Breaking News

BigTv News

ಕಾರವಾರ: ಮೆಡಿಕಲ್ ವಿದ್ಯಾರ್ಥಿಗಳ ಬುಲೆಟ್ ಬೈಕ್ ಸ್ಕೂಟಿಗೆ ಡಿಕ್ಕಿ, ಮಗ ಕಣ್ಮುಂದೆ ಸಾವು, ತಾಯಿ ಗಂಭೀರ ಗಾಯ!

ಬುಲೆಟ್ ಬೈಕ್ ಹಾಗೂ ಸ್ಕೂಟಿ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದ ಆರ್‌ಟಿಒ ಕಚೇರಿ ಬಳಿ ನಡೆದಿದೆ.ಚಿರಂಜೀವಿ ಬ್ರಹ್ಮಾನಂದ ಕುಂಜಿ(15) ಮೃತ ದುರ್ದೈವಿ. ಮೂಲತಃ ಯಲ್ಲಾಪುರ ತಾಲೂಕಿನ ಇಡಗುಂದಿ ನಿವಾಸಿಗಳು.ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಬುಲೆಟ್‌ ಬೈಕ್ ರಭಸವಾಗಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಚಿರಂಜೀವ ತಲೆ‌ ರಸ್ತೆಗೆ ಬಡಿದದ್ದರಿಂದ ತೀವ್ರ ರಕ್ತಸ್ರಾವದೊಂದಿಗೆ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿದ್ದಾರೆ.

Read More »

ಬೆಂಗಳೂರು – ಹಾರ್ನ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಕಾರಿನಲ್ಲಿದ್ದ ಯುವಕ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿ

ಸ್ಕೂಟರ್ ನಲ್ಲಿದ್ದವರು ಹಾರ್ನ್ ಮಾಡಿದ್ದಾರೆ ಎಂಬ ಕಾರಣಕ್ಕೆ ಕಾರಿನಲ್ಲಿದ್ದ ಯುವಕನೊಬ್ಬ ಸ್ಕೂಟರ್ ನ್ನು ಪಾಲೋ ಮಾಡಿ ಅದಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಿಸಿಟಿವಿ ಆದಾರದ ಮೇಲೆ ಆರೋಪಿ ಕಾರಿನ ಚಾಲಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತನನ್ನು ಕೊಡಿಗೇಹಳ್ಳಿ ನಿವಾಸಿ ಸುಕೃತ್ ಗೌಡ ಎಂದು ಗುರುತಿಸಲಾಗಿದ್ದು, ಈತ ವೈಟ್‌ಫೀಲ್ಡ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ಅಂಕಿತಾ ಪಟೇಲ್ (31), ತಮ್ಮ ಪತಿ ವಿನೀತ್ ಎ (33) …

Read More »

ಶಬರಿಮಲೆ ಚಿನ್ನ ಕಳ್ಳತನ ಪ್ರಕರಣ: ಭ್ರಷ್ಟಾಚಾರ ವಿರೋಧಿ ಕಾಯ್ದೆ ಜಾರಿಗೆ ಎಸ್‌ಐಟಿ ಚಿಂತನೆ.

ಕೇರಳ ಹೈಕೋರ್ಟ್‌ ನೇಮಿಸಿದ ವಿಶೇಷ ತನಿಖಾ ತಂಡ (ಎಸ್‌ಐಟಿ) ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದಲ್ಲಿ ಚಿನ್ನ ಕಳವು ಪ್ರಕರಣ ಸಂಬಂಧಿಸಿ ಆರೋಪಿಗಳ ಸ್ಥಾನದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಮಾಜಿ ಮತ್ತು ಹಾಲಿ ಅಧಿಕಾರಿಗಳು, ಉನ್ನತ ರಾಜಕೀಯ ನೇಮಕಾತಿದಾರರು ಸಹಿತ ಭ್ರಷ್ಟಾಚಾರ ತಡೆ ಕಾಯ್ದೆಯ ವ್ಯಾಪ್ತಿಗೆ ತರುವ ಕುರಿತು ಪರಿಶೀಲಿಸುತ್ತಿದೆ .ದೇವಾಲಯದ ಕಲ್ಲಿನ ಕೆತ್ತನೆ ಮತ್ತು ಶಿಲ್ಪಗಳನ್ನು ನವೀಕರಣಕ್ಕಾಗಿ ಪ್ರಮುಖ ಆರೋಪಿ ಉನ್ನಿಕೃಷ್ಣನ್‌ ಪೊಟ್ಟಿಗೆ ಹಸ್ತಾಂತರಿಸುವ ಮೊದಲು ಚಿನ್ನ ಲೇಪಿತ …

