಕ ಸಮಸ್ಯೆಗೆ ಪರಿಹಾರದ ಆಮಿಷ; ಟೆಕ್ಕಿಗೆ ₹48 ಲಕ್ಷ ವಂಚಿಸಿದ್ದ ‘ಟೆಂಟ್ ಬಾಬಾ’ ಅರೆಸ್ಟ್!

ಲೈಂಗಿಕ ಸಮಸ್ಯೆಗಳು ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧಿ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ‘ಗುರೂಜಿ’ಯೊಬ್ಬನನ್ನು ಜ್ಞಾನ ಭಾರತಿ ಪೊಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಟೆಕ್ಕಿಯೊಬ್ಬರಿಗೆ ಲೈಂಗಿಕ ಸಮಸ್ಯೆ ಬಗೆಹರಿಸ್ತೀನಿ ಅಂತಾ ಬರೋಬ್ಬರಿ ₹48 ಲಕ್ಷ ವಂಚಿಸಿರುವುದು ತನಿಖೆ ವೇಳೆ ಟೆಂಟ್ ಬಾಬನ ಕಥೆಗಳು ಬಯಲಾಗಿವೆ.ಬಂಧಿತ ಆರೋಪಿಯನ್ನು ವಿಜಯ್ ಗುರೂಜಿ ಎಂದು ಗುರುತಿಸಲಾಗಿದೆ. ಈತನಿಗೆ ಸಹಕರಿಸುತ್ತಿದ್ದ ಮತ್ತೊಬ್ಬ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Read More »

ಊಹೆಗೂ ಸಿಗದ ದಿತ್ವಾ ಚಂಡಮಾರುತ ಹವಾಮಾನ ಸ್ಥಿತಿ: ಚೆನ್ನೈನಲ್ಲಿ ಪ್ರವಾಹ; ಇಂದು ಶಾಲಾ-ಕಾಲೇಜುಗಳಿಗೆ ರಜೆ

ಬಂಗಾಳ ಕೊಲ್ಲಿಯಲ್ಲಿ ಸಂಖ್ಯಾತ್ಮಕ ಹವಾಮಾನ ಮುನ್ಸೂಚನೆಯ ಮಿತಿಗಳನ್ನು ಬಹಿರಂಗಪಡಿಸುವ ಅತ್ಯಂತ ಸಂಕೀರ್ಣ ಮತ್ತು ಕಳಪೆ ಮಾದರಿಯ ವ್ಯವಸ್ಥೆಯಾಗಿ ಹವಾಮಾನಶಾಸ್ತ್ರಜ್ಞರು ಆಳವಾದ ವಾಯುಭಾರ ಕುಸಿತವೆಂದು ವಿಶ್ಲೇಷಿಸಿದ್ದಾರೆ.ಆರೆಂಜ್ ಅಲರ್ಟ್ ನೀಡುವುದರಿಂದ ಹಿಡಿದು ಕೇವಲ ನಾಲ್ಕು ಗಂಟೆಗಳ ನಂತರ ಅದನ್ನು ರೆಡ್ ಅಲರ್ಟ್ ಗೆ ಎಚ್ಚರಿಕೆ ನೀಡುವವರೆಗೆ, ಚೆನ್ನೈನ ಪ್ರಾದೇಶಿಕ ಹವಾಮಾನ ಕೇಂದ್ರ (RMC) ವೇಗವಾಗಿ ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಗೆ ಪ್ರತಿಕ್ರಿಯಿಸಬೇಕಾಯಿತು. ಈ ವ್ಯವಸ್ಥೆಯು ಆರಂಭದಿಂದಲೂ ಸವಾಲಿನದ್ದಾಗಿದೆ. ತೆರೆದ ಸಾಗರದಲ್ಲಿ ಬಹು ಪರಿಚಲನೆಗಳು, ಶ್ರೀಲಂಕಾ …

Read More »

ಲೋನ್ ಹೆಸರಿನಲ್ಲಿ ಕೋಟಿ-ಕೋಟಿ ವಂಚಿಸಿದ ಗೋಲ್ಮಾಲ್ ವೆಂಕಟೇಶ್: ಸ್ಯಾಂಡಲ್‌ವುಡ್ ನಟನಿಗೂ ಮೋಸ!

