Breaking News

BigTv News

ಅಮೆರಿಕದಲ್ಲಿ ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಭಾರತೀಯ ಮಹಿಳೆ | ವಿಡಿಯೋ ವೈರಲ್‌!

ಭಾರತೀಯ ಮಹಿಳೆಯೊಬ್ಬಳು ಬಟ್ಟೆ ಅಂಗಡಿಯಿಂದ ಪುರುಷರ ವಸ್ತುಗಳು ಸೇರಿದಂತೆ ಬಟ್ಟೆಗಳನ್ನು ಕಳ್ಳತನ ಮಾಡುತ್ತಿದ್ದಾಗ ಸಿಕ್ಕಿಬಿದ್ದಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಯುವತಿಯೂ ತನ್ನನ್ನು ಕ್ಷಮಿಸಿಬಿಡಿ ಎಂದು ಅಂಗಲಾಚುತ್ತಿರುವುದನ್ನು ನೋಡಬಹುದು.ಹಣ ನೀಡದೆ ಬಟ್ಟೆಗಳನ್ನು ತೆಗೆದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ ಆರೋಪದ ಮೇಲೆ ಆಕೆಯನ್ನು ಪೊಲೀಸರು ಪ್ರಶ್ನಿಸಿದಾಗ, ಅಧಿಕಾರಿಗಳಿಗೆ ಅಳುತ್ತಾ ಕ್ಷಮೆಯಾಚಿಸುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ.

Read More »

ಡಾ.ಕೃತಿಕಾ ರೆಡ್ಡಿ ಕೊಲೆ ಕೇಸ್​ | ತನಿಖೆಯಲ್ಲಿ ಮತ್ತಷ್ಟು ಸ್ಪೋಟಕ ವಿಚಾರಗಳು ಬಯಲು!

ಡಾ.ಕೃತಿಕಾ ರೆಡ್ಡಿ ಕೊಲೆ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಬಗೆದಷ್ಟೂ ಹೊಸ ಹೊಸ ಸ್ಪೋಟಕ ವಿಚಾರಗಳು ಗೊತ್ತಾಗುತ್ತಿದೆ. ಆರೋಪಿ ಪತಿ ಮಹೇಂದ್ರ ರೆಡ್ಡಿ ಮೊಬೈಲ್, ಲ್ಯಾಪ್‌ಟಾಪ್​ಗಳನ್ನ ಪೊಲೀಸರು ಈಗಾಗಲೇ ಪರಿಶೀಲಿಸಿದ್ದು, ಎಫ್​ಎಸ್​ಎಲ್​ಗೆ ರವಾನಿಸಿದ್ದಾರೆ.ಇನ್ನು ತನಿಖೆ ವೇಳೆ ಆಪ್ತ ಸ್ನೇಹಿತೆ ಜೊತೆ ಮಹೇಂದ್ರರೆಡ್ಡಿ ಚಾಟಿಂಗ್​ ನಡೆಸುತ್ತಿರುವುದು ಗೊತ್ತಾಗಿದೆ. ಆದರೆ, ಪದೇ ಪದೆ ಚಾಟಿಂಗ್ ಮಾಡುತ್ತಿದ್ದಂತೆ ಬೇಸರಗೊಂಡು ಆಕೆ ಈತನನ್ನು ಬ್ಲಾಕ್ ಮಾಡಿದ್ದಳು. ಹೀಗಾಗಿ ಮಹೇಂದ್ರೆಡ್ಡಿ ಬಳಿಕ ಫೋನ್​ ಪೇನಲ್ಲಿ ಚಾಟ್ ಮಾಡಿದ್ದ …

Read More »

BREAKING : ಕೊಯಮತ್ತೂರಿನಲ್ಲಿ ವಿದ್ಯಾರ್ಥಿನಿ ಅಪಹರಿಸಿ ‘ಗ್ಯಾಂಗ್ ರೇಪ್’ : ಮೂವರು ಆರೋಪಿಗಳು ಅರೆಸ್ಟ್.!

ಕೊಯಮತ್ತೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳನ್ನು ಮಂಗಳವಾರ ಮುಂಜಾನೆ ಬಂಧಿಸಲಾಯಿತು. ಪೊಲೀಸರ ಪ್ರಕಾರ, ಬಂಧನ ಕಾರ್ಯಾಚರಣೆಯ ಸಮಯದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ ಮೂವರ ಕಾಲಿಗೆ ಗುಂಡು ಹಾರಿಸಲಾಗಿದೆ. ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಯುವತಿಯನ್ನ ನಿರ್ಜನ ಪ್ರದೇಶದಲ್ಲಿ ಬಿಡಲಾಯಿತು ಮತ್ತು ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡುಬಂದರು. ಚಿಕಿತ್ಸೆಗಾಗಿ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಸದ್ಯ ವಿದ್ಯಾರ್ಥಿನಿ ವೈದ್ಯಕೀಯ ಆರೈಕೆಯಲ್ಲಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದರು.

Read More »

ಬೈಕ್ ಗೆ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿ: ಮೂವರು ಸಾವು.

