ಮಹಿಳೆಯೊಬ್ಬಳು ಮಾಲೀಕನ ಮೇಲೆ ದರ್ಪ ತೋರಿ ಕಾಲಿನಿಂದ ಒದ್ದಿರುವ ಘಟನೆ ಬೈಲಕುಪ್ಪೆ ಟಿಬೆಟಿಯನ್ ಕ್ಯಾಂಪ್ನಲ್ಲಿ ನಡೆದಿದೆ.ಕೂಲಿ ಕೆಲಸಕ್ಕೆ ಅಸ್ಸಾಂ ರಾಜ್ಯದಿಂದ ಬಂದಿದ್ದಳು. ಮಾಲೀಕನ ಮೇಲೆ ದರ್ಪ ತೋರಿದ್ದಾಳೆ. ಈ ವೇಳೆ ವಿಡಿಯೋ ರೆಕಾರ್ಡ್ ಮಾಡ್ತಿದ್ದ ಸ್ಥಳೀಯನ ಮೇಲೂ ಹಲ್ಲೆಗೈದಿದ್ದಾಳೆ.ಇದೀಗ ಜಗಳದಲ್ಲಿ ತೊಡಗಿದ್ದ 10 ಮಂದಿ ವಿರುದ್ಧ ಸುಮೊಟೋ ಕೇಸ್ ದಾಖಲಾಗಿದೆ. ಅಸ್ಸಾಂ ಜನರನ್ನ ಪರಿಶೀಲಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕುಶಾಲನಗರ ವತಿಯಿಂದ ಬೈಲಕುಪ್ಪೆ ಪೊಲೀಸ್ ಸ್ಟೇಷನ್ ಗೆ ಮನವಿ …
Read More »ಪೊಲೀಸ್ ಸಿಬ್ಬಂದಿಯಿಂದಲೇ ಕಿಡ್ನಾಪ್ – ಪ್ರಕರಣ ಬೇಧಿಸಿದ ಪೊಲೀಸ್!
ಖಾಸಗಿ ಕಂಪನಿಯ ನಾಲ್ವರು ನೌಕರರನ್ನು ಅಪಹರಣ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಹೆಡ್ ಕಾನ್ಸೆಬಲ್ ಸೇರಿ 8 ಆರೋಪಿಗಳನ್ನು ಬಂಧಿಸಿದ್ದಾರೆ.ಕೋಲಾರ ಜಿಲ್ಲೆ ಮಾಲೂರು ಗ್ರಾಮಾಂತರ ಠಾಣೆಯ ಹೆಡ್ ಕಾಸ್ಟೇಬಲ್ ಚಲಪತಿ ಸೇರಿ ಎಂಟು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಎರಡು ಕಾರ್ ಗಳನ್ನು ಜಪ್ತಿ ಮಾಡಲಾಗಿದೆ. ತನಿಖೆಯ ವೇಳೆ ಆರೋಪಿಗಳಿಂದ ಅಪಹರಣಕ್ಕೊಳಗಾಗಿದ್ದ ನೌಕರರ ಖಾತೆಯಿಂದ 18.9 ಲಕ್ಷ ರೂಪಾಯಿ ಹಣವನ್ನು ತಮ್ಮ ಸಂಬಂಧಿಕರೊಬ್ಬರ …
Read More »ಕಾಲ್ ಸೆಂಟರ್ ಉದ್ಯೋಗಿಗಳ ಕಿಡ್ನ್ಯಾಪ್ ಕೇಸ್: ಕಾನ್ಸ್ ಟೇಬಲ್ ಸೇರಿ 8 ಆರೋಪಿಗಳು ಅರೆಸ್ಟ್
ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನುನ್ನು ಕಿಡ್ನ್ಯಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಕಾನ್ಸ್ ಟೇಬಲ್ ಸೇರಿ 8 ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.ಕೋರಮಂಗಲದ ಗ್ಲೋಬಲ್ ಕನೆಕ್ಟ್ ಟೆಲಿಕಾಂ ಪ್ರೈ.ಲಿ. ನ ನಾಲ್ವರು ಕಾಲ್ ಸೆಂಟರ್ ಉದ್ಯೋಗಿಗಳನ್ನು ಆರೋಪಿಗಳು ಕಿಡ್ನ್ಯಾಪ್ ಮಾಡಿದ್ದರು. ಬಳಿಕ ಮ್ಯಾನೇಜರ್ ಅಕೌಂಟ್ ನಿಂದ 18 ಲಕ್ಷ ರೂಒಆಯಿ ವರ್ಗಾವಣೆ ಮಾಡಿಸಿಕೊಂಡಿದ್ದರು. ಬೆಳಿಗ್ಗೆ ಬಿಪಿಒ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು 15 ಗಂಟೆಯೊಳಗೆ …
Read More »ನಡುರಸ್ತೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ.!
