Breaking News

BigTv News

ಬೆಟ್ಟದಪುರ: ಮಕ್ಕಳ ಕೊಂದು ತಾಯಿ ಆತ್ಮಹತ್ಯೆ.

ಗ್ರಾಮದ ಸುಣ್ಣದಬೀದಿಯ ನಿವಾಸಿ ಜಮೃದ್ ಷರೀಫ್ ಅವರ ಪುತ್ರಿ ಅರ್ಬಿಯಾ ಬಾನು (25) ಅವರು ಶನಿವಾರ ಮಕ್ಕಳಾದ ಅನಂ ಫಾತಿಮಾ (2) ಮತ್ತು 8 ದಿನದ ಶಿಶುವನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡರು.ಚಾಕುವಿನಿಂದ ಮಕ್ಕಳ ಕತ್ತು ಕೊಯ್ದಿದ್ದು, ತಾವೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅರೇನಹಳ್ಳಿಯ ಸೈಯದ್ ಮುಸಾವೀರ್-ಅರ್ಬಿಯಾ ಬಾನು ದಂಪತಿಯ ಮೊದಲ ಮಗಳು ಅಂಗವಿಕಲೆಯಾಗಿದ್ದಳು. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮದುವೆಯಾಗು ಎಂದಿದ್ದಕ್ಕೆ ಮಹಿಳೆಯನ್ನ ಎಂಟು ಬಾರಿ ಚುಚ್ಚಿಕೊಂದ ಪ್ರೇಮಿ.

ಮದುವೆ ಆಗು ಎಂದಿದ್ದಕ್ಕೆ ಮಹಿಳೆಗೆ ಎಂಟು ಬಾರಿ ಚಾಕು ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಕೆ.ಜಿ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರೇಣುಕಾ ಮೃತ ಮಹಿಳೆಯಾಗಿದ್ದು, ಅ. 31ರ ರಾತ್ರಿ 9.30 ಕ್ಕೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಪ್ರಕರಣ ಸಂಬಂಧ ಆರೋಪಿ ಅಂಬೇಡ್ಕರ್​ ಅಲಿಯಾಸ್​ ಕುಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಕೂಡಲೇ ರೇಣುಕಾಳನ್ನ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾಳೆ. ಈ ಬಗ್ಗೆ ಪ್ರಕರಣ …

Read More »

10 ದಿನ & 2 ವರ್ಷದ ಮಗಳನ್ನು ಕೊಂದು ಪ್ರಾಣ ಬಿಟ್ಟ ಬಾಣಂತಿ.

ಗ್ರಾಮದ ಮುಸ್ಲಿಂ ಬ್ಲಾಕ್ ನ ಜಮೃದ್ ಪಾಷಾ ಎಂಬವರ ಪುತ್ರಿ ಅರೇಬಿಯಾ (22) ತನ್ನ ರೂಮಿನ ಬಾಗಿಲನ್ನು ಹಾಕಿಕೊಂಡು ತನ್ನ ಹತ್ತು ದಿನದ ಹೆಣ್ಣು ಮಗು ಹಾಗೂ ಎರಡು ವರ್ಷದ ಅನಾಮ ಎಂಬ ಹೆಣ್ಣು ಮಗುವಿನ ಕತ್ತನ್ನು ಕೊಯ್ದು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.ಸುದ್ದಿ ತಿಳಿದು ತಂದೆ ರೂಮಿನ ಬಾಗಿಲನ್ನು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಜಮೃದ್ ಪಾಷಾ ಪಿರಿಯಾಪಟ್ಟಣ ತಾಲೂಕಿನ ಅರೇಹಳ್ಳಿ …

Read More »

ರಾಜ್ಯೋತ್ಸವ ಮೆರವಣಿಗೆ ವೇಳೆ ಐವರಿಗೆ ಯದ್ವಾತದ್ವಾ ಚಾಕು ಇರಿತ!!