ಕಾರ್ಯನಿಮಿತ್ತ ಮೈಸೂರಿಗೆ ತೆರಳಿದ್ದ ಕುಟುಂಬದವರು ವಾಪಸ್ ಊರಿಗೆ ತೆರಳುತ್ತಿದ್ದ ವೇಳೆ ನಂಜನಗೂಡು ನಗರದ ಪ್ರವೇಶ ದ್ವಾರದ ಬಳಿ ಇರುವ ಚಾಮುಂಡಿ ಟೌನ್ ಶಿಪ್ ಮುಂಭಾಗದಲ್ಲಿ ಚಲಿಸುತ್ತಿದ್ದ ವೇಳೆ ಗುಂಡ್ಲುಪೇಟೆ ಕಡೆಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.ಚಾಮರಾಜನಗರ ತಾಲೂಕಿನ ಉದ್ದನೂರು ಗ್ರಾಮದ ನಿವಾಸಿ ಶಿವಮೂರ್ತಿ (52) ಹಾಗೂ ಅವರ ಪತ್ನಿ ಚೆನ್ನಾಜಮ್ಮ(46) ಹಾಗೂ ಪುತ್ರ ಸಿದ್ದಾರ್ಥ (15) ಮೃತರು.

Read More »

ಲವರ್ ಜೊತೆಗೆ ಇದ್ದ `MBA’ ವಿದ್ಯಾರ್ಥಿನಿಯ ಮೇಲೆ ಗ್ಯಾಂಗ್ ರೇಪ್.!

ದೇಶದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದುಭಾನುವಾರ ತಡರಾತ್ರಿ ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಖಾಸಗಿ ಕಾಲೇಜಿನ ಎಂಬಿಎ ವಿದ್ಯಾರ್ಥಿನಿಯ ಮೇಲೆ ಮೂವರು ಪುರುಷರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.ಆಕೆಯನ್ನು ವಿಮಾನ ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಕಾಲೇಜಿನ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು, ಅಲ್ಲಿ ಆಕೆಯನ್ನು ಅತ್ಯಾಚಾರ ಮಾಡಿ, ಬಟ್ಟೆ ಇಲ್ಲದೆ ಬಿಟ್ಟು ಹೋಗಿದ್ದಾರೆ. ಗಾಯಗೊಂಡ ವ್ಯಕ್ತಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ, ನಂತರ ಹುಡುಕಾಟ ತಂಡಗಳನ್ನು …

Read More »

ಗುಪ್ತಾಂಗದ ಫೋಟೋ, ವಿಡಿಯೋ ಕಳಿಸಿ ನಟಿಗೆ ಲೈಂಗಿಕ ಕಿರುಕುಳ: ಆರೋಪಿ ಅರೆಸ್ಟ್

ಬೆಂಗಳೂರಿನಲ್ಲಿ ಸೀರಿಯಲ್ ನಟಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಫೇಸ್ಬುಕ್ ನಲ್ಲಿ ಗುಪ್ತಾಂಗದ ಫೋಟೋ, ವಿಡಿಯೋ ಕಳುಹಿಸಿ ನಟಿಗೆ ಕಿರುಕುಳ ನೀಡಲಾಗಿದೆ.ತೆಲುಗು ಮತ್ತು ಕನ್ನಡ ಧಾರವಾಹಿಯಲ್ಲಿ ನಟಿಸಿರುವ ಸಂತ್ರಸ್ತೆಗೆ ಆರೋಪಿ ಕಳೆದ ಮೂರು ತಿಂಗಳಿಂದ ಲೈಂಗಿಕ ಕಿರುಕುಳ ನೀಡಿದ್ದಾನೆ.ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ನಟಿ ದೂರು ನೀಡಿದ್ದಾರೆ. ಆರೋಪಿಯನ್ನು ಬಂಧಿಸಿದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೋಲೀಸರು ಜೈಲಿಗೆ ಕಳುಹಿಸಿದ್ದಾರೆ.

Read More »

ಅಪಘಾತದಲ್ಲಿ ಪೋಷಕರಿಗೆ ಗಂಭೀರ ಗಾಯ, ಕಂದನ ಎದೆಗಪ್ಪಿ ಚಿಕಿತ್ಸೆಗಾಗಿ ಅಲೆದಾಡಿದ ಮಹಾತಾಯಿ.