Read More »

ಮೇಕೆದಾಟು’ ಯೋಜನೆ : ಸುಪ್ರಿಂಕೋರ್ಟ್ ನಲ್ಲಿ ಕರ್ನಾಟಕಕ್ಕೆ ಗೆಲುವು, ತಮಿಳುನಾಡು ಸಲ್ಲಿಸಿದ ಅರ್ಜಿ ವಜಾ.

ಮೇಕೆದಾಟು ಯೋಜನೇ ಸಂಬಂಧ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ಗೆಲುವು ಸಿಕ್ಕಿದೆ. ತಮಿಳುನಾಡು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇದೀಗ ವಜಾಗೊಳಿಸಿದೆ.ಮೇಕೆದಾಟು ಯೋಜನೆ ಇನ್ನು ಆರಂಭಿಕ ಹಂತದಲ್ಲಿ ಇದೆ. ಯಾವುದೇ ನಿರ್ಮಾಣ ಕಾರ್ಯ ಪ್ರಾರಂಭವಾಗಿಲ್ಲ. ಈ ಯೋಜನೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗದಂತಹ ತಜ್ಞ ಸಂಸ್ಥೆಗಳ ಪರಿಶೀಲನೆಯಲ್ಲಿದೆ. ಹೀಗಾಗಿ ಮಧ್ಯಪ್ರವೇಶ ಮಾಡಲ್ಲ ಎಂದು ಸುಪ್ರೀಂಕೋರ್ಟ್ ತಮಿಳುನಾಡು ಸಲ್ಲಿಸಿದ್ದ ಪರಿಟ್ ಅರ್ಜಿ ವಜಾ ಗೊಳಿಸಿ ಆದೇಶ …

Read More »

ಸಿನಿಮಾದಲ್ಲಿ ಅವಕಾಶ ನೀಡಲು ಬಾಲಕಿಯ ನಗ್ನ ಭಾವಚಿತ್ರ ಕೇಳಿದ ಯುವಕನ ಬಂಧನ

ಸಿನಿಮಾದಲ್ಲಿ ಅವಕಾಶ ಕಲ್ಪಿಸುವುದಾಗಿ ತಿಳಿಸಿ ಬಾಲಕಿಯ ನಗ್ನ ಭಾವಚಿತ್ರಗಳನ್ನು ಕೇಳಿದ ಕಾಸರಗೋಡು ಕಾಟಿಪಳ್ಳದ ಶಿಬಿನ್‌ (29) ಎಂಬಾತನನ್ನು ಕಲ್ಲಿಕೋಟೆ ಬೇಪೂರು ಪೊಲೀಸರು ಬಂಧಿಸಿದ್ದಾರೆ. ಬೇಪೂರು ನಿವಾಸಿಯಾದ 10ನೇ ತರಗತಿ ವಿದ್ಯಾರ್ಥಿನಿಗೆ ತಾನು ಸಿನಿಮಾ ನಿರ್ದೇಶಕನೆಂದೂ, ಸಿನಿಮಾದಲ್ಲಿ ಅಭಿನಯಿಸಲು ಅವಕಾಶವೊದಗಿಸುವುದಾಗಿಯೂ ಅದಕ್ಕಾಗಿ ಆಕೆಯ ನಗ್ನ ಚಿತ್ರಗಳನ್ನು ನೀಡುವಂತೆ ತಿಳಿಸಿ ಬಾಲಕಿಗೆ ಫೋನ್‌ ಕರೆ ಮಾಡಿದ್ದಲ್ಲದೆ ವಾಟ್ಸ್‌ಆಯಪ್‌ ಮೂಲಕ ಸಂದೇಶ ಕಳುಹಿಸಿದ್ದನೆಂದು ಪೊಲೀಸರಿಗೆ ದೂರು ನೀಡಲಾಗಿತ್ತು.ಪೊಲೀಸರು ಸೈಬರ್‌ ವಿಭಾಗದ ನೆರವಿನೊಂದಿಗೆ ಶಿಬಿನ್‌ನನ್ನು ಬಂಧಿಸಿದ್ದಾರೆ.

