ಜೈಲಿನೊಳಗೆ ಗಾಂಜಾ ತಂದಿದ್ದ ಜೈಲಿನ ಸಿಬ್ಬಂದಿಯನ್ನು ಗುರುವಾರ ಬಂಧಿಸಲಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹದ ದ್ವಿತೀಯ ದರ್ಜೆ ಸಹಾಯಕ ಸಾತ್ವಿಕ್(25) ಬಂಧಿತ ಆರೋಪಿ.ಸಾತ್ವಿಕ್ ನಿಂದ 170 ಗ್ರಾಂ ಮಾದಕ ವಸ್ತು ಗಾಂಜಾ ವಶಕ್ಕೆ ಪಡೆಯಲಾಗಿದೆ. ಕರ್ತವ್ಯಕ್ಕೆ ಹಾಜರಾಗಲು ಜೈಲಿಗೆ ಆಗಮಿಸಿದ ಸಾತ್ವಿಕ್ ಅವರನ್ನು ಜೈಲಿನ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ಒಳ ಉಡುಪಿನಲ್ಲಿ ಗಮ್ ಟೇಪ್ ನಲ್ಲಿ ಸುತ್ತಿರುವ ಗಾಂಜಾ ಇಟ್ಟುಕೊಂಡಿರುವುದು ಪತ್ತೆಯಾಗಿದೆ.ಈ ಬಗ್ಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್ …
Read More »ಕಾರು ಪಂಚರ್ ಮಾಡಿ 23.90 ಲಕ್ಷ ಮೌಲ್ಯದ ಚಿನ್ನಾಭರಣ ದರೋಡೆ
ಬೆಂಗಳೂರು ದರೋಡೆ ಪ್ರಕರಣ ಬೆನ್ನಲ್ಲೇ ಜಿಲ್ಲೆಯ ಬಸವಕಲ್ಯಾಣದಲ್ಲಿ ಮತ್ತೊಂದು ದರೋಡೆ ಕೇಸ್ ಬೆಳಕಿಗೆ ಬಂದಿದೆ. ಸಸ್ತಾಪುರ ಬಂಗ್ಲಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಅಗುಂತಕರ ಗುಂಪು ಕಾರು ಪಂಚರ್ ಮಾಡಿ ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ಲೂಟಿ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಮಹಾರಾಷ್ಟ್ರದ ಸಾಂಗವಿ ಜಿಲ್ಲೆಯ ಯೇಥಗಾಂವ್ ಗ್ರಾಮದ ಆರು ಜನರು ತಮ್ಮ ಸಂಬಂಧಿಕರ ಮದುವೆ ರಿಶಪ್ಶನ್‌ಗಾಗಿ ಹೈದ್ರಾಬಾದ್‌ಗೆ ಕಾರಿನಲ್ಲಿ ತೆರಳುತ್ತಿದ್ದರು. ಪ್ರವೀಣ …
Read More »ಬಿಎಂಟಿಸಿ ಬಸ್ ಗೆ ವೃದ್ಧೆ ಬಲಿ: ಕಿಲ್ಲರ್ BMTCಗೆ ಒಂದೇ ದಿನ ಇಬ್ಬರು ಸಾವು
ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಬಸ್ ಗೆ ಒಂದೇ ದಿನ ಇಬ್ಬರು ಬಲಿಯಾಗಿದ್ದಾರೆ. ಬೆಳಿಗ್ಗೆಯಷ್ಟೇ 70 ವರ್ಷದ ವೃದ್ಧರೊಬ್ಬರ ಮೇಲೆ ಬಿಎಂಟಿಸಿ ಬಸ್ ಹರಿದು ಹೋಗಿತ್ತು. ಈ ಘಟನೆ ಬೆನ್ನಲ್ಲೇ ಮತ್ತೊಂದು ಅಪಘಾತ ಸಂಭವಿಸಿದ್ದು, ವೃದ್ಧೆಯೊಬ್ಬರು ಸಾವನ್ನಪ್ಪಿದ್ದಾರೆ.ಬೆಂಗಳೂರಿನ ಗೋವಿಂದರಾಜನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿಯಾಗಿ 60 ವರ್ಷದ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರ್ವಜ್ಞ ಸ್ಕೂಲ್ ಬಳಿ ಈ ದುರಂತ ಸಂಭವಿಸಿದೆ. ಸುಶೀಲಾ ಮೃತ ಮಹಿಳೆ. ಬೆಳಿಗ್ಗೆ ಮಡಿವಾಳ ಬಸ್ ನಿಲ್ದಾಣದ ಬಳಿ …
Read More »ಬೆಂಗಳೂರು: ರಾಬರಿಗೂ ಮುನ್ನ ಸ್ಥಳ ಪರಿಶೀಲಿಸಿ ಬಾರ್‌ಗೆ ಬಂದಿದ್ದ ಆರೋಪಿಗಳು ಸಿಸಿಟಿವಿಯಲ್ಲಿ ಸೆರೆ!
