Breaking News

BigTv News

ಐ ಲವ್ ಮೊಹಮ್ಮದ್ ಅಭಿಯಾನದ ವೇಳೆ ಗಲಾಟೆ – ಗಲಭೆಕೋರರ ಮನೆ ಮೇಲೆ ಬುಲ್ಡೋಜರ್!-

ಉತ್ತರ ಪ್ರದೇಶದ ಬರೇಲಿಯಲ್ಲಿ ‘ಐ ಲವ್ ಮೊಹಮ್ಮದ್’ ಎಂದು ಬರೆದ ಫಲಕಗಳನ್ನು ಹಿಡಿದುಕೊಂಡು ಗಲಭೆ ಸೃಷ್ಟಿಸಿದ ಘಟನೆಗೆ ಸಂಬಂಧಪಟ್ಟಂತೆ ಗಲಭೆಯ ಮಾಸ್ಟರ್ ಮೈಂಡ್ ಮೌಲಾನಾ ತೌಕೀರ್ ಮತ್ತು ಆತನ ಆಪ್ತ ಸಹಚರರ ವಿರುದ್ಧ ಬುಲ್ಡೋಜರ್ ಕ್ರಮ ಆರಂಭವಾಗಿದೆ.ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ, ಬರೇಲಿ ಅಭಿವೃದ್ಧಿ ಪ್ರಾಧಿಕಾರ ಬುಲ್ಡೋಜರ್ ಕ್ರಮ ಆರಂಭಿಸಿದೆ.

Read More »

ವಿಜಯನಗರ | ವಕ್ಫ್‌ಗೆ ನಗರಸಭೆ ಆಸ್ತಿ: ಸ್ಥಳೀಯರ ವಿರೋಧ.

ಬಳ್ಳಾರಿ ರಸ್ತೆಯ ಕೆಂಚಗಾರಪೇಟೆಗೆ ಹೋಗುವ ಮಾರ್ಗದ ಎಡಬದಿಯಲ್ಲಿರುವ ಕೋಟ್ಯಂತರ ಬೆಲೆ ಬಾಳುವ ಸುಮಾರು 23 ಸೆಂಟ್ಸ್‌ ನಿವೇಶನವನ್ನು ವಕ್ಫ್‌ಬೋರ್ಡ್‌ ವತಿಯಿಂದ ಸರ್ವೇ ನಡೆಸುವ ಕೆಲಸ ಶನಿವಾರ ನಡೆದಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.ಸರ್ವೇಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಶನಿವಾರ ಪ್ರತಿಭಟನೆ ನಡೆಸಿದರು. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಎ.ಶಿವಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿದರು.

Read More »

ನಾಲ್ಕು ತಿಂಗಳ ಮಗನನ್ನು ನೀರಿನ ಡ್ರಮ್​​ನಲ್ಲಿ ಮುಳುಗಿಸಿ ಕೊಂದು,ಬಳಿಕ ಆತ್ಮಹತ್ಯೆಗೆ ಶರಣಾದ ತಂದೆ.

ತಂದೆಯೊಬ್ಬ ನಾಲ್ಕು ತಿಂಗಳ ಮಗನನ್ನು ನೀರಿನ ಡ್ರಮ್​​ನಲ್ಲಿ ಮುಳುಗಿಸಿ ಹತ್ಯೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಅರ್ಧ ನೀರು ತುಂಬಿರುವ ಡ್ರಮ್​ನಲ್ಲಿ ಮಗುವನ್ನು ಎಸೆಯಲಾಗಿತ್ತು.ತಂದೆ ಅಮೋಲ್ ಸೋನಾವಾನೆ ತನ್ನ ಮಗನನ್ನು ಅರ್ಧ ನೀರು ತುಂಬಿದ ಡ್ರಮ್‌ಗೆ ಎಸೆದು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿ ಡೈಪರ್ ಧರಿಸಿದ್ದ ಮಗು ನೀರಿನಲ್ಲಿ ಮುಖ ಕೆಳಗಾಗಿ ಮಲಗಿತ್ತು, ಪಕ್ಕದಲ್ಲಿ ಪ್ಲಾಸ್ಟಿಕ್ ಗುಲಾಬಿ ಮಗ್ ತೇಲುತ್ತಿರುವುದನ್ನು …

Read More »

ಸರ್ಕಾರಿ ಕೆಲಸ ಉಳಿಸಿಕೊಳ್ಳಲು ಮಗುವನ್ನು ಕಾಡಿನಲ್ಲಿ ಎಸೆದ ಪೋಷಕರು.