ವೈಟ್ ಅಂಡ್ ವೈಟ್’ ಬಿಲ್ಡಪ್ ನೀಡುತ್ತಾ ಲೋನ್ ಮಾಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ ನಡೆಸಿದ್ದಾನೆ ಎನ್ನಲಾದ ಗೋಲ್ಮಾಲ್ ವೆಂಕಟೇಶ್ ವಿರುದ್ಧ ಸಿಸಿಬಿಯಲ್ಲಿ ಸಾಲು-ಸಾಲು ದೂರುಗಳು ದಾಖಲಾಗಿವೆ.ಮುರುಗೇಶ ಪಾಳ್ಯದ ಸುರೇಂದ್ರ ರೆಡ್ಡಿ ಹಾಗೂ ಸ್ಯಾಂಡಲ್‌ವುಡ್ ನಟ ಆರ್‌ಜೆ ರೋಹಿತ್ ಕೂಡ ಈ ಜಾಲಕ್ಕೆ ಸಿಲುಕಿದ್ದಾರೆ ಎಂದು ದೂರು ಹೇಳುತ್ತದೆ. ರೋಹಿತ್ ಮೂಲಕ 1.60 ಕೋಟಿ ಸಾಲ ಸಿಗುತ್ತದೆ ಎಂದು ನಂಬಿಸಿ, ಸುರೇಂದ್ರರಿಂದ ಹಣವನ್ನು ಬೇರೆ ಖಾತೆಗೆ ಹಾಕಿಸಿದ ಆರೋಪವೂ ಇದೆ. …

Read More »

ಗನ್ ಪಾಯಿಂಟ್ ನಲ್ಲಿ ಮಹಿಳಾ ಉದ್ಯಮಿ ಬೆದರಿಸಿ, ನಗ್ನ ವಿಡಿಯೋ ರೆಕಾರ್ಡ್! ಪ್ರಕರಣ ದಾಖಲು

ಫಾರ್ಮಾ ಕಂಪನಿಯ ಬಾಸ್ ಒಬ್ಬರು, ಗನ್ ಪಾಯಿಂಟ್ ನಲ್ಲಿ ಮಹಿಳಾ ಉದ್ಯಮಿಯನ್ನು ಬೆತ್ತಲೆಗೊಳಿಸಿ ರೆಕಾರ್ಡ್ ಮಾಡಿರುವ ಘಟನೆ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ನಡೆದಿದೆ. ಅಲ್ಲದೇ ಈ ವಿಷಯನ್ನು ಯಾರಿಗಾದರೂ ಹೇಳಿದರೆ ಬೆತ್ತಲೆ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.ಫ್ರಾಂಕೋ-ಇಂಡಿಯನ್ ಫಾರ್ಮಾಸ್ಯುಟಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸ್ಥಾಪಕ ಸದಸ್ಯರಾದ ಜಾಯ್ ಜಾನ್ ಪ್ಯಾಸ್ಕಲ್ ಪೋಸ್ಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

Read More »

ಚಾಮುಂಡಿ ದರ್ಶನಕ್ಕೆ ತೆರಳುವಾಗ, ‘ಹೃದಯಾಘಾತ’ : ಕಾಂಗ್ರೆಸ್ ಮಾಜಿ ಶಾಸಕ ಆರ್ ವಿ ದೇವರಾಜ್ ನಿಧನ.

ಬೆಂಗಳೂರಿನ ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್​​ ಮಾಜಿ ಶಾಸಕ ಆರ್​​ವಿ ದೇವರಾಜ್​ ನಿಧನ ಹೊಂದಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಾಗ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ.ಹೃದಯಾಘಾತ ಸಂಭವಿಸಿದ್ದು, ಕೂಡಲೇ ಮೈಸೂರಿನಲ್ಲಿರುವ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ಕರೆದೊಯ್ಯುವಾಗ ಕೊನೆಯುಸಿರೆಳೆದಿದ್ದಾರೆ. ಸದ್ಯ ವೈದ್ಯರು ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.

Read More »

ರಾಜ್ಯದಲ್ಲಿ ಮತ್ತೊಂದು ಹಗರಣ ಬೆಳಕಿಗೆ : ‘ಹೆಸ್ಕಾಂ’ ನಲ್ಲಿ 90 ಕೋಟಿ ಅಕ್ರಮ ಬಯಲಿಗೆಳೆದ ‘CID.

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ವ್ಯಾಪ್ತಿಯಲ್ಲಿ ಈ ಹಗರಣ ನಡೆದಿದ್ದು, ಟ್ರಾನ್ಸ್‌ಫಾರ್ಮರ್ ವಿತರಣೆಯಲ್ಲಿ ಕೆಲ ಹೆಸ್ಕಾಂ ಅಧಿಕಾರಿಗಳು ಭಾರೀ ಕೈ ಚಳಕ ತೋರಿಸಿದ್ದಾರೆ. ರಾಜ್ಯ ಇಂಧನ ಇಲಾಖೆಯಲ್ಲಿ ಟ್ರಾನ್ಸ್‌ಫಾರ್ಮರ್ ಹಂಚಿಕೆ ವೇಳೆ ಸುಮಾರು 80 ರಿಂದ 90 ಕೋಟಿ ರು. ಮೊತ್ತದ ಅಕ್ರಮ ನಡೆಸಿರುವುದು ಸಿಐಡಿ ತನಿಖೆಯಲ್ಲಿ ಪತ್ತೆಯಾಗಿದೆ.ಹೆಸ್ಕಾಂ ವ್ಯಾಪ್ತಿಯಲ್ಲಿ 1500 ಟ್ರಾನ್ಸ್‌ಫಾರ್ಮರ್‌ಗಳಲ್ಲಿ ಸುಮಾರು 80-90 ಕೋಟಿ ರು.ನಷ್ಟು ಅಕ್ರಮ ನಡೆದಿದೆ ಎಂಬ ಅಂದಾಜು ಈವರೆಗೆ ಸಿಕ್ಕಿದೆ. ಈ …