ಅಫಾಘಾತದಲ್ಲಿ ಹಲವು ಗಾಯಗೊಂಡಿದ್ದಾರೆ. ಈ ಪೈಕಿ ಪೋಷಕರು ಹಾಗೂ ಮೂರು ತಿಂಗಳ ಮಗು ಕೂಡ ಸೇರಿತ್ತು. ಪೋಷಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಮಗುವಿನ ಮೇಲ್ನೋಟಕ್ಕೆ ಗಾಯವಿಲ್ಲ. ಆದರೆ ಮೂರು ತಿಂಗಳ ಹಸುಗೂಸು, ಹೀಗಾಗಿ ತಲೆ ಸ್ಕ್ಯಾನಿಂಗ್ ಸೇರಿದಂತೆ ಪರೀಕ್ಷೆಗಳು ಅನಿವಾರ್ಯವಾಗಿತ್ತು.ಯೋಗೇಶ್ ಆಚಾರ್ಯ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿದ್ದಾರೆ. ನಡೆದ ಘಟನೆಯನ್ನು ವಿವರಿಸಿದ್ದಾರೆ. ಮಂಗಳೂರಿನಿಂದ ಸುಳ್ಯ ಬರುತ್ತಿದ್ದ ನಾನು ಸಂಪ್ಯ ದಾಟಿ ಮುಂದೆ ಬರುತ್ತಿದ್ದಂತೆ ಭೀಕರ ಅಪಘಾತದ ಮಾಹಿತಿ …

Read More »

ಆಕರ್ಷಣೆ, ಪ್ರೀತಿ ಹೆಸರಲ್ಲಿ ಕಾಮದ ಅಮಲು: ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಳ.

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ತಿಳವಳಿಕೆ ತಾಯ್ತನದ ವಯಸ್ಸಿಗೂ ಮೊದಲೇ ಬಾಲ ಗರ್ಭಿಣಿಯರ ಸಂಖೆಯಲ್ಲಿ ಏರಿಕೆ ಕಂಡಿರುವುದು ಆತಂಕಕ್ಕೆ ಕಾರಣವಾಗಿದೆ.ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ 18 ವರ್ಷ ತುಂಬುವುದಕ್ಕಿಂತ ಮೊದಲು ಗರ್ಭಿಣಿಯರಾಗುತ್ತಿದ್ದು, ಬಾಲಕಿಯರು ಹಲವು ದೈಹಿಕ, ಮಾನಸಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಎಲ್ಲಾ ಇಲಾಖೆಗಳಿಗೂ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಕಳೆದ 10 ತಿಂಗಳಲ್ಲೇ 10 ಸಾವಿರ …

Read More »

ಅಪಘಾತದಿಂದ ಕೋಮಾಗೆ ಜಾರಿದ್ದ ಅಪೂರ್ವ ಭಟ್ ನಿಧನದ ಬೆನ್ನಲ್ಲೇ ಗಾಯಾಳು ತಂದೆಯೂ ನಿಧನ.

ಅಪೂರ್ವ ಭಟ್ ಚೇತರಿಕೆಗೆ ಇಡೀ ರಾಜ್ಯ ಪ್ರಾರ್ಥಿಸಿತ್ತು. ರಸ್ತೆ ಅಪಘಾತದಲ್ಲಿ ಗಾಯಗೊಂಡ ಅಪೂರ್ವ ಭಟ್ ಬರುವಿಕೆಗಾಗಿ ಮೂರು ವರ್ಷದ ಮಗಳು, ಪತಿ ಆಶಿಶ್ ಸಾರಡ್ಕ್ ಹಗಳಿರುಳು ಪ್ರಾರ್ಥಿಸಿದ್ದರು. ಆದರೆ ಬರೋಬ್ಬರ 130 ದಿನ ಕೋಮಾದಲ್ಲಿದ್ದ ಅಪೂರ್ವ ಭಟ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.ಇದರ ಬೆನ್ನಲ್ಲೇ ಇದೇ ಅಪಘಾತದಲ್ಲಿ ಗಾಯಗೊಂಡಿದ್ದ ಅಪೂರ್ವ ಭಟ್ ತಂದೆ ಈಶ್ವರ್ ಭಟ್ ನಿಧನರಾಗಿದ್ದಾರೆ. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಈಶ್ವರ್ ಭಟ್‌ಗೆ ಚಿಕಿತ್ಸೆ ನೀಡಲಾಗುತ್ತಿತ್ತು.ಈಶ್ವರ ಭಟ್ (70) ಚಿಕಿತ್ಸೆ …

Read More »

ಆಳಂದ :ಚರಂಡಿಗೆ ಬಿದ್ದು ಮಗು ಸಾವು!

ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ಮನೆ ಮುಂದೆ ಆಟ ಆಡುತ್ತಿದ್ದ ಮೂರು ವರ್ಷದ ಬಾಲಕಿ ಚರಂಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ. ಮಾದನ ಹಿಪ್ಪರಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶಿವಲಿಂಗಪ್ಪ ಇಂಗಳೆ ಅವರ ಮಗಳು ಶ್ರಾವಣಿ (3) ಮೃತಳು. ಮನೆ ಮುಂದೆ ಮಗು ಆಟವಾಡುತ್ತಿತ್ತು. ಮಗುವಿನ ಸಪ್ಪಳ ಕೇಳದಿದ್ದಾಗ ಹುಡುಕಾಡಿದ್ದು, ಮುಖ್ಯ ರಸ್ತೆಗೆ ನಿರ್ಮಿಸಿದ್ದ ಚರಂಡಿಯಲ್ಲಿ ಮಗುವಿನ ಶವ ಕಂಡುಬಂದಿದೆ.

Read More »