ರಾಜ್ಯೋತ್ಸವದ ಸಂಭ್ರಮದಲ್ಲಿರುವಾಗಲೇ ಗಡಿ ನಾಡು ಬೆಳಗಾವಿಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಬೆಳಗಾವಿಯಲ್ಲಿ ರಾಜ್ಯೋತ್ಸವ ಮೆರವಣಿಗೆ ನಡೆಯುವಾಗ ಐವರಿಗೆ ಚಾಕು ಇರಿಯಲಾಗಿದೆ. ಇವರನ್ನು ಸ್ಥಳೀಯ ಬಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ‌ಕಾಂಪ್ಲೆಕ್ಸ್‌ ಬಳಿ ಘಟನೆ ನಡೆದಿದೆ. ರಾಜ್ಯೋತ್ಸವ ಅಂಗವಾಗಿ ರೂಪಕಗಳ ಮೆರವಣಿಗೆ ನಡೆಯುತ್ತಿತ್ತು. ಈ ಮೆರವಣೆಗೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಯದ್ವತದ್ವಾ ಚಾಕು ಇರಿದು ಪರಾರಿಯಾಗಿದ್ದಾರೆ. ಚಾಕು,ಜಂಬೆ ಸಮೇತ ಆಗಮಿಸಿ ಐವರ …

Read More »

ಬೆಂಗಳೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವತಿಯ ಮೃತದೇಹ ಪತ್ತೆ.

ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದಾರುಣ ಘಟನೆ ನಡೆದಿದೆ. 25 ವರ್ಷದ ಯುವತಿ ಅನುಮಾನಾಸ್ಪದ ಸಾವನ್ನು ಕಂಡಿದ್ದು, ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಳನ್ನು ದಾವಣಗೆರೆ ಜಿಲ್ಲೆಯ ಮೂಲದ ಸುಪ್ರಿಯಾ ಎಂದು ಗುರುತಿಸಲಾಗಿದೆ.ಅನುಮಾನಗೊಂಡ ಮನೆ ಮಾಲೀಕರು ಇಂದು ಬಾಗಿಲು ತೆರೆದಾಗ ದಾರುಣ ದೃಶ್ಯ ಕಂಡುಬಂದಿತು. ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತದೇಹ ತುಂಡಾಗಿ ಬಿದ್ದಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿದಾಗ ದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿತ್ತು.

Read More »

ಬೈಕ್ ಡಿಕ್ಕಿ; ಹುಬ್ಬಳಿ ಸವಾರ ಸಾವು!

ರಾಷ್ಟ್ರೀಯ ಹೆದ್ದಾರಿ-4ರ ಮಲಪ್ರಭಾ ನದಿ ಸೇತುವೆ ಬಳಿ ಹೆದ್ದಾರಿ ಪಕ್ಕದ ಡಿವೈಡರ್‌ಗೆ ಬೈಕ್ ಡಿಕ್ಕಿ ಹೊಡೆದಿದ್ದು, ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ಸಂಜೆ ನಡೆದಿದೆ.ಹುಬ್ಬಳ್ಳಿ ನಗರದ ವೀರಾಪುರ ಓಣಿಯ ನಿವಾಸಿ ರುದ್ರಯ್ಯ ಶಿದ್ದಲಿಂಗಯ್ಯ ದಂಡಾವತಿಮಠ (28) ಮೃತ ವ್ಯಕ್ತಿ.ಬೈಕ್ ಚಲಾಯಿಸುತ್ತಿದ್ದ ಅದೇ ನಗರದ ಪ್ರಶಾಂತ ಮನೋಹರ ತಾಳಿಕೋಟಿ (35) ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಆಸ್ಫತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.ಹುಬ್ಬಳ್ಳಿಯಿಂದ ಬೆಳಗಾವಿಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಅಪಘಾತ …

Read More »

ಮಲ್ಪೆ ಪೊಲೀಸ್ ಠಾಣೆಯ ಎಎಸ್‌ಐ ಹೃದಯಾಘಾತದಿಂದ ಮೃತ್ಯು.