ಈಗಾಗಲೇ ಮೂವರು ಮಕ್ಕಳಿದ್ದಾರೆ ಇನ್ನೊಂದಾದರೆ ಖಂಡಿತವಾಗಿಯೂ ತಾವು ಕೆಲಸವನ್ನು ಕಳೆದುಕೊಳ್ಳುತ್ತೇವೆ ಎಂಬ ಭಯದಲ್ಲಿ ಆಗ ತಾನೆ ಹುಟ್ಟಿದ್ದ, ಇನ್ನೂ ಕಣ್ಣು ತೆರೆಯದ ಕಂದಮ್ಮನನ್ನು ಕಾಡಿನಲ್ಲಿ ಬಿಟ್ಟು ಪೋಷಕರು ಪರಾರಿಯಾಗಿದ್ದರು.72 ಗಂಟೆಗಳ ಕಾಲ ಹೇಗೋ ಉಸಿರು ಬಿಗಿ ಹಿಡಿದುಕೊಂಡು ಮಗು ಬದುಕುಳಿದಿತ್ತು, ಒಂದು ಕಡೆ ತಣ್ಣನೆಯ ವಾತಾವರಣ, ಕೀಟಗಳ ಕಾಟ, ಕಲ್ಲಿನಡಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದರೂ ಉಸಿರಿತ್ತು. ಗ್ರಾಮಸ್ಥರು ಮಗುವನ್ನು ಪತ್ತೆ ಮಾಡಿದ್ದರು. ಜನರು ಕಲ್ಲುಗಳ ನಡುವೆ ರಕ್ತಸಿಕ್ತವಾಗಿದ್ದ ಮಗುವನ್ನು ರಕ್ಷಿಸಿದ್ದಾರೆ.

Read More »

ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಮೃತ!!

ಮೇಟಿಕುರ್ಕೆ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಮೋಟ್ನಳ್ಳಿತ ಮಲ್ಲಮ್ಮ, ಸರೋಜಮ್ಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ನಿರ್ಮಾಲಾ ಪುತ್ರಿ ಸುಪ್ರಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.ಮಲ್ಲಮ್ಮ ಪತಿ ಶಾಂತರಾಜ್, ಪುತ್ರಿ ಸಿಂಚನಾ ಹಾಗೂ ಸರೋಜಮ್ಮ ಪತಿ ಮಲ್ಲಿಕಾರ್ಜುನ ಜಿಂಗಿ ಸೇರಿ ಏಳು ಜನ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More »

ಲವರ್ ಜೊತೆಗೆ ಓಡಿ ಹೋದ ಪತ್ನಿ : ನಾಲ್ವರು ಮಕ್ಕಳೊಂದಿಗೆ ನದಿಗೆ ಹಾರಿ ಪತಿ ಆತ್ಮಹತ್ಯೆ.

ಖುಸ್ನುಮಾ ಮನೆ ಬಿಟ್ಟು ಹೋಗಿದ್ದು ಇದು ಐದನೇ ಬಾರಿ. ಅವಳು ಹೋಗುವಾಗ, “ನಿನಗೆ ಏನು ಬೇಕಾದರೂ ಮಾಡು, ನಾನು ಇನ್ನು ಮುಂದೆ ನಿನ್ನೊಂದಿಗೆ ಇರುವುದಿಲ್ಲ” ಎಂದು ಹೇಳಿದಳು. ಇದು ಸಲ್ಮಾನ್‌ನನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿತು. ಘಟನೆಯ ಮೊದಲು, ಸಲ್ಮಾನ್ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ. ಅದರಲ್ಲಿ, “ಇದು ನನ್ನ ಕೊನೆಯ ವಿಡಿಯೋ. ನಾನು ಏನಾದರೂ ತಪ್ಪುಗಳನ್ನು ಮಾಡಿದ್ದರೆ ದಯವಿಟ್ಟು ಕ್ಷಮಿಸಿ. ನನ್ನ ಹೆಂಡತಿ ಮತ್ತು ಅವಳ ಪ್ರೇಮಿ ನನ್ನ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ” …

Read More »

ಅಮೆರಿಕದಲ್ಲಿ ಹೈದರಾಬಾದ್‌ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ.

2 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ದಂತ ವೈದ್ಯಕೀಯದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಚಂದ್ರಶೇಖರ್‌ ಪಡೆಯುತ್ತಿದ್ದರು.ಕರ್ನಾಟಕ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ ಅವರ ಹತ್ಯೆ ಪ್ರಕರಣ ಮರೆಯಾಗುವ ಮುನ್ನವೇ ಡಲ್ಲಾಸ್‌ ನಗರದಲ್ಲಿ ಮತ್ತೋರ್ವ ಭಾರತೀಯನ ಹತ್ಯೆಯಾದಂತಾಗಿದೆ. ಏತನ್ಮಧ್ಯೆ, ಚಂದ್ರಶೇಖರ್‌ ಸಾವಿಗೆ ಸಂತಾಪ ಸೂಚಿಸಿರುವ ತೆಲಂಗಾಣ ಮುಖ್ಯ ಮಂತ್ರಿ ರೇವಂತ್‌ ರೆಡ್ಡಿ, ಮೃತದೇಹವನ್ನು ಸ್ವದೇಶಕ್ಕೆ ತರಿಸಲು ನೆರವಾಗುವ ಭರವಸೆಯನ್ನು ನೀಡಿದ್ದಾರೆ. ಬಿಆರ್‌ಎಸ್‌ ಶಾಸಕ, ತೆಲಂಗಾಣ ಮಾಜಿ ಸಚಿವ ಟಿ.ಹರೀಶ್‌ ರಾವ್‌ ಕೂಡ ವಿದ್ಯಾರ್ಥಿಯ ಪೋಷಕರನ್ನು ಭೇಟಿ …

