ಗ್ರಾಮದ ಸುಣ್ಣದಬೀದಿಯ ನಿವಾಸಿ ಜಮೃದ್ ಷರೀಫ್ ಅವರ ಪುತ್ರಿ ಅರ್ಬಿಯಾ ಬಾನು (25) ಅವರು ಶನಿವಾರ ಮಕ್ಕಳಾದ ಅನಂ ಫಾತಿಮಾ (2) ಮತ್ತು 8 ದಿನದ ಶಿಶುವನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡರು.ಚಾಕುವಿನಿಂದ ಮಕ್ಕಳ ಕತ್ತು ಕೊಯ್ದಿದ್ದು, ತಾವೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅರೇನಹಳ್ಳಿಯ ಸೈಯದ್ ಮುಸಾವೀರ್-ಅರ್ಬಿಯಾ ಬಾನು ದಂಪತಿಯ ಮೊದಲ ಮಗಳು ಅಂಗವಿಕಲೆಯಾಗಿದ್ದಳು. ಬೆಟ್ಟದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

