ಕುಡುಪು ಬಳಿ ಎ. 27ರಂದು ನಡೆದ ಕೇರಳದ ವಯನಾಡಿನ ಮಹಮ್ಮದ್ ಅಶ್ರಫ್ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಲ್ಲಿ ಇಬ್ಬರಾದ ಮನೀಶ್ ಶೆಟ್ಟಿ ಮತ್ತು ಅನಿಲ್ ಕುಮಾರ್ಗೆ ಮಂಗಳೂರಿನ 6ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅವರಲ್ಲಿ 8 ಮಂದಿಗೆ ಜಾಮೀನು ಲಭಿಸಿದೆ. ಉಳಿದಂತೆ 13 ಮಂದಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
Read More »ಸಿಎಂ ತವರು ಜಿಲ್ಲೆಯಲ್ಲೇ ಮೈಕ್ರೋಫೈನಾನ್ಸ್ ಹಾವಳಿ – ಸಾಲ ಪಾವತಿಸಿದ ರೈತನ ಮನೆ ಜಪ್ತಿ!
ಮೈಕ್ರೋ ಫೈನಾನ್ಸ್ ಸಾಲ ಮರು ಪಾವತಿಸದ ರೈತನ ಮನೆ ಜಪ್ತಿ ಮಾಡಲಾಗಿದ್ದು,ಸಾಲದ ಕಂತು ಕಟ್ಟಿಲ್ಲ ಎಂದು ಖಾಸಗಿ ಫೈನಾನ್ಸ್ ಸಿಬ್ಬಂದಿ ಮನೆ ಜಪ್ತಿ ಮಾಡಿದ್ದಾರೆ.ನಂಜನಗೂಡು ತಾಲ್ಲೂಕಿನ ಕಂದೇಗಾಲ ಗ್ರಾಮದಲ್ಲಿ ಘಟನೆ ನಡೆದಿದ್ದು,ಕಾಲಾವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ಸಿಬ್ಬಂದಿ ನ್ಯಾಯಾಲಯದ ಆದೇಶ ತಂದು ಜಪ್ತಿ ಮಾಡಿದ್ದಾರೆ.ಮನೆ ನಿರ್ಮಾಣಕ್ಕೆ 2.70 ಲಕ್ಷ ಸಾಲವನ್ನು ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ ಕುಟುಂಬ ಪಡೆದಿತ್ತು. ಸಾಲ ಪಡೆದಿದ್ದ ಚಿನ್ನಸ್ವಾಮಿ ಈಗಾಗಲೆ 19 ಕಂತುಗಳ 1,89,000 ಸಾಲ …
Read More »ನಿಯಮ ಉಲ್ಲಂಘನೆ: 63 ಬಸ್ ಜಪ್ತಿ
ಬೆಂಗಳೂರು: ನಗರ ಮತ್ತು ಹೊರವಲಯಗಳಲ್ಲಿ ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರ (ಪ್ರವರ್ತನ ದಕ್ಷಿಣ) ನೇತೃತ್ವದಲ್ಲಿ 12 ತಂಡಗಳು ಕಾರ್ಯಾಚರಣೆ ನಡೆಸಿ 380ಕ್ಕೂ ಅಧಿಕ ಬಸ್ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿವೆ. 63 ವಾಹನಗಳನ್ನು ಜಪ್ತಿ ಮಾಡಲಾಗಿದೆ.ಬಸ್ಗಳಲ್ಲಿ ಪ್ರಥಮ ಚಿಕಿತ್ಸೆ ಪಟ್ಟಿಗೆ, ಬೆಂಕಿ ನಂದಿಸುವ ಸಾಧನ, ತುರ್ತು ನಿರ್ಗಮನ ವ್ಯವಸ್ಥೆ ಸೇರಿದಂತೆ ಪ್ರಯಾಣಿಕರ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನು ತಂಡವು ಪರಿಶೀಲನೆ ನಡಸಿತು. ಈ ಸಂದರ್ಭದಲ್ಲಿ ತೆರಿಗೆ ಪಾವತಿಸದೇ ಇರುವ ವಾಹನಗಳು, ರಹದಾರಿ …
Read More »ಪತಿಯ ಕಿರುಕುಳಕ್ಕೆ ಆತ್ಮಹತ್ಯೆಗೆ ಶರಣಾದ ಮಹಿಳೆ: ಶವ ಆಸ್ಪತ್ರೆಯಲ್ಲಿಟ್ಟು ಪರಾರಿಯಾದ ಕುಟುಂಬ
