Breaking News

BigTv News

IISc ನಲ್ಲೇ 1.9 ಕೋಟಿ ಅಕ್ರಮ: ವಿದ್ಯಾರ್ಥಿಗಳ ವಿದೇಶಿ ಪ್ರಯಾಣದ ಹಣ ನುಂಗಿದ ಗುತ್ತಿಗೆ ನೌಕರರು ಅರೆಸ್ಟ್.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿಯೇ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಆರೋಪಿಗಳು, ಇಬ್ಬರು ಮಹಿಳೆಯರು ಹಾಗೂ ಒಬ್ಬ ಪುರುಷ 1.9 ಕೋಟಿ ರೂಪಾಯಿ ಹಣದ ಅಕ್ರಮದಲ್ಲಿ ಸಿಕ್ಕಿಬಿದ್ದಿದ್ದಾರೆ.ಸದಾಶಿವನಗರ ಪೊಲೀಸ್ ಠಾಣೆಯವರು ನಡೆಸಿದ ತನಿಖೆಯಲ್ಲಿ, ಆರೋಪಿಗಳು ವಿದ್ಯಾರ್ಥಿಗಳ ವಿದೇಶಿ ಪ್ರಯಾಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಕಲಿ ಮಾಡಿ, ಅವರ ಬ್ಯಾಂಕ್ ಖಾತೆಗಳಲ್ಲಿ ಇರುವ ಮೊತ್ತವನ್ನು ತಮ್ಮ ಕುಟುಂಬ ಸದಸ್ಯರ ಖಾತೆಗೆ ವರ್ಗಾಯಿಸುತ್ತಿದ್ದರೆಂಬುದು ಪತ್ತೆಯಾಗಿದೆ.

Read More »

ಲೋನ್ ಮಾಡಿ ಐಫೋನ್‌ ಖರೀದಿ, ಕಂತು ಕಟ್ಟದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ!

ಮೊಬೈಲ್ ಫೋನ್ ಲೋನ್ ಕಟ್ಟಿಲ್ಲ ಎಂದು ಆರೋಪಿಸಿ ಖಾಸಗಿ ಫೈನಾನ್ಸ್ ಕಂಪನಿಯ ಉದ್ಯೋಗಿಗಳು ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ಪಾಲಕ್ಕಾಡ್‌ನಲ್ಲಿ ನಡೆದಿದೆ.ಪಾಲಕ್ಕಾಡ್‌ನ ವಾಣಿಯಂಕುಳಂ ಪನಯೂರ್ ನಿವಾಸಿ ಯುವಕನ ತಲೆಬುರುಡೆ ಮತ್ತು ದವಡೆಗೆ ಗಂಭೀರ ಗಾಯಗಳಾಗಿವೆ.ಮನೆಗೆ ಬಂದು, ಕಂಪನಿಯ ಗ್ರಾಹಕರಲ್ಲದ ತಾಯಿಯ ಫೋನ್ ನಂಬರ್ ಪಡೆದಿದ್ದನ್ನು ಶರೀಫ್ ಪ್ರಶ್ನಿಸಿದ್ದಾನೆ. ಈ ವಿಚಾರವಾಗಿ ಫೋನ್‌ನಲ್ಲಿ ನಡೆದ ವಾಗ್ವಾದವೇ ಹಲ್ಲೆಯಲ್ಲಿ ಕೊನೆಗೊಂಡಿದೆ.

Read More »

ಭಟ್ಕಳ: ಡಿಸ್ಕೌಂಟ್ ಆಸೆ ತೋರಿಸಿ 300 ಜನರಿಗೆ ಪಂಗನಾಮ; ತಮಿಳುನಾಡು ಮೂಲದ ಮೂವರು ಅರೆಸ್ಟ್.

ಡಿಸ್ಕೌಂಟ್ ಆಫರ್ ಆಮಿಷ ತೋರಿಸಿ 300 ಜನರಿಗೆ ಪಂಗನಾಮ ಹಾಕಿದ ಪ್ರಕರಣ ಸಂಬಂಧ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಭಟ್ಕಳ ಪೊಲೀಸರು ಬಂಧಿಸಿದ್ದಾರೆ.ಎಮ್.ಗಣೇಶನ್ (52), ಸೌತ್ ಸ್ಟ್ರೀಟ್ ರಾಜಾಮಡಂ ನ ತ್ಯಾಗರಾಜನ್ (65) ,ಅನಸಾಲ ಸ್ಟ್ರೀಟ್ ನ ಮೈಯನಾದನ್(42) ಬಂಧಿತ ಆರೋಪಿಗಳು.ಪ್ರಕರಣ ಸಂಬಂಧ ಭಟ್ಕಳ ಸಿಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್‌ಐ ನವೀನ್ ನಾಯ್ಕ್ ನೇತೃತ್ವದ ತಂಡ ಆರೋಪಿಗಳ ಬೆನ್ನುಹತ್ತಿದ್ದರು. ಘಟನೆಯ ನಂತರ ಕೇವಲ ಒಂದು ವಾರದೊಳಗೆ ಭಟ್ಕಳ ಪೊಲೀಸರು ಎಲ್ಲ …

Read More »

Mangaluru: ಮಹಿಳೆ ನಾಪತ್ತೆ; ದೂರು ದಾಖಲು.

