ಭಾರತೀಯ ವಾಯುಸೇನೆಯಲ್ಲಿ ಇಂಜಿನೀಯರ್ ಆಗಿದ್ದ 25 ವರ್ಷದ ಲೋಕೇಶ್ ಪವನ್ ಕೃಷ್ಣ ಆತ್ಮಹತ್ಯೆ ಮಾಡಿಕೊಂಡ ಯುವಕ. ಬೆಂಗಳೂರಿನ ಚಿಕ್ಕಬಿದರಕಲ್ಲು ಪ್ರೆಸ್ಟೇಜ್ ಜಿಂದಾಲ್ ಸಿಟಿ ಅಪಾರ್ಟ್ಮೆಂಟ್ನಲ್ಲಿ ಈ ಪ್ರಕರಣ ನಡೆದಿದೆ. ಮೂಲತಃ ಆಂದ್ರದ ಕಡಪ ಜಿಲ್ಲೆಯ ನಿವಾಸಿ ಮೃತ ಲೋಕೇಶ್ ಪವನ್ ಕೃಷ್ಣ, ಹಲಸೂರಿನ ಮಿಲಿಟರಿ ಕ್ವಾಟರ್ಸ್ ನಲ್ಲಿ ವಾಸವಾಗಿದ್ದರು. 24ನೆ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸರ ತನಿಖೆ ವೇಳೆ ಮೃತ ಲೋಕೇಶ್, ಹಲವು ದಿನಗಳಿಂದ ಊಟ ಸೇರುತ್ತಿರಲಿಲ್ಲ, ಹಾಗಾಗಿ …
Read More »ತಾಯಿ ಬೈದಿದ್ದಕ್ಕೆ ಆರನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ!
ತಾಯಿ ಬೈದಿದ್ದಕ್ಕೆ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮೃತನನ್ನು 6ನೇ ತರಗತಿ ವಿದ್ಯಾರ್ಥಿ ಕೃಷ್ಣ ಎಂದು ಗುರುತಿಸಲಾಗಿದೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಇದುವರೆಗೆ ಯಾರ ವಿರುದ್ಧವೂ ಪೊಲೀಸ್ ವರದಿ ದಾಖಲಾಗಿಲ್ಲ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಎಸ್ಎಚ್ಒ ದೇವೇಂದ್ರ ಸಿಂಗ್ ಹೇಳಿದ್ದಾರೆ.
Read More »ಚಿಕ್ಕಬಳ್ಳಾಪುರದಲ್ಲಿ ಗಣೇಶ ಮೆರವಣಿಗೆ ನೋಡಲು ತೆರಳುತ್ತಿದ್ದ ಇಬ್ಬರು ದುರ್ಮರಣ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಡ್ಡರಬಂಡೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿ ಇಬ್ಬರು ದುರ್ಮರಣ ಹೊಂದಿದ್ದಾರೆ.ಮೃತರನ್ನು ಗೆದರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಎಫ್ ಡಿಎ ಶಶಿ(42), ದಂಡಿಗಾನಹಳ್ಳಿಯ ಮೆಕ್ಯಾನಿಕ್ ಮುನಿರಾಜು(28) ಎಂಬುದಾಗಿ ಗುರುತಿಸಲಾಗಿದೆ. ಮಂಚೇನಹಳ್ಳಿಯ ರಮೇಶ್ ಸ್ಥಿತಿ ಗಂಭೀರವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
Read More »ಮಗನ ಮಾನಸಿಕ ಅಸ್ವಸ್ಥತೆ; 13ನೇ ಮಹಡಿಯಿಂದ ಪುತ್ರನೊಂದಿಗೆ ಹಾರಿ ತಾಯಿ ಆತ್ಮಹತ್ಯೆ!
ಗ್ರೇಟರ್ ನೋಯ್ಡಾ ಏಸ್ ಸಿಟಿಯಲ್ಲಿರುವ ತಮ್ಮ ಅಪಾರ್ಟ್ಮೆಂಟ್ನ 13 ನೇ ಮಹಡಿಯ ಬಾಲ್ಕನಿಯಿಂದ ಹಾರಿ 37 ವರ್ಷದ ಮಹಿಳೆ ಮತ್ತು ಅವರ 11 ವರ್ಷದ ಮಗ ಶನಿವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್ಡಿಟಿವಿ ವರದಿ ಮಾಡಿದೆ.ಮಗನ ದೀರ್ಘಕಾಲದ ಮಾನಸಿಕ ಅಸ್ವಸ್ಥತೆಯಿಂದ ಬೇಸತ್ತಿದ್ದ ಮಹಿಳೆ ಸಾಕ್ಷಿ ಚಾವ್ಲಾ ತನ್ನ 11 ವರ್ಷ ಮಗನೊಂದಿಗೆ (ಮಗ ದಕ್ಷ) 13ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟಿದ್ದಾರೆ.