ಚಿತ್ರದುರ್ಗದ ಗಾಂಧಿ ಸರ್ಕಲ್ ನಲ್ಲಿ ರಸ್ತೆಯಲ್ಲಿಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪೊಲೀಸರು ಆಟೋ ತಡೆದು ಕಿರುಕುಳ ನೀಡಿ ಲಂಚ ಕೇಳಿದ್ದಕ್ಕೆ ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ತೀವ್ರ ಸುಟ್ಟ ಗಾಯಗಳಾಗಿರುವ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಕುಡಿದು ಆಟೋ ಚಾಲನೆ, ಸಮವಸ್ತ್ರ ಇಲ್ಲದಿರುವುದು, ನಿಯಮ ಉಲ್ಲಂಘನೆ ಬಗ್ಗೆ ಸಂಚಾರ ಪೊಲೀಸರು ಪ್ರಶ್ನಿಸಿದ್ದರು. ಈ ಬಗ್ಗೆ ಆಕ್ಷೇಪಿಸಿದ್ದ ತಿಪ್ಪೇಸ್ವಾಮಿ ವಿಡಿಯೋ ಮಾಡಿದ್ದರು. ಇದು ವಿಕೋಪಕ್ಕೆ ತಿರುಗಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
Read More »ವಿಡಿಯೋದಿಂದ ಬಯಲಾಯ್ತು ಪತ್ನಿಯ ಅಸಲಿಯತ್ತು, 7 ವರ್ಷದ ನಂತರ ಪತಿ ಕೊಲೆ ರಹಸ್ಯ ಬಹಿರಂಗ
ಸುಪಾರಿ ಕೊಟ್ಟು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ ಬಂಧಿಸಲಾಗಿದೆ. ಕಲಬುರಗಿ ತಾಲೂಕಿನ ಕಣ್ಣಿ ಗ್ರಾಮದಲ್ಲಿ ಭೈರಪ್ಪ ಎಂಬುವರ ಕೊಲೆ ನಡೆದಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಸುಪಾರಿ ಕೊಟ್ಟು ಪತ್ನಿಯ ಪತಿ ಕೊಲೆ ಮಾಡಿಸಿದ್ದು, ಸಹಜ ಸಾವಿನಂತೆ ಬಿಂಬಿಸಿ ಅಂತ್ಯ ಸಂಸ್ಕಾರ ನೆರವೇರಿಸಿದ್ದಳು.ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಾದ ಬೀರಪ್ಪನ ಪತ್ನಿ ಶಾಂತಾಬಾಯಿ, ಮಹೇಶ್, ಸುರೇಶ್, ಸಿದ್ದು, ಶಂಕರ್ ಎಂಬುವರನ್ನು ಫರಹತಾಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
Read More »ಅಂಗಾಂಗ ಕಸಿಗಾಗಿ ಇರಾನ್ಗೆ ಮಾನವ ಕಳ್ಳ ಸಾಗಣೆ: ಕೇರಳ ಹೆಲ್ತ್ ಕ್ಲಬ್ ಮೇಲೆ ತನಿಖೆ.
ಅಂಗಾಂಗಗಳ ಅಕ್ರಮ ಕಸಿಗಾಗಿ ಇರಾನ್ಗೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಆರೋಪಿಗಳು ಆರಂಭಿಸಿದ್ದ ಕೇರಳದ ಹೆಲ್ತ್ ಕ್ಲಬ್ವೊಂದರ ಚಟುವಟಿಕೆಗಳನ್ನೂ ತನಿಖೆಗೆ ಒಳಪಡಿಸಿದೆ. ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಅಂಶ ಬಹಿರಂಗವಾಗಿದೆ.ಇರಾನ್ನಲ್ಲಿ ಉಳಿದುಕೊಂಡಿದ್ದ ಜಯಕುಮಾರ್ ನವೆಂಬರ್ 7ರಂದು ಭಾರತಕ್ಕೆ ಮರಳಿದ್ದಾಗ ಬಂಧಿಸಲಾಗಿತ್ತು. ನವೆಂಬರ್ 19ರವರೆಗೆ ನ್ಯಾಯಾಲಯ ಎನ್ಐಎ ವಶಕ್ಕೆ ನೀಡಿತ್ತು.ಸಬಿತ್ ನಿರ್ವಹಿಸುತ್ತಿದ್ದ ಬ್ಯಾಂಕ್ ಖಾತೆಯಲ್ಲಿ ₹ 6 ಕೋಟಿ ವಹಿವಾಟು …
Read More »ಹಣದ ವಿಚಾರಕ್ಕೆ ಗಲಾಟೆ: ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಚೀಲದಲ್ಲಿ ಹಾಕಿ ಎಸೆದ!
ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಮನೆಯ ಆವರಣ ಗೋಡೆ ಸಮೀಪ ಎಸೆದ ಘಟನೆ ಕೇರಳ ಕೊಚ್ಚಿ ಸಮೀಪದ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.ವಿಚಾರಣೆ ವೇಳೆ ಕೃತ್ಯ ಎಸಗಿದ್ದನ್ನು ಆತ ಒಪ್ಪಿಕೊಂಡಿದ್ದಾನೆ. ಮೃತದೇಹವನ್ನು ಮನೆಯ ಹೊರಗೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದನಾದರೂ, ಸಾಧ್ಯವಾಗದೆ ಕುಸಿದು ಬಿದ್ದಿದ್ದಾನೆ. ಸಾಕು ಪ್ರಾಣಿಯೊಂದರ ಕಳೇಬರ ಎಂದು ಹೇಳಿ, ಅದನ್ನು ವಿಲೇವಾರಿ ಮಾಡಲು ನೆರೆಹೊರೆಯವರ ನೆರವನ್ನೂ ಆತ ಕೇಳಿದ್ದ ಎಂದು ವಿಚಾರಣೆ ವೇಳೆ ಹೇಳಿದ್ದಾಗಿ …
Read More »ಹುಡುಗನೊಂದಿಗೆ ಸಿಕ್ಕಿ ಬಿದ್ದ 15ರ ಬಾಲಕಿಯನ್ನು ಥಳಿಸಿ ಕೊಂದ ಕುಟುಂಬ!
ಜಾರ್ಖಂಡ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ ಹುಡುಗನೊಂದಿಗೆ ಸಿಕ್ಕಿಬಿದ್ದ 15 ವರ್ಷದ ಬಾಲಕಿಯನ್ನು ಕುಟುಂಬದವರು ಥಳಿಸಿ ಕೊಂದು, ಬಳಿಕ ಗುಟ್ಟಾಗಿ ಶವವನ್ನು ದಹನ ಮಾಡಲು ಪ್ರಯತ್ನಿಸಿದ ಘಟನೆ ಜಾರ್ಖಂಡ್ನ ಗರ್ವಾ ಜಿಲ್ಲೆಯಲ್ಲಿ ನಡೆದಿದೆ.ಕೃತ್ಯಕ್ಕೆ ಸಂಬಂಧಿಸಿದಂತೆ ಮೃತ ಬಾಲಕಿಯ ತಂದೆ ಮತ್ತು ಸಹೋದರನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಪೊಲೀಸರು ಸ್ಥಳಕ್ಕೆ ಬಂದ ಬಳಿಕ ಕುಟುಂಬದ ಇತರ ಸದಸ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದೀಗ ಪೊಲೀಸರು ಇತರ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ನಡೆಸುತ್ತಿದ್ದಾರೆ.
Read More »ದ್ವಿಚಕ್ರ ವಾಹನದಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಮೃತ್ಯು.
ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಸಂಭವಿಸಿದೆ.ಹಳೆಗೇಟಿನಿಂದ ತಮಿಳು ಕಾಲನಿಯ ಅವರ ಮನೆಗೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಂದರ್ಭ ವಾಹನ ಸ್ಕಿಡ್ ಆಗಿ ರಸ್ತೆಗೆ ಬಿದ್ದಿದ್ದರು. ಪರಿಣಾಮ ಅವರ ತಲೆಯ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಕೂಡಲೇ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟರು.
Read More »ಗೂಡ್ಸ್ ವಾಹನಕ್ಕೆ ಢಿಕ್ಕಿ ಹೊಡೆದು ನಾಲ್ಕು ಪಲ್ಟಿಯಾದ ಬೊಲೆರೋ ವಾಹನ…
ವೇಗವಾಗಿ ಬಂದ ಬೊಲೆರೊ ವಾಹನವೊಂದು ರಸ್ತೆಯಲ್ಲಿ ಚಲಿಸುತ್ತಿದ್ದ ಗೂಡ್ಸ್ ವಾಹನಕ್ಕೆ ಡಿಕ್ಕಿ ಹೊಡೆದು ನಾಲ್ಕು ಪಲ್ಟಿಯಾಗಿರುವ ಘಟನೆ ಉತ್ತರ ಪ್ರದೇಶದ ಗೊರಖ್ಪುರ-ವಾರಣಾಸಿ ಹೆದ್ದಾರಿಯ ಮೇಲ್ಸೇತುವೆಯಲ್ಲಿ ಶನಿವಾರ (ನ.22) ಬೆಳಗ್ಗೆ ಸಂಭವಿಸಿದೆ.ಅಪಘಾತದಲ್ಲಿ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ ಘಟನೆ ನಡೆದ ಕೂಡಲೇ ಬೊಲೆರೊ ವಾಹನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.ಘಟನಾ ಸ್ಥಳಕ್ಕೆ ಬಂದ ಪೊಲೀಸರು ವಾಹನವನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