ಪತಿ ಹಾಗೂ ಕುಟುಂಬದವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಆಕೆಯ ಶವವನ್ನು ಆಸ್ಪತ್ರೆಯಲ್ಲಿಟ್ಟು ಕುಟುಂಬದವರು ಪರಾರುಯಾಗಿರುವ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನಲ್ಲಿ ನಡೆದಿದೆ.ಪೂಜಾ ಮೃತ ಮಹಿಳೆ. ಮೂರು ವರ್ಷಗಳ ಹಿಂದೆ ಮಾವಿನಕೆರೆ ಶೆಟ್ಟಿಕೊಪ್ಪದ ಶರತ್ ಜೊತೆ ಪೂಜಾ ವಿವಾಹವಾಗಿತ್ತು.ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಆದರೂ ಪತಿ ಹಾಗೂ ಅತ್ತೆ-ಮಾವ, ನಾದಿನಿ ಪೂಜಾಳಿಗೆ ಕಿರುಕುಳ ನೀಡುತ್ತಿದ್ದರಂತೆ. ಇದರಿಂದ ನೊಂದ ಪೂಜಾ ತವರು ಮನೆಗೆ ಬಂದು ಕಣ್ಣೀರಿಟ್ಟಿದ್ದಳು. ಆಕೆಯನ್ನು ತವರಿನವರು …
Read More »ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೋಯ್ಯುವಾಗ ಆಂಬುಲೆನ್ಸ್ ಗೆ ದಾರಿ ಬಿಡದೇ ಪುಂಡಾಟ : ಬೈಕ್ ಸವಾರ ಅರೆಸ್ಟ್
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ನಿವಾಸಿಯಾಗಿರುವ ಮಹಮ್ಮದ್ KA22 C 1382 ಸಗೆಯ ದ್ವಿಚಕ್ರ ವಾಹನ ಸಹ ಜಪ್ತಿ ಮಾಡಿದ್ದಾರೆ.ಅಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟ ಮೆರೆದಿದ್ದ ಬೈಕ್ ಸವಾರನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೆಟ್ಟಂಪಾಡಿ ಗ್ರಾಮದಲ್ಲಿ ಮೊಹಮ್ಮದ್ ಮನ್ಸೂರ್ (38) ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ನಿನ್ನೆ ಬಿಸಿಲೆ ಘಾಟ್ ಬಳಿ ಅಪಘಾತ …
Read More »ಕರ್ನೂಲ್ ಬಸ್ ದುರಂತದಲ್ಲಿ 12 ಮಂದಿ ಪ್ರಯಾಣಿಕರನ್ನು ರಕ್ಷಿಸಿದ ಬೆಂಗಳೂರಿನ ನೌಕರ.!
ಕರ್ನೂಲ್ ಬಸ್ ಅಗ್ನಿ ದುರಂತದಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಈ ಘಟನೆಗೆ ಇಡೀ ದೇಶವೇ ಮರುಗಿದೆ. ಬಸ್ ಗೆ ಬೆಂಕಿ ಹೊತ್ತಿಕೊಳ್ಳುವ ಸಂದರ್ಭದಲ್ಲಿ ಆಪದ್ಭಾಂಧವಂತೆ ಬಂದ ಬೆಂಗಳೂರಿನ ನೌಕರ 12 ಮಂದಿ ಪ್ರಯಾಣಿಕರನ್ನ ರಕ್ಷಿಸಿದ್ದಾನೆ.ಅಪಘಾತ ಸಂಭವಿಸಿ ಇಡೀ ಬಸ್ ಹೊತ್ತಿ ಉರಿಯುತ್ತಿದೆ . ಈ ಸಂದರ್ಭದಲ್ಲಿ ಕಾರಿನಲ್ಲಿ ತನ್ನ ಸ್ನೇಹಿತರ ಜೊತೆ ಬರುತ್ತಿದ್ದ ಬೆಂಗಳೂರಿನ ನೌಕರ ಕೂಡಲೇ ಸಹಾಯಕ್ಕೆ ಓಡೋಡಿ ಬಂದಿದ್ದಾರೆ. ಕಾರಿನಲ್ಲಿದ್ದ ಸ್ಟೆಪ್ನಿ ಬದಲಿಸುವ ರಾಡ್ …
Read More »ಶಿವಮೊಗ್ಗದಲ್ಲಿ ಅಮಾನವೀಯ ಘಟನೆ : ಕಾದ ಚಾಕುವಿನಿಂದ ಮಗು ಗಲ್ಲಕ್ಕೆ ಬರೆ ಎಳೆದ ಅಂಗನವಾಡಿ ಸಹಾಯಕಿ!
