ಕಾಮಗಾರಿ ಬಿಲ್ ಮಾಡಿಕೊಡಲು ಗುತ್ತಿಗೆದಾರದ ಬಳಿ ಲಂಚಕ್ಕೆ ಕೈ ಒಡ್ಡಿದ ಇಬ್ಬರು ಇಂಜಿನಿಯರ್ ಗಳು ಮಂಗಳವಾರ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.ನಗರದ ಪ್ರವಾಸಿ ಮಂದಿರದ ಬಳಿ 34,500 ಲಂಚದ ಹಣ ತೆಗೆದುಕೊಳ್ಳುವ ಸಮಯದಲ್ಲಿ ಸಹಾಯಕ ಕಾರ್ಯಪಲಕ ಇಂಜಿನಿಯರ್ ಬಿ.ಸಿ.ಸ್ವಾಮಿ ಎಂಬುವರನ್ನು ಲೋಕಾಯುಕ್ತ ಪೊಲೀಸರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಧ್ಯವರ್ತಿಯಾಗಿ ಕೆಲಸ ಮಾಡಿದ ಕಂಪ್ಯೂಟರ್ ಆಪರೇಟರ್ ಹರೀಶ್ ಎಂಬುವರ ವಿಚಾರಣೆ ಮುಂದುವರೆದಿದೆ. ತಿಪಟೂರು ತಾಲ್ಲೂಕಿನ ಶಾಲೆಯ ದುರಸ್ತಿ ಮಾಡಿದ 6.5 ಲಕ್ಷ ಬಿಲ್ …
Read More »ದೇಶದ ಹಲವು ಪ್ರಮುಖ ಸ್ಥಳಗಳಲ್ಲಿ ಸ್ಪೋಟಕ್ಕೆ ಸಂಚು : ‘NIA’ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!
ದೆಹಲಿಯ ಕೆಂಪು ಕೋಟೆಯ ಬಳಿ ಕಾರು ಬಾಂಬ್ ಸ್ಫೋಟದಲ್ಲಿ ಇದುವರೆಗೂ 12ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 17 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಗಾಯಗೊಂಡ ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಒಂದು ಪ್ರಕರಣದ ತನಿಖೆ ಸದ್ಯ ಎನ್ಐಎ ನಡೆಸುತ್ತಿದ್ದು ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ಅಂಶಗಳು ಬಯಲಾಗಿವೆ.ಹೌದು ಸ್ವಲ್ಪ ಯಾಮಾರಿದರೂ ಕೂಡ ದೊಡ್ಡ ದುರಂತ ಸಂಭವಿಸುತ್ತಿತ್ತು. ಸ್ಪೋಟಕ ವಶಕ್ಕೆ ಪಡೆದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ದೇಶದ ಹಲವು ಕಡೆಗೆ ಉಗ್ರರು …
Read More »ಚಿಕ್ಕಮಗಳೂರು: ತಾಯಿಯ ಹತ್ಯೆಗೈದ ಪುತ್ರಿಯ ಬಂಧನ
ಮಹಿಳೆಯೊಬ್ಬರನ್ನು ಆಕೆಯ ಪುತ್ರಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಂಡಿಮಠ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ.ಕುಸುಮಾ(62) ಹತ್ಯೆಯಾದ ಮಹಿಳೆ. ಸುಧಾ(35) ಹತ್ಯೆ ಮಾಡಿದ ಆರೋಪಿ ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.ಮೂಲತಃ ಬೇರೆ ಊರಿನಿಂದ ಕೂಲಿ ಕೆಲಸಕ್ಕೆಂದು ಬಂದು ಬಂಡಿಮಠದಲ್ಲಿ ಈ ಕುಟುಂಬ ನೆಲೆಸಿತ್ತು. ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿಯನ್ನು ತಲೆದಿಂಬು ಬಳಸಿ ಸುಧಾ ಹತ್ಯೆ ಮಾಡಿದ್ದಾಳೆ. ನಂತರ ಮೃತದೇಹದ ಬಗ್ಗೆ ಯಾವುದೇ ಅನುಮಾನ …
Read More »ಮುದಗಲ್: ವಿಚಾರಣೆಗೆ ತೆರಳಿದ್ದ ಪೊಲೀಸರ ಮೇಲೆ ತಾಂಡಾ ನಿವಾಸಿಗಳಿಂದ ಹಲ್ಲೆ.