ರಾಬರಿ ಪ್ರಕರಣದಲ್ಲಿ ಪೊಲೀಸ್ ತನಿಖೆ ವೇಳೆ ಮತ್ತೆರಡು ಸಿಸಿಟಿವಿ ಲಭ್ಯವಾಗಿದ್ದು, ರಾಬರ್ಸ್ ಎಟಿಎಂ ರಾಬರಿಗೆ ಮುನ್ನ ನಗರದಲ್ಲಿ ಸ್ಥಳ ಪರಿಶೀಲನೆ ಮಾಡಿರೋದು ಪತ್ತೆಯಾಗಿದೆ. ಕೃತ್ಯದ ಹಿಂದಿನ ದಿನ ಸ್ಥಳ ಪರಿಶೀಲನೆ ಮಾಡಿರೋದು ಪತ್ತೆಯಾಗಿದ್ದು, ಅಂದರೆ 18 ನೇ ತಾರೀಕು ಬಾರ್ ಹಾಗೂ ಡೈರಿ ಸರ್ಕಲ್ ಫ್ಲೈ ಓವರ್ ಬಳಿ ರಾಬರ್ಸ್ ಕಂಡಿರುವುದು ಬೆಳಕಿಗೆ ಬಂದಿದೆ.ಬಾರ್ ನಲ್ಲಿ ಎಣ್ಣೆ ಖರೀದಿ ಮಾಡಿರೋ ಸಿಸಿಟಿವಿ ಲಭ್ಯವಾಗಿದ್ದು, ದಕ್ಷಿಣ ವಿಭಾಗದ ಪೊಲೀಸರ ಸಿಸಿಟಿವಿ ತಪಾಸಣೆ …
Read More »ತಂದೆ ಮಾಡಿದ ಸಾಲದ ತಪ್ಪಿಗೆ 10 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ವ್ಯಕ್ತಿ
ತಂದೆ ಮಾಡಿದ ಸಾಲದ ತಪ್ಪಿಗೆ 10 ವರ್ಷದ ಮಗಳ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯವೆಸಗಿರುವ ನೀಚ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.ಮತೀನ್ ಎಂಬಾತ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಹುಡುಕಾಟ ನಡೆಸಿದ್ದಾರೆ. ಬಾಲಕಿಯ ತಂದೆ ಸಂಘದಿಂದ ಪಡೆದುಕೊಂಡಿದ್ದ ಸಾಲವನ್ನು ಮರುಪಾವತಿ ಮಾಡದೇ ಸತಾಯಿಸುತ್ತಿದ್ದನಂತೆ. ಕೊಟ್ಟ ಸಾಲ ವಾಪಸ್ ಕೊಡುವಂತೆ ಕೇಳಲು ಆರೋಪಿ ಮತೀನ್, ಬಾಲಕಿ ಮನೆಬಳಿ ಹೋಗಿದ್ದಾನೆ. …
Read More »ಬೆಂಗಳೂರು ದರೋಡೆ ಕೇಸ್‌ನಲ್ಲಿ ಪೊಲೀಸ್ ಕೈವಾಡದ ಅನುಮಾನ?