ಮಕ್ಕಳ ಜಗಳವನ್ನು ಬಿಡಿಸಲು ಹೋಗಿ ಅಂಗನವಾಡಿ ಸಹಾಯಕಿ ಒಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿ ನಿಂದ ಮಗುವಿನ ಗಲ್ಲಕ್ಕೆ ಎಳೆದಿದ್ದಾರೆ.ಹೌದು ಮಕ್ಕಳ ಜಗಳ ಬಿಡಿಸಲು ಅಂಗನವಾಡಿ ಸಹಾಯಕಿಯೊಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿ ನಿಂದ ಮಗುವಿನ ಗಲ್ಲಕ್ಕೆ ಬರೆ ಎಳೆದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ಗುರುವಾರ ನಡೆದಿದೆ.ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಮಗು ಯೋಧ ಮೂರ್ತಿ, ಬರೆಗೆ ತುತ್ತಾದ ಮಗು. ಚಿಕ್ಕಸವಿ …
Read More »ಬೆಂಗಳೂರಲ್ಲಿ ಒಂದೇ ಕುಟುಂಬದ ನಾಲ್ವರು ಸಾಮೂಹಿಕ ಆತ್ಮಹತ್ಯೆಗೆ ಯತ್ನ : ಇಬ್ಬರು ಸಾವು ಮತ್ತಿಬ್ಬರ ಸ್ಥಿತಿ ಗಂಭೀರ!
ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿದು ಬಂದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗನಹಳ್ಳಿಯಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಹೆಗ್ಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಹಿರಿಮಗ ಸಾವನ್ನಪ್ಪಿದ್ದರೆ, …
Read More »ನಟ ಧ್ರುವ ಸರ್ಜಾ ವಿರುದ್ಧ ದೂರು ದಾಖಲು!!
ನಟ ಧ್ರುವ ಸರ್ಜಾ ಅವರ ನಿವಾಸದ ಬಳಿಯಿರುವ ಅಕ್ಕಪಕ್ಕದ ನಿವಾಸಿಗಳಿಗೆ ಅವರ ಅಭಿಮಾನಿಗಳಿಂದ ತೊಂದರೆಯುಂಟಾಗುತ್ತಿದೆ. ಪ್ರತಿನಿತ್ಯ ನಮ್ಮ ಮನೆ ಮುಂದೆ ಅಭಿಮಾನಿಗಳು ದ್ವಿಚಕ್ರ ವಾಹನದ ನಿಲುಗಡೆ ಮಾಡುತ್ತಾರೆ. ಅಲ್ಲದೇ, ಮನೆಯ ಮುಂದೆಯೇ ಧೂಮಪಾನ ಮಾಡುತ್ತಾರೆ. ಮನೆಯ ಗೋಡೆಯ ಮೇಲೆ ಉಗಿಯುತ್ತಾರೆ. ಇದ್ದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ. ಮನೋಜ್(30) ಎಂಬುವರು ನಟ ಧ್ರುವ ಸರ್ಜಾ, …
Read More »ತಾಯಿಯ ಚಿನ್ನ ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಹತ್ಯೆ!!
ತನ್ನ ತಾಯಿಯ ಚಿನ್ನ ಕದ್ದಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಸ್ನೇಹಿತನ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನ ಕೋಣನಕುಂಟೆಯ ಕೃಷ್ಣಪ್ಪ ಲೇಔಟ್ನಲ್ಲಿ ಅಕ್ಟೋಬರ್ 25ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರಾಹುಲ್ನನ್ನು, ಪ್ರೀತಮ್ ಕೊಲೆ ಮಾಡಿದ್ದಾರೆ. ಸದ್ಯ ಆರೋಪಿ ಪ್ರೀತಮ್ನನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.ಕಳೆದ ಶನಿವಾರ ಪ್ರೀತಮ್ ಬ್ಯಾಗ್ನಲ್ಲೇ ರಾಹುಲ್ ಚಿನ್ನ ನೋಡಿದ್ದ. ನಿನ್ನ ಮಗ ಚಿನ್ನ ಕದ್ದಿದ್ದು ಎಂದು ಪ್ರೀತಮ್ ತಾಯಿಗೆ ರಾಹುಲ್ ಹೇಳಿದ್ದ. ಇದರಿಂದ ಕೋಪಗೊಂಡು ಚಾಕುವಿನಿಂದ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