ತಾಲ್ಲೂಕಿನ ಮಟ್ಟೂರು ತಾಂಡಾಕ್ಕೆ ಪ್ರಕರಣ ಸಂಬಂಧ ಆರೋಪಿಗಳ ವಿಚಾರಣೆಗೆ ಮಂಗಳವಾರ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಲಾಗಿದೆ.ಮಲ್ಲಪ್ಪ ನೀಡಿದ ದೂರಿನ ಮೇರೆ ಆರೋಪಿ ರಾಮಪ್ಪ ಹಾಗೂ ಆತನ ಪತ್ನಿ ಸಕ್ಕುಬಾಯಿ ಅವರ ವಿಚಾರಣೆಗೆ ಎಎಸ್ಐ ವೆಂಕಟಪ್ಪ ನಾಯಕ, ಹೆಡ್ಕಾನ್ಸ್ಟೆಬಲ್ ರಾಮಪ್ಪ ಅವರು ತಾಂಡಾಕ್ಕೆ ತೆರಳಿದ್ದರು. ಇದೇ ವೇಳೆ ರಾಮಪ್ಪ ಹಾಗೂ ಪತ್ನಿ ಸಕ್ಕುಬಾಯಿ ಸೇರಿಕೊಂಡು ಕಲ್ಲು, ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಸಮವಸ್ತ್ರ ಹಿಡಿದು ಎಎಸ್ಐ ಅವರನ್ನು ಎಳೆದಾಡಿ ಗಾಯಗೊಳಿಸಿದ್ದಾರೆ.
Read More »ದೆಹಲಿಯ `ಕೆಂಪುಕೋಟೆ’ ಬಳಿ ಕಾರು ಸ್ಪೋಟ ಕೇಸ್ : ಜಮ್ಮು-ಕಾಶ್ಮೀರದಲ್ಲಿ `NIA’ಯಿಂದ ಮತ್ತೊಬ್ಬ ಶಂಕಿತ ಅರೆಸ್ಟ್.!
ದೆಹಲಿಯ ಕೆಂಪುಕೋಟೆ ಬಳಿ ಸಂಭವಿಸಿದ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಶಂಕಿತನನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ನಲ್ಲಿ ಶಂಕಿತ ಇರ್ಪಾನ್ ಅಹ್ಮದ್ ವಾಗೆ ಅಲಿಯಾಸ್ ಮೌಲ್ವಿ ಇಮಾಮ್ ನನ್ನು ಬಂಧಿಸಲಾಗಿದೆ.ಇರ್ಫಾನ್ ಸ್ಥಳೀಯ ಮಸೀದಿಯಲ್ಲಿ ಇಮಾಮ್ ಆಗಿ ಸೇವೆ ಸಲ್ಲಿಸುತ್ತಿದ್ದ ಫರಿದಾಬಾದ್ ಪ್ರಕರಣದ ಮೊದಲ ಆರೋಪಿಯಾಗಿರುವ ಇರ್ಫಾನ್ ಬಳಿ 5 ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಸದ್ಯ ಇರ್ಫಾನ್ ಪತ್ನಿಯನ್ನು ವಶಕ್ಕೆ ಪಡೆದು ಎನ್ …
Read More »ದೆಹಲಿ ಕಾರು ಸ್ಫೋಟ ಬೆನ್ನಲ್ಲೇ ರಾಜ್ಯದೆಲ್ಲೆಡೆ ಹೈ ಅಲರ್ಟ್: ತಪಾಸಣೆ ವೇಳೆ ಕಾರ್ಮಿಕರ ಬಳಿ ಗಾಂಜಾ ಪತ್ತೆ