Read More »ಪಾನಿಪೂರಿ ತಿನ್ನೋ ವೇಳೆ ಗಲಾಟೆ: ಸಲ್ಮಾನ್ ಕೊಟ್ಟ ಒಂದೇ ಪಂಚ್ಗೆ ಉಸಿರು ಚೆಲ್ಲಿದ ಭೀಮ.
ಪಾನಿಪೂರಿ ತಿನ್ನವ ವೇಳೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸ್ಥಳೀಯ ಸಲ್ಮಾನ್ ಕೊಟ್ಟ ಪಂಚ್ ಗೆ ಭೀಮ ಎನ್ನುವ ಯುವಕ ಸಾವನ್ನಪ್ಪಿದ್ದಾನೆ. ಬೆಂಗಳೂರಿನ ಪುಟ್ಟೇನಹಳ್ಳಿಯ ಬಳಿಯ ಅರಕೆರೆಯಲ್ಲಿ ನಡೆದಿದೆ.ಭೀಮಕುಮಾರ್ನ ಕತ್ತಿನ ಭಾಗಕ್ಕೆ ಸಲ್ಮಾನ್ ಬಲವಾಗಿ ಒಂದು ಹೊಡೆದಿದ್ದಾನೆ. ಪರಿಣಾಮ ಪ್ರಜ್ಞೆ ಕಳೆದುಕೊಂಡು ಕೆಳಗೆ ಬಿದ್ದ ಭೀಮಕುಮಾರ್ ಮೂರು ದಿನಗಳ ನಂತರ ಕೊನೆಯುಸಿರೆಳೆದಿದ್ದಾನೆ.
Read More »ಬೆಂಗಳೂರಿನಲ್ಲಿ ಅಗ್ನಿ ಅವಘಡ: 75 ಮಂದಿ ಪ್ರಯಾಣಿಕರಿದ್ದ BMTC ಬಸ್ನಲ್ಲಿ ಭಾರೀ ಬೆಂಕಿ.
ಎಂಜಿನ್ನಲ್ಲಿ ಕಾಣಿಸಿಕೊಂಡ ಬೆಂಕಿ ದಿಢೀರನೇ ವ್ಯಾಪಿಸಿ ಇಡೀ ಬಿಎಂಟಿಸಿ ಬಸ್ ಧಗಧಗನೆ ಹೊತ್ತಿ ಉರಿದ ಘಟನೆ ಬೆಂಗಳೂರಿನ ಹೆಚ್ಎಎಲ್ ಏರ್ಪೋರ್ಟ್ ಮುಖ್ಯ ಗೇಟ್ ಬಳಿ ಸೊಮವಾರ ಮುಂಜಾನೆ ಸಂಭವಿಸಿದೆ.ಮೆಜೆಸ್ಟಿಕ್ನಿಂದ ಕಾಡುಗೋಡಿಗೆ ತೆರಳುತ್ತಿದ್ದ ಬಿಎಂಟಿಸಿ ಬಸ್ನ ಎಂಜಿನ್ನಲ್ಲಿ ಬೆಳಗ್ಗೆ 5.15ಕ್ಕೆ ಬೆಂಕಿ ಕಾಣಿಸಿದೆ.ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಚ್ಎಎಲ್ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಟಿಸಿ ಬೆಂಕಿ ಕಾಣಿಸಿಕೊಳ್ಳಲು ಕಾರಣ ಪತ್ತೆ ಹಚ್ಚಲು …
Read More »ಅಪಘಾತ ಬಳಿಕ ಬೇಡಿಕೊಂಡರು ಕರಗದ ಹೃದಯ, ವಿತ್ತ ಸಚಿವಾಲಯ ಅಧಿಕಾರಿ ಸಾವಿನ ಹಿಂದೆ ನೋವಿನ ಕತೆ.
ಹಣಕಾಸು ಸಚಿವಾಲಯದ ಉಪ ಕಾರ್ಯದರ್ಶಿ ನವಜೋತ್ ಸಿಂಗ್ ಹಾಗೂ ಪತ್ನಿ ಸಂದೀಪ್ ಕೌರ್ ಬೈಕ್ ಮೂಲಕ ಮನೆಗೆ ಮರಳುತ್ತಿರುವಾಗ ನಡೆದ ಭೀಕರ ಅಪಘಾತ ಹಲವರನ್ನು ಬೆಚ್ಚಿ ಬೀಳಿಸಿದೆ. BMW ಕಾರು ವೇಗವಾಗಿ ಬಂದು ಬೈಕ್ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಬೈಕ್ನಲ್ಲಿದ್ದ ನವಜೋತ್ ಸಿಂಗ್ ಆಸ್ಪತ್ರೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.ಸ್ಥಳೀಯ ಆಸ್ರತ್ರೆ ದಾಖಲಿಸಿ 22 ಕಿಲೋಮೀಟರ್ ದೂರದ ಆಸ್ಪತ್ರೆ ದಾಖಲಿಸಿ ವಿಳಂಬ ಮಾಡಿದ ಆರೋಪ ಕೇಳಿಬಂದಿದೆ. ಖುದ್ದು ಸಂದೀಪ್ …
Read More »ಫ್ಲೈಒವರ್ನಿಂದ ಪಲ್ಟಿಯಾಗಿ ರೈಲ್ವೆ ಹಳಿಗೆ ಬಿದ್ದ ಕಾರು: ರೈಲುಗಳ ಸಂಚಾರದಲ್ಲಿ ವ್ಯತ್ಯಯ.