ರಾಜಧಾನಿ ಬೆಂಗಳೂರಿನ ಅತ್ಯಂತ ಪ್ರಮುಖ ಪ್ರದೇಶದಲ್ಲಿ ನಡೆದ 7.11 ಕೋಟಿ ರೂಪಾಯಿ ದರೋಡೆ ಕೇಸ್‌ನಲ್ಲಿ ಪೊಲೀಸರ ಕೈವಾಡವಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರಾಬರಿ ಪ್ರಕರಣದಲ್ಲಿ ತನಿಖೆ ತೀವ್ರಗೊಳಿಸುತ್ತಿದ್ಧಂತೆ ವಿವಿಧ ವಿಚಾರಗಳು ಬಹಿರಂಗವಾಗುತ್ತಿದೆ.ದರೋಡೆಕೋರರ ಜೊತೆ ಸೇರಿ 7.11 ಕೋಟಿ ರೂಪಾಯಿ ಹಣವನ್ನು ದೋಚಲು ಪ್ಲ್ಯಾನ್ ಮಾಡಲಾಗಿತ್ತೇ ಎನ್ನುವ ಅನುಮಾನ ಬಂದಿದೆ. ಅಣ್ಣಪ್ಪ ನಾಯಕ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕ್ರೈಮ್ ಪಿಸಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
Read More »ಸಾಲದ ವಿಚಾರ.. ಸೊಸೆಯ ಜೀವವನ್ನೇ ತೆಗೆದ ಮಾವನ ಬಂಧನ!
ಹೊಂಗಸಂದ್ರದಲ್ಲಿ ನಡೆದಿದ್ದ ಗಾರ್ಮೆಂಟ್ಸ್ ನೌಕರೆ ಹತ್ಯೆ ಪ್ರಕರಣವನ್ನು ಬೊಮ್ಮನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಪ್ರಮೋದಾ ಕೊಲೆ ಪ್ರಕರಣ ಸಂಬಂಧ ಮೃತಳ ಮಾವನನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಮಂದಣ್ಣ ಎಂಬಾತನ ಬಂಧನವಾಗಿದ್ದು, ಮನೆಯಲ್ಲಿ ಪ್ರಮೋದಾಳ ಕುತ್ತಿಗೆ ಚಾಕುವಿನಿಂದ ಇರಿದು ಭಾನುವಾರ ರಾತ್ರಿ ಕೊಂದು ಆರೋಪಿ ಪರಾರಿಯಾಗಿದ್ದ.ಪ್ರಮೋದಾಳ ಕುತ್ತಿಗೆಗೆ ಅಡುಗೆ ಮನೆಯಿಂದ ಚಾಕು ತಂದು ಇರಿದು ಕೊಂದು ಮಂದಣ್ಣ ಪರಾರಿಯಾಗಿದ್ದ. ಸದ್ಯ ತನಿಖೆ ನಡೆಸಿ ಸೊಸೆ …
Read More »ಶಿಕ್ಷಕರ ಕಿರುಕುಳಕ್ಕೆ ಬಾಲಕ ಆತ್ಮಹತ್ಯೆ – ಹೆಚ್‌ಎಂ ಸೇರಿದಂತೆ ನಾಲ್ವರು ಸಸ್ಪೆಂಡ್!
