Breaking News

ಶೇರೆವಾಡ ಗ್ರಾಮದಲ್ಲಿ ಶಾಲಾ‌ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ‌ ಸಚಿವ ಲಾಡ್

ಹುಬ್ಬಳ್ಳಿ ತಾಲೂಕಿನ ಶೇರೆವಾಡ ಗ್ರಾಮದಲ್ಲಿ ಸರಿಯಾಗಿ ಬಸ್ ಬರದೇ ಇರುವುದು ಸೇರಿದಂತೆ ಶಾಲಾ ಮಕ್ಕಳ ಸಮಸ್ಯೆಗಳನ್ನ ಧಾರವಾಡ ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಶುಕ್ರವಾರ ಆಲಿಸಿದರು.
ನಮಗೆ ಸಮಯಕ್ಕೆ ಸರಿಯಾಗಿ ಬಸ್ ಬರಲ್ಲ ಬಂದರೂ ಬಸ್ ತುಂಬಾ ತುಂಬಿರುತ್ತೇವೆ ಆದ್ದರಿಂದ ಶಾಲೆಗೆ ‌ಹೋಗಲು ತೊಂದರೆ ಆಗುತ್ತದೆ‌ ಇದರ ಜೊತೆಗೆ ಸರಿಯಾಗಿ ರಸ್ತೆ ಇಲ್ಲಾ ದುರಸ್ತಿ ಮಾಡಿಸಲು ಸಚಿವ ಸಂತೋಷ ಲಾಡ್ ಬಳಿ ಮನವಿ ಮಾಡಿದರು.

ಮನವಿ ಆಲಿಸುವ ಜೊತೆಗೆ ತಕ್ಷಣ ಸಾರಿಗೆ ಅಧಿಕಾರಿಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಸರಿಯಾಗಿ ಬಸ್ ವ್ಯವಸ್ಥೆಗೆ ಸೂಚಿದರು.‌ ಶಾಸಕ ಎಂ ಆರ್ ಪಾಟೀಲ್ , ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು

Share News

About BigTv News

Check Also

10 ದಿನಗಳಲ್ಲಿ ನ್ಯಾಯ ಸಿಗದಿದ್ದರೆ ಸಲ್ಲೇಖನ ವ್ರತ! ಸರ್ಕಾರಕ್ಕೆ ಗುಣಧರನಂದಿ ಸ್ವಾಮೀಜಿಗಳ ಕೊನೆಯ ಎಚ್ಚರಿಕೆ…

ಜೈನ ನಿಗಮ ಮಂಡಳಿ ಸ್ಥಾಪನೆಗೆ ಆಗ್ರಹ: ಚಿಕ್ಕೋಡಿಯಿಂದ ಸುವರ್ಣಸೌಧದವರೆಗೆ ಪಾದಯಾತ್ರೆ ಘೋಷಣೆ! ಜೈನ ಸಮುದಾಯದ ಬೇಡಿಕೆ ಈಡೇರದಿದ್ದರೆ ಸಲ್ಲೇಖನ ವ್ರತದ …

Leave a Reply

Your email address will not be published. Required fields are marked *