ಮೈಸೂರು: ಟಿ. ನರಸೀಪುರದಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ವೇಳೆ ಪ್ರಚೋದನಕಾರಿ ಭಾಷಣ, ಜಾತಿ-ಧರ್ಮಗಳ ನಡುವೆ ದ್ವೇಷಕ್ಕೆ ಉತ್ತೇಜನ ಹಾಗೂ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪೊಲೀಸ್ ಸಬ್ಇನ್ಸ್ಪೆಕ್ಟರ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದ್ದು, ಶೋಭಾಯಾತ್ರೆ ವೇಳೆ ಪ್ರತಾಪ್ ಸಿಂಹ ಅವರು ಕರ್ತವ್ಯನಿರತ ಇನ್ಸ್ಪೆಕ್ಟರ್ ಧನಂಜಯ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ …
Read More »ಬಾಣಂತಿಯ ಆರೈಕೆಗೆ ಆಗಮಿಸಿದ ಯುವತಿಯ ದುಷ್ಕೃತ್ಯ: ನಗ್ನ ದೃಶ್ಯ ಚಿತ್ರೀಕರಿಸಿ ಹಂಚಿಕೆ
ಕಾಸರಗೋಡು: ಬಾಣಂತಿಯ ಆರೈಕೆಗೆ ಬಂದಿದ್ದ 25 ವರ್ಷದ ಕರ್ನಾಟಕ ಮೂಲದ ಸುಲೈಖಾ ರಾಸಿಯಾ ಎಂಬ ಯುವತಿ, ಮಹಿಳೆಯ ನಗ್ನ ದೃಶ್ಯಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ವಾಟ್ಸ್ಆಯಪ್ ಮೂಲಕ ಹಲವರಿಗೆ ಹಂಚಿದ ಆರೋಪದ ಮೇಲೆ ಕಾಸರಗೋಡು ನಗರ ಪೊಲೀಸರು ಬಂಧಿಸಿದ್ದಾರೆ. ಸೆ.7ರಿಂದ 20ರ ನಡುವೆ ಆರೈಕೆಯ ನೆಪದಲ್ಲಿ ರಹಸ್ಯ ಕ್ಯಾಮೆರಾ ಬಳಸಿ ದೃಶ್ಯಗಳನ್ನು ಚಿತ್ರೀಕರಿಸಿ ಹಂಚಿಕೊಂಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ದೃಶ್ಯಗಳನ್ನು ಪಡೆದವರಲ್ಲಿ ಆರೋಪಿಯ ಪತಿಯೂ ಸೇರಿದ್ದಾನೆ ಎನ್ನಲಾಗಿದೆ. ಆರೋಪಿಯ ಮೊಬೈಲ್ ಪರಿಶೀಲಿಸಿದಾಗ …
Read More »ಅಕ್ರಮ ಜಾನುವಾರು ಸಾಗಾಟ ಜಾಲ ಭೇದಿಸಿದ ಪೊಲೀಸರು, 17 ಜಾನುವಾರುಗಳ ರಕ್ಷಣೆ
ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಕಂಕನಾಡಿ ನಗರ ಪೊಲೀಸರು ತಡೆದು, 17 ಜಾನುವಾರುಗಳನ್ನು ರಕ್ಷಿಸಿದ್ದಾರೆ. ಸೆ.22ರಂದು ಬೆಳಗ್ಗೆ ಆಡ್ಯಾರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಲಾರಿಯನ್ನು ಪಡೀಲ್ನಲ್ಲಿ ತಡೆದು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಲಾರಿಯಲ್ಲಿ ಜಾನುವಾರುಗಳನ್ನು ಯಾವುದೇ ಸುರಕ್ಷತಾ ಕ್ರಮವಿಲ್ಲದೆ ಬಿಗಿಯಾಗಿ ಕಟ್ಟಿ, ಒಂದರ ಮೇಲೊಂದು ಹಾಕಿ ಸಾಗಿಸುತ್ತಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಮೂಲದ 23 ವರ್ಷದ ಲಾರಿ ಚಾಲಕ ಸಾದಿಕ್ …
Read More »ರಾಯಚೂರಿನಲ್ಲಿ ಮಹಿಳೆ ಹತ್ಯೆ ಕೇಸ್: ಪ್ರಿಯಕರ ಸೇರಿ ಇಬ್ಬರ ಬಂಧನ
ರಾಯಚೂರು: ಸಿಂಧನೂರು ತಾಲೂಕಿನ ಹೊರವಲಯದ ಜಮೀನಿನಲ್ಲಿ 26 ವರ್ಷದ ಸ್ನೇಹಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಶುಭಮ್ ಎಂಬಾತನನ್ನು ಬಂಧಿಸಿದ್ದಾರೆ. ಸೆ.19ರಂದು ಜಮೀನಿನಲ್ಲಿ ಸ್ನೇಹಾ ಮೃತದೇಹ ಪತ್ತೆಯಾಗಿದ್ದು, ಅವರ ಒಂದೂವರೆ ವರ್ಷದ ಮಗು ಮೃತದೇಹದ ಪಕ್ಕದಲ್ಲೇ ಇತ್ತು. ಪೊಲೀಸರ ಪ್ರಕಾರ ಸ್ನೇಹಾ ಹಾಗೂ ಶುಭಮ್ ನಡುವೆ ಆತ್ಮೀಯ ಪರಿಚಯವಿತ್ತು. ಘಟನೆ ನಡೆದ ದಿನ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ಶುಭಮ್ ಹಲ್ಲೆ ನಡೆಸಿ ಸ್ನೇಹಾಳನ್ನು ಹತ್ಯೆ ಮಾಡಿದ್ದಾನೆ …
Read More »ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ
ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ ಮಾರಕಾಸ್ತ್ರಗಳಿಂದ ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ. ಗಣೇಶೋತ್ಸವದ ವೇಳೆ ಎರಡು ಗುಂಪುಗಳ ನಡುವೆ ನಡೆದಿದ್ದ ಗಲಾಟೆಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿರುವ ಶಂಕೆ ವ್ಯಕ್ತವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ನಾಲ್ವರು ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಬಂಧನಕ್ಕೆ ಮೂರು ವಿಶೇಷ …
Read More »ಮಾಜಿ ಸೈನಿಕನ ಕೊಲೆ: ಒಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರಿಗೆ 10 ವರ್ಷ ಜೈಲು
ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ 2023ರ ಜೂನ್ 4ರಂದು ಜಮೀನು ಪಾಲು ಹಂಚಿಕೆ ವಿಚಾರವಾಗಿ ನಡೆದ ಗಲಾಟೆಯಲ್ಲಿ ಮಾಜಿ ಸೈನಿಕ ಸುರೇಶ ಮೃತಪಟ್ಟಿದ್ದರು. ಮತ್ತೊಬ್ಬರಾದ ಸದಾಶಿವ ಅವರಿಗೆ ಗಂಭೀರ ಗಾಯಗಳಾಗಿದ್ದವು. ಪ್ರಕರಣದಲ್ಲಿ ಶಂಕ್ರಪ್ಪ ಮಲ್ಲಸರ್ಜ ಖನಗಾಂವಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಶಿಧರ, ಮಲ್ಲಸರ್ಜ ಹಾಗೂ ಮೀನಾಕ್ಷಿ ಅವರಿಗೆ ತಲಾ 10 ವರ್ಷಗಳ ಕಠಿಣ ಶಿಕ್ಷೆ ನೀಡಲಾಗಿದೆ. ನಾಲ್ವರು ಆರೋಪಿತರಿಗೆ ಒಟ್ಟು ₹1.22 ಲಕ್ಷ ದಂಡ ವಿಧಿಸಿ ಬೆಳಗಾವಿಯ 10ನೇ …
Read More »ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್
ಕಾಸರಗೋಡು ಜಿಲ್ಲೆಯ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪ್ಲಸ್ ಒನ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್ ಮಾಡಿದ ಆರೋಪದಡಿ 14 ಮಂದಿ ಪ್ಲಸ್ ಟು ವಿದ್ಯಾರ್ಥಿಗಳ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಶಿಕ್ಷಣ ಸಂಸ್ಥೆಯಿಂದ ಅಮಾನತುಗೊಳಿಸಲಾಗಿದೆ. ಆ್ಯಂಟಿ ರ್ಯಾಗಿಂಗ್ ಸ್ಕ್ವಾಡ್ ನೀಡಿದ ವರದಿ ಆಧರಿಸಿ ಶಾಲೆಯ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ಆಧಾರದ ಮೇಲೆ ಪೊಲೀಸರು 14 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲೆಯ ಐವರು …
Read More »ಚಿತ್ರದುರ್ಗ: ಪ್ರೀತಿಯ ಹಿನ್ನಲೆ, ಯುವತಿಯ ಪೊಷಕರಿಂದ ಯುವಕನ ಹತ್ಯೆ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್ ಹಾಗೂ ತಳವಾರಹಳ್ಳಿ ಬಳಿ ಪ್ರೀತಿಯ ವಿಚಾರಕ್ಕೆ ಯುವಕನನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಹಾನಗಲ್ ಗ್ರಾಮದ ನಾಗೇಶ್ (22) ಮೃತ ಯುವಕ. ರುದ್ರಮ್ಮನಹಳ್ಳಿ ಮೂಲದ ಯುವತಿಯೊಂದಿಗೆ ನಾಗೇಶ್ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದನು. ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಮಾತುಕತೆಗಾಗಿ ನಾಗೇಶ್ನನ್ನು ಕರೆಸಿಕೊಂಡು ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಕೊಲೆ ಬಳಿಕ ತಳವಾರಹಳ್ಳಿ ಬಳಿ ನಾಗೇಶ್ನ ಮೃತದೇಹ ಬಿಸಾಡಿರುವ …
Read More »ದೇಶದಲ್ಲಿ 220 ಔಷಧಗಳು ನಕಲಿ : ‘CDSCO’ ರಿಪೋರ್ಟ್ನಲ್ಲಿ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ!