ದೆಹಲಿ ಕಾರು ಸ್ಫೋಟ ಬೆನ್ನಲ್ಲೇ ರಾಜ್ಯದೆಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ಕೊಪ್ಪಳದಲ್ಲಿ ತಪಾಸಣೆ ನಡೆಸಲಾಗಿದ್ದು, ಈ ವೇಳೆ ಜಾರ್ಖಂಡ್ ಮೂಲದ ಎಂಟು ಕಾರ್ಮಿಕರ ಗುಂಪಿನಲ್ಲಿ ಗಾಂಜಾ ಪತ್ತೆಯಾಗಿದೆ.ಕೊಪ್ಪಳ ಬಸ್ ನಿಲ್ದಾಣದಲ್ಲಿ ಪೊಲೀಸ್ ಶ್ವಾನ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ತಪಾಸಣೆ ನಡೆಸಿದ್ದರು.ಶ್ವಾನ ಬಿಂದು ತಪಾಸಣೆ ವೇಳೆ ಈ ಬ್ಯಾಗ್ ಬಳಿ ನಿಂತುಬಿಟ್ಟಿತ್ತು. ಆಗ ತಪಾಸಣೆ ಮಾಡಿದಾಗ ಬ್ಯಾಗ್ನಲ್ಲಿ ಎರಡು ಪ್ಯಾಕೆಟ್ ಗಾಂಜಾ ಪತ್ತೆಯಾಗಿದೆ. ಎಂಟು ಕಾರ್ಮಿಕರ ಪೈಕಿ …
Read More »‘ಕೆಂಪುಕೋಟೆ’ ಬೆನ್ನಲ್ಲೇ ಇಸ್ಲಾಮಾಬಾದ್ ನಲ್ಲಿ ಪ್ರಬಲ ಕಾರು ಸ್ಫೋಟ : ಐವರು ಸಾವು, 25 ಜನರಿಗೆ ಗಾಯ
ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಭೀಕರ ಸ್ಪೋಟದ ಬೆನ್ನಲ್ಲೇ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಮಂಗಳವಾರ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 20-25 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ.ಮಂಗಳವಾರ ಇಸ್ಲಾಮಾಬಾದ್ ನ್ಯಾಯಾಂಗ ಸಂಕೀರ್ಣದ ಬಳಿ ಸಂಭವಿಸಿದ ಪ್ರಬಲ ಸ್ಫೋಟದಲ್ಲಿ ಕಾರೊಂದು ಛಿದ್ರಗೊಂಡ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದ್ದು, 20-25 ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನಿ ಮಾಧ್ಯಮ ವರದಿಗಳು ತಿಳಿಸಿವೆ. ಪ್ರಾಥಮಿಕ …
Read More »ದೆಹಲಿ ಸ್ಪೋಟ ನಡೆಸಿದ ವ್ಯಕ್ತಿಯ ಬಗ್ಗೆ ಸ್ಪೋಟಕ ಮಾಹಿತಿ ಲಭ್ಯ
ದೆಹಲಿಯ ಕೆಂಪು ಕೋಟೆ ಬಳಿ ಸ್ಪೋಟ ನಡೆಸಿದ ವ್ಯಕ್ತಿಯ ಬಗ್ಗೆ ಮಹತ್ವದ ಮಾಹಿತಿ ಬಂದಿದೆ. ಸ್ಪೋಟಕ್ಕೆ ಕೆಲವೇ ತಾಸು ಮೊದಲು ಉಗ್ರ ಸಂಘಟನೆಗೆ ಸೇರಿದ ಇಬ್ಬರನ್ನು ಸ್ಪೋಟಕಗಳ ಸಮೇತ ಬಂಧಿಸಿದ ಬಳಿಕ ದಾಳಿ ನಡೆದಿತ್ತು.