Read More »

ಮದ್ಯದ ನಶೆಯಲ್ಲಿ ಕುಡುಕನ ಹುಚ್ಚಾಟ: ಎಟಿಎಂಗೆ ನುಗ್ಗಿ ದಾಂಧಲೆ, ಎಲ್ಲ ಪೀಸ್​​ ಪೀಸ್​​

ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಎಸ್​​ಬಿಐ ಎಟಿಎಂ ಧ್ವಂಸಗೊಳಿಸಿರುವ ಘಟನೆ ತುಮಕೂರಿನ ತುರುವೇಕೆರೆಯಲ್ಲಿ ನಡೆದಿದೆ. ನಶೆಯ ಅಮಲಿನಲ್ಲಿದ್ದ ವಡಿವೇಲು ಸ್ವಾಮಿ ಎಂಬಾತ, ಎಟಿಎಂಗೆ ತೆರಳಿದ್ದ.ಈ ವೇಳೆ ಆತ ಹಣ ಡ್ರಾ ಮಾಡಲು ಯತ್ನಿಸಿದಾಗ, ದುಡ್ಡು ಬಂದಿರಲಿಲ್ಲ. ಹೀಗಾಗಿ ರೊಚ್ಚಿಗೆದ್ದ ವಡಿವೇಲು ಸ್ವಾಮಿ, ಕಲ್ಲಿನಿಂದ ಹೊಡೆದು ಎಟಿಎಂ ಧ್ವಂಸಗೊಳಿಸಿದ್ದ. ನವೆಂಬರ್​​ 27ರ ರಾತ್ರಿ ಘಟನೆ ನಡೆದಿತ್ತು. ಸ್ಥಳೀಯರ ದೂರಿನ ಅನ್ವಯ ಇದು ಕಳ್ಳತನ ಆಗಿರಬಹುದೆಂದು ಪೊಲೀಸರು ತನಿಖೆ ಆರಂಭಿಸಿದ್ದರು. ಈ ವೇಳೆ ಕುಡುಕ …

Read More »

ಗಾಜು ತುಂಬಿದ ಲಾರಿ ಪಲ್ಟಿ; ಟ್ರಾಫಿಕ್ ಸಮಸ್ಯೆ

ರಾಯಚೂರು: ತಾಲೂಕಿನ ಕಲ್ಮಲಾ ಸಮೀಪ ಗಾಜು ತುಂಬಿದ ಲಾರಿ ಪಲ್ಟಿಯಾಗಿ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಸೋಮವಾರ (ಡಿ.01) ಬೆಳಗ್ಗೆ ಬೈಕ್ ಸವಾರ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಲಾರಿ ಪಲ್ಟಿಯಾಗಿದೆ. ಬೈಕ್ ಸವಾರರನ್ನು ತಪ್ಪಿಸಲು ಹೋಗಿ ಲಾರಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದಾನೆಇದರಿಂದ ರಸ್ತೆಯ ಮಧ್ಯೆ ಅಡ್ಡಲಾಗಿ ಲಾರಿ ಬಿದ್ದಿರುವುದು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. …

Read More »

ಬೆಂಗಳೂರಿನಲ್ಲಿ ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

ಡೆತ್ ನೋಟ್ ಬರೆದಿಟ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದಿದೆ.ಇಲ್ಲಿನ ತೋಟದಗುಡ್ಡದ ಮನೆಯಲ್ಲಿ ಮಹಿಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸೌಭಾಗ್ಯ (36) ಆತ್ಮಹತ್ಯೆಗೆ ಶರಣಾದ ಮಹಿಳೆ. ಎರಡು ವರ್ಷಗಳ ಹಿಂದೆ ಪತ್ ಸಾವನ್ನಪ್ಪಿದ್ದರು.ಪತಿ ಮರಣದ ಬಳಿಕ ಮಾನಸಿಕವಾಗಿ ತೀವ್ರವಾಗಿ ಸೌಭಾಗ್ಯ ನೊಂದಿದ್ದರು. ಮಾದನಾಯಕನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಜೀವನ ಸಾಗಿಸಲು ದೇವಸ್ಥಾನದಲ್ಲಿ ಕೆಲಸ ಮಾಡುತ್ತಿದ್ದರು. ಕೆಲಸವಾಯಿತು, ಮನೆಯಾಯಿತು ಎಂದು ತನ್ನಪಾಡಿಗೆ ತಾನು ಜೀವನ ಸಾಗಿಸುತ್ತಿದ್ದ ಸೌಭಾಗ್ಯ …

Read More »