ನಗರದ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಕೆಲಸಕ್ಕೆಂದು ಮನೆಯಿಂದ ತೆರಳಿ ಬಳಿಕ ನಾಪತ್ತೆಯಾಗಿರುವ ಘಟನೆ ನಡೆದಿದೆ. ಜಪ್ಪು ಸೂಟರ್ ಪೇಟೆಯ ಕುಮಾರ್ ಎಂಬವರ ಪತ್ನಿ ಸುಮಾ ಎನ್.(24) ನಾಪತ್ತೆಯಾದವರು.ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ಕಪ್ಪು ಬಣ್ಣದ ಪ್ಯಾಂಟ್, ಕಪ್ಪು ಬಣ್ಣದ ಉದ್ದ ತೋಳಿನ ಅಂಗಿ ಧರಿಸಿದ್ದ ಅವರು ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Read More »

ನಡು ರಸ್ತೆಯಲ್ಲಿ ಖಾಸಗಿ ಅಂಗ ಪ್ರದರ್ಶಿಸಿದವನಿಗೆ ಪೊರಕೆ ಸೇವೆ ಮಾಡಿದ ಮಹಿಳೆ.

ನಡು ರಸ್ತೆಯಲ್ಲಿ ಖಾಸಗಿ ಅಂಗ ತೋರಿಸಿ, ವಿಕೃತಿ ಮೆರೆಯುತ್ತಿದ್ದ ವ್ಯಕ್ತಿಗೆ ಮಹಿಳೆಯೊಬ್ಬರು ಪೊರಕೆ ಸೇವೆ ಮಾಡಿದ ಘಟನೆ ಚೆನ್ನೈನಲ್ಲಿ ವರದಿಯಾಗಿದೆ. ಕೈಯಲ್ಲಿದ್ದ ಪೊರಕೆಯಲ್ಲೇ ಆತನಿಗೆ ಬಿಸಿ ಏಟು ನೀಡಿದ್ದಾಳೆ. ಕೂಡಲೇ ಬೈಕ್‌ ಅನ್ನು ಸ್ಟಾರ್ಟ್ ಮಾಡಿ, ಅಲ್ಲಿಂದ್ದ ಪಲಾಯನ ಮಾಡಿದ್ದಾನೆ.ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಮಹಿಳೆಯ ದಿಟ್ಟ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಹಾಗೂ ವಿಕೃತಿ ಮೆರೆದ ವ್ಯಕ್ತಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ

Read More »

ವಿಚಾರಣೆಗೆ ಬಂದ ASI, PSI ರನ್ನೇ ಕಂಬಕ್ಕೆ ಕಟ್ಟಿ ಥಳಿಸಿದ ದಂಪತಿ!

ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ತಾಂಡಾದಲ್ಲಿ ವಿಚಿತ್ರ ಘಟನೆ ನಡೆದಿದೆ. ಕೌಟುಂಬಿಕ ಕಲಹದ ವಿಚಾರಣೆಗೆ ತೆರಳಿದ್ದ ASI ಹಾಗೂ PSI ಮೇಲೆಯೇ ದಂಪತಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ವಿಚಾರಣೆಗೆಂದು ತೆರಳಿದ್ದ ASI ವೆಂಕಟಪ್ಪ ನಾಯಕ್ ಮತ್ತು PSI ವೆಂಕಟೇಶ್ ಮೇಲೆ ದಂಪತಿ ಹಿಂಸಾತ್ಮಕವಾಗಿ ವರ್ತಿಸಿದ್ದು, ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

Read More »

ದೆಹಲಿಯಲ್ಲಿ ಹೈ ಅಲರ್ಟ್‌: ಇಕೋಸ್ಪೋರ್ಟ್‌ ಕಾರಿಗಾಗಿ ಹುಡುಕಾಟ

ರಾಜಧಾನಿ ದೆಹಲಿಗೆ ಉಗ್ರರು ಎರಡು ಕಾರಿನಲ್ಲಿ ಬಂದಿರುವ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ. ಐ20 ಕಾರು ಕೆಂಪುಕೋಟೆಯ ಬಳಿ ಸ್ಫೋಟಗೊಂಡರೆ ಮತ್ತೊಂದು ಕಾರು ಈಗಲೂ ನಗರದಲ್ಲಿ ಸಂಚರಿಸುತ್ತಿದೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಹೈ ಅಲರ್ಟ್‌ ಘೋಷಣೆ ಮಾಡಿ ಪೊಲೀಸರು ಮತ್ತೊಂದು ಕಾರನ್ನು ಪತ್ತೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ.ಸ್ಫೋಟಗೊಂಡ ಐ20 ಕಾರು ಮತ್ತು DL-10 CK 045 ನಂಬರಿನ ಕೆಂಪು ಬಣ್ಣದ ಇಕೋಸ್ಪೋರ್ಟ್‌ ಕಾರು ಒಟ್ಟಿಗೆ ದೆಹಲಿಗೆ ಆಗಮಿಸಿದ್ದವು. ಎರಡೂ …

Read More »

ಸ್ಲೀಪರ್ ಬಸ್ ಪಲ್ಟಿ; 13 ಪ್ರಯಾಣಿಕರಿಗೆ ಗಾಯ

ರಾಯಚೂರ ನಗರದ ಹೊರವಲಯದ ಸಾತ್‍ಮೈಲ್ ಸಮೀಪ ಸೋಮವಾರ ಬೆಳಗಿನ ಜಾವ ಹೊಸಪೇಟೆಯಿಂದ ಹೈದರಾಬಾದ್‍ಗೆ ತೆರಳುತ್ತಿದ್ದ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಕೋಚ್ ಬಸ್ ಪಲ್ಟಿಯಾಗಿ 13 ಪ್ರಯಾಣಿಕರು ಗಾಯಗೊಂಡಿದ್ದಾರೆ.ಹುಣಸಿಹಾಳಹುಡಾ ಗ್ರಾಮಕ್ಕೆ ಹೊರಡುವ ರಸ್ತೆ ಪಕ್ಕದಲ್ಲಿ ಬಸ್‌ ಪಲ್ತಿಯಾಗಿದೆ.ಗ್ರಾಮಸ್ಥರು ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿ ಸ್ಥಳಕ್ಕೆ ಬಂದ ಪ್ರಯಾಣಿಕರನ್ನು ಹೊರಗೆ ತೆಗೆದಿದ್ದಾರೆ. .ಅಪಘಾತದಲ್ಲಿ ಪ್ರತಾಪ್ ಸಿಂಗ್ ಅವರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಎಚ್.ಎಂ. ಸ್ವಪ್ನಾ ಹಾಗೂ ವೀರೇಶ ಅವರ ಎಡಗೈ ಮೂಳೆ ಮುರಿದಿದೆ. …

Read More »

Kundapura: ಬಸ್ಸಿನಲ್ಲಿ 15 ಲಕ್ಷ ರೂ. ಬೆಳ್ಳಿ, 3 ಲಕ್ಷ ರೂ. ಹಣ ಕಳವು

ಬೆಂಗಳೂರಿನಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಹಂಗಳೂರು ಸಂಜಯ ಗಾಧಿ ರಸ್ತೆ ನಿವಾಸಿ ಎನ್‌. ಕೃಷ್ಣಮೂರ್ತಿ ಶೇಟ್‌ ಅವರ 15 ಲಕ್ಷ ರೂ.ಗಳ ಬೆಳ್ಳಿ ಗಟ್ಟಿ ಹಾಗೂ 3 ಲಕ್ಷ ರೂ. ನಗದು ಕಳವಾಗಿದೆ.ಬೆಳಗ್ಗೆ ಲಗೇಜ್‌ ಬ್ಯಾಗನ್ನು ನೋಡಿದಾಗ ಜಿಪ್‌ ತೆರೆದಿದ್ದು 10 ಕೆಜಿ ಬೆಳ್ಳಿಯ ಗಟ್ಟಿ ಹಾಗೂ 3 ಲಕ್ಷ ನಗದು ಹಣ ಕಳವಾಗಿತ್ತು. 10 ಕೆಜಿ ಬೆಳ್ಳಿಯ ಗಟ್ಟಿ ಅಂದಾಜು ಮೌಲ್ಯ 15,39,655 ರೂ. ಹಾಗೂ 3 …

Read More »

ಮನೆಯಲ್ಲಿ 100 ಕೆಜಿ ಗೋಮಾಂಸ ಪತ್ತೆ; ಮಹಿಳೆ ಬಂಧನ; ಇಬ್ಬರು ಪರಾರಿ

ಕಾರ್ಕಳ: ನಲ್ಲೂರಿನ ಮನೆಯೊಂದಕ್ಕೆ ದಾಳಿ ಮಾಡಿದ ಗ್ರಾಮಾಂತರ ಠಾಣೆ ಪೊಲೀಸರು ಅಕ್ರಮವಾಗಿ ಗೋಮಾಂಸ ಶೇಖರಣೆ ಪತ್ತೆ ಮಾಡಿದ್ದಾರೆ. ಮನೆಯಲ್ಲಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದುಇಬ್ಬರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.ಪತ್ತೆಯಾದ 100 ಕೆಜಿ ದನದ ಮಾಂಸವನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದಾರೆ. ಬಂಧಿತ ರುಕ್ಸಾನ ಅವರನ್ನು ಪೊಲೀಸರು ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಾದ …

Read More »