ದಾಖಲಾಗಿರುವ ಎಫ್‌ಐಆರ್‌ನಲ್ಲಿ ಬಾಲಕನ ತಂದೆ ಪ್ರದೀಪ್ ಪಾಟೀಲ್, ಶಾಲೆಯ 5 ರಿಂದ 10 ನೇ ತರಗತಿಯ ಮುಖ್ಯೋಪಾಧ್ಯಾಯರಾದ ಅಪರಾಜಿತಾ ಪಾಲ್ ಮತ್ತು ಶಿಕ್ಷಕಿಯರಾದ ಜೂಲಿ ವರ್ಗೀಸ್, ಮನು ಕಲ್ರಾ ಮತ್ತು ಯುಕ್ತಿ ಅಗರ್ವಾಲ್ ಮಹಾಜನ್ ಅವರ ಹೆಸರನ್ನು ಉಲ್ಲೇಖಿಸಿದ್ದು, ಅವರು ತಮ್ಮ ಮಗನಿಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.ಶೌರ್ಯ ತನ್ನ ಆತ್ಮಹತ್ಯೆ ಪತ್ರದಲ್ಲಿ, ಕ್ಷಮಿಸಿ ಮಮ್ಮಿ, ಅಪ್ಪ , ನಾನು ತುಂಬಾ ಸಹ ನಿಮಗೆ ನೋವನ್ನ ಕೊಟ್ಟಿದ್ದೇನೆ. ಈಗ …
Read More »ಕಾರಿನ ಬಾನೆಟ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 10 ಲಕ್ಷ ರೂ. ವಶಕ್ಕೆ
ಕಾರಿನ ಬಾನೆಟ್‌ನಲ್ಲಿ ಬಚ್ಚಿಟ್ಟು ಸಾಗಿಸುತ್ತಿದ್ದ 10 ಲಕ್ಷ ರೂ.ಗಳನ್ನು ತಲಪಾಡಿಯಿಂದ ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಮಂಗಳೂರು ಭಾಗದಿಂದ ಬರುತ್ತಿದ್ದ ಕಾರನ್ನು ತಡೆದು ತಪಾಸಣೆ ಮಾಡಿದಾಗ ದಾಖಲೆ ಪತ್ರಗಳಿಲ್ಲದ 10 ಲಕ್ಷ ರೂ. ಪತ್ತೆ ಯಾಗಿದ್ದು ವಶಪಡಿಸಿಕೊಳ್ಳಲಾಗಿದೆ.
Read More »ಬೆಂಗಳೂರಿನಲ್ಲಿ 7.11 ಕೋಟಿ ದರೋಡೆ ಕೇಸ್: ರಾಬರಿಯಲ್ಲಿ ಪೊಲೀಸ್ ಕೈವಾಡ!? ಕಾನ್ಸ್ಟೇಬಲ್ ಅರೆಸ್ಟ್!
ಬಾಣಸವಾಡಿ ಕಲ್ಯಾಣ ನಗರದ ಸ್ವಿಫ್ಟ್ ಕಾರಿನ ನಂಬರ್ ಬಳಸಿ ಈ ದರೋಡೆ ನಡೆದಿದ್ದು, ಇದರಲ್ಲಿ ಪೊಲೀಸ್ ಪೇದೆಯೇ ಕೈವಾಡ ಮಾಡಿದ್ದಾನೆಯೇ ಎಂಬುದು ಈಗ ತನಿಖಾಧಿಕಾರಿಗಳ ಚಿಂತೆಯ ವಿಷಯವಾಗಿದೆ. ಇದೇ ಮೊದಲ ಬಾರಿ ಅಲ್ಲ, ಹಿಂದೆ ಕುಂಬಳಗೋಡು ಠಾಣಾ ವ್ಯಾಪ್ತಿಯ ಮತ್ತೊಂದು ದರೋಡೆ ಪ್ರಕರಣದಲ್ಲೂ ಅಣ್ಣಪ್ಪ ನಾಯಕನ ಹೆಸರು ಕೇಳಿಬಂದಿದ್ದುದರಿಂದ ಶಂಕೆ ಇನ್ನಷ್ಟು ಗಾಢವಾಗಿದೆ. 7.11 ಕೋಟಿ ಲೂಟಿ ಮಾಡಲು ದರೋಡೆಕೋರರೊಂದಿಗೆ ಸೇರಿದ್ದಾನಾ ಎಂಬುದನ್ನು ಸ್ಪಷ್ಟಪಡಿಸಲು ಪೊಲೀಸರು ಸದ್ಯವೂ ಗಟ್ಟಿತನಿಖೆ ಮುಂದುವರಿಸಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