ವೇಗವಾಗಿ ಸಾಗುತ್ತಿದ್ದ ಕಾರೊಂದು ನಿಯಂತ್ರಣ ಕಳೆದುಕೊಂಡು ಫ್ಲೈಒವರ್ ಮೇಲಿನಿಂದ ಕೆಳಗೆ ಉರುಳಿ ರೈಲ್ವೆ ಹಳಿಯ ಮೇಲೆ ಬಿದ್ದ ಪರಿಣಾಮ ಕೆಲ ಗಂಟೆಗಳ ಕಾಲ ರೈಲ್ವೆ ಸಂಚಾರದಲ್ಲಿ ವ್ಯತ್ಯ ಆದಂತಹ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.ದೆಹಲಿಯ ಹೈದರ್ಪುರ ಮೆಟ್ರೋ ನಿಲ್ದಾಣದ ಸಮೀಪ ಇರುವ ಮುಕರ್ಬಾ ಚೌಕ್ ಫ್ಲೈಒವರ್ ಮೇಲೆ ವೇಗವಾಗಿ ಸಾಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕೆಳಗಿದ್ದ ರೈಲ್ವೆ ಹಳಿಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಕಾರಿನ ಚಾಲಕ …
Read More »ಯುವಕರನ್ನು ಮನೆಗೆ ಕರೆದು ಚಿತ್ರಹಿಂಸೆ ನೀಡಿ, ಖಾಸಗಿ ಅಂಗಗಳಿಗೆ ಸ್ಟೇಪಲ್ ಮಾಡಿದ ದಂಪತಿ.
ಇಬ್ಬರು ಯುವಕರನ್ನು ಮನೆಗೆ ಆಹ್ವಾನಿಸಿ, ಪೆಪ್ಪರ್ ಸ್ಪ್ರೇ ಬಳಸಿ, ಅವರ ದೇಹ ಮತ್ತು ಖಾಸಗಿ ಭಾಗಗಳಿಗೆ ಸ್ಟೇಪಲ್ ಪಿನ್ ಹೊಡೆದು ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ದಂಪತಿಯನ್ನು ಬಂಧಿಸಲಾಗಿದೆ.ಕೊಯಿಪುರಂ ಬಳಿಯ ಚಾರಳಕುನ್ನು ನಿವಾಸಿಗಳಾದ ಜಯೇಶ್ ಮತ್ತು ಅವರ ಪತ್ನಿ ರೇಷ್ಮಿ ಬಂಧಿತ ಆರೋಪಿಗಳು. ಈ ದಂಪತಿ ಆಲಪ್ಪುಳದ ನೀಲಂಪೆರೂರು ಮೂಲದ ಯುವಕನಿಗೆ ಸೆ.1 ರಂದು ಮತ್ತು ಪತ್ತನಂತಿಟ್ಟದ ರಾನ್ನಿ ಮೂಲದ ಮತ್ತೊಬ್ಬ ಯುವಕನಿಗೆ ಸೆ.5 …
Read More »ಯುಕೆಯಲ್ಲಿ ಸಿಖ್ ಮಹಿಳೆ ಮೇಲೆ ‘ಜನಾಂಗೀಯ ಪ್ರೇರಿತ’ ಅತ್ಯಾಚಾರ: ಆರೋಪಿ ಬಂಧನ.
ಬ್ರಿಟನ್ ನಲ್ಲಿ ಭಾರತೀಯ ಮೂಲದ 20ರ ವರ್ಷದ ಸಿಖ್ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಮತ್ತು ಹಲ್ಲೆ ನಡೆಸಿ, ಜನಾಂಗೀಯ ನಿಂದನೆ ಮಾಡಿದ ಆರೋಪದ ಮೇಲೆ ಯುನೈಟೆಡ್ ಕಿಂಗ್ಡಂನ ವೆಸ್ಟ್ ಮಿಡ್ಲ್ಯಾಂಡ್ಸ್ ಪೊಲೀಸರು 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ.ತನ್ನ ಮೇಲೆ ದೌರ್ಜನ್ಯದ ವೇಳೆ ದಾಳಿಕೋರು ಜನಾಂಗೀಯ ನಿಂದನೆ ಮಾಡಿದ್ದಾರೆ. “ನೀನು ಈ ದೇಶಕ್ಕೆ ಸೇರಿದವಳಲ್ಲ” ಮತ್ತು “ನಿನ್ನ ದೇಶಕ್ಕೆ ತೊಲಗು” ಎಂದು ಬೆದರಿಕೆ ಹಾಕಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