ಮಲ್ಪೆ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ(ಎಎಸ್ಸೈ) ವಿಶ್ವನಾಥ್ (56) ಎಂಬವರು ರವಿವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವರದಿಯಾಗಿದೆ.ಮಲ್ಪೆ ಪೊಲೀಸ್ ಠಾಣೆಯ ಸಿಬ್ಬಂದಿಗೆ ಹಮ್ಮಿಕೊಳ್ಳಲಾಗಿದ್ದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ವಿಶ್ವನಾಥ್ ಅವರು ಹಾಡುತ್ತಿರುವಾಗ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.ಕೂಡಲೇ ಇವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ವಿಶ್ವನಾಥ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

Read More »

ಬಂಡೀಪುರ: ಮಾನವ ಪ್ರಾಣಿ ಸಂಘರ್ಷ ತಡೆಗೆ ಸಿಬ್ಬಂದಿ ನಿಯೋಜನೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮಾನವ ಹಾಗೂ ಪ್ರಾಣಿ ಸಂಘರ್ಷ ತಡೆಯಲು ಉಪ ವಲಯ ಅರಣ್ಯಾಧಿಕಾರಿಗಳು, ಗಸ್ತು ವನಪಾಲಕರು, ಅರಣ್ಯ ವೀಕ್ಷಕರನ್ನು ತಾತ್ಕಾಲಿಕವಾಗಿ ಒಂದು ವಾರದ ಅವಧಿಗೆ ನಿಯೋಜಿಸಿ ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.ಹರೀಶ್ ಎಲ್‌, ಪ್ರಸಾದ್ ಎಚ್‌.ಆರ್‌,ನಟರಾಜ ಮುದುಕಣ್ಣನವರ, ವೀರೇಶ್‌ ಕೆಎಸ್‌, ಸಿ.ಕೆ.ಕುಮಾರ್‌, ಕುಮಾರ್ ಬಿ.ಎನ್‌, ಗಿರೀಶ್ ಕನ್ನಗೊನಹಳ್ಳ, ಗಂಗಾಧರ್ ಬಿ.ಎಸ್‌, ಕುಶಾಲ್ ಜಾದವ್‌, ಲೋಕೇಶ್ ಬಿ.ಸಿ, ಶ್ರೀಧರ್, ಧರ್ಮೇಂದ್ರ ವಿ.ಆರ್‌, ನಾಗರಾಜು ಬಿ.ಎಂ, ಶ್ರವಣ್ …

Read More »

ಬೈಕ್ ಗಳಿಗೆ ಆಂಬುಲೆನ್ಸ್ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು.

ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಬಳಿ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ಎರಡು ಬೈಕ್ ಗಳಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಆಂಬುಲೆನ್ಸ್ ಚಾಲಕನ ನಿರ್ಲಕ್ಷಕ್ಕೆ ಇಬ್ಬರು ಬಲಿಯಾಗಿದ್ದಾರೆ. ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಬಳಿ ವೇಗವಾಗಿ ಬಂದು ಎರಡು ಬೈಕ್ ಗಳಿಗೆ ಆಂಬುಲೆನ್ಸ್ ಹೊಡೆದಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

Read More »

ಮೂವರು ಮೌಲ್ವಿಗಳು ಸೇರಿ ಐವರು ಶಂಕಿತ ಉಗ್ರರು ಅರೆಸ್ಟ್

ಉಗ್ರರಿಗೆ ಹಣಕಾಸು ನೆರವು ನೀಡಿದ ಮೂವರು ಮೌಲ್ವಿಗಳು ಸೇರಿದಂತೆ ಐವರು ಶಂಕಿತ ಉಗ್ರರನ್ನು ಎಟಿಎಸ್ ಅಧಿಕಾರಿಗಳು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ.ಬಂಧಿತರನ್ನು ಅಯೂಬ್, ಮಸೂದ್, ಉಸ್ಮಾನ್ ಎಂಬ ಮೂವರು ಮೌಲ್ವಿಗಳು ಹಾಗೂ ಕರೌಲ್ ನ ಜುನೈದ್ ಹಾಗೂ ಮತ್ತೋರ್ವ ಸೇರಿ ಒಟ್ಟು ಐವರನ್ನು ಬಂಧಿಸಲಾಗಿದೆ.ಬಂಧಿತರಲ್ಲಿ ಅಯೂಬ್ ಜೋಧ್ ಪುರದ ಚೋಖಾದ ಅರೇಬಿಯಾ ಮದರಸಾದ ಧರ್ಮಗುರುವಾಗಿದ್ದು, ಆತನಿಂದ ಅಧಿಕಾರಿಗಳು ಕೆಲ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ೧೩ ವರ್ಷಗಳಿಂದ ಮದರಸಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ಮನೆಯಿಂದ ಎಟಿಎಸ್ …

Read More »