Breaking News

ಲೋನ್ ಹೆಸರಿನಲ್ಲಿ ಕೋಟಿ-ಕೋಟಿ ವಂಚಿಸಿದ ಗೋಲ್ಮಾಲ್ ವೆಂಕಟೇಶ್: ಸ್ಯಾಂಡಲ್‌ವುಡ್ ನಟನಿಗೂ ಮೋಸ!

ವೈಟ್ ಅಂಡ್ ವೈಟ್’ ಬಿಲ್ಡಪ್ ನೀಡುತ್ತಾ ಲೋನ್ ಮಾಡಿಸುವ ನೆಪದಲ್ಲಿ ಕೋಟಿ ಕೋಟಿ ವಂಚನೆ ನಡೆಸಿದ್ದಾನೆ ಎನ್ನಲಾದ ಗೋಲ್ಮಾಲ್ ವೆಂಕಟೇಶ್ ವಿರುದ್ಧ ಸಿಸಿಬಿಯಲ್ಲಿ ಸಾಲು-ಸಾಲು ದೂರುಗಳು ದಾಖಲಾಗಿವೆ.ಮುರುಗೇಶ ಪಾಳ್ಯದ ಸುರೇಂದ್ರ ರೆಡ್ಡಿ ಹಾಗೂ ಸ್ಯಾಂಡಲ್‌ವುಡ್ ನಟ ಆರ್‌ಜೆ ರೋಹಿತ್ ಕೂಡ ಈ ಜಾಲಕ್ಕೆ ಸಿಲುಕಿದ್ದಾರೆ ಎಂದು ದೂರು ಹೇಳುತ್ತದೆ. ರೋಹಿತ್ ಮೂಲಕ 1.60 ಕೋಟಿ ಸಾಲ ಸಿಗುತ್ತದೆ ಎಂದು ನಂಬಿಸಿ, ಸುರೇಂದ್ರರಿಂದ ಹಣವನ್ನು ಬೇರೆ ಖಾತೆಗೆ ಹಾಕಿಸಿದ ಆರೋಪವೂ ಇದೆ. ರೋಹಿತ್‌ಗೆ ಹಣ ತಲುಪದೇ ಗೊಂದಲ ಉಂಟಾದ ನಂತರ ಸುರೇಂದ್ರ ವೆಂಕಟೇಶ್‌ನ್ನು ಸಂಪರ್ಕಿಸಿದಾಗ, ಅವನು ಬೆದರಿಕೆ ಹಾಕಿದನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *