ಚಿಕ್ಕಬಳ್ಳಾಪುರ: ದಂಡಿಗಾನಹಳ್ಳಿ ಜಲಾಶಯದಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನಲ್ಲಿ ನಡೆದಿದೆ.ಬೆಂಗಳೂರು ಮೂಲದ ಸತೀಶ ಶಿವಕುಮಾರ್ (23),ಕೇರಳ ಮೂಲದ ಅಭಿಲಾಶ(23) ಸಾವನ್ನಪ್ಪಿರುವ ವಿದ್ಯಾರ್ಥಿಗಳು.ಶಾಲಾ ಕಾಲೇಜುಗಳು ರಜೆ ಇರುವ ಕಾರಣ ಇಂದು ದಂಡಿಗಾನಹಳ್ಳಿ ಜಲಾಶಯಕ್ಕೆ ಐವರು ಸ್ನೇಹಿತರು ಮಜಾ ಮಾಡಲು ತೆರಳಿದ್ದಾರೆ. ಈ ವೇಳೆ ನಡು ನೀರಿನಲ್ಲಿ ಮುಳುಗಿ ಶಿವಕುಮಾರ ಮತ್ತು ಅಭಿಲಾಶ ಮೃತಪಟ್ಟಿದ್ದು, ರಕ್ಷಿತಾ, ಕೇವಿನ್, ಭುವನ್ ಪ್ರಾಣಾಪಯದಿಂದ ಪಾರಾಗಿದ್ದಾರೆ.ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