Read More »

ಪುಲ್ವಾಮಾದಲ್ಲಿ ಭದ್ರತಾ ಪಡೆಗಳಿಂದ ಶಂಕಿತನ ಮನೆ ನೆಲಸಮ

ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಪುಲ್ವಮಾದಲ್ಲಿ ಪ್ರಮುಖ ಶಂಕಿತ ಡಾ. ಉಮರ್ ಉನ್ ನಬಿ ನಿವಾಸವನ್ನು ಭದ್ರತಾ ಪಡೆಗಳು ನೆಲಸಮಗೊಳಿಸಿದ್ದಾರೆ.ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟದಲ್ಲಿ 13 ಜನರು ಮೃತಪಟ್ಟಿದ್ದರು. 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.ಈ ಕುರಿತ ತನಿಖೆಯ ಭಾಗವಾಗಿ ಸುಧಾರಿತ ಸ್ಫೋಟಕ ಸಾಧನವನ್ನು ಬಳಸಿ ಡಾ. ಉಮರ್ ಮನೆಯನ್ನು ಧ್ವಂಸ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟಕ್ಕೆ ಬಳಸಿದ ಹುಂಡೈ i20 ಕಾರು …

Read More »

ಅಂಗವಿಕಲ ಯುವತಿ ಮೇಲೆ ರೇಪ್‌ ಯತ್ನ: ಆರೋಪಿಗೆ ಗೂಸಾ

ಮನೆಯಲ್ಲಿ ಒಂಟಿಯಾಗಿದ್ದ ಅಂಗವಿಕಲ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ಸ್ಥಳೀಯರೇ ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಆಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಲಕ್ಷ್ಮಣರಾವ್‌ ನಗರ ನಿವಾಸಿ ವಿಘ್ನೇಶ್ ಅಲಿಯಾಸ್‌ ದಾಡು (26) ಬಂಧಿತ ಆರೋಪಿ.ಈತ ನ.10ರಂದು ಲಕ್ಷ್ಮಣ್‌ರಾವ್‌ ನಗರ ನಿವಾಸಿ 20 ವರ್ಷದ ಅಂಗವಿಕಲ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಪೋಷಕರ ಜತೆ ವಾಸವಾಗಿರುವ ಸಂತ್ರಸ್ತೆಗೆ ಮಾತು ಬರುವುದಿಲ್ಲ. ಜತೆಗೆ ಕಾಲು ಸ್ವಾಧೀನವಿಲ್ಲ. ಯುವತಿ …

Read More »