ಬೆಂಗಳೂರು: 2026ರ ಆಗಸ್ಟ್ನಲ್ಲಿ ದೇಶಾದ್ಯಂತ ನಡೆಸಿದ ಔಷಧ ಗುಣಮಟ್ಟ ಪರೀಕ್ಷೆಯಲ್ಲಿ ಒಟ್ಟು 220 ಔಷಧ ಮಾದರಿಗಳು NSQ (ನಿಗದಿತ ಗುಣಮಟ್ಟಕ್ಕೆ ಹೊಂದಿಕೆಯಾಗದ) ಎಂದು ಪತ್ತೆಯಾಗಿವೆ. ಕೇಂದ್ರ ಔಷಧ ಪ್ರಯೋಗಾಲಯಗಳ ಪರೀಕ್ಷೆಯಲ್ಲಿ 29 ಹಾಗೂ ರಾಜ್ಯಗಳ ಪ್ರಯೋಗಾಲಯಗಳಲ್ಲಿ 191 ಮಾದರಿಗಳು ವಿಫಲವಾಗಿವೆ. ಇದೇ ವೇಳೆ ದೆಹಲಿಯಿಂದ ಸಂಗ್ರಹಿಸಿದ ಒಂದು ಔಷಧ ಮಾದರಿ ನಕಲಿ ಎಂದು ಗುರುತಿಸಲಾಗಿದೆ. ಅನುಮತಿ ಇಲ್ಲದ ತಯಾರಕರು ಮತ್ತೊಂದು ಕಂಪನಿಯ ಬ್ರ್ಯಾಂಡ್ ಹೆಸರನ್ನು ಅಕ್ರಮವಾಗಿ ಬಳಸಿಕೊಂಡು ಔಷಧ ತಯಾರಿಸಿ …
Read More »ಪಿಎಸ್ಐ ಜೊತೆ ಮಾತಿನ ಚಕಮಕಿ ಪ್ರಕರಣ: ಐಶ್ವರ್ಯಗೌಡರಿಂದ ಬೇಷರತ್ ಕ್ಷಮೆಯಾಚನೆ
ಮಂಡ್ಯ ಜಿಲ್ಲೆಯ ಪಾಂಡವಪುರದ ಉಕ್ಕಡ ಮಾರಮ್ಮ ದೇವಸ್ಥಾನದಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪಿಎಸ್ಐ ಸವಿತಾ ಪಾಟೀಲ್ ಅವರೊಂದಿಗೆ ನಡೆದ ಮಾತಿನ ಚಕಮಕಿಗೆ ಸಂಬಂಧಿಸಿದಂತೆ ಶಾಸಕ ಸುರೇಶ್ ಗೌಡ ಅವರ ಪುತ್ರಿ ಐಶ್ವರ್ಯಗೌಡ ಕ್ಷಮೆಯಾಚಿಸಿದ್ದಾರೆ. ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳೊಂದಿಗೆ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಹೆಚ್ಚಿನ ಭಕ್ತರಿದ್ದ ಕಾರಣ ಬೇಗ ದರ್ಶನ ಪಡೆಯಲು ಮುಂದಾಗಿದ್ದಾಗಿ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ಜೊತೆ ಮಾತಿನ ಚಕಮಕಿ ನಡೆದಿದ್ದು, ಉದ್ವೇಗದಿಂದ ಅಹಿತಕರ ಘಟನೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