ನಿನ್ನೆ ಕಾಶ್ಮೀರ, ಹರ್ಯಾಣದಲ್ಲಿ ಸಕ್ರಿಯವಾಗಿದ್ದ ವೈಟ್ ಕಾಲರ್ ಉಗ್ರರಿಬ್ಬರನ್ನು ಸೆರೆ ಹಿಡಿಯಲಾಗಿತ್ತು.ಡಾ ಆದಿಲ್ ಮತ್ತು ಡಾ ಮುಜಮ್ಮಿಲ್ ಎಂಬಿಬ್ಬರು ಉಗ್ರರನ್ನು ಸೆರೆ ಹಿಡಿಯಲಾಗಿತ್ತು. ಜೊತೆಗೆ 2900 ಕೆ.ಜಿ. ಸ್ಪೋಟಕ ವಶಪಡಿಸಿಕೊಳ್ಳಲಾಗಿತ್ತು. ಇದಾದ ಕೆಲವೇ ತಾಸುಗಳಲ್ಲಿ ದೆಹಲಿಯಲ್ಲಿ …
Read More »*ದೇವಸ್ಥಾನದ ಅರ್ಚಕನ ಬರ್ಬರ ಹತ್ಯೆ*
ದೇವಸ್ಥಾನದ ಅರ್ಚಕರೊಬ್ಬರನ್ನು ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಹತ್ಯೆಗೈದಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.ಇಲ್ಲಿನ ಅಮೋಘಸಿದ್ದ ದೇವಸ್ಥಾನದ ಅರ್ಚಕ ಅಮಸಿದ್ದ ಬಿರಾದಾರ್ (35) ಹತ್ಯೆಯಾದ ಅರ್ಚಕರು. ಹಲವು ವರ್ಷಗಳಿಂದ ಅಮಸಿದ್ದ, ಅಮೋಘಸಿದ್ದ ದೇವಸ್ಥಾನದ ಅರ್ಚಕನಾಗಿ ಕಾರ್ಯನಿರ್ವಹಿಸುತ್ತಿದ್ದರು.ಇದೀಗ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Read More »ರಾಯಚೂರು ಬಳಿ ಕಾರು ಅಪಘಾತ: ಗಬ್ಬೂರು PSI ಅರುಣ್ಗೆ ಗಂಭೀರ ಗಾಯ
ದೇವದುರ್ಗ: ತಾಲ್ಲೂಕಿನ ಗಬ್ಬೂರು ಪೊಲೀಸ್ ಠಾಣೆಯ ಪಿಎಸ್ಐ ಕುಟುಂಬ ಪ್ರಯಾಣಿಸುತ್ತಿದ್ದ ಕಾರು ರಾಯಚೂರು ತಾಲ್ಲೂಕಿನ ಮುರಾನಪುರ ಬಳಿ ಅಪಘಾತಕ್ಕೀಡಾಗಿದ್ದು, ಐವರು ಗಾಯಗೊಂಡಿದ್ದಾರೆ. ಭಾನುವಾರ (ನ.9) ಮಧ್ಯರಾತ್ರಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪಿಎಸ್ಐ ಅರುಣ ಕುಮಾರ ರಾಥೋಡ್ ಅವರ ಕಾಲಿಗೆ ಗಂಭೀರ ಗಾಯಗಳಾಗಿವೆ.ಅವರ ಪತ್ನಿ, ಇಬ್ಬರು ಮಕ್ಕಳು ಮತ್ತು ಕಾರು ಚಾಲಕನಿಗೆ ಗಾಯಗಳಾಗಿವೆ. ತಡರಾತ್ರಿ ಗಾಯಾಳುಗಳನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರೆದಿದೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