ಮಗನ ಸಾವು; ಸೊಸೆ ಮೇಲೆ ಅನುಮಾನ

ಯಡ್ರಾಮಿ: ಮಗನ ಸಾವಿಗೆ ಸೊಸೆ ಕಾರಣವೆಂದು ತಿಳಿದು ಮಗನ ತಾಯಿ ಲಕ್ಷ್ಮೀಬಾಯಿ ಹದಿನಾಲ್ಕು ತಿಂಗಳ ಬಳಿಕ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ಹೂತಿದ್ದ ಹೆಣವನ್ನು ಹೊರ ತೆಗೆಸಿ ಶವ ಪರೀಕ್ಷೆ ಮಾಡಿಸಿದ ಘಟನೆ ಬುಧವಾರ ಮುಂಜಾನೆ ನಡೆಯಿತು.36 ವರ್ಷದ ಪಂಡಿತ್ ದೊಡಮನಿ ಹದಿನಾಲ್ಕು ತಿಂಗಳ ಹಿಂದೆ ಮೃತಪಟ್ಟ ದುರ್ದೈವಿ. ಇವರು ಯಡ್ರಾಮಿ ತಾಲ್ಲೂಕಿನ ಕಣಮೇಶ್ವರ ಗ್ರಾಮದಲ್ಲಿ ವಾಸವಾಗಿದ್ದರು.ಮೃತ ಪಂಡಿತ್‌ ಅವರ ತಾಯಿ ಮಗನ ಸಾವಿನ ವಿಚಾರದಲ್ಲಿ ಸೊಸೆ ರೂಪಾ ಮೇಲೆ ಅನುಮಾನ …

Read More »

ಪ್ರೀತಿಸಿ ಮದುವೆಯಾದ ಜೋಡಿಗೆ ನೀವು ಅಣ್ಣ-ತಂಗಿ ಎಂದ ಪೋಷಕರು; ನನಗೆ ಅವನೇ ಬೇಕೆಂದು ವಿಷ ಕುಡಿದ ಯುವತಿ

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗ್ರಾಮದಲ್ಲಿ ಹದಿಹರೆಯದ ವಯಸ್ಸಿನಲ್ಲಿ ತಿಳಿಯದೆಯೇ ಯುವಕ-ಯುವತಿಯೊಬ್ಬಳು ಪರಸ್ಪರ ಪ್ರೀತಿಸಿ ಮನೆ ಬಿಟ್ಟು ಬಂದು ಮದುವೆಯಾಗಿದ್ದರು. ಆದರೆ ಮನೆಗೆ ಬಂದ ಜೋಡಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಗಿದೆ.ಹೌದು… ಅದಕ್ಕೆ ಕಾರಣ ಸಂಬಂಧ. ಈ ಜೋಡಿ ವರಸೆಯಲ್ಲಿ ಅಣ್ಣಾ-ತಂಗಿ ಆಗಬೇಕು ಎಂದು ಪೋಷಕರು ಹೇಳಿದ್ದೂ ಈ ಮದುವೆಗೆ ಸುತಾರಾಂ ಒಪ್ಪಿವುದಿಲ್ಲ ಎಂದು ಪೋಷಕರು ಹಠ ಹಿಡಿದಿದ್ದರು. ಗೋಪಲ್ಲಿ ಗ್ರಾಮದ 23 ವರ್ಷದ ನಿತಿನ್ ಹಾಗೂ …

Read More »

ಮೂಡುಬಿದಿರೆಯ ಕಾಲೇಜು ಕ್ಯಾಂಟಿನ್‌ನ ಕೆಲಸಗಾರನ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಶಿಕ್ಷೆ

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರ ಕ್ಯಾಂಟಿನ್‌ನಲ್ಲಿ ಕೆಲಸಗಾರ ಚೇತನ್‌ನನ್ನು ಐದು ವರ್ಷಗಳ ಹಿಂದೆ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿದಾನಂದ ಪರಶುನಾಯ್ಕರ್ ಎಂಬವನಿಗೆ ನಗರದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಿದೆ.ಮೃತ ಚೇತನ್ ಮತ್ತು ಆರೋಪಿ ಚಿದಾನಂದ ಒಟ್ಟಿಗೆ ಕಾಲೇಜಿನ ಕ್ಯಾಂಟಿನ್‌ನಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲಸದ ವಿಚಾರದಲ್ಲಿ ಇವರ ನಡುವೆ ತಕರಾರು ಉಂಟಾಗಿದ್ದು, 2020 ಅ.30ರಂದು ರಾತ್ರಿ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಸಿಬ್ಬಂದಿಯ ವಿಶ್ರಾಂತಿ ಕೊಠಡಿಗೆ …

Read More »