Read More »

ಭೂಗತ ಪಾತಕಿ ಕಲಿ ಯೋಗೀಶ್ ಸಹಚರ ಶ್ರೀನಿವಾಸ್ ಶೆಟ್ಟಿ ಅರೆಸ್ಟ್.

ಭೂಗತಪಾತಕಿ ಕಲಿ ಯೋಗೀಶ್ ಸಹಚರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮುಲ್ಕಿ ಚಿತ್ರಾಪು ನಿವಾಸಿ ಶ್ರೀನಿವಾಸ್ ಶೆಟ್ಟಿ ಯಾನೆ ಶೀನು (45) ಎಂಬಾತನನ್ನು ಮುಲ್ಕಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಯನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Read More »

ವಿದ್ಯುತ್ ಅಘಾತ, ಸೌದಿ ಅರೇಬಿಯಾದಲ್ಲಿ ಅನಿವಾಸಿ ಭಾರತೀಯ ವ್ಯಕ್ತಿ ಮೃತ್ಯು..!

ಕರ್ತವ್ಯದಲ್ಲಿದ್ದಾಗ ಮೊಹಮ್ಮದ್ ಅಲಿಗೆ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶ ಉಂಟಾಗಿ ಸಾವನ್ನಪ್ಪಿದ್ದಾರೆ. ಐಸಿಎಫ್ ಕಾರ್ಯಕರ್ತ ಮೊಹಮ್ಮದ್ ಅಲಿ ಮೂಲತಃ ಕೇರಳದ ಕೋಝಿಕ್ಕೋಡ್ ನ ಮುಕ್ಕಂ ತಾಲೂಕಿನ ವಲಿಯಪರಂಬ ನಿವಾಸಿಯಾಗಿದ್ದಾರೆ. ಮೃತರು ತಂದೆ ಅಬ್ದುರಹ್ಮಾನ್, ತಾಯಿ ಆಯೇಷಾ, ಪತ್ನಿ ಫಾತಿಮಾ ಜುಮಾನಾ ಮತ್ತು ಪುತ್ರಿ ಫಾತಿಮಾ ಹಬೀಬಾ ಅವರನ್ನು ಅಗಲಿದ್ದಾರೆ.ಸೌದಿ ಅರೇಬಿಯಾದ ಖಾಮಿಸ್ ಮುಸೈತ್ ಬಿನ್ ಹಸನ್ ಅಲ್ ಮನಿಯಿ ಮಸೀದಿಯಲ್ಲಿ ಅಸ್ರ್ ಪ್ರಾರ್ಥನೆಯ ನಂತರ, ಅಂತ್ಯಕ್ರಿಯೆ ನಡೆಯಿತು. ಮೃತದೇಹವನ್ನು ಮಹಾಲಾ ರಸ್ತೆಯಲ್ಲಿರುವ …

Read More »

ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ, ಆತ್ಮಹತ್ಯೆ ಬೆದರಿಕೆ ಹಾಕಿದ ಮಗ!

ಆಸ್ತಿ ಪತ್ರಗಳ ವಿಚಾರದಲ್ಲಿ ತಂದೆ ಮತ್ತು ಮಗನ ನಡುವೆ ವಾಗ್ವಾದ ನಡೆದಿದೆ. ಮಾತು ಉಲ್ಬಣವಾಗುತ್ತಿದ್ದಂತೆ, ಆ ವ್ಯಕ್ತಿ ತನ್ನ ತಂದೆಯ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.ಸ್ಥಳೀಯ ವರದಿಗಳ ಪ್ರಕಾರ, ಬಾಡಿಗೆ ಮನೆಯಲ್ಲಿ ಈ ಘಟನೆ 1.30 ರ ಸುಮಾರಿಗೆ ನಡೆದಿದೆ. ತಂದೆ ಶಿವನ್, ಆಟೋ ಚಾಲಕನಾಗಿದ್ದು, ಆಸ್ತಿ ದಾಖಲೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ತನ್ನ ಹೆಂಡತಿಯೊಂದಿಗೆ ಮಗನ ಮನೆಗೆ ಬಂದಿದ್ದರು.ವಿಷ್ಣು ತಾನು ಕಾಗದಗಳನ್ನು ಬಾವಿಗೆ ಎಸೆದಿದ್ದೇನೆ ಎಂದು ಹೇಳಿದ್ದರಿಂದ …